Health Tips: ಮೊಬೈಲ್ ಮುಖದ ಸೌಂದರ್ಯವನ್ನು ಕಸಿದುಕೊಳ್ಳುತ್ತದೆ; ಅತಿಯಾಗಿ ಸ್ಮಾರ್ಟ್​ ಫೋನ್ ಬಳಸುವವರು ಈ ವಿಷಯದ ಬಗ್ಗೆ ಎಚ್ಚರ ವಹಿಸಿ

ಮೊಬೈಲ್ ಫೋನ್ ಅನ್ನು ದೀರ್ಘಕಾಲದವರೆಗೆ ಬಳಸುವುದರಿಂದ ನಮ್ಮ ಆರೋಗ್ಯ ಮತ್ತು ಚರ್ಮಕ್ಕೆ ಹಾನಿಯಾಗುತ್ತದೆ. ಮೊಬೈಲ್​ಗಳಿಂದ ಹೊರಸೂಸುವ ಹಾನಿಕಾರಕ ವಿಕಿರಣ ಚರ್ಮ ಮತ್ತು ದೇಹದ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ.

Health Tips: ಮೊಬೈಲ್ ಮುಖದ ಸೌಂದರ್ಯವನ್ನು ಕಸಿದುಕೊಳ್ಳುತ್ತದೆ; ಅತಿಯಾಗಿ ಸ್ಮಾರ್ಟ್​ ಫೋನ್ ಬಳಸುವವರು ಈ ವಿಷಯದ ಬಗ್ಗೆ ಎಚ್ಚರ ವಹಿಸಿ
ಸಾಂದರ್ಭಿಕ ಚಿತ್ರ
Follow us
| Updated By: Skanda

Updated on: Jun 17, 2021 | 7:12 AM

ಇತ್ತೀಚಿನ ದಿನಗಳಲ್ಲಿ ಮೊಬೈಲ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಕೆಲವರಂತೂ ಒಂದು ಕ್ಷಣ ಕೂಡ ಮೊಬೈಲ್​ ಅನ್ನು ಬಿಟ್ಟಿರುವುದಿಲ್ಲ. ಆದರೆ ಮೊಬೈಲ್ ಫೋನ್ ಅನ್ನು ದೀರ್ಘಕಾಲದವರೆಗೆ ಬಳಸುವುದರಿಂದ ನಮ್ಮ ಆರೋಗ್ಯ ಮತ್ತು ಚರ್ಮಕ್ಕೆ ಹಾನಿಯಾಗುತ್ತದೆ. ಮೊಬೈಲ್​ಗಳಿಂದ ಹೊರಸೂಸುವ ಹಾನಿಕಾರಕ ವಿಕಿರಣ ಚರ್ಮ ಮತ್ತು ದೇಹದ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಇದರಲ್ಲಿ ವಿಕಿರಣ ಮತ್ತು ರೇಡಿಯೊ ಫ್ರೀಕ್ವೆನ್ಸಿ ಶಕ್ತಿ ಇದೆ. ಈ ಎರಡೂ ವಿಷಯಗಳು ಚರ್ಮಕ್ಕೆ ಹಾನಿಕಾರಕ. ಹೀಗಾಗಿ ಆದಷ್ಟು ಮೊಬೈಲ್ ಬಳಕೆ ಕಡಿಮೆ ಮಾಡಬೇಕು ಮತ್ತು ಮೊಬೈಲ್ ಫೋನ್‌ಗಳ ಅತಿಯಾದ ಬಳಕೆಯಿಂದ ಯಾವ ರೀತಿಯ ಹಾನಿ ಉಂಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಸೂಕ್ತ.

1. ಚರ್ಮದಲ್ಲಿ ಕೆಂಪು ಗುಳ್ಳೆ ಮೂಡುವುದು ಡರ್ಮಟೈಟಿಸ್ ಎನ್ನುವುದು ಚರ್ಮದ ಉರಿಯೂತಕ್ಕೆ ಬಳಸುವ ಸಾಮಾನ್ಯ ಪದವಾಗಿದೆ. ಅತಿಯಾದ ಫೋನ್ ಬಳಕೆಯು ಮುಖದ ಮೇಲೆ ಕೆಂಪು ಗುಳ್ಳೆಗಳು, ತುರಿಕೆ ಮತ್ತು ಉರಿಯೂತಕ್ಕೆ ಕಾರಣವಾಗಬಹುದು.

2. ಫೈನ್ ಲೈನ್ಸ್ ಮತ್ತು ಸುಕ್ಕುಗಳು ಮೊಬೈಲ್​ನ ದೀರ್ಘಕಾಲದ ಬಳಕೆಯು ಮುಖದ ಮೇಲೆ ಗೆರೆಗಳು ಮತ್ತು ಸುಕ್ಕುಗಳನ್ನು ಉಂಟುಮಾಡುತ್ತದೆ. ಇದು ನಿಮಗೆ ವಯಸ್ಸಾದಂತೆ ಕಾಣುವಂತೆ ಮಾಡುತ್ತದೆ. ಮೊಬೈಲ್ ಫೋನ್‌ನಲ್ಲಿ ದೀರ್ಘಕಾಲ ಚಾಟ್ ಮಾಡುವಾಗ ಅಥವಾ ಓದುವಾಗ, ನೀವು ನಿರಂತರವಾಗಿ ಮೊಬೈಲ್ ಪರದೆಯನ್ನು ನೋಡುತ್ತೀರಿ, ಅದಕ್ಕಾಗಿಯೇ ಹಣೆಯ ಮೇಲೆ ಗೆರೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ.

3. ಕಣ್ಣಿನ ಆರೋಗ್ಯಕ್ಕೆ ಹಾನಿಕಾರಕ ಮೊಬೈಲ್ ಫೋನ್‌ಗಳಿಂದ ಹೊರಸೂಸುವ ನೀಲಿ ಬೆಳಕು ಚರ್ಮದ ಮೇಲೆ ವರ್ಣದ್ರವ್ಯವನ್ನು ಉಂಟುಮಾಡುತ್ತದೆ. ಮಧ್ಯರಾತ್ರಿಯಲ್ಲಿ ಮೊಬೈಲ್ ಬಳಸುವುದು ನಿಮ್ಮ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ. ಇದಲ್ಲದೆ ನಿಮ್ಮ ನಿದ್ರೆಯ ಮೇಲೆ ಕೂಡ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಕಣ್ಣುಗಳ ಸುತ್ತಲೂ ಕಪ್ಪಾಗುವ ಸಾಧ್ಯತೆ ಇದೆ.

4. ಚರ್ಮದ ಸೋಂಕು ಮೊಬೈಲ್ ಫೋನ್‌ಗಳು ಸುತ್ತಮುತ್ತಲಿನ ಪರಿಸರಕ್ಕೆ ಅಂಟಿಕೊಳ್ಳುವ ವೈವಿಧ್ಯಮಯ ರೋಗಾಣುಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಒಳಗೊಂಡಿರುತ್ತವೆ. ಈ ಬ್ಯಾಕ್ಟೀರಿಯಾಗಳು ನಿಮ್ಮ ಚರ್ಮಕ್ಕೂ ಸೋಂಕು ತಗುಲುವಂತೆ ಮಾಡುತ್ತದೆ.

5. ಕುತ್ತಿಗೆಯಲ್ಲಿ ಸುಕ್ಕುಗಳು ಮೊಬೈಲ್ ಫೋನ್ ಅನ್ನು ದೀರ್ಘಕಾಲದವರೆಗೆ ಬಳಸುವುದರಿಂದ ಕುತ್ತಿಗೆಯಲ್ಲಿ ಸುಕ್ಕುಗಳು ಉಂಟಾಗಬಹುದು. ಕತ್ತಿನ ಚರ್ಮ ಬಿಗಿಯಾಗಿ ದಪ್ಪವಾಗಿ ಕಾಣುವ ಸಾಧ್ಯತೆ ಕೂಡ ಇರುತ್ತದೆ.

ಇದನ್ನೂ ಓದಿ:

Toothpaste Benefits: ಹಲ್ಲುಗಳನ್ನು ಸ್ವಚ್ಛಗೊಳಿಸುವುದರ ಜತೆಗೆ ಟೂತ್​ಪೇಸ್ಟ್ ಮುಖದ ಸೌಂದರ್ಯವನ್ನೂ ಹೆಚ್ಚಿಸುತ್ತದೆ

Mouth Ulcers: ಬಾಯಿ ಹುಣ್ಣಿನಿಂದ ಬಳಲುತ್ತಿದ್ದೀರಾ? ಈ ಸರಳ ವಿಧಾನವನ್ನು ಅನುಸರಿಸಿ ನೋವಿನಿಂದ ಮುಕ್ತಿ ಪಡೆಯಿರಿ

ಮನೆಯೊಂದರ ಬೆಡ್​ರೂಂನಲ್ಲಿ 2 ಹಾವುಗಳ ಜಗಳ; ಬೆಚ್ಚಿ ಬೀಳಿಸುವ ವಿಡಿಯೋ ವೈರಲ್
ಮನೆಯೊಂದರ ಬೆಡ್​ರೂಂನಲ್ಲಿ 2 ಹಾವುಗಳ ಜಗಳ; ಬೆಚ್ಚಿ ಬೀಳಿಸುವ ವಿಡಿಯೋ ವೈರಲ್
ರಾತ್ರೋರಾತ್ರಿ ಬಳ್ಳಾರಿ ಜೈಲಿನಿಂದ ಆಂಬ್ಯುಲೆನ್ಸ್​ ಮೂಲಕ ದರ್ಶನ್ ಶಿಫ್ಟ್
ರಾತ್ರೋರಾತ್ರಿ ಬಳ್ಳಾರಿ ಜೈಲಿನಿಂದ ಆಂಬ್ಯುಲೆನ್ಸ್​ ಮೂಲಕ ದರ್ಶನ್ ಶಿಫ್ಟ್
20 ರೂಪಾಯಿಗಾಗಿ ಜಗಳ; ರಿಕ್ಷಾ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
20 ರೂಪಾಯಿಗಾಗಿ ಜಗಳ; ರಿಕ್ಷಾ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಜೈಲಿನಲ್ಲಿ ದರ್ಶನ್ ಭೇಟಿ ಬಳಿಕ ಬೇಸರ ಮಾಡಿಕೊಂಡು ಹೊರಟ ವಿಜಯಲಕ್ಷ್ಮಿ
ಜೈಲಿನಲ್ಲಿ ದರ್ಶನ್ ಭೇಟಿ ಬಳಿಕ ಬೇಸರ ಮಾಡಿಕೊಂಡು ಹೊರಟ ವಿಜಯಲಕ್ಷ್ಮಿ
ಪಾರ್ಕಿಂಗ್​ಗೆ ಅವಕಾಶ ನೀಡದ ಸೆಕ್ಯುರಿಟಿ ಮೇಲೆ ಮಹಿಳೆಯಿಂದ ಅಟ್ಯಾಕ್
ಪಾರ್ಕಿಂಗ್​ಗೆ ಅವಕಾಶ ನೀಡದ ಸೆಕ್ಯುರಿಟಿ ಮೇಲೆ ಮಹಿಳೆಯಿಂದ ಅಟ್ಯಾಕ್
ಪಾಕ್ ಪರ ಘೋಷಣೆ ಕೂಗಿದ್ದಕ್ಕೆ 21 ಬಾರಿ ಭಾರತ್ ಮಾತಾಕಿ ಜೈ ಹೇಳಿಸಿದ ಕೋರ್ಟ್!
ಪಾಕ್ ಪರ ಘೋಷಣೆ ಕೂಗಿದ್ದಕ್ಕೆ 21 ಬಾರಿ ಭಾರತ್ ಮಾತಾಕಿ ಜೈ ಹೇಳಿಸಿದ ಕೋರ್ಟ್!
ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ