ನಿಮಗೆ ಹೈ ಬಿಪಿ ಇದ್ಯಾ? ಹಾಗಿದ್ರೆ ಸ್ಟ್ರೋಕ್ ಆಗದಂತೆ ತಡೆಯಲು ಈ ರೀತಿ ಮಾಡಿ

ಹೈ ಬ್ಲಡ್ ಪ್ರೆಶರ್ ಆರೋಗ್ಯಕ್ಕೆ ಬಹಳ ಅಪಾಯಕಾರಿ ಎಂಬುದು ತಿಳಿದ ವಿಚಾರ. ಆದರೆ ನಿಮಗೆ ಗೊತ್ತಾ? ರಕ್ತದೊತ್ತಡ ಹೆಚ್ಚಾದರೆ ಬ್ರೇನ್ ಸ್ಟ್ರೋಕ್ ಅಪಾಯ ಹೆಚ್ಚುತ್ತದೆ. ಆದರೆ ಯಾವ ಮಟ್ಟದ ಬಿಪಿ ಇದ್ದರೆ ಸ್ಟ್ರೋಕ್ ಅಪಾಯ ಹೆಚ್ಚುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಹಾಗಾದರೆ ಹೈ ಬಿಪಿ ಇರುವವರಲ್ಲಿ ಸ್ಟ್ರೋಕ್ ಅಪಾಯ ಹೆಚ್ಚಾಗುವುದಕ್ಕೆ ಕಾರಣವೇನು, ಇದರ ಲಕ್ಷಣಗಳು ಹೇಗಿರುತ್ತವೆ, ಜೊತೆಗೆ ಬಿಪಿ ನಿಯಂತ್ರಣಕ್ಕೆ ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿಮಗೆ ಹೈ ಬಿಪಿ ಇದ್ಯಾ? ಹಾಗಿದ್ರೆ ಸ್ಟ್ರೋಕ್ ಆಗದಂತೆ ತಡೆಯಲು ಈ ರೀತಿ ಮಾಡಿ
How High Blood Pressure Leads to Stroke in Patients
Image Credit source: Getty Images

Updated on: Mar 17, 2026 | 10:10 PM

ಇತ್ತೀಚಿನ ವರ್ಷಗಳಲ್ಲಿ ಹೈ ಬಿಪಿ ಪ್ರಕರಣಗಳು ಹೆಚ್ಚುತ್ತಿವೆ. ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು ಮತ್ತು ಅಸ್ವಸ್ಥ ಜೀವನಶೈಲಿ ಈ ರೀತಿ ಸಮಸ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ. ಸಾಮಾನ್ಯವಾಗಿ ರಕ್ತದೊತ್ತಡದ ಮಟ್ಟ 120/80 ಎಂಎಂಎಚ್ಜಿ (mmHg) ಇರಬೇಕು ಎಂದು ವೈದ್ಯರು ಹೇಳುತ್ತಾರೆ. ಆದರೆ ಇದು ನಿರಂತರವಾಗಿ 140/90 ಎಂಎಂಎಚ್ಜಿ ಅಥವಾ ಅದಕ್ಕಿಂತ ಹೆಚ್ಚಿದ್ದರೆ, ಅದನ್ನು ಹೈಪರ್‌ಟೆನ್ಶನ್ ಎಂದು ಕರೆಯಲಾಗುತ್ತದೆ. ಈ ಮಟ್ಟದಲ್ಲಿ ಬಿಪಿ ದೀರ್ಘಕಾಲ ಇದ್ದರೆ ಸ್ಟ್ರೋಕ್ ಅಪಾಯ ಬಹಳ ಹೆಚ್ಚುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಹೈ ಬಿಪಿ (High Blood Pressure) ಇರುವವರಲ್ಲಿ ಸ್ಟ್ರೋಕ್ ಅಪಾಯ ಹೆಚ್ಚಾಗುವುದಕ್ಕೆ ಕಾರಣವೇನು, ಇದರ ಲಕ್ಷಣಗಳು ಹೇಗಿರುತ್ತವೆ, ಜೊತೆಗೆ ಬಿಪಿ ನಿಯಂತ್ರಣಕ್ಕೆ ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸ್ಟ್ರೋಕ್ ಅಪಾಯ ಹೆಚ್ಚಾಗುವುದಕ್ಕೆ ಕಾರಣವೇನು?

ವೈದ್ಯರ ಪ್ರಕಾರ, ದೀರ್ಘಕಾಲ ಹೈ ಬಿಪಿ ಇದ್ದರೆ ಮೆದುಳಿಗೆ ರಕ್ತವನ್ನು ಸಾಗಿಸುವ ನರಗಳಿಗೆ ಹಾನಿಯಾಗುತ್ತದೆ. ಇದರಿಂದ ನರಗಳಲ್ಲಿ ಬ್ಲಾಕೇಜ್ ಉಂಟಾಗಬಹುದು. ಈ ಸಂದರ್ಭದಲ್ಲಿ ಮೆದುಳಿಗೆ ಸರಿಯಾದ ಆಮ್ಲಜನಕ ಸಿಗದೇ ಸ್ಟ್ರೋಕ್ ಸಂಭವಿಸಬಹುದು. ಕೆಲವು ಸಂದರ್ಭಗಳಲ್ಲಿ ರಕ್ತದೊತ್ತಡ ಹೆಚ್ಚಾಗಿ ಮೆದುಳಿನ ನರಗಳು ಸಿಡಿಯುವ ಸಾಧ್ಯತೆಯೂ ಇದೆ, ಇದು ಜೀವಕ್ಕೆ ಅಪಾಯಕಾರಿಯಾಗಬಹುದು. ಆದರೆ ಲಕ್ಷಣಗಳು ಆರಂಭಿಕ ಹಂತದಲ್ಲಿ ಸ್ಪಷ್ಟ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ರೋಗ ಗಂಭೀರವಾದ ನಂತರ ಮಾತ್ರ ಸಮಸ್ಯೆ ತಿಳಿದುಬರುತ್ತದೆ. ಅದಕ್ಕಾಗಿಯೇ ಹೈ ಬಿಪಿಯನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ನೀವು ಮಾಡುವ ಈ ತಪ್ಪುಗಳೇ ರಕ್ತದೊತ್ತಡ ಹೆಚ್ಚಾಗಲು ಕಾರಣ?

ರಕ್ತದೊತ್ತಡ ಹೆಚ್ಚಾದಾಗ ಕಂಡುಬರುವ ಲಕ್ಷಣಗಳು:

  • ತಲೆನೋವು (ವಿಶೇಷವಾಗಿ ತಲೆಯ ಹಿಂಭಾಗದಲ್ಲಿ)
  • ತಲೆ ಸುತ್ತುವುದು
  • ಉಸಿರಾಟದಲ್ಲಿ ತೊಂದರೆ
  • ನಿರಂತರ ದಣಿವು

ಬಿಪಿ ನಿಯಂತ್ರಣಕ್ಕೆ ಏನು ಮಾಡಬೇಕು?

ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಅಗತ್ಯ. ಪ್ರತಿದಿನ ಕನಿಷ್ಠ ಅರ್ಧ ಗಂಟೆ ವ್ಯಾಯಾಮ ಮಾಡಬೇಕು. ಆಹಾರದಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಮಾಡಬೇಕು. ದಿನಕ್ಕೆ ಕನಿಷ್ಠ 7 ಗಂಟೆ ನಿದ್ರೆ ಮಾಡಬೇಕು ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಜೊತೆಗೆ ನಿಯಮಿತವಾಗಿ ಬಿಪಿ ತಪಾಸಣೆ ಮಾಡಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us