ರಾತ್ರಿ ಕುಡಿದ ಹ್ಯಾಂಗೊವರ್ ಬೆಳಿಗ್ಗೆ ಕ್ಷಣದಲ್ಲಿ ಇಳಿಬೇಕಾ? ಈ ಸಿಂಪಲ್ ಟ್ರಿಕ್ ಟ್ರೈ ಮಾಡಿ

ರಾತ್ರಿ ಕುಡಿದದ್ದು ಜಾಸ್ತಿಯಾದರೆ ಬೆಳಿಗ್ಗೆ ಒಂದು ರೀತಿಯ ಹ್ಯಾಂಗೊವರ್ ಇದ್ದೆ ಇರುತ್ತದೆ. ತಲೆನೋವು, ವಾಕರಿಕೆ, ಅಲ್ಲಲ್ಲಿ ನೋವಿರುವಂತೆ ಭಾಸವಾಗುತ್ತದೆ. ಯಾವುದೇ ರೀತಿಯ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ನೀವು ಕೂಡ ಹ್ಯಾಂಗೊವರ್ ನಿಂದ ಹೊರಬರಲು ನಾನಾ ರೀತಿಯಲ್ಲಿ ಪಯತ್ನ ಪಡುತ್ತೀರಾ? ಇಂತಹ ಸಂದರ್ಭಗಳಲ್ಲಿ ಕುಡಿದ ಹ್ಯಾಂಗೊವರ್ ಅನ್ನು ಕ್ಷಣಾರ್ಧದಲ್ಲಿ ಕಡಿಮೆ ಮಾಡಲು ಇಲ್ಲಿ ಹೇಳಿರುವ ಪರಿಣಾಮಕಾರಿ ಸಲಹೆಗಳನ್ನು ಪಾಲನೆ ಮಾಡಬಹುದು ಈ ಮದ್ದು ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲದೆ ಪರಿಹಾರ ನೀಡುತ್ತದೆ.

ರಾತ್ರಿ ಕುಡಿದ ಹ್ಯಾಂಗೊವರ್ ಬೆಳಿಗ್ಗೆ ಕ್ಷಣದಲ್ಲಿ ಇಳಿಬೇಕಾ? ಈ ಸಿಂಪಲ್ ಟ್ರಿಕ್ ಟ್ರೈ ಮಾಡಿ
Hangover Hacks

Updated on: Sep 03, 2025 | 3:33 PM

ಮದ್ಯಪಾನ (Alcohol) ಮಾಡುವುದು ಆರೋಗ್ಯಕ್ಕೆ ಹಾನಿಕಾರಕ ಆದರೂ ಜನರಿಗೆ ಈ ಅಭ್ಯಾಸವನ್ನು ಒಮ್ಮೆಲೇ ಬಿಡಲು ಸಾಧ್ಯವಾಗುವುದಿಲ್ಲ. ಪ್ರತಿದಿನ ಕುಡಿಯದಿದ್ದರೂ ಸಹ ವಾರಕ್ಕೊಮ್ಮೆಯಾದರೂ ಎಲ್ಲಾ ರೀತಿಯಲ್ಲಿಯೂ ರಿಲೀಫ್ ಆಗಲು ಮದ್ಯಪಾನ ಮಾಡುತ್ತಾರೆ. ಈ ರೀತಿ ಕುಡಿದು ಮಲಗಿ ಬೆಳಿಗ್ಗೆ ಎದ್ದಾಗ, ತಲೆನೋವು, ವಾಕರಿಕೆ ಮತ್ತು ದೇಹಪೂರ್ತಿ ನೋವಾಗುವುದು ಸಹಜ. ಈ ರೀತಿ ಹ್ಯಾಂಗೊವರ್ ಆದಾಗ, ನಿಮಗೆ ಯಾವುದೇ ರೀತಿಯ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಯಾವ ವಿಷಯದ ಮೇಲೂ ಗಮನಹರಿಸಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಕುಡಿದ ಅಮಲು ಅಥವಾ ಹ್ಯಾಂಗೊವರ್ (Hangover) ಅನ್ನು ಕ್ಷಣಾರ್ಧದಲ್ಲಿ ಕಡಿಮೆ ಮಾಡಲು ಇಲ್ಲಿ ಹೇಳಿರುವ ಪರಿಣಾಮಕಾರಿ ಸಲಹೆಗಳನ್ನು ಪಾಲನೆ ಮಾಡಬಹುದು ಈ ಮದ್ದು ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲದೆ ಪರಿಹಾರ ನೀಡುತ್ತದೆ.

ಟೊಮೆಟೊ ರಸ

ಹ್ಯಾಂಗೊವರ್ ಎಂದರೆ ರಾತ್ರಿಯಲ್ಲಿ ಅತಿಯಾಗಿ ಕುಡಿದರೆ, ಬೆಳಿಗ್ಗೆ ಎದ್ದೇಳುವ ಹೊತ್ತಿಗೆ, ನಿಮ್ಮ ತಲೆ ಬಿಗಿಯಾಗಿರುವಂತೆ ಭಾಸವಾಗುತ್ತದೆ, ನಿಮಗೆ ತಲೆನೋವು, ವಾಕರಿಕೆ ಮತ್ತು ದೇಹದಲ್ಲಿ ಒಂದು ಸಣ್ಣ ನೋವಿರುತ್ತದೆ. ಈ ರೀತಿಯಾದಾಗ ಟೊಮೆಟೊ ರಸ ಹ್ಯಾಂಗೊವರ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ರಸವು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು ದೇಹದ ಉರಿಯೂತ, ಸ್ನಾಯು ನೋವು ಮತ್ತು ತಲೆನೋವನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲ ವಾಕರಿಕೆ ಮತ್ತು ವಾಂತಿಯನ್ನು ಸಹ ನಿವಾರಿಸುತ್ತದೆ. ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.

ಸೌತೆಕಾಯಿ ರಸ

ಸಾಮಾನ್ಯವಾಗಿ ಸೌತೆಕಾಯಿ ರಸವನ್ನು ಕುಡಿಯುವುದರಿಂದ ಹ್ಯಾಂಗೊವರ್ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ. ಸೌತೆಕಾಯಿಯನ್ನು ನೀರಿನಲ್ಲಿ ನೆನೆಸಿ ಒಂದು ಗಂಟೆಯ ನಂತರ ಆ ನೀರನ್ನು ಕುಡಿಯಬೇಕು. ಇದರಲ್ಲಿ ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಎಲೆಕ್ಟ್ರೋಲೈಟ್‌ಗಳು ಉತ್ತಮ ಪ್ರಮಾಣದಲ್ಲಿ ಇರುತ್ತವೆ. ಇದು ನಿಮಗೆ ಹ್ಯಾಂಗೊವರ್ ನಿಂದ ಮುಕ್ತಿ ನೀಡಲು ಸಹಾಯ ಮಾಡುತ್ತದೆ ಇದಕ್ಕೆ ಅಗತ್ಯವಿದ್ದಲ್ಲಿ ನಿಂಬೆಹಣ್ಣು ಸೇರಿಸಿ ಕೂಡ ಕುಡಿಯಬಹುದು.

ಇದನ್ನೂ ಓದಿ
ವಿಚಿತ್ರ ಕನಸುಗಳು ಬೀಳುವುದಕ್ಕೆ ರಾತ್ರಿ ಸೇವನೆ ಮಾಡುವ ಆಹಾರವೇ ಕಾರಣ!
ಮಲಬದ್ಧತೆ ಸಮಸ್ಯೆ ಇದ್ಯಾ? ತಪ್ಪದೆ ಈ ಆಹಾರಗಳ ಸೇವನೆ ಮಾಡಿ
ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ಬರುವುದಕ್ಕೆ ಈ ಆಹಾರಗಳ ಸೇವನೆಯೇ ಕಾರಣ
ಐವಿಎಫ್ ಮಾಡುವ ಮೊದಲು ಈ ಬಗ್ಗೆ ಗಮನ ನೀಡಿ, ಇದರ ವೆಚ್ಚ, ವಿಧಗಳು ಯಾವುವು?

ಎಳನೀರು

ನಿಮಗೆ ತಿಳಿದಿದೆಯೇ? ಎಳನೀರು ಕೂಡ ಹ್ಯಾಂಗೊವರ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಎಲೆಕ್ಟ್ರೋಲೈಟ್‌ಗಳಿವೆ. ಬೆಳಿಗ್ಗೆ ಎದ್ದ ತಕ್ಷಣ ಈ ನೀರನ್ನು ಕುಡಿಯುವುದರಿಂದ ಹ್ಯಾಂಗೊವರ್‌ನಿಂದ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ಮಾತ್ರವಲ್ಲ ದೇಹ ಕೂಡ ಹೈಡ್ರೇಟೆಡ್ ಆಗಿರುತ್ತದೆ.

ಇದನ್ನೂ ಓದಿ: Alcohol: ಇದ್ದಕ್ಕಿದ್ದಂತೆ ಮದ್ಯಪಾನ ಮಾಡುವುದನ್ನು ನಿಲ್ಲಿಸಿದರೆ ಏನಾಗುತ್ತೆ ಗೊತ್ತಾ?

ಶುಂಠಿ ಚಹಾ

ಹ್ಯಾಂಗೊವರ್ ಬೇಗನೆ ಕಡಿಮೆ ಮಾಡಲು ಶುಂಠಿ ಚಹಾ ಕೂಡ ಸಹಕಾರಿಯಾಗಿದೆ. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಹ್ಯಾಂಗೊವರ್ ನಿಂದ ಬೇಗನೆ ಹೊರಬರಲು ಚೆನ್ನಾಗಿ ಕೆಲಸ ಮಾಡುತ್ತದೆ. ಈ ಚಹಾ ಕುಡಿಯುವುದರಿಂದ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ