ನಾವು ಪ್ರತಿನಿತ್ಯ ಸೇವಿಸುವ ಆಹಾರವು ದೇಹದಲ್ಲಿನ ಎಲ್ಲಾ ಭಾಗಗಳ ಮೇಲೆ ಪರಿಣಾಮವನ್ನು ಬೀರುತ್ತವೆ. ನಮ್ಮ ಆರೋಗ್ಯವು ನಾವು ಯಾವ ಯಾವ ಆಹಾರವನ್ನು ಸೇವಿಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಾವು ಸೇವಿಸುವ ಆಹಾರ ಮೆದಳಿನ ಮೇಲೂ ಪರಿಣಾಮ ಬೀರಬಲ್ಲದು. ಹಾಗಿರುವಾಗ ಮಕ್ಕಳಲ್ಲಿ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಕೆಲವೊಂದಿಷ್ಟು ಸಲಹೆಗಳು ಇಲ್ಲಿವೆ.
ಮೆದುಳು ದೇಹದ ಪ್ರಮುಖ ಭಾಗದಲ್ಲಿ ಒಂದು. ಹಲವು ವಿಧದ ಚಯಾಪಚಯ ಕ್ರಿಯೆಗೆ ಮೆದುಳು ಆಧಾರವಾಗಿದೆ. ಮೆದುಳು ಆರೋಗ್ಯವಾಗಿದ್ದರೆ ಆರೋಗ್ಯವೂ ಸಹ ಚೆನ್ನಾಗಿರುತ್ತದೆ. ಮಕ್ಕಳಲ್ಲಿ ನೆನಪಿನ ಶಕ್ತಿ ಉಲ್ಬಣಗೊಂಡರೆ ಬಹುಬೇಗ ತರಗತಿಯನ್ನು ಗ್ರಹಿಸಲು ಸಹಾಯಕವಾಗುತ್ತದೆ. ಸ್ಮರಣೆಯನ್ನು ಹೆಚ್ಚಿಸುವ ಮತ್ತು ಮೆದುಳಿನ ಆರೋಗ್ಯವನ್ನು ಸುಧಾರಿಸುವ ಕೆಲವೊಂದಿಷ್ಟು ಆಹಾರ ಪದಾರ್ಥಗಳು ಯಾವುದು ಎಂಬುದನ್ನು ತಿಳಿಯೋಣ.
*ಮೆದುಳನ್ನು ಚುರುಕಾಗಿಡಲು ನಿಮ್ಮ ಆಹಾರದಲ್ಲಿ ವಿಟಮಿನ್ ಬಿ ಮತ್ತು ಸಿ ಅಧಿಕವಾಗಿರುವಂತೆ ನೋಡಿಕೊಳ್ಳಬೇಕು. ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುತ್ತದೆ.
*ಅಣಬೆಗಳು ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಜತೆಗೆ ಈ ಪದಾರ್ಥವನ್ನು ನಿಯಮಿತವಾಗಿ ಮಕ್ಕಳಿಗೆ ನೀಡುವ ಮೂಲಕ ನೆನಪಿನ ಶಕ್ತಿ ಹೆಚ್ಚಾಗುತ್ತದೆ.
*ಬೆಳೆಯುತ್ತಿರುವ ಮಕ್ಕಳಿಗೆ ಕೋಳಿ ಮೊಟ್ಟೆ ನೀಡುವುದು ಉತ್ತಮ. ಇದರಲ್ಲಿರುವ ಪ್ರೋಟೀನ್ಗಳು ನೆನಪಿನ ಶಕ್ತಿಯನ್ನು ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
*ಬಾದಾಮಿ, ಗೋಡಂಬಿ, ಅಗಸೆ ಬೀಜ, ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜ ಮಕ್ಕಳ ಆಹಾರ ಪದಾರ್ಥವಾಗಿರಬೇಕು. ಅವುಗಳಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ಮೆದುಳನ್ನು ಸಕ್ರಿಯವಾಗಿಸುತ್ತದೆ.
*ಮಾಂಸಹಾರಿಗಳಾಗಿದ್ದರೆ ಮೀನು ಸೇವನೆ ಉತ್ತಮ. ಇದರಲ್ಲಿಯೂ ಸಹ ಒಮೆಗಾ 3 ಕೊಬ್ಬಿನಾಮ್ಲಗಳು ಇರುವುದರಿಂದ ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
*ಪೌಷ್ಟಿಕ ಆಹಾರ ಪದಾರ್ಥಗಳ ಜತೆಗೆ ಮಕ್ಕಳಿಗೆ ಉತ್ತಮ ಯೋಗ ಮತ್ತು ಧ್ಯಾನ ಅಭ್ಯಾಸ ಒಳ್ಳೆಯದು. ಇವುಗಳು ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
ಇದನ್ನೂ ಓದಿ:
Health Tips: ಒಣ ಕೆಮ್ಮಿನಿಂದ ಸುಸ್ತಾಗಿದ್ದೀರಾ? ಜೇಷ್ಠ ಮಧುವಿನ ಸೇವನೆ ಉತ್ತಮ ಔಷಧ
Post Covid: ದೀರ್ಘಕಾಲಿಕ ಕೊವಿಡ್ ಲಕ್ಷಣಗಳಿಂದ ಹೊರಬರಲು ಸರಳ ವಿಧಾನಗಳು
(Health Tips Improve your children memory power follow these tips )
Published On - 5:01 pm, Tue, 24 August 21