ಸಿಹಿಯಾಗಿರುವ ಆಹಾರವೊಂದೇ ಅಲ್ಲ ನೀವು ಇಷ್ಟಪಟ್ಟು ತಿನ್ನುವ ಉಪ್ಪು ಉಪ್ಪಾಗಿರುವ ಆಹಾರ ಕೂಡ ಶುಗರ್ ಲೆವೆಲ್ ಹೆಚ್ಚಿಸಬಹುದು!

ಸಾಮಾನ್ಯವಾಗಿ ಎಲ್ಲರು ನಂಬಿರುವುದು ಹೆಚ್ಚು ಸಿಹಿ ಆಹಾರವನ್ನು ಸೇವಿಸುವುದರಿಂದ ಮಧುಮೇಹ ಬರುತ್ತದೆ ಎಂದು. ಅದಕ್ಕಾಗಿಯೇ ಮಧುಮೇಹ ರೋಗಿಗಳು ಸಿಹಿಯಾಗಿರುವ ಆಹಾರವನ್ನು ಅತಿಯಾಗಿ ಸೇವಿಸದಂತೆ ಸಲಹೆ ನೀಡಲಾಗುತ್ತದೆ, ಆದರೆ ನಿಮಗೆ ಗೊತ್ತಾ? ಕೆಲವು ಉಪ್ಪಿರುವ ಆಹಾರಗಳು ಕೂಡ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರಬಹುದು. ಹಾಗಾದರೆ ಉಪ್ಪಿರುವ ಆಹಾರ ಹೇಗೆ ಶುಗರ್ ಲೆವೆಲ್ ಹೆಚ್ಚಳಕ್ಕೆ ಕಾರಣವಾಗುತ್ತದೆ, ಯಾವ ಆಹಾರಗಳು ಆರೋಗ್ಯಕ್ಕೆ ಅಪಾಯಕಾರಿ, ಡಯಾಬಿಟಿಸ್ ರೋಗಿಗಳು ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿಯ ಸಲಹೆಗಳನ್ನು ಅನುಸರಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಿಹಿಯಾಗಿರುವ ಆಹಾರವೊಂದೇ ಅಲ್ಲ ನೀವು ಇಷ್ಟಪಟ್ಟು ತಿನ್ನುವ ಉಪ್ಪು ಉಪ್ಪಾಗಿರುವ ಆಹಾರ ಕೂಡ ಶುಗರ್ ಲೆವೆಲ್ ಹೆಚ್ಚಿಸಬಹುದು!
Salty Foods That Can Spike Blood Sugar Levels
Image Credit source: Getty Images

Updated on: Apr 06, 2026 | 9:25 PM

ಸಾಮಾನ್ಯವಾಗಿ ಹೆಚ್ಚು ಸಿಹಿ ತಿನ್ನುವುದರಿಂದ ಮಾತ್ರ ಡಯಾಬಿಟಿಸ್ ಸಮಸ್ಯೆ ಉಂಟಾಗುತ್ತದೆ ಎಂಬುದು ಹಲವರ ನಂಬಿಕೆ. ಅದರಿಂದಲೇ ಡಯಾಬಿಟಿಸ್ (Diabetics) ಇರುವವರಿಗೆ ಸಿಹಿ ಆಹಾರಗಳಿಂದ ದೂರವಿರಲು ಸಲಹೆ ನೀಡಲಾಗುತ್ತದೆ. ಆದರೆ, ಕೆಲವು ಉಪ್ಪಿನ ಅಂಶವಿರುವ ಆಹಾರಗಳ ಸೇವನೆಯಿಂದಲೂ ಈ ರೀತಿ ಸಮಸ್ಯೆಯಾಗಬಹುದು ಎಂಬುದು ತಿಳಿದಿದೆಯೇ… ಹೌದು, ಉಪ್ಪಿನ ಅಂಶವಿರುವ ಆಹಾರ ರಕ್ತದಲ್ಲಿನ ಶುಗರ್ ಮಟ್ಟವನ್ನು ಹೆಚ್ಚಿಸಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ ಉಪ್ಪಿರುವ ಆಹಾರ ಹೇಗೆ ಶುಗರ್ ಲೆವೆಲ್ ಹೆಚ್ಚಳಕ್ಕೆ ಕಾರಣವಾಗುತ್ತದೆ, ಯಾವ ಆಹಾರಗಳು ಆರೋಗ್ಯಕ್ಕೆ ಅಪಾಯಕಾರಿ, ಡಯಾಬಿಟಿಸ್ ರೋಗಿಗಳು ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿಯ ಸಲಹೆಗಳನ್ನು ಅನುಸರಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಉಪ್ಪಿರುವ ಆಹಾರಗಳು ಶುಗರ್ ಲೆವೆಲ್ ಹೆಚ್ಚಿಸುತ್ತವೆಯೇ?

ತಜ್ಞರ ಪ್ರಕಾರ, ಬಹಳಷ್ಟು ಜನರಿಗೆ ಉಪ್ಪಿನಾಂಶವಿರುವ ಆಹಾರ ಸೇವನೆ ಮಾಡುವುದರಿಂದ ಶುಗರ್ ಹೆಚ್ಚಾಗುವುದಿಲ್ಲ ಎಂಬ ಭಾವನೆ ಇದೆ. ಆದರೆ ಇದರಲ್ಲಿ ಪೂರ್ಣ ಸತ್ಯವಿಲ್ಲ. ಕೆಲವು ಪ್ಯಾಕೆಟ್ ಹಾಗೂ ಪ್ರೊಸೆಸ್ಡ್ ಆಹಾರಗಳಲ್ಲಿ ನಮಗೆ ತಿಳಿಯದಂತೆ ಸಕ್ಕರೆಯನ್ನು (Hidden Sugar) ಹಾಕಿರುತ್ತಾರೆ, ಇದು ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸಬಹುದು.

ಯಾವ ಆಹಾರಗಳು ಅಪಾಯಕಾರಿ?

  • ಪ್ಯಾಕೆಟ್ ಸ್ನ್ಯಾಕ್ಸ್
  • ಚಿಪ್ಸ್
  • ಉಪ್ಪಿನ ಬಿಸ್ಕತ್‌ಗಳು
  • ಪ್ರೊಸೆಸ್ಡ್ ಫುಡ್‌ಗಳು
    ಈ ಆಹಾರಗಳನ್ನು ಹೆಚ್ಚು ಕಾಲ ಸಂರಕ್ಷಿಸಲು ಸಕ್ಕರೆ, ಕಾರ್ನ್ ಸಿರಪ್ ಮತ್ತು ಪ್ರಿಸರ್ವೇಟಿವ್‌ಗಳನ್ನು ಬಳಸಲಾಗುತ್ತದೆ. ಇವು ಉಪ್ಪಿನ ರುಚಿ ನೀಡಿದರೂ, ದೇಹದಲ್ಲಿ ಶುಗರ್ ಮಟ್ಟವನ್ನು ವೇಗವಾಗಿ ಹೆಚ್ಚಿಸಬಹುದು.

ಇದನ್ನೂ ಓದಿ: ಶುಗರ್ ರಿಪೋರ್ಟ್ ನಾರ್ಮಲ್ ಬಂದ್ರೂ ಸುಸ್ತು ಅನಿಸುವುದಕ್ಕೆ ಈ ಹಿಡನ್ ಡಯಾಬಿಟಿಸ್ ಲಕ್ಷಣ ಕಾರಣವೇ?

ಡಯಾಬಿಟಿಸ್ ರೋಗಿಗಳು ಗಮನಿಸಬೇಕಾದ ಅಂಶಗಳು:

  • ಪ್ಯಾಕೆಟ್ ಮೇಲೆ ಶುಗರ್ ಇರುವುದನ್ನು ಪರಿಶೀಲಿಸಿ
  • ಶುಗರ್ ಇದ್ದ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿ ಅಥವಾ ತಿನ್ನುವುದನ್ನೇ ತಪ್ಪಿಸಿ
  • ಹೈ ಬ್ಲಡ್ ಪ್ರೆಶರ್ ಇದ್ದರೆ ಉಪ್ಪಿನ ಅಂಶವಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಡಿ

ಆರೋಗ್ಯಕರ ಪರ್ಯಾಯಗಳು:

  • ನಿಂಬೆ ಹಣ್ಣಿನ ಜ್ಯೂಸ್
  • ಕಿತ್ತಳೆ ಹಣ್ಣು
  • ತಾಜಾ ಹಣ್ಣುಗಳು
    ಇವು ದೇಹಕ್ಕೆ ಪೋಷಕಾಂಶ ನೀಡುತ್ತವೆ ಮತ್ತು ಶುಗರ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ. ಒಟ್ಟಿನಲ್ಲಿ, ಸಿಹಿ ಮಾತ್ರವಲ್ಲ, ಕೆಲವು ಉಪ್ಪಿನ ಆಹಾರಗಳೂ ಕೂಡ ಶುಗರ್ ಲೆವೆಲ್ ಹೆಚ್ಚಿಸಬಹುದು. ಆದ್ದರಿಂದ ಡಯಾಬಿಟಿಸ್ ರೋಗಿಗಳು ತಮ್ಮ ಆಹಾರ ಪದ್ಧತಿಯಲ್ಲಿ ಜಾಗ್ರತೆ ವಹಿಸುವುದು ಅತ್ಯಂತ ಮುಖ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us