AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಕಬ್ಬಿನ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚುತ್ತದೆಯೇ?

ಮಧುಮೇಹ ರೋಗಿಗಳು ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿನ ರಸವನ್ನು ಕುಡಿಯುವುದನ್ನು ತಪ್ಪಿಸಬೇಕು ಎಂದು ದೆಹಲಿಯ ಲೇಡಿ ಹಾರ್ಡಿಂಜ್ ವೈದ್ಯಕೀಯ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಡಾ ಎಸ್ ಎಲ್ ಘೋಟೇಕರ್ ಹೇಳುತ್ತಾರೆ. ಏಕೆಂದರೆ ಇದು ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತದೆ.

Health Tips: ಕಬ್ಬಿನ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚುತ್ತದೆಯೇ?
ಅಕ್ಷತಾ ವರ್ಕಾಡಿ
|

Updated on: Jun 07, 2024 | 6:07 PM

Share

ಹೆಚ್ಚುತ್ತಿರುವ ಸೆಖೆಯಿಂದ ಕಬ್ಬಿನ ಜ್ಯೂಸ್ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಕಬ್ಬಿನ ರಸಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರ ಪ್ರಕಾರ, ಕಬ್ಬಿನ ರಸದ ಅತಿಯಾದ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಏಕೆಂದರೆ ಇದು ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿದ್ದು, ಇದು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್‌ನ ಸಹಯೋಗದೊಂದಿಗೆ ಐಸಿಎಂಆರ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದು ಕಬ್ಬಿನ ರಸವನ್ನು ಸಹ ಉಲ್ಲೇಖಿಸುತ್ತದೆ. ಇದನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವಂತೆ ಐಸಿಎಂಆರ್ ಸಲಹೆ ನೀಡಿದೆ.

ವಯಸ್ಕ ವ್ಯಕ್ತಿ 24 ಗಂಟೆಗಳಲ್ಲಿ 30 ಗ್ರಾಂಗಿಂತ ಹೆಚ್ಚು ಸಕ್ಕರೆ ಸೇವಿಸಬಾರದು ಎಂದು ICMR ಹೇಳಿದೆ. ಇದಲ್ಲದೆ, 7 ರಿಂದ 10 ವರ್ಷ ವಯಸ್ಸಿನ ಮಕ್ಕಳಿಗೆ ಈ ಪ್ರಮಾಣವು 24 ಗ್ರಾಂ. 100 ಮಿಲಿ ಕಬ್ಬಿನ ರಸದಲ್ಲಿ 13 ರಿಂದ 15 ಗ್ರಾಂ ಸಕ್ಕರೆ ಇರುತ್ತದೆ ಎಂದು ಐಸಿಎಂಆರ್ ಹೇಳಿದೆ. ಇಂತಹ ಪರಿಸ್ಥಿತಿಯಲ್ಲಿ ಕಬ್ಬಿನ ರಸವನ್ನು ಅತಿಯಾಗಿ ಸೇವಿಸಿದರೆ ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸಬಹುದು. ದೀರ್ಘಕಾಲದವರೆಗೆ ಕಬ್ಬಿನ ರಸವನ್ನು ಕುಡಿಯುವುದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಕಬ್ಬಿನ ರಸವು ಈಗಾಗಲೇ ಮಧುಮೇಹ ಹೊಂದಿರುವವರಿಗೆ ಹಾನಿಯನ್ನುಂಟುಮಾಡುತ್ತದೆ.

ಇದನ್ನೂ ಓದಿ: ಮೂಗಿನೊಳಗೆ ಬೆರಳು ಹಾಕುವ ಅಭ್ಯಾಸ ನಿಮಗಿದೆಯೇ? ಈ ಅಪಾಯಕಾರಿ ಕಾಯಿಲೆ ಬರಬಹುದು ಎಚ್ಚರ

ಮಧುಮೇಹ ರೋಗಿಗಳು ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿನ ರಸವನ್ನು ಕುಡಿಯುವುದನ್ನು ತಪ್ಪಿಸಬೇಕು ಎಂದು ದೆಹಲಿಯ ಲೇಡಿ ಹಾರ್ಡಿಂಜ್ ವೈದ್ಯಕೀಯ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಡಾ ಎಸ್ ಎಲ್ ಘೋಟೇಕರ್ ಹೇಳುತ್ತಾರೆ. ಏಕೆಂದರೆ ಇದು ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತದೆ. ಕಬ್ಬಿನ ರಸದಲ್ಲಿ ಗ್ಲೈಸೆಮಿಕ್ ಅಂಶವೂ ತುಂಬಾ ಹೆಚ್ಚಾಗಿರುತ್ತದೆ. ಈ ಕಾರಣದಿಂದಾಗಿ, ಮಧುಮೇಹ ರೋಗಿಗಳ ರಕ್ತದಲ್ಲಿನ ಸಕ್ಕರೆಯ ಮಟ್ಟವು ವೇಗವಾಗಿ ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮಧುಮೇಹ ರೋಗಿಗಳು ಈ ರಸದಿಂದ ದೂರವಿರಬೇಕು. ನಿಮಗೆ ಕುಡಿಯಲು ಅನಿಸಿದರೂ ವೈದ್ಯರ ಸಲಹೆ ಮೇರೆಗೆ ಮಾತ್ರ ಕುಡಿಯಬೇಕು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: