ಹಿಂದೂ ಧರ್ಮದವರು ಇವುಗಳ ಮಾಂಸವನ್ನು ತಿನ್ನಲೇಬಾರದು
ಹಿಂದೂ ಧರ್ಮದಲ್ಲಿ ಕೆಲವೊಂದು ಜೀವಿಗಳ ಮಾಂಸವನ್ನು ಸೇವನೆ ಮಾಡಲು ಅನುಮತಿ ನೀಡುವುದಿಲ್ಲ. ಅವುಗಳನ್ನು ತಿನ್ನುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇನ್ನು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ, ಮನಸ್ಸು ಮತ್ತು ಆಲೋಚನೆಗಳು ನಾವು ಸೇವಿಸುವ ಆಹಾರದಿಂದ ರೂಪುಗೊಳ್ಳುತ್ತದೆ ಎಂದು ಹೇಳಿದ್ದಾನೆ. ಹಾಗಾಗಿ, ಹಿಂದೂ ಧರ್ಮದಲ್ಲಿ ಕೆಲವೊಂದು ಪ್ರಾಣಿಗಳ ಸೇವನೆಯನ್ನು ಮಾಡಲೇಬಾರದು ಎಂದು ಹೇಳಲಾಗುತ್ತದೆ. ಹಾಗಾದರೆ ಯಾವ ಪ್ರಾಣಿಗಳನ್ನು ಸೇವನೆ ಮಾಡುವುದು ಒಳ್ಳೆಯದಲ್ಲ ತಿಳಿದುಕೊಳ್ಳಿ.
ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಎರಡು ರೀತಿಯ ಜನರಿದ್ದಾರೆ. ಆದರೆ ಮಾಂಸಾಹಾರ ಸೇವನೆ ಮಾಡುವವರು ಎಲ್ಲಾ ಪ್ರಾಣಿಗಳ ಮಾಂಸವನ್ನು ಸೇವನೆ ಮಾಡುವುದಿಲ್ಲ. ಯಾಕೆ ತಿನ್ನುವುದಿಲ್ಲ? ಎಂದಾದರೂ ಯೋಚಿಸಿದ್ದೀರಾ? ಹೌದು. ಹಿಂದೂ ಧರ್ಮದಲ್ಲಿ ಕೆಲವೊಂದು ಜೀವಿಗಳ ಮಾಂಸವನ್ನು ಸೇವನೆ ಮಾಡಲು ಅನುಮತಿ ನೀಡುವುದಿಲ್ಲ. ಅವುಗಳನ್ನು ತಿನ್ನುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇನ್ನು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ, ಮನಸ್ಸು ಮತ್ತು ಆಲೋಚನೆಗಳು ನಾವು ಸೇವಿಸುವ ಆಹಾರದಿಂದ ರೂಪುಗೊಳ್ಳುತ್ತದೆ ಎಂದು ಹೇಳಿದ್ದಾನೆ. ಹಾಗಾಗಿ, ಹಿಂದೂ ಧರ್ಮದಲ್ಲಿ ಕೆಲವೊಂದು ಪ್ರಾಣಿಗಳ ಸೇವನೆಯನ್ನು ಮಾಡಲೇಬಾರದು ಎಂದು ಹೇಳಲಾಗುತ್ತದೆ. ಹಾಗಾದರೆ ಯಾವ ಪ್ರಾಣಿಗಳನ್ನು ಸೇವನೆ ಮಾಡುವುದು ಒಳ್ಳೆಯದಲ್ಲ ತಿಳಿದುಕೊಳ್ಳಿ.
ನಿಮಗೆ ತಿಳಿದಿರಬಹುದು, ಯಾವ ವ್ಯಕ್ತಿ ಸಾತ್ವಿಕ ಆಹಾರವನ್ನು ಸೇವಿಸುತ್ತಾನೋ ಅವನ ಗುಣಗಳು ಕೂಡ ಸಾತ್ವಿಕವಾಗಿರುತ್ತದೆ. ಏಕೆಂದರೆ ಧರ್ಮ ಗ್ರಂಥಗಳಲ್ಲಿ ಹೇಳಿರುವ ಪ್ರಕಾರ ಸಾತ್ವಿಕ ಆಹಾರ ಸೇವನೆಯು ಮುನುಷ್ಯನ ಮನಸ್ಸು ಮತ್ತು ದೇಹವನ್ನು ಯಾವಾಗಲೂ ಶುದ್ದತೆಯಿಂದ ಕೂಡಿರುವಂತೆ ಮಾಡುತ್ತದೆ. ಅಂತಹ ವ್ಯಕ್ತಿಯ ಆಲೋಚನೆಗಳು ಶುದ್ಧವಾಗಿರುತ್ತದೆ ಎಂಬುದು ಹಿಂದೂ ಧರ್ಮದಲ್ಲಿನ ನಂಬಿಕೆಯಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಸೇವೆ ವಿಸ್ತರಿಸಿದ ಗ್ಯಾಲಕ್ಸಿ ಹೆಲ್ತ್ ಇನ್ಶುರೆನ್ಸ್: ಬೆಂಗಳೂರಿನಲ್ಲಿ ಮೊದಲ ಪ್ರಾದೇಶಿಕ ಕಚೇರಿ ಆರಂಭ
ಯಾವ ಪ್ರಾಣಿಗಳ ಮಾಂಸ ಸೇವನೆಯನ್ನು ನಿಷೇಧಿಸಲಾಗಿದೆ?
ಹಿಂದೂ ಧರ್ಮದಲ್ಲಿನ ಕೆಲವೊಂದಿಷ್ಟು ಜನ ಮಾಂಸಾಹಾರ ಸೇವಿಸುತ್ತಾರೆ ಆದರೆ ಎಲ್ಲಾ ಪ್ರಾಣಿಗಳ ಮಾಂಸವನ್ನು ಸೇವಿಸುವುದಿಲ್ಲ ಏಕೆಂದರೆ ನಮ್ಮಲ್ಲಿ ಅವುಗಳ ಸೇವನೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಹಿಂದೂ ಧರ್ಮದಲ್ಲಿ ಮುಖ್ಯವಾಗಿ ಹಸು, ಕುದುರೆ, ನಾಯಿ, ಹಾವು, ಮಾನವನ ಮಾಂಸ ಮತ್ತು ಹಂದಿಗಳ ಮಾಂಸವನ್ನು ಸೇವಿಸುವುದು ನಿಷಿದ್ಧವಾಗಿದೆ. ಇಂತಹ ಪ್ರಾಣಿಗಳ ಮಾಂಸವನ್ನು ಸೇವನೆ ಮಾಡುವುದು ಮಹಾಪಾಪವೆನಿಸಿಕೊಳ್ಳುತ್ತದೆ. ಇವುಗಳನ್ನು ಹೊರತುಪಡಿಸಿ ಹಿಂದೂ ಧರ್ಮದಲ್ಲಿ ಸಿಂಹ, ಸಾರಂಗ, ಜಿಂಕೆ ಮತ್ತು ಪವಿತ್ರ ಪಕ್ಷಿಗಳಾದ ಹಂಸ, ನವಿಲು, ಗೂಬೆಯ ಮಾಂಸ ತಿನ್ನುವುದನ್ನು ಘೋರ ಪಾಪವೆಂದು ಪರಿಗಣಿಸಲಾಗಿದೆ. ಇಂತಹ ಪ್ರಾಣಿ ಪಕ್ಷಿಗಳ ಮಾಂಸವನ್ನು ಸೇವಿಸುವುದರಿಂದ ವ್ಯಕ್ತಿಯು ಪಾಪದ ಪಾಲುದಾರನಾಗುತ್ತಾನೆ. ಈ ಜನ್ಮದಲ್ಲಿ ಮಾತ್ರವಲ್ಲದೆ, ಮರಣಾ ನಂತರ ಹಾಗೂ ಮುಂದಿನ ಜನ್ಮದಲ್ಲೂ ನರಕ ಯಾತನೆಯನ್ನು ಅನುಭವಿಸಬೇಕಾಗುತ್ತದೆ ಎಂದು ಹಿಂದೂ ಧರ್ಮ ಗ್ರಂಥಗಳಲ್ಲಿ ಮತ್ತು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಹಾಗಾಗಿ, ಮನುಷ್ಯನು ಯಾವಾಗಲೂ ಸಾತ್ವಿಕ ಆಹಾರವನ್ನು ಸೇವಿಸಬೇಕು ಮತ್ತು ತಾಮಸ ಆಹಾರಗಳಿಂದ ದೂರ ಉಳಿಯಬೇಕು. ಯಾವ ವ್ಯಕ್ತಿ ಅತಿಯಾಗಿ ತಾಮಸ ಆಹಾರವನ್ನು ಸೇವಿಸುತ್ತಾನೆಯೋ ಅವನ ಮನಸ್ಸು ಕೂಡ ಕೆಟ್ಟ ಆಲೋಚನೆಗಳಿಂದ ತುಂಬಿರುತ್ತದೆ. ಅಂತವರು ಯಾವಾಗಲೂ ಒಳ್ಳೆಯ ವಿಚಾರ, ಆಲೋಚನೆಗಳಲ್ಲಿ ತೊಡಗಲು ಸಾಧ್ಯವಿಲ್ಲ. ಹಾಗಾಗಿ ಸಾತ್ವಿಕ ಆಹಾರ ಸೇವನೇ ಮಾಡುವ ಪದ್ದತಿಯನ್ನು ರೂಢಿಸಿಕೊಳ್ಳೋಣ. ಈ ವಿಷಯವನ್ನು ಖುಷಿ ಗೌಡ ಎನ್ನುವವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ