ಮೊಳಕೆಯೊಡೆದ ಕಾಳುಗಳನ್ನು ಏಕೆ ತಿನ್ನಬೇಕು? ಇಲ್ಲಿವೆ 7 ಕಾರಣ
ದಿನವೂ ಮೊಳಕೆಯೊಡೆದ ಕಾಳುಗಳನ್ನು ಸೇವಿಸಿದರೆ ಅನೇಕ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಈ ಮೊಳಕೆ ಕಾಳುಗಳನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಇವು ಪ್ರೋಟೀನ್, ಕ್ಯಾಲ್ಸಿಯಂ, ಫೈಬರ್, ವಿಟಮಿನ್ಗಳು, ಖನಿಜಗಳು ಮತ್ತು ಕಿಣ್ವಗಳನ್ನು ಒಳಗೊಂಡಿರುತ್ತದೆ.
ಸಲಾಡ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ಗೊತ್ತಿದೆ. ಆದರೆ, ಈ ಸಲಾಡ್ನಲ್ಲಿ ಮೊಳಕೆ ಬರಿಸಿದ ಕಾಳುಗಳನ್ನು ಸೇರಿಸಿಕೊಳ್ಳುವುದರಿಂದ ಏನೆಲ್ಲ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತಾ? ದಿನವೂ ಮೊಳಕೆಯೊಡೆದ ಕಾಳುಗಳನ್ನು ಸೇವಿಸಿದರೆ ಅನೇಕ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಈ ಮೊಳಕೆ ಕಾಳುಗಳನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಇವು ಪ್ರೋಟೀನ್, ಕ್ಯಾಲ್ಸಿಯಂ, ಫೈಬರ್, ವಿಟಮಿನ್ಗಳು, ಖನಿಜಗಳು ಮತ್ತು ಕಿಣ್ವಗಳನ್ನು ಒಳಗೊಂಡಿರುತ್ತದೆ. ಹಾಗೇ, ಇವು ಕಡಿಮೆ ಕ್ಯಾಲೋರಿಯನ್ನು ಒಳಗೊಂಡಿರುತ್ತವೆ. ಇವುಗಳನ್ನು ಬೆಳಗಿನ ಉಪಾಹಾರ, ಸಂಜೆಯ ತಿಂಡಿಗಳು, ಮಧ್ಯಾಹ್ನ ಮತ್ತು ರಾತ್ರಿಯ ಊಟದ ಸಮಯದಲ್ಲಿ ಸೇವಿಸಬಹುದು.
ಮೊಳಕೆ ಕಾಳುಗಳ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ.
1. ರಕ್ತದ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮೊಳಕೆಕಾಳುಗಳು ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದು ರಕ್ತದ ಇನ್ಸುಲಿನ್ ಮಟ್ಟವನ್ನು ಮತ್ತು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
2. ಉತ್ತಮ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಮೊಳಕೆ ಕಾಳುಗಳು ನಿಮ್ಮ ಆಹಾರವನ್ನು ಹೆಚ್ಚು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಬೀಜಗಳು ಮೊಳಕೆಯೊಡೆದಾಗ ಅವು ಹೊಂದಿರುವ ಫೈಬರ್ ಪ್ರಮಾಣವು ಹೆಚ್ಚಾಗುತ್ತದೆ. ಇದು ಮಲವಿಸರ್ಜನೆಯನ್ನು ಸರಾಗಗೊಳಿಸುತ್ತದೆ.
ಇದನ್ನೂ ಓದಿ: ಮಲಬದ್ಧತೆ ಸಮಸ್ಯೆ ನಿವಾರಣೆಗೆ ಈ ತರಕಾರಿಗಳಿಗೂ ನಿಮ್ಮ ಅಡುಗೆಯಲ್ಲಿ ಜಾಗವಿರಲಿ
3. ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಮೊಳಕೆ ಕಾಳುಗಳು ನಿಮ್ಮ ಹೃದಯಕ್ಕೆ ಪ್ರಯೋಜನಗಳನ್ನು ಹೊಂದಿರುವುದರಿಂದ ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಇವು ಅಧಿಕ ರಕ್ತದ ಕೊಲೆಸ್ಟ್ರಾಲ್ ಮಟ್ಟಗಳಂತಹ ಹೃದ್ರೋಗದ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡುತ್ತದೆ.
4. ಆರೋಗ್ಯಕರ ದೃಷ್ಟಿಯನ್ನು ಉತ್ತೇಜಿಸುತ್ತದೆ. ಮೊಳಕೆ ಕಾಳುಗಳಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಇವುಗಳಲ್ಲಿನ ವಿಟಮಿನ್ ಎ ದೃಷ್ಟಿಯನ್ನು ಸುಧಾರಿಸುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ.
5. ಹೊಳೆಯುವ ಮತ್ತು ಆರೋಗ್ಯಕರ ಚರ್ಮವನ್ನು ಒದಗಿಸುತ್ತದೆ. ಮೊಳಕೆ ಕಾಳುಗಳಲ್ಲಿ ಖನಿಜಗಳು ಮತ್ತು ಆರೋಗ್ಯಕರ ವಿಟಮಿನ್‌ಗಳಿವೆ. ಇದು ನೈಸರ್ಗಿಕವಾಗಿ ಉತ್ತಮ ಚರ್ಮವನ್ನು ಪಡೆಯಲು ಆರೋಗ್ಯಕರ ಮಾರ್ಗವಾಗಿದೆ.
6. ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಮೊಳಕೆ ಕಾಳುಗಳಲ್ಲಿ ಹೇರಳವಾದ ವಿಟಮಿನ್ ಸಿ ಅಂಶವಿದೆ. ಇದು ಕೂದಲ ಬೆಳವಣಿಗೆಗೆ ಸಹಕಾರಿ. ಮೊಳಕೆಗಳ ನಿಯಮಿತ ಸೇವನೆಯು ಕೂದಲ ಕಿರುಚೀಲಗಳಿಗೆ ಸ್ವತಂತ್ರ ರಾಡಿಕಲ್ ಹಾನಿಯನ್ನು ತಡೆಯುತ್ತದೆ. ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ ಹಾಗೂ ತಲೆಹೊಟ್ಟನ್ನು ತೊಡೆದುಹಾಕುತ್ತದೆ. ಹಾಗೇ, ಕೂದಲಿನ ರಚನೆಯನ್ನು ಸುಧಾರಿಸುತ್ತದೆ.
ಇದನ್ನೂ ಓದಿ: ಕೊಬ್ಬು ಕರಗಿಸುವುದರಿಂದ ಜೀರ್ಣಕ್ರಿಯೆವರೆಗೆ; ಅಡುಗೆಮನೆಯಲ್ಲಿರುವ ಹುಣಸೆಹಣ್ಣಿನ ಚಮತ್ಕಾರಗಳಿವು
7. ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಮೊಳಕೆ ಕಾಳುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೇಹವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸರಾಗಗೊಳಿಸುವ ಕಿಣ್ವಗಳನ್ನು ಸಹ ಒಳಗೊಂಡಿರುತ್ತವೆ. ಇದು ದೇಹದಿಂದ ವಿಷವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ