Health Tips: ನೀವು ಒಬ್ಬಂಟಿಯಾಗಿ ವಾಸಿಸುತ್ತಿದ್ದೀರಾ? ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಚ್ಚರ

ಸಾಮಾನ್ಯವಾಗಿ ಕೆಲವರಿಗೆ ಹೊರಗೆ ಹೋಗಲು ಇಷ್ಟವಿರುವುದಿಲ್ಲ. ಸುತ್ತಾಟವನ್ನು ಇಷ್ಟ ಪಡುವುದಿಲ್ಲ. ಕತ್ತಲೆಯಲ್ಲಿ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತಾರೆ. ಯಾರೊಂದಿಗೂ ಹೆಚ್ಚಾಗಿ ಬೆರೆಯುವುದಿಲ್ಲ. ಇಂತಹ ಅಭ್ಯಾಸ ಮತ್ತು ನಡವಳಿಕೆಗಳು ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ.

Health Tips: ನೀವು ಒಬ್ಬಂಟಿಯಾಗಿ ವಾಸಿಸುತ್ತಿದ್ದೀರಾ? ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಚ್ಚರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 07, 2024 | 1:11 PM

ನೀವು ಏಕಾಂಗಿಯಾಗಿ ಸಮಯ ಕಳೆಯಲು ಇಷ್ಟಪಡುತ್ತೀರಾ? ಹಾಗಾದರೆ ಈ ಬಗ್ಗೆ ಕೆಲವೊಂದಿಷ್ಟು ಮಾಹಿತಿಗಳನ್ನು ನೀವು ತಿಳಿದುಕೊಳ್ಳಲೇಬೇಕು. ಸಾಮಾನ್ಯವಾಗಿ ಕೆಲವರಿಗೆ ಹೊರಗೆ ಹೋಗಲು ಇಷ್ಟವಿರುವುದಿಲ್ಲ. ಸುತ್ತಾಟವನ್ನು ಇಷ್ಟ ಪಡುವುದಿಲ್ಲ. ಕತ್ತಲೆಯಲ್ಲಿ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತಾರೆ. ಯಾರೊಂದಿಗೂ ಹೆಚ್ಚಾಗಿ ಬೆರೆಯುವುದಿಲ್ಲ. ಇಂತಹ ಅಭ್ಯಾಸ ಮತ್ತು ನಡವಳಿಕೆಗಳು ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ.

ಹಾರ್ವರ್ಡ್ ಮೆಡಿಕಲ್ ಸ್ಕೂಲ್, ಯುಎನ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂರೋಲಾಜಿಕಲ್ ಡಿಸಾರ್ಡರ್ಸ್ ಮತ್ತು ಸ್ಟ್ರೋಕ್ನಂತಹ ಸಂಸ್ಥೆಗಳ ವರದಿಗಳು ಈ ಆಘಾತಕಾರಿ ಬೆಳವಣಿಗೆಗಳ ಬಗ್ಗೆ ಸಂಶೋಧನೆ ನಡೆಸಿದ್ದು, ಅಲ್ಲಿನ ಮನೋವಿಜ್ಞಾನಿಗಳು ಹೇಳುವ ಪ್ರಕಾರ, ಮೆದುಳಿಗೆ ಸಮಸ್ಯೆ ನೀಡುವ ಕೆಲವು ಅಭ್ಯಾಸಗಳು ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಏಕಾಂಗಿಯಾಗಿ ಸಮಯ ಕಳೆಯುವುದು, ಹೆಡ್ ಫೋನ್ ಗಳೊಂದಿಗೆ ಹೆಚ್ಚು ಸಮಯ ಕಳೆಯುವುದು, ಮನೆಯಲ್ಲಿಯೇ ಇರುವುದು ಮತ್ತು ಕತ್ತಲೆಯ ಕೋಣೆಗಳಲ್ಲಿ ವಾಸ ಮಾಡುವುದು ಒಳ್ಳೆಯದಲ್ಲ. ಇದೆಲ್ಲದರ ಜೊತೆಗೆ ಸರಿಯಾಗಿ ನಿದ್ರೆ ಮಾಡದಿರುವುದು ಮತ್ತು ಹೆಚ್ಚು ಮೊಬೈಲ್ ಬಳಕೆ ಮಾಡುವುದು ಕೂಡ ಅಪಾಯಕಾರಿ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮೂತ್ರದ ಬಣ್ಣದಿಂದ ದೇಹದಲ್ಲಿ ನೀರಿನ ಕೊರತೆಯಾಗಿರುವುದನ್ನು ಕಂಡುಹಿಡಿಯಬಹುದು

ಕುಟುಂಬದವರೊಂದಿಗೆ ಕಾಲ ಕಳೆಯಿರಿ

ನಮ್ಮ ಮೆದುಳನ್ನು ಆರೋಗ್ಯಕರವಾಗಿಡಲು ಇತರರೊಂದಿಗೆ ಮಾತನಾಡುವುದು ಬಹಳ ಮುಖ್ಯ ಎಂದು ಸಮೀಕ್ಷೆಯ ವರದಿಗಳು ಹೇಳುತ್ತವೆ. ಎಲ್ಲಾ ಸಮಯದಲ್ಲೂ ಒಬ್ಬಂಟಿಯಾಗಿರುವುದು ಜೊತೆಗೆ ನಿದ್ರೆಯ ಕೊರತೆ ಮೆದುಳಿಗೆ ಹಾನಿಯನ್ನುಂಟು ಮಾಡುತ್ತದೆ. ಹಾಗಾಗಿ ಆದಷ್ಟು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಕಾಲ ಕಳೆಯುವುದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ಅಲ್ಲದೆ ಈ ಒಂಟಿತನವು ಖಿನ್ನತೆ, ಆತಂಕ, ಬುದ್ಧಿಮಾಂದ್ಯತೆ ಮತ್ತು ಅಲ್ಝೈಮರ್‌ನಂತಹ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಲು ಕುಟುಂಬದೊಂದಿಗೆ ಅಥವಾ ಸ್ನೇಹಿತರ ಜೊತೆಯಲ್ಲಿ ಸಾಕಷ್ಟು ಸಮಯ ಕಳೆಯಿರಿ ಎಂದು ತಜ್ಞರು ಹೇಳುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: