ಇತ್ತೀಚೆಗೆ ಯುವಕರು, ವಯಸ್ಸಾದವರೆನ್ನದೆ ಎಲ್ಲ ವಯೋಮಾನದವರೂ ಆರೋಗ್ಯದ ಬಗ್ಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ನೀವು ನಿಮ್ಮ ದೇಹಕ್ಕೆ ವ್ಯಾಯಾಮ ನೀಡಬೇಕೆಂದರೆ ಜಾಗಿಂಗ್ ಅಥವಾ ರನ್ನಿಂಗ್ನಿಂದ ಶುರು ಮಾಡಬೇಕು. ಓಡುವುದರಿಂದ ನಮ್ಮ ದೇಹದ ಎಲ್ಲ ಅಂಗಗಳಿಗೂ ವ್ಯಾಯಾಮ ಸಿಗುತ್ತದೆ. ಅದಕ್ಕೆಂದೇ ಹಲವೆಡೆ ರನ್ನಿಂಗ್ ಕ್ಲಬ್ಗಳು ಕೂಡ ಇವೆ. ರನ್ನಿಂಗ್ ಮತ್ತು ಜಾಗಿಂಗ್‌ನಿಂದ ಆರೋಗ್ಯಕ್ಕೆ ಹಲವು ಉಪಯೋಗಗಳಿವೆ. ಆದರೆ, ನೀವು ಓಡಲು ಶುರು ಮಾಡುವ ಮುನ್ನ ಕೆಲವೊಂದಿಷ್ಟು ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ. ಆ ಬಗ್ಗೆ ಮಾಹಿತಿ ಇಲ್ಲಿದೆ.
ಓಡುವುದರಿಂದ ಮೂಳೆಗಳು ಸದೃಢವಾಗುತ್ತವೆ. ಸ್ನಾಯುಗಳನ್ನು ಬಲಪಡಿಸಲು, ಹೃದಯರಕ್ತನಾಳದ ಫಿಟ್ನೆಸ್ ಅನ್ನು ಸುಧಾರಿಸಲು, ಕ್ಯಾಲೋರಿಯನ್ನು ಕಡಿಮೆ ಮಾಡಲು, ತೂಕ ಇಳಿಸಿಕೊಳ್ಳಲು ಜಾಗಿಂಗ್ ಅತ್ಯುತ್ತಮವಾದ ಆಯ್ಕೆಯಾಗಿದೆ. ಜಿಮ್ನಲ್ಲಿ ಬೆವರು ಹರಿಸುವ ಬದಲು ದಿನಕ್ಕೆ 30 ನಿಮಿಷ ಓಡಿದರೂ ನಿಮ್ಮ ಆರೋಗ್ಯ ಮತ್ತು ದೇಹದಲ್ಲಿ ಬದಲಾವಣೆಗಳನ್ನು ಕಾಣಬಹುದು.
ನೀವು ಓಟವನ್ನು ಪ್ರಾರಂಭಿಸುವ ಮೊದಲು ಅಥವಾ ಯಾವುದೇ ಇತರ ವ್ಯಾಯಾಮಗಳನ್ನು ಮಾಡುವ ಮೊದಲು ಮಾಡಿಸಿಕೊಳ್ಳಬೇಕಾದ 10 ಪರೀಕ್ಷೆಗಳು ಇಲ್ಲಿವೆ…
ಇದನ್ನೂ ಓದಿ: Diabetes Care: ಮಧುಮೇಹಿಗಳು ಎಂದಿಗೂ ಈ ಹಣ್ಣುಗಳನ್ನು ತಿನ್ನಲೇಬೇಡಿ!
ಜಿಮ್ನಲ್ಲಿ ವರ್ಕ್ಔಟ್ ಮಾಡುವಾಗ ಕುಸಿದು ಬೀಳುವ, ಜಾಗಿಂಗ್ನಲ್ಲೇ ಹೃದಯಾಘಾತವಾಗುವ ಕೆಲವು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದನ್ನು ನೋಡಿದವರು ದೈಹಿಕ ವ್ಯಾಯಾಮಗಳನ್ನು ಮಾಡಲು ಹಿಂದೇಟು ಹಾಕುವಂತಾಗಿದೆ. ಆದರೆ, ಓಟದ ಅಥವಾ ಇತರ ವ್ಯಾಯಾಮದ ಸಮಯದಲ್ಲಿ ಆಗುವ ಈ ರೀತಿಯ ಹೃದಯಾಘಾತ ಅಥವಾ ಹೃದಯ ಸ್ತಂಭನದ ಅಪರೂಪದ ಘಟನೆಗಳು ಸಾಮಾನ್ಯವಾಗಿ ಮೊದಲೇ ಅಸ್ತಿತ್ವದಲ್ಲಿರುವ ಹೃದಯದ ಕಾಯಿಲೆಗಳು ಮತ್ತು ಅಪಾಯಕಾರಿ ಅಂಶಗಳಿಗೆ ಸಂಬಂಧಿಸಿದ್ದಾಗಿರುತ್ತವೆ. ಆ ಬಗ್ಗೆ ಆ ವ್ಯಕ್ತಿಗಳಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ಹೀಗಾಗಿ, ಓಡುವುದರಿಂದ ಅಥವಾ ವ್ಯಾಯಾಮ ಮಾಡುವುದರಿಂದ ದೇಹದ ಮೇಲೆ ನೆಗೆಟಿವ್ ಪರಿಣಾಮ ಉಂಟಾಗಬಹುದು ಎಂದು ಭಯಪಡಬೇಕಾಗಿಲ್ಲ.
10 tests one should do prior to starting running or doing any other exercises
Videos of young, apparently healthy people collapsing (while running marathons, working out in a gym or while playing a sport) often go viral. This creates anxiety among people who are already doing… pic.twitter.com/FlzwdmvLwZ
— Dr Sudhir Kumar MD DM (@hyderabaddoctor) October 4, 2023
ನೀವು ನಿಮ್ಮ ಫಿಟ್‌ನೆಸ್ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಮಾಡಬೇಕಾದ 10 ಪ್ರಮುಖ ಪರೀಕ್ಷೆಗಳ ಬಗ್ಗೆ ಹೈದರಾಬಾದ್ನ ಅಪೋಲೋ ಆಸ್ಪತ್ರೆ ನರರೋಗತಜ್ಞ ಡಾ. ಸುಧೀರ್ ಕುಮಾರ್ ಮಾಹಿತಿ ನೀಡಿದ್ದಾರೆ.
1. ರಕ್ತದೊತ್ತಡ: ಬಿಪಿ ಯಂತ್ರದ ಮೂಲಕ ಮನೆಯಲ್ಲಿಯೇ ಸುಲಭವಾಗಿ ತಪಾಸಣೆ ಮಾಡಬಹುದು. ರಕ್ತದೊತ್ತಡ 130/80 mmHgಗಿಂತ ಕೆಳಗೆ ಇರಬೇಕು.
2. ರಕ್ತದ ಸಕ್ಕರೆ ಅಂಶ: ಆಹಾರ ಸೇವನೆಗೂ ಮುನ್ನ ನಿಮ್ಮ ದೇಹದ ರಕ್ತದ ಸಕ್ಕರೆ ಪ್ರಮಾಣ 100 mg/dL ಗಿಂತ ಕಡಿಮೆ ಇರಬೇಕು.
ಇದನ್ನೂ ಓದಿ: ರಾತ್ರಿ ಊಟ ಬಿಟ್ಟರೆ ತೆಳ್ಳಗಾಗೋದು ನಿಜಾನಾ?
3. ಗ್ಲೈಕೇಟೆಡ್ ಹಿಮೋಗ್ಲೋಬಿನ್ (HbA1C): 5.6%ವರೆಗೆ ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ.
4. ಲಿಪಿಡ್ ಪ್ರೊಫೈಲ್: HDL 50ಕ್ಕಿಂತ ಹೆಚ್ಚಿರಲಿ, LDL 100ಕ್ಕಿಂತ ಕಡಿಮೆ ಇರಲಿ, ಟ್ರೈಗ್ಲಿಸರೈಡ್‌ಗಳು 150ಕ್ಕಿಂತ ಕಡಿಮೆ ಇರಲಿ, ಮತ್ತು ಒಟ್ಟು ಕೊಲೆಸ್ಟ್ರಾಲ್ 200ಕ್ಕಿಂತ ಕಡಿಮೆ ಇರಲಿ. ಟ್ರೈಗ್ಲಿಸರೈಡ್/ಎಚ್‌ಡಿಎಲ್ ಅನುಪಾತ 1 ಅಥವಾ ಅದಕ್ಕಿಂತ ಕಡಿಮೆ ಇದ್ದರೆ ತುಂಬಾ ಆರೋಗ್ಯಕರ ಎಂದು ಪರಿಗಣಿಸಲಾಗುತ್ತದೆ.
5. ಇಸಿಜಿ: ಅಸಹಜವಾದ ಹೃದಯದ ಬಡಿತವನ್ನು ಪತ್ತೆಹಚ್ಚಲು ಉಪಯುಕ್ತವಾಗಿದೆ.
6. ಎಕೋಕಾರ್ಡಿಯೋಗ್ರಾಂ: ಯುವ ಕ್ರೀಡಾಪಟುಗಳಲ್ಲಿ ಹಠಾತ್ ಹೃದಯ ಸ್ತಂಭನಕ್ಕೆ ಸಾಮಾನ್ಯ ಕಾರಣವಾದ ಹೈಪರ್ಟ್ರೋಫಿಕ್ ಕಾರ್ಡಿಯೊಮಿಯೋಪತಿ (HOCM) ಪತ್ತೆಹಚ್ಚಲು ತುಂಬಾ ಉಪಯುಕ್ತವಾಗಿದೆ.
7. ಹೋಮೋಸಿಸ್ಟೈನ್: ಇದರ ಮಟ್ಟ 15ಕ್ಕಿಂತ ಜಾಸ್ತಿ ಇದ್ದರೆ ಅದು ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸಬಹುದು.
8. ವಿಟಮಿನ್ ಡಿ: ವಿಟಮಿನ್ ಡಿ ಕೊರತೆಯು ಎಲ್ಲರಲ್ಲೂ ಸಾಮಾನ್ಯವಾಗಿದೆ. ಇದು ಮೂಳೆಗಳ ಮುರಿತ ಇತ್ಯಾದಿಗಳ ಅಪಾಯವನ್ನು ಹೆಚ್ಚಿಸುತ್ತದೆ.
9. ವಿಟಮಿನ್ ಬಿ 12: ಈ ಕೊರತೆಯು ವಿಶೇಷವಾಗಿ ಸಸ್ಯಾಹಾರಿಗಳಲ್ಲಿ ಸಾಮಾನ್ಯವಾಗಿದೆ.
10. ಹಿಮೋಗ್ಲೋಬಿನ್: ಕಡಿಮೆ ಹಿಮೋಗ್ಲೋಬಿನ್ (ರಕ್ತಹೀನತೆ) ವ್ಯಾಯಾಮದ ಸಮಯದಲ್ಲಿ ನಿಮ್ಮ ಪರ್ಫಾರ್ಮೆನ್ಸ್ ಅನ್ನು ಕಡಿಮೆ ಮಾಡುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ