AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vaginal Discharge: ಬಿಳಿ ಮುಟ್ಟಿನ ಸಮಸ್ಯೆ ಇದ್ದಲ್ಲಿ ಈ ಆಹಾರ ಸೇವನೆ ಮಾಡಿ

ವೈಟ್ ಡಿಸ್ಚಾರ್ಜ್ ಅಥವಾ ಬಿಳಿ ಮುಟ್ಟು ಅಥವಾ ಬಿಳಿ ಸೆರಗನ್ನು ನಿರ್ಲಕ್ಷಿಸಿದರೆ ಸೋಂಕು ತಗುಲಬಹುದು. ಹಾಗಾದರೆ ಬಿಳಿ ಮುಟ್ಟು ಕಡಿಮೆ ಆಗಲು ಯಾವ ಆಹಾರ ಸೂಕ್ತ. ಈ ಸಮಯದಲ್ಲಿ ಅಂದರೆ ಇದನ್ನು ಕಡಿಮೆ ಮಾಡಿಕೊಳ್ಳಲು ಯಾವ ರೀತಿಯ ಮನೆಮದ್ದುಗಳನ್ನು ಪಾಲನೆ ಮಾಡಬಹುದು ಎಂಬುದರ ಬಗ್ಗೆ ಡಾ. ಪ್ರೀತಿ ಶಾನಭಾಗ್ ತಿಳಿಸಿರುವ ಮಾಹಿತಿ ಇಲ್ಲಿದೆ. ಈ ಆಹಾರಗಳನ್ನು ಸತತವಾಗಿ ಮೂರು ವಾರ ಸೇವನೆ ಮಾಡುವುದರಿಂದ ಈ ಸಮಸ್ಯೆಯನ್ನು ತಡೆಗಟ್ಟಬಹುದು. ಹಾಗಾದರೆ ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

Vaginal Discharge: ಬಿಳಿ ಮುಟ್ಟಿನ ಸಮಸ್ಯೆ ಇದ್ದಲ್ಲಿ ಈ ಆಹಾರ ಸೇವನೆ ಮಾಡಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Aug 24, 2024 | 2:46 PM

Share

ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಬಿಳಿ ಮುಟ್ಟಿನ ಸಮಸ್ಯೆ ಹೆಚ್ಚಾಗುತ್ತಿದ್ದು ಈ ಬಗ್ಗೆ ಹೆಚ್ಚಿನ ಗಮನ ಹರಿಸುವುದಕ್ಕಿಂತ ಅಸಡ್ಡೆ ಮಾಡುವವರು ಹೆಚ್ಚಾಗಿದ್ದರೆ. ಆದರೆ ಯೋನಿಯಲ್ಲಿ ಕಂಡು ಬರುವ ವೈಟ್ ಡಿಸ್ಚಾರ್ಜ್ (White Vaginal Discharge) ಅಥವಾ ಬಿಳಿ ಮುಟ್ಟು ಅಥವಾ ಬಿಳಿ ಸೆರಗು ನಿರ್ಲಕ್ಷಿಸಿದರೆ ಸೋಂಕು ತಗಲಬಹುದು. ಹಾಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಇದರ ಸ್ರವಿಸುವಿಕೆಯಲ್ಲಿ ಅಸಾಮಾನ್ಯವಾಗಿ ಬದಲಾವಣೆ ಕಂಡು ಬಂದರೆ ಅಥವಾ ಇದು ದುರ್ವಾಸನೆಯಿಂದ ಕೂಡಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಸಾಮಾನ್ಯವಾಗಿ ಈ ಬಿಳಿ ಮುಟ್ಟು ಅನೀಮಿಯಾ ಅಥವಾ ರಕ್ತಹೀನತೆಯಿಂದ ಬಳಲುತ್ತಿರುವವರಲ್ಲಿ ಕಾಣಿಸಿಕೊಳ್ಳುತ್ತದೆ. ಜೊತೆಗೆ ನಿಮ್ಮ ಯೋನಿಯಲ್ಲಿ ಸೋಂಕು ಅಥವಾ ಟ್ರೈಕೊಮೋನಿಯಾಸಿಸ್‌ ಸೋಂಕಿನ ಲಕ್ಷಣವಿದ್ದರೂ ಬಿಳಿಮುಟ್ಟು ಹೆಚ್ಚು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ಹಾರ್ಮೋನುಗಳ ಅಸಮತೋಲನ, ಒತ್ತಡ, ಮಧುಮೇಹದಂತಹ ಹಲವು ಕಾರಣಗಳಿರಬಹುದು.

ಹಾಗಾದರೆ ಬಿಳಿ ಮುಟ್ಟು ಕಡಿಮೆ ಆಗಲು ಯಾವ ಆಹಾರ ಸೂಕ್ತ. ಈ ಸಮಯದಲ್ಲಿ ಅಂದರೆ ಇದನ್ನು ಕಡಿಮೆ ಮಾಡಿಕೊಳ್ಳಲು ಯಾವ ರೀತಿಯ ಮನೆಮದ್ದುಗಳನ್ನು ಪಾಲನೆ ಮಾಡಬಹುದು ಎಂಬುದರ ಬಗ್ಗೆ ಡಾ. ಪ್ರೀತಿ ಶಾನಭಾಗ್ ತಿಳಿಸಿರುವ ಮಾಹಿತಿ ಇಲ್ಲಿದೆ. ಈ ಆಹಾರಗಳನ್ನು ಸತತವಾಗಿ ಮೂರು ವಾರ ಸೇವನೆ ಮಾಡುವುದರಿಂದ ಈ ಸಮಸ್ಯೆಯನ್ನು ತಡೆಗಟ್ಟಬಹುದು. ಹಾಗಾದರೆ ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

  • ದಿನಕ್ಕೆರಡು ಬಾರಿ ಮೊಸರನ್ನು ಸೇವನೆ ಮಾಡಿ.
  • ಹಸಿ ಬೆಳ್ಳುಳ್ಳಿಯನ್ನು ಪ್ರತಿದಿನ ಸೇವಿಸಿ.
  • ತುಂಬಾ ತುರಿಕೆ ಅಥವಾ ಉರಿ ಇದ್ದರೆ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳಿ.
  • ಪ್ರತಿದಿನ ಮುಂಜಾನೆ ಮೆಂತೆ ನೆನೆಸಿದ ನೀರನ್ನು ಕುಡಿಯಿರಿ.
  • ಕೊತ್ತಂಬರಿ ಬೀಜವನ್ನು ರಾತ್ರಿ ನೆನಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅದರ ನೀರನ್ನು ಸೇವನೆ ಮಾಡುವುದರಿಂದ ಬಿಳಿ ಮುಟ್ಟಿನ ಸಮಸ್ಯೆ ಕಡಿಮೆ ಮಾಡಬಹುದು.
  • ವಿಟಮಿನ್ ಸಿ ಮತ್ತು ವಿಟಮಿನ್ ಇ ಮಾತ್ರೆ ತೆಗೆದುಕೊಳ್ಳಿ ಅಥವಾ ವಿಟಮಿನ್ ಸಮೃದ್ದವಾಗಿರುವ ಆಹಾರವನ್ನು ಹೆಚ್ಚು ಹೆಚ್ಚು ಸೇವನೆ ಮಾಡಿ.
  • ಶತಾವರಿಯು ಒಂದು ರೀತಿಯ ಗಿಡಮೂಲಿಕೆ ಇದು ಮಹಿಳೆಯರಲ್ಲಿ ಋತುಬಂಧ ಸಂಬಂಧಿ ಸಮಸ್ಯೆ ಮತ್ತು ಹಾರ್ಮೋನ್ ಅಸಮತೋಲನವನ್ನು ಸರಿಪಡಿಸುತ್ತದೆ. ಆದರೆ ಇದನ್ನು ಸೇವನೆ ಮಾಡುವ ಮೊದಲು ತಜ್ಞರನ್ನು ಸಂಪರ್ಕಿಸಿ.
  • ಆದಷ್ಟು ಕಾಟನ್ ಒಳ ಉಡುಪುಗಳನ್ನು ಬಳಸಿ. ಹೊಸದಾಗಿ ಖರೀದಿಸಿದ ಒಳ ಉಡುಪುಗಳನ್ನು ಚೆನ್ನಾಗಿ ತೊಳೆದು ಆ ನಂತರ ಧರಿಸಿ.
  • ಯಾವುದೇ ಕಾರಣಕ್ಕೂ ಒದ್ದೆ ಒಳ ಉಡುಪನ್ನು ಹಾಕಬೇಡಿ.
  • ದಿನಕ್ಕೆ ಎರಡು ಬಾರಿ ಒಳ ಉಡುಪನ್ನು ಬದಲಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ