Rice Water Benefits: ಅನ್ನ ಬಸಿದ ನೀರು ಚೆಲ್ಲದಿರಿ, ಮೂತ್ರನಾಳದ ಸೋಂಕನ್ನು ನಿವಾರಿಸುವ ಶಕ್ತಿ ಇದರಲ್ಲಿದೆ
ಹಿಂದಿನವರು ಅನ್ನ ಬಸಿದ ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಮುಖದ ಮೇಲಿನ ಕಲೆಗಳನ್ನು ಕಡಿಮೆ ಮಾಡಲು ಮತ್ತು ಚರ್ಮಕ್ಕೆ ಆರೋಗ್ಯಕರ ಹೊಳಪನ್ನು ನೀಡಲು ಅನ್ನ ಬಸಿದ ನೀರು ನೀರು ತುಂಬಾ ಒಳ್ಳೆಯದು. ಆದರೆ ಕೇವಲ ಸೌಂದರ್ಯಕ್ಕಾಗಿ ಮಾತ್ರವಲ್ಲ, ಇದು ನಮಗೆ ತಿಳಿದಿರದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ. ಹಾಗಾದರೆ ಇದು ಯಾವ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಒಳ್ಳೆಯದು ತಿಳಿದುಕೊಳ್ಳಿ.

ಅನ್ನ ಬಸಿದ ನೀರಿನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಇದು ಪೂರ್ವಜರ ಕಾಲದಿಂದಲೂ ಬಹಳ ಜನಪ್ರಿಯ ಆರೋಗ್ಯಕರ ಪದಾರ್ಥ. ಆದರೂ ಕೂಡ ಕೊರಿಯನ್ ಚರ್ಮದ ಆರೈಕೆಯ ಮೂಲಕ ಅತ್ಯಂತ ಜನಪ್ರಿಯವಾಯಿತು. ಗಂಜಿ ಅಥವಾ ಅಕ್ಕಿ ಬಸಿದಂತಹ ನೀರು. ಕರಾವಳಿ ಪ್ರದೇಶದಲ್ಲಿ ಗಂಜಿ ಅಂದರೆ ಬೇಯಿಸಿ ನೀರು ಬಸಿಯದ ಅನ್ನ ಎಂಬ ಅರ್ಥ ನೀಡುತ್ತದೆ. ಆದರೆ ಅಕ್ಕಿಯನ್ನು ಬೇಯಿಸಿ ಉಳಿದಂತಹ ನೀರನ್ನು ಬಸಿದು ತೆಗೆಯುತ್ತಾರೆ ಇದನ್ನು ಕೂಡ ಕೆಲವು ಭಾಗಗಳಲ್ಲಿ ಗಂಜಿ ಎನ್ನಲಾಗುತ್ತದೆ. ಹೀಗೆ ಇದನ್ನು ನಾನಾ ಭಾಗಗಳಲ್ಲಿ ವಿವಿಧ ರೀತಿಯ ಹೆಸರುಗಳಿಂದ ಕರೆಯಲಾಗುತ್ತದೆ. ಸಾಮಾನ್ಯವಾಗಿ ಮುಖದ ಮೇಲಿನ ಕಲೆಗಳನ್ನು ಕಡಿಮೆ ಮಾಡಲು ಮತ್ತು ಚರ್ಮಕ್ಕೆ ಆರೋಗ್ಯಕರ ಹೊಳಪನ್ನು ನೀಡಲು ಅನ್ನ ಬಸಿದ ನೀರು ನೀರು ತುಂಬಾ ಒಳ್ಳೆಯದು. ಕೇವಲ ಸೌಂದರ್ಯಕ್ಕಾಗಿ ಮಾತ್ರವಲ್ಲ, ಇದು ನಮಗೆ ತಿಳಿದಿರದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ. ಹಾಗಾದರೆ ಇದು ಯಾವ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಒಳ್ಳೆಯದು ತಿಳಿದುಕೊಳ್ಳಿ.
ಅನ್ನ ಬಸಿದ ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಿಂದಿನವರು ಇದನ್ನು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಇದರಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಈ ನೀರು ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ ನೀವು ಅನ್ನ ಬಸಿದ ನೀರನ್ನು ಪ್ರತಿನಿತ್ಯ ಕುಡಿಯಬಹುದು ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಇಲ್ಲ ಎಂದು ವೈದ್ಯರು ಹೇಳುತ್ತಾರೆ.
ನಿರ್ಜಲೀಕರಣವನ್ನು ತಡೆಯುತ್ತದೆ:
ಪ್ರತಿದಿನಿತ್ಯ ಅನ್ನ ಬಸಿದ ನೀರನ್ನು ಕುಡಿಯುವುದರಿಂದ ನಿಮ್ಮನ್ನು ತೇವಾಂಶದಿಂದಿರಿಸಲು ಮತ್ತು ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ, ಜನರು ಸಾಕಷ್ಟು ನೀರು ಕುಡಿಯದ ಕಾರಣ ನಿರ್ಜಲೀಕರಣದಿಂದ ಬಳಲುತ್ತಿದ್ದಾರೆ. ಆದರೆ ಅನ್ನ ಬಸಿದ ನೀರನ್ನು ಕುಡಿಯುವುದರಿಂದ ಇಂತಹ ಸಮಸ್ಯೆಗಳ ವಿರುದ್ಧ ಹೋರಾಡಲು ಮತ್ತು ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ. ಇದಲ್ಲದೆ, ಅವು ಪೋಷಕಾಂಶಗಳಿಂದ ಸಮೃದ್ಧವಾಗಿವೆ ಮತ್ತು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:
ಅನ್ನ ಬಸಿದ ನೀರಿನಲ್ಲಿ ಪಿಷ್ಟವಿದೆ, ಇದು ಜೀರ್ಣಕ್ರಿಯೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ನೀವು ಹೊಟ್ಟೆ ಉಬ್ಬರ, ಅಜೀರ್ಣ ಅಥವಾ ಗ್ಯಾಸ್ ನಿಂದ ಬಳಲುತ್ತಿದ್ದರೆ, ಪ್ರತಿದಿನ ಒಂದು ಲೋಟ ಅನ್ನ ಬಸಿದ ನೀರಿಗೆ ಸ್ವಲ್ಪ ಉಪ್ಪು ಹಾಕಿ ಕುಡಿಯುವುದು ಒಳ್ಳೆಯದು. ಪ್ರೋಬಯಾಟಿಕ್ಗಳಿಂದ ಸಮೃದ್ಧವಾಗಿರುವ ಈ ಪಾನೀಯವು ಕರುಳಿನ ಆರೋಗ್ಯಕ್ಕೆ ಒಳ್ಳೆಯದು ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ದೇಹದ ಶಾಖವನ್ನು ಕಡಿಮೆ ಮಾಡುತ್ತದೆ:
ಅಕ್ಕಿ ದೇಹವನ್ನು ತಂಪಾಗಿಸುತ್ತದೆ. ಜೊತೆಗೆ ಅನ್ನ ಬಸಿದ ನೀರು ಕೂಡ ಒಳ್ಳೆಯದು. ಕೈ ಅಥವಾ ಕಾಲುಗಳಲ್ಲಿ ಸುಡುವ ಸಂವೇದನೆಯನ್ನು ಅನುಭವಿಸುವವರಿಗೆ ಇದು ಒಳ್ಳೆಯದು. ಅಲ್ಲದೆ ಮಧುಮೇಹ ಅಥವಾ ಋತುಬಂಧದ ಸಮಯದಲ್ಲಿ ಹಾರ್ಮೋನ್ ಬದಲಾವಣೆಗಳಿಂದ ಮಹಿಳೆಯರ ದೇಹದಲ್ಲಿ ಶಾಖ ಹೆಚ್ಚಾಗಿ ಉತ್ಪತ್ತಿಯಾಗುತ್ತದೆ ಅಂತಹ ಸಮಯದಲ್ಲಿ ಗಂಜಿ ನೀರನ್ನು ಕುಡಿಯುವುದರಿಂದ ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
ಇದನ್ನೂ ಓದಿ: ದಿನಕ್ಕೆ ಎಷ್ಟು ಹಸಿ ಮೆಣಸಿನಕಾಯಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು?
ಮೂತ್ರನಾಳದ ಸೋಂಕನ್ನು ತಡೆಯುತ್ತದೆ:
ಸ್ವಚ್ಛವಾಗಿರದಂತಹ ಶೌಚಾಲಯಗಳನ್ನು ಬಳಸುವುದು ಅಥವಾ ಮೂತ್ರವನ್ನು ಹಿಡಿದಿಟ್ಟುಕೊಳ್ಳುವುದು ಮೂತ್ರನಾಳದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಅದು ಅಲ್ಲದೆ ಈ ರೀತಿಯ ಸಮಸ್ಯೆ ಆಗಾಗ ಮೂತ್ರ ವಿಸರ್ಜಿಸುವಾಗ ನೋವನ್ನು ಉಂಟು ಮಾಡುತ್ತದೆ. ಆದರೆ ಅನ್ನ ಬಸಿದ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಈ ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ:
ಅನೇಕ ಮಹಿಳೆಯರು ಮುಟ್ಟಿನ ಸಮಯದಲ್ಲಿ ತೀವ್ರವಾದ ಮಲಬದ್ಧತೆ, ಕಿಬ್ಬೊಟ್ಟೆ ನೋವು ಅಥವಾ ಭಾರಿ ರಕ್ತಸ್ರಾವವನ್ನು ಅನುಭವಿಸುತ್ತಾರೆ. ಈ ರೋಗಲಕ್ಷಣಗಳನ್ನು ನಿವಾರಿಸಲು ಅನ್ನ ಬಸಿದ ನೀರು ಸಹಾಯ ಮಾಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:17 am, Tue, 18 February 25