AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಟಲು ನೋವಿನಿಂದ ತಕ್ಷಣ ಮುಕ್ತಿ ಪಡೆಯುವುದು ಹೇಗೆ? ಇಲ್ಲಿದೆ ಪರಿಹಾರ

ಗಂಟಲು ನೋವಿನಿಂದ ಮುಕ್ತಿ ಪಡೆಯಬೇಕಾದರೆ ಡಾ. ಮಿಕ್ಕಿ ಮೆಹ್ತಾ ಅವರು ಹೇಳಿರುವ ಈ ಕ್ರಮಗಳನ್ನು ಅನುಸರಿಸಬೇಕು. ನಿಮ್ಮ ಗಂಟಲು ಆಗಾಗ್ಗೆ ನೋಯುತ್ತಿದ್ದರೆ ಅಥವಾ ನಿಮ್ಮ ಧ್ವನಿಯನ್ನು ಕಳೆದುಕೊಂಡರೆ, ಕೆಲವು ಸಾಮಾನ್ಯ ವಿಚಾರಗಳು ಇದಕ್ಕೆ ಕಾರಣವಾಗಬಹುದು. ಅದು ಯಾವುದು, ಅದರಿಂದ ಮುಕ್ತಿ ಪಡೆಯುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಗಂಟಲು ನೋವಿನಿಂದ ತಕ್ಷಣ ಮುಕ್ತಿ ಪಡೆಯುವುದು ಹೇಗೆ? ಇಲ್ಲಿದೆ ಪರಿಹಾರ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on:Aug 21, 2025 | 3:32 PM

Share

ಈ ಗಂಟಲು ನೋವಿನಿಂದ ಮುಕ್ತಿ (causes hoarse voice) ಪಡೆಯುವುದು ಹೇಗೆ? ಅನೇಕ ಕಾರಣಗಳಿಂದ ಈ ಗಂಟಲು ನೋವು ಬರುತ್ತದೆ. ಇದನ್ನು ತಕ್ಷಣದಲ್ಲಿ ಗುಣಪಡಿಸುವುದು ಹೇಗೆ? ಎಂಬ ಪ್ರಶ್ನೆ ಮೂಡಿರಬಹುದು. ಈ ಗಂಟಲು ನೋವಿನಿಂದ ಧ್ವನಿಯೇ ಹೊರ ಬರುವುದಿಲ್ಲ. ಮಾತನಾಡಲು ತೊಂದರೆಯಾಗುತ್ತದೆ. ಏನನ್ನಾದರೂ ನುಂಗುವಾಗ ತೀವ್ರ ನೋವು ಇರುತ್ತದೆ. ಈ ರೀತಿ ಸಮಸ್ಯೆಗಳು ಬಂದಾಗ ಏನು ಮಾಡಬೇಕು. ಒಮ್ಮೆ ಈ ಲೇಖನವನ್ನು ಓದಿ, ತಜ್ಞರು ಹೇಳಿರುವ ಈ ಸಲಹೆ ಪಾಲಿಸಿದರೆ ಖಂಡಿತ ಈ ಸಮಸ್ಯೆಗಳಿಂದ ದೂರು ಇರಬಹುದು.

ಈ ಬಗ್ಗೆ ತಜ್ಞರು ಹೇಳೋದೇನು?

ಗ್ಲೋಬಲ್ ಹೋಲಿಸ್ಟಿಕ್ ಹೆಲ್ತ್ ಗುರು ಮತ್ತು ಆಧ್ಯಾತ್ಮಿಕ ಜೀವನ ತರಬೇತುದಾರ ಡಾ. ಮಿಕ್ಕಿ ಮೆಹ್ತಾ ಅವರು ಈ ಬಗ್ಗೆ ಎನ್​ಡಿಟಿವಿ ಜತೆಗೆ ಮಾತನಾಡಿದ್ದಾರೆ. ನಿಮ್ಮ ಗಂಟಲು ಆಗಾಗ್ಗೆ ನೋಯುತ್ತಿದ್ದರೆ ಅಥವಾ ಸ್ವಲ್ಪ ಸಮಯದವರೆಗೆ ನಿಮ್ಮ ಧ್ವನಿಯನ್ನು ಕಳೆದುಕೊಂಡರೆ, ಇದಕ್ಕೆ ಕಾರಣ ಈ ಕೆಳಗಿನವು ಆಗಿರಬಹುದು.

ಅಲರ್ಜಿ: ಅನೇಕರಿಗೆ  ಅಲರ್ಜಿ ಸಮಸ್ಯೆ ಇರುತ್ತದೆ, ಅದನ್ನು ಕಡಿಮೆ ಮಾಡುವ ಕಡೆ ಗಮನ ನೀಡಿ.

ಇದನ್ನೂ ಓದಿ
Image
ಪದೇ ಪದೇ ಮೂಗಿನ ಒಳಗೆ ಬೆರಳು ಹಾಕುತ್ತೀರಾ? ಈ ಸಮಸ್ಯೆ ಬರಬಹುದು
Image
ಹೊಟ್ಟೆ ಉಬ್ಬರ ಸಮಸ್ಯೆಗೆ ಕಾರಣವೇನು? ಹೀಗೆ ಮಾಡಿ ತಿಂಗಳಲ್ಲಿ ಪರಿಹಾರ
Image
ರಾತ್ರಿ ನಿದ್ದೆ ಬರುತ್ತಿಲ್ಲವೇ? ಹಾಗಾದರೆ ಪ್ರತಿದಿನ ಶಂಖ ಊದಿ
Image
ದಿನಕ್ಕೆ ಕಡ್ಡಾಯವಾಗಿ ಎಷ್ಟು ಹೆಜ್ಜೆ ನಡೆಯಬೇಕು?

ಜೋರಾಗಿ ಮಾತನಾಡಿ: ನಿರಂತರ ಮಾತನಾಡುವುದು, ಜೋರಾಗಿ ಮಾತನಾಡುವುದು ಅಥವಾ ಹಾಡುವುದರಿಂದಲೂ ಗಂಟಲು ನೋವು ಕಾಣಿಸಿಕೊಳ್ಳಬಹುದು.

ಮಾಲಿನ್ಯ ಮತ್ತು ಧೂಮಪಾನ: ಧೂಳು, ಹೊಗೆ ಮತ್ತು ಧೂಮಪಾನವು ಧ್ವನಿ ಅಥವಾ ಗಂಟಲಿನ ಮೇಲೆ ಮೇಲೆ ಪರಿಣಾಮ ಬೀರುತ್ತದೆ. ಇದು ಗಂಟಲು ನೋವನ್ನು ಉಂಟುಮಾಡುತ್ತದೆ .

ಆಮ್ಲೀಯತೆ ಅಥವಾ ಗ್ಯಾಸ್ಟ್ರಿಕ್ ರಿಫ್ಲಕ್ಸ್ : ಆಮ್ಲೀಯತೆ ಅಥವಾ ಗ್ಯಾಸ್ಟ್ರಿಕ್ ರಿಫ್ಲಕ್ಸ್ ಕೂಡ ಧ್ವನಿಯಲ್ಲಿ ಒರಟುತನಕ್ಕೆ ಕಾರಣವಾಗಬಹುದು.

ಇದೆಲ್ಲದರ ಹೊರತಾಗಿ, ಥೈರಾಯ್ಡ್ ಅಥವಾ ಒತ್ತಡದಿಂದಲೂ ಗಂಟಲು ನೋವು ಉಂಟಾಗಬಹುದು.

ಇದನ್ನೂ ಓದಿ: ಆಹಾರದಲ್ಲಿ ಜೀರಿಗೆ ಉಪಯೋಗ ಮಾಡ್ತೀರಾ? ಹಾಗಿದ್ರೆ ಈ ಸ್ಟೋರಿ ತಪ್ಪದೆ ಓದಿ

ಈ ಸಮಸ್ಯೆಯಿಂದ ಮುಕ್ತಿ ಹೇಗೆ ?

ಉಗುರು ಬೆಚ್ಚಗಿನ ನೀರು ಮತ್ತು ಉಪ್ಪು : ಗಂಟಲಿನ ಸಮಸ್ಯೆ ಅಥವಾ ಧ್ವನಿಯಲ್ಲಿ ಒರಟುತನ ಕಂಡುಬಂದರೆ, ಉಗುರು ಬೆಚ್ಚಗಿನ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವಂತೆ ಶಿಫಾರಸು ಮಾಡುತ್ತಾರೆ. ದಿನಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ಗಂಟಲು ಊತ ಮತ್ತು ನೋವು ಕಡಿಮೆಯಾಗುತ್ತದೆ.

ಶುಂಠಿ ಮತ್ತು ಜೇನುತುಪ್ಪ ಅರಿಶಿನ ಹಾಲು : ಗಂಟಲಿನ ಸಮಸ್ಯೆ ಇದ್ದರೆ ರಾತ್ರಿ ವೇಳೆ ಅರಿಶಿನದೊಂದಿಗೆ ಬೆಚ್ಚಗಿನ ಹಾಲು ಕುಡಿಯಬಹುದು. ಹೀಗೆ ಮಾಡುವುದರಿಂದ ಬಹುಬೇಗನೇ ಪರಿಹಾರ ಸಿಗುತ್ತದೆ.

ತುಳಸಿ ಮತ್ತು ಲಿಯಾಕ್ವೋರೈಸ್: ತುಳಸಿ ಮತ್ತು ಲೈಕೋರೈಸ್ ಗಂಟಲಿಗೆ ಪರಿಹಾರ ನೀಡುತ್ತವೆ. ಹೀಗಾಗಿ ನೀವು ಈ ಎರಡರ ಕಷಾಯವನ್ನು ತಯಾರಿಸಿ ಕುಡಿಯಬಹುದು. ಇದು ನಿಮಗೆ ತಕ್ಷಣದ ಪರಿಹಾರವನ್ನು ನೀಡುತ್ತದೆ.

ಈ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಳ್ಳಿ

ನೀವು ಈ ಸಮಸ್ಯೆಯನ್ನು ಪದೇ ಪದೇ ಎದುರಿಸುತ್ತಿದ್ದರೆ, ನಿಮ್ಮ ಜೀವನಶೈಲಿಯನ್ನು ಬದಲಾವಣೆ ಮಾಡಿಕೊಳ್ಳಿ ಎಂದು ಡಾ. ಮಿಕ್ಕಿ ಮೆಹ್ತಾ ಹೇಳುತ್ತಾರೆ. ಗಂಟಲು ನೋವು ಸಾಮಾನ್ಯ ಸಮಸ್ಯೆಯಾಗಿದ್ದರೂ, ಅದನ್ನು ಹಗುರವಾಗಿ ಪರಿಗಣಿಸಬಾರದು. ಒಂದು ವೇಳೆ ಮೇಲಿನ ಸಲಹೆಯನ್ನು ಪಾಲಿಸಿದ್ರು ಕಡಿಮೆಯಾಗದೇ ಇದ್ದಲ್ಲಿ ವೈದ್ಯರನ್ನು ಭೇಟಿ ಮಾಡುವುದು ಉತ್ತಮ ಎಂದು ಹೇಳಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:30 pm, Thu, 21 August 25