AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Home Remedies: ತೂಕ ಇಳಿಕೆಗೆ ಮೊಸರು ಹೇಗೆ ಸಹಾಯಕಾರಿ? ಮನೆಮದ್ದು ಇಲ್ಲಿವೆ

ಮೊಸರನ್ನು ದಿನನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ಬಳಸುತ್ತೇವೆ. ಮೊಸರಿನಲ್ಲಿರುವ ಲ್ಯಾಕ್ಟೋಬಾಸಿಲಸ್ ಬಲ್‌ಗೇರಿಸ್‌ ಎನ್ನುವ ಬ್ಯಾಕ್ಟೀರಿಯ ಡಿಸ್ಪೆಪ್ಸಿಯಾವನ್ನು ನಿವಾರಿಸುತ್ತದೆ. ಜೀರ್ಣಕ್ರಿಯೆಯಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುವ ಮೊಸರು ಪ್ರೋಬಯಾಟಿಕ್ ಡೈರಿ ಉತ್ಪನ್ನವಾಗಿದೆ. ಅದಕ್ಕಿಂತ ಮಿಗಿಲಾಗಿ ಮೊಸರಿನಲ್ಲಿ ಅಡಕವಾಗಿರುವ ಪ್ರೋಟೀನ್ ತೂಕ ನಷ್ಟಕ್ಕೆ ಸಹಕಾರಿಯಾಗಿದೆ. ಹಾಗಾದರೆ ತೂಕ ಇಳಿಕೆಗೆ ಮೊಸರಿನ ಸೇವನೆಯನ್ನು ಹೇಗೆ ಮಾಡಬೇಕು? ಇದರ ಜೊತೆಗೆ ಇನ್ನಷ್ಟು ಮನೆಮದ್ದುಗಳ ಬಗ್ಗೆ ಮಾಹಿತಿ ಇಲ್ಲಿದೆ.

Home Remedies: ತೂಕ ಇಳಿಕೆಗೆ ಮೊಸರು ಹೇಗೆ ಸಹಾಯಕಾರಿ? ಮನೆಮದ್ದು ಇಲ್ಲಿವೆ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Jul 20, 2024 | 3:11 PM

Share

ಭಾರತೀಯರ ಆಹಾರ ಪದ್ಧತಿಯಲ್ಲಿ ಮೊಸರು ವಿಶೇಷ ಆದ್ಯತೆ ಪಡೆದಿರುವ ಪದಾರ್ಥಗಳಲ್ಲಿ ಒಂದಾಗಿದೆ. ಹೇರಳವಾದ ಪ್ರೊಟೀನ್ ಅಂಶ ಹೊಂದಿರುವ ಮೊಸರನ್ನು ದಿನನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ಬಳಸುತ್ತೇವೆ. ಮೊಸರಿನಲ್ಲಿರುವ ಲ್ಯಾಕ್ಟೋಬಾಸಿಲಸ್ ಬಲ್‌ಗೇರಿಸ್‌ ಎನ್ನುವ ಬ್ಯಾಕ್ಟೀರಿಯ ಡಿಸ್ಪೆಪ್ಸಿಯಾವನ್ನು ನಿವಾರಿಸುತ್ತದೆ. ಜೀರ್ಣಕ್ರಿಯೆಯಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುವ ಮೊಸರು ಪ್ರೋಬಯಾಟಿಕ್ ಡೈರಿ ಉತ್ಪನ್ನವಾಗಿದೆ. ಅದಕ್ಕಿಂತ ಮಿಗಿಲಾಗಿ ಮೊಸರಿನಲ್ಲಿ ಅಡಕವಾಗಿರುವ ಪ್ರೋಟೀನ್ ತೂಕ ನಷ್ಟಕ್ಕೆ ಸಹಕಾರಿಯಾಗಿದೆ. ಹಾಗಾದರೆ ತೂಕ ಇಳಿಕೆಗೆ ಮೊಸರಿನ ಸೇವನೆಯನ್ನು ಹೇಗೆ ಮಾಡಬೇಕು? ಇದರ ಜೊತೆಗೆ ಇನ್ನಷ್ಟು ಮನೆಮದ್ದುಗಳ ಬಗ್ಗೆ ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ತೂಕ ಹೆಚ್ಚಾಗಲು ಜೀರ್ಣಕ್ರಿಯೆ ಸರಿಯಾಗಿ ಆಗದಿರುವುದು ಕೂಡ ಕಾರಣವಾಗುತ್ತದೆ. ಮೊಸರಿನಲ್ಲಿರುವ ಬ್ಯಾಕ್ಟೀರಿಯಾದ ಅಂಶವು ನಿಮ್ಮ ಕರುಳಿನ ಕಾರ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಸರಿಯಾದ ಜೀರ್ಣಕ್ರಿಯೆಗೆ ಕಾರಣವಾಗುತ್ತದೆ. ಹೀಗಾಗಿ ದೇಹದಲ್ಲಿ ಅನಗತ್ಯ ಕೊಬ್ಬಿನ ಅಂಶ ಶೇಖರಣೆಯಾಗದಂತೆ ನೋಡಿಕೊಳ್ಳುವುದರಿಂದ ತೂಕ ಹೆಚ್ಚಳವಾಗದಂತೆ ತಡೆಯುತ್ತದೆ.

ಈ ರೀತಿ ದಿನವನ್ನು ಆರಂಭಿಸಿ

ಮೊಸರಿನ ಸೇವನೆಯ ಜೊತೆಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಮಲಾಸನದಲ್ಲಿ ಕುಳಿತು ಕುಡಿಯುವುದರಿಂದ ಜೀರ್ಣಕ್ರಿಯೆ ಹೆಚ್ಚಾಗುತ್ತದೆ ಮಲಬದ್ಧತೆ ಸಮಸ್ಯೆ ಇರುವುದಿಲ್ಲ. ಇದರಿಂದ ದೇಹದ ತೂಕವನ್ನು ಕೂಡ ಸರಿಯಾಗಿ ಕಾಪಾಡಿಕೊಳ್ಳಬಹುದಾಗಿದೆ. ಜೊತೆಗೆ ಬೆಳಿಗ್ಗೆ ನೀರಿನ ಜೊತೆಗೆ ಹಣ್ಣಿನ ರಸಗಳನ್ನು ಕುಡಿಯುವ ಮೂಲಕ ದಿನ ಪ್ರಾರಂಭಿಸಬಹುದು. ಇದಲ್ಲದೇ ದಿನಕ್ಕೆ ಎರಡರಿಂದ ಮೂರು ಲೀಟರ್​​ ನೀರು ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಳ್ಳಿ ಇದು ಕೂಡ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ

ಒಂದು ಅಥವಾ ಎರಡು ದಿನಗಳಿಗೊಮ್ಮೆ ಬಾಳೆಹಣ್ಣನ್ನು ಸೇವನೆ ಮಾಡಿ ಇದು ನಿಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಜೊತೆಗೆ ತೂಕ ಇಳಿಕೆಗೂ ಸಹಾಯ ಮಾಡುತ್ತದೆ. ಇದಲ್ಲದೆ ತೂಕ ನಷ್ಟಕ್ಕೆ ಜೀರಿಗೆ ನೀರು ಒಂದು ರೀತಿಯ ಔಷಧಿ ಇದ್ದ ಹಾಗೆ. ರಾತ್ರಿಯಿಡೀ ನೆನೆಸಿದ ಜೀರಿಗೆ ನೀರನ್ನು ಕುಡಿಯುವುದು ನಿಮ್ಮ ಕರುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಮೂಲಕ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಮಕ್ಕಳು ಅಪರಾಧ ಜಗತ್ತಿನಲ್ಲಿ ಗುರುತಿಸಿಕೊಳ್ಳಲು ಈ ವಿಚಾರ ಕಾರಣ? ನಿಯಂತ್ರಣ ಹೇಗೆ? ಡಾ. ನಿವೇದಿತಾ ಹೇಳೋದೇನು?

ಈ ವಿಷಯಗಳನ್ನು ಮರೆಯಬೇಡಿ

ಆರೋಗ್ಯಕರ ಆಹಾರ ಸೇವನೆ ಮಾಡುವುದರ ಜೊತೆಗೆ ಮಾರುಕಟ್ಟೆಗಳಲ್ಲಿ ಸಿಗುವ ಪಾನೀಯಗಳನ್ನು ಕುಡಿಯಬೇಡಿ. ಕೆಫೀನ್ ಸೇವನೆಯನ್ನು ಮಿತಿಗೊಳಿಸಿ. ಇದೆಲ್ಲದರ ಜೊತೆಗೆ ಉಪ್ಪು ಮತ್ತು ಸಕ್ಕರೆ ಅಧಿಕವಾಗಿರುವ ಆಹಾರ ಸೇವನೆ ಮಾಡುವುದನ್ನು ತಪ್ಪಿಸಿ. ರಾತ್ರಿ ತಡವಾಗಿ ಮಲಗುವುದನ್ನು ತಪ್ಪಿಸಿ ಏಕೆಂದರೆ ಇದು ನಿದ್ರಾಹೀನತೆ ಕಾರಣವಾಗುತ್ತದೆ ಜೊತೆಗೆ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಇದರಿಂದಲೂ ತೂಕ ಹೆಚ್ಚಾಗಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ