ಒಂದು ದಿನಕ್ಕೆ ನೀವು ಎಷ್ಟು ಪ್ರಮಾಣದ ಬಿಯರ್​​ ಕುಡಿಯಬಹುದು ಗೊತ್ತಾ? ಇಲ್ಲಿದೆ ಮಾಹಿತಿ

Updated on: Mar 10, 2026 | 4:12 PM

ಕೆಲವರು ಬಿಯರ್ ಕಡಿಮೆ ಹಾನಿಕಾರಕವೆಂದು ನಂಬುತ್ತಾರೆ, ಆದರೆ ಇದು ತಪ್ಪು. ಪ್ರತಿದಿನ ಬಿಯರ್ ಸೇವನೆಯು ಯಕೃತ್ತಿಗೆ ಹಾನಿ ಮಾಡುತ್ತದೆ ಮತ್ತು ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಯಾವುದೇ ಪ್ರಮಾಣದ ಅಲ್ಕೋಹಾಲ್ ಸುರಕ್ಷಿತವಲ್ಲ. ಅಲ್ಕೋಹಾಲ್ ಯಕೃತ್ತಿನ ಕೋಶಗಳನ್ನು ಹಾನಿಗೊಳಿಸಿ, ಹೊಸ ಕೋಶಗಳ ನಿರ್ಮಾಣ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಮಧುಮೇಹ ಮತ್ತು ಹೊಟ್ಟೆ ಸಂಬಂಧಿತ ಸಮಸ್ಯೆಗಳಿಗೂ ಕಾರಣವಾಗಬಹುದು.

1 / 5
ಕೆಲವರು ಬಿಯರ್ ಇತರ ಮದ್ಯಪಾನಗಳಿಗಿಂತ ಕಡಿಮೆ ಹಾನಿಕಾರಕ ಎಂದು ನಂಬುತ್ತಾರೆ ಮತ್ತು ಇದರಿಂದ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಇರುವುದಿಲ್ಲ ಎಂದು ಭಾವಿಸುತ್ತಾರೆ. ಸಾಮಾನ್ಯವಾಗಿ ಬಿಯರ್‌ನಲ್ಲಿ ಸುಮಾರು 4ರಿಂದ 5 ಶೇಕಡಾ ಅಲ್ಕೋಹಾಲ್ ಇರುತ್ತದೆ. ಆದರೆ ಕೆಲವು ಬ್ರ್ಯಾಂಡ್‌ಗಳಲ್ಲಿ ವೈನ್‌ನಷ್ಟೇ ಅಲ್ಕೋಹಾಲ್ ಇರಬಹುದು. ಹಲವರು ಪ್ರತಿದಿನ ಒಂದು ಅಥವಾ ಎರಡು ಕ್ಯಾನ್ ಬಿಯರ್ ಕುಡಿಯುತ್ತಾರೆ ಮತ್ತು ಇದರಿಂದ ದೇಹಕ್ಕೆ ಯಾವುದೇ ದೊಡ್ಡ ಹಾನಿ ಆಗುವುದಿಲ್ಲ ಎಂದು ಭಾವಿಸುತ್ತಾರೆ. ಆದರೆ ನಿಜಕ್ಕೂ ಎಷ್ಟು ಬಿಯರ್​​ ಸೇವನೆ ಸುರಕ್ಷಿತ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯವಾಗುತ್ತದೆ.

2 / 5
ಅಲ್ಕೋಹಾಲ್ ದೇಹಕ್ಕೆ ಸೇರಿದಾಗ ಅದು ಲಿವರ್‌ಗೆ (ಯಕೃತ್ತಿಗೆ) ತಲುಪುತ್ತದೆ ಮತ್ತು ಲಿವರ್ ಅದನ್ನು ಶೋಧಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಕೆಲವು ಲಿವರ್ ಕೋಶಗಳು ಹಾನಿಗೊಳಗಾಗುತ್ತವೆ. ಲಿವರ್‌ಗೆ ಹೊಸ ಕೋಶಗಳನ್ನು ನಿರ್ಮಿಸುವ ಸಾಮರ್ಥ್ಯವಿರುವುದರಿಂದ ಕೆಲವು ಸಮಯದ ನಂತರ ಹೊಸ ಕೋಶಗಳು ರೂಪಗೊಳ್ಳುತ್ತವೆ. ಆದರೆ ನಿರಂತರವಾಗಿ ಹೆಚ್ಚಿನ ಪ್ರಮಾಣದಲ್ಲಿ ಅಲ್ಕೋಹಾಲ್ ಸೇವಿಸಿದರೆ ಲಿವರ್‌ನ ಹೊಸ ಕೋಶಗಳನ್ನು ನಿರ್ಮಿಸುವ ಸಾಮರ್ಥ್ಯ ಕ್ರಮೇಣ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ಲಿವರ್ ಗಂಭೀರವಾಗಿ ಹಾನಿಗೊಳಗಾಗಬಹುದು ಮತ್ತು ಲಿವರ್‌ಗೆ ಸಂಬಂಧಿಸಿದ ಹಲವು ರೋಗಗಳ ಅಪಾಯ ಹೆಚ್ಚಾಗಬಹುದು.

3 / 5
ಬಿಯರ್‌ನಲ್ಲಿ ವೈನ್‌ಗಿಂತ ಕಡಿಮೆ ಅಲ್ಕೋಹಾಲ್ ಇದ್ದರೂ ಯಾವುದೇ ರೀತಿಯ ಮದ್ಯಪಾನವೂ ದೇಹಕ್ಕೆ ಸಂಪೂರ್ಣ ಸುರಕ್ಷಿತ ಎಂದು ಹೇಳಲಾಗುವುದಿಲ್ಲ. ವಿಶೇಷವಾಗಿ ಲಿವರ್ ಸಮಸ್ಯೆ ಹೊಂದಿರುವವರು ಬಿಯರ್ ಅಥವಾ ಇತರ ಮದ್ಯಪಾನಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಏಕೆಂದರೆ ಇದು ಲಿವರ್‌ಗೆ ಇನ್ನಷ್ಟು ಹಾನಿ ಉಂಟುಮಾಡಬಹುದು. ಹೆಚ್ಚು ಪ್ರಮಾಣದಲ್ಲಿ ಬಿಯರ್ ಕುಡಿಯುವುದರಿಂದ ಮಧುಮೇಹಿಗಳಲ್ಲಿ ರಕ್ತದ ಸಕ್ಕರೆ ಮಟ್ಟ ಹೆಚ್ಚಾಗಬಹುದು ಮತ್ತು ಹೊಟ್ಟೆ ಸಂಭಂಧಿತ ಸಮಸ್ಯೆಗಳು ಉಂಟಾಗಬಹುದು.

4 / 5
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ದೇಹಕ್ಕೆ ಒಂದು ಹನಿಯಷ್ಟು ಅಲ್ಕೋಹಾಲ್ ಕೂಡ ಸುರಕ್ಷಿತವಲ್ಲ. ಇದರಿಂದ ದೀರ್ಘಕಾಲದಲ್ಲಿ ಕ್ಯಾನ್ಸರ್‌ನಂತಹ ಗಂಭೀರ ರೋಗಗಳ ಅಪಾಯ ಹೆಚ್ಚಾಗಬಹುದು. ವೈನ್ ಮತ್ತು ಬಿಯರ್ ಎರಡರಲ್ಲೂ ಅಲ್ಕೋಹಾಲ್ ಇರುವುದರಿಂದ ಅದನ್ನು ವಿಷಕಾರಿ ಪದಾರ್ಥವೆಂದು ಪರಿಗಣಿಸಲಾಗುತ್ತದೆ ಮತ್ತು ಅದು ದೇಹದ ಮೇಲೆ ಹಲವು ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು.

5 / 5
ಅಂತರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ (IARC) ಅಲ್ಕೋಹಾಲ್ ಅನ್ನು ಗ್ರೂಪ್ 1 ಕಾರ್ಸಿನೋಜನ್ ಎಂದು ವರ್ಗೀಕರಿಸಿದೆ. ಕಾರ್ಸಿನೋಜನ್ ಎಂದರೆ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಪದಾರ್ಥಗಳು. ಆದ್ದರಿಂದ ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಸಾಧ್ಯವಾದಷ್ಟು ಮದ್ಯಪಾನದಿಂದ ದೂರವಿರಲು ಜನರಿಗೆ ಸಲಹೆ ನೀಡುತ್ತದೆ. (ಸೂಚನೆ: ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ.)

Follow Us