Heat wave and heart attack: ಹೀಟ್ ಸ್ಟ್ರೋಕ್ ನಿಂದ ಹೃದಯಾಘಾತವನ್ನು ತಡೆಯುವುದು ಹೇಗೆ? ಇಲ್ಲಿದೆ ವೈದ್ಯರ ಸಲಹೆ

ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಅಪಾಯಕಾರಿ ಅನಾರೋಗ್ಯಗಳ ಪೈಕಿ ಹೀಟ್ ಸ್ಟ್ರೋಕ್ ಕೂಡ ಒಂದು. ಇದು ಹೃದಯಾಘಾತಕ್ಕೂ ಕಾರಣವಾಗಬಹುದು ಹಾಗಾಗಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮುಖ್ಯ. ಅಲ್ಲದೆ ಇದನ್ನು ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ಪಡೆದುಕೊಂಡರೆ, ನಿಯಂತ್ರಿಸಬಹುದು. ಇಲ್ಲವಾದರೆ ಜೀವಕ್ಕೇ ಕುತ್ತು ತರುವ ಸಾಧ್ಯತೆಗಳಿರುತ್ತದೆ.

Heat wave and heart attack: ಹೀಟ್ ಸ್ಟ್ರೋಕ್ ನಿಂದ ಹೃದಯಾಘಾತವನ್ನು ತಡೆಯುವುದು ಹೇಗೆ? ಇಲ್ಲಿದೆ ವೈದ್ಯರ ಸಲಹೆ
Heat wave and heart attack
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Apr 30, 2024 | 8:20 PM

ಬೇಸಿಗೆ ಕಾಲದಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ ಜನ ತತ್ತರಿಸುವಂತಾಗಿದೆ. ಹವಾಮಾನ ಬದಲಾವಣೆಯಾಗಿ ಬಿಸಿ ಗಾಳಿ ಹೆಚ್ಚುತ್ತಿದೆ. ಇದರಿಂದ ಅನೇಕ ರೀತಿಯ ರೋಗಗಳು ಜನರನ್ನು ಹೈರಾಣವಾಗಿಸಿದೆ. ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಅಪಾಯಕಾರಿ ಅನಾರೋಗ್ಯಗಳ ಪೈಕಿ ಹೀಟ್ ಸ್ಟ್ರೋಕ್ ಕೂಡ ಒಂದು. ಇದು ಹೃದಯಾಘಾತಕ್ಕೂ ಕಾರಣವಾಗಬಹುದು ಹಾಗಾಗಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮುಖ್ಯ. ಅಲ್ಲದೆ ಇದನ್ನು ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ಪಡೆದುಕೊಂಡರೆ, ನಿಯಂತ್ರಿಸಬಹುದು. ಇಲ್ಲವಾದರೆ ಜೀವಕ್ಕೇ ಕುತ್ತು ತರುವ ಸಾಧ್ಯತೆಗಳಿರುತ್ತದೆ.

ಯಾವುದೇ ಪ್ರದೇಶದಲ್ಲಿ ತಾಪಮಾನವು 40 ಡಿಗ್ರಿಗಳಿಗಿಂತ ಹೆಚ್ಚಿದ್ದರೆ, ಹೀಟ್ ಸ್ಟ್ರೋಕ್ ಅಪಾಯವಿರುತ್ತದೆ. ಸಾಮಾನ್ಯವಾಗಿ ದೇಹ ಅತಿಯಾಗಿ ನಿರ್ಜಲೀಕರಣಗೊಂಡಾಗ, ಹೆಚ್ಚು ಮಸಾಲೆಯುಕ್ತ ಆಹಾರ ಸೇವನೆ ಮಾಡಿದಾಗ, ಮದ್ಯಪಾನ, ದ್ರವ ಆಹಾರಗಳ ಕೊರತೆ ಉಂಟಾದಾಗ, ಹೆಚ್ಚು ದಪ್ಪನೆಯ ಬಟ್ಟೆ ಧರಿಸುವುದರಿಂದ ದೇಹಕ್ಕೆ ಅಗತ್ಯವಿರುವಷ್ಟು ಗಾಳಿ ಸಿಗುವುದಿಲ್ಲ. ಇದರಿಂದ ಇನ್ನಷ್ಟು ಉಷ್ಣತೆ ಜಾಸ್ತಿಯಾಗುತ್ತದೆ. ಈ ಎಲ್ಲ ಕಾರಣಗಳಿಂದ ಹೀಟ್ ಸ್ಟ್ರೋಕ್ ಉಂಟಾಗುತ್ತದೆ. ಈ ರೀತಿ ಆಗುವುದನ್ನು ತಪ್ಪಿಸಲು ಮೊದಲು ಇದರ ರೋಗಲಕ್ಷಣಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.

ಹೀಟ್ ಸ್ಟ್ರೋಕ್ ರೋಗಲಕ್ಷಣಗಳು ಯಾವುವು?

ದಣಿವು:

ಇದು ಹೃದಯಾಘಾತದ ಆರಂಭಿಕ ಲಕ್ಷಣವಾಗಿರಬಹುದು. ಕೆಲವು ಜನರು ಬೇಸಿಗೆಯಲ್ಲಿ ಬೇಗನೆ ಆಯಾಸಗೊಳ್ಳುತ್ತಾರೆ. ಇದು ಹೃದಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ನೀವು ಇದ್ದಕ್ಕಿದ್ದಂತೆ ಮೂರ್ಛೆ ಹೋದರೆ, ಅದು ಹೃದಯಾಘಾತದ ಸಂಕೇತವೂ ಆಗಿರಬಹುದು. ಆದ್ದರಿಂದ ಅದನ್ನು ನಿರ್ಲಕ್ಷಿಸಬಾರದು.

ತಲೆನೋವು:

ಸೂರ್ಯನ ಪ್ರಕಾಶಮಾನವಾದ ಕಿರಣಗಳಿಂದ ನಿಮಗೆ ನಿರಂತರ ತಲೆನೋವು ಬರುತ್ತಿದ್ದರೆ ಇದು ನಿಮ್ಮ ಬಿಪಿಯನ್ನು ಹೆಚ್ಚು ಮಾಡುವ ಅಪಾಯವಿದೆ. ಹಾಗಾಗಿ ಸಮಯಕ್ಕೆ ಸರಿಯಾಗಿ ಇದಕ್ಕೆ ಚಿಕಿತ್ಸೆ ಮಾಡುವುದು ಅಗತ್ಯ, ಇಲ್ಲವಾದಲ್ಲಿ ಹೃದಯಾಘಾತ ಸಂಭವಿಸಬಹುದು. ಹೆಚ್ಚುತ್ತಿರುವ ತಾಪಮಾನದಲ್ಲಿ, ದೇಹದಲ್ಲಿ ನೀರಿನ ಕೊರತೆ ಉಂಟಾಗಬಹುದು. ಇದು ಕೂಡ ಹೃದ್ರೋಗಕ್ಕೆ ಕಾರಣವಾಗಬಹುದು.

ಹೀಟ್ ಸ್ಟ್ರೋಕ್ ನಿಂದ ಹೃದಯಾಘಾತ ಹೇಗೆ ಸಂಭವಿಸುತ್ತದೆ?

ಡಾ। ಅಜಿತ್ ಜೈನ್ ಹೇಳುವ ಪ್ರಕಾರ ಹೀಟ್ ಸ್ಟ್ರೋಕ್ ನಿಂದ ಹೃದಯಾಘಾತ ಸಂಭವಿಸಬಹುದು. ಏಕೆಂದರೆ ಹೆಚ್ಚುತ್ತಿರುವ ಶಾಖಕ್ಕೆ ಅನುಗುಣವಾಗಿ ದೇಹವು ಕೂಡ ತಾಪಮಾನ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತದೆ. ಈ ಕಾರಣದಿಂದಾಗಿ ಹೃದಯವು ಹೆಚ್ಚು ರಕ್ತವನ್ನು ಪರಿಚಲನೆ ಮಾಡಬೇಕಾಗುತ್ತದೆ. ಈ ಸಮಯದಲ್ಲಿ ಹೃದಯದ ಮೇಲೆ ಒತ್ತಡವಿರುತ್ತದೆ. ಇದರಿಂದಾಗಿ ಹೃದಯ ಬಡಿತ ವೇಗವಾಗುತ್ತದೆ. ಈ ಹಠಾತ್ ಬೆಳವಣಿಗೆಯಿಂದ ಹೃದಯಾಘಾತ ಸಂಭವಿಸಬಹುದು.

ಇದನ್ನೂ ಓದಿ: ಕಣ್ಣಿನ ಸಮಸ್ಯೆಗೆ ರಾಮಬಾಣ ಗೋಡಂಬಿ, ಇದನ್ನು ಪ್ರತಿದಿನ ತಿನ್ನುವುದರಿಂದ ಆರೋಗ್ಯ ಲಾಭ

ಅಪಾಯದಲ್ಲಿರುವವರು ಯಾರು?

ಗರ್ಭಿಣಿಯರು, ವೃದ್ಧರು ಮತ್ತು ಈಗಾಗಲೇ ಹೃದ್ರೋಗ ಸಮಸ್ಯೆ ಇರುವವರು ಹೆಚ್ಚು ಜಾಗರೂಕರಾಗಿರಬೇಕು ಎಂದು ಡಾ. ಜೈನ್ ಹೇಳಿದ್ದು ತೀವ್ರ ಬಿಸಿಲಿರುವ ಸಂದರ್ಭದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಿ ಎಂದಿದ್ದಾರೆ. ಅಗತ್ಯವಾಗಿ ಹೊರಗೆ ಹೋಗ ಬೇಕು ಎನ್ನುವವರು ಈ ವಿಧಾನಗಳನ್ನು ಅನುಸರಿಸಿ.

  • ದಿನಕ್ಕೆ 7- 8 ಲೋಟ ನೀರು ಕುಡಿಯಿರಿ.
  • ನಿಂಬೆ ರಸದಿಂದ ಪಾನಕ ಮಾಡಿ ಕುಡಿಯಿರಿ.
  • ಬೆಳಗಿನ ಉಪಾಹಾರವನ್ನು ತಪ್ಪಿಸಬೇಡಿ.
  • ಹಸಿರು ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಿ.
  • ಸಡಿಲವಾಗಿರುವ ಬಟ್ಟೆಗಳನ್ನು ಧರಿಸಿ.
  • ಮೇಲೆ ತಿಳಿಸಿರುವ ರೋಗ ಲಕ್ಷ್ಮಣ ಕಂಡುಬಂದರೆ ತಕ್ಷಣ ವೈದ್ಯರ ಬಳಿಗೆ ಹೋಗಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು