AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಜಿನ ಪಾತ್ರೆಗಳಲ್ಲಿ ಬೇಯಿಸಿದ ಮತ್ತು ಸಂಗ್ರಹಿಸಿದ ಆಹಾರವನ್ನು ತಿನ್ನಬಹುದೇ? ಹುಷಾರು!

ಗಾಜಿನ ಪಾತ್ರೆಗಳಲ್ಲಿ ಅಡುಗೆ ಮಾಡಿದರೆ ಆಹಾರ ಪದಾರ್ಥಗಳ ಆಮ್ಲೀಯತೆಯಿಂದಾಗಿ ರಾಸಾಯನಿಕ ಕ್ರಿಯೆಗಳು ನಡೆದು ಗಾಜಿನಲ್ಲಿರುವ ಪದಾರ್ಥಗಳು ಭಕ್ಷ್ಯಗಳಲ್ಲಿ ಬೆರೆಯುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಗಾಜಿನ ಸಾಮಾನುಗಳ ತಯಾರಿಕೆಯಲ್ಲಿ ಸೀಸ, ಕೋಬಾಲ್ಟ್, ಕ್ಯಾಡ್ಮಿಯಮ್ ಅನ್ನು ಬಳಸಲಾಗುತ್ತದೆ. ಅಡುಗೆ ಮಾಡುವಾಗ ಗಾಜಿನ ಪಾತ್ರೆಗಳಲ್ಲಿ ಇರುವ ಈ ಅಂಶಗಳು ಕರಗಿ ಆಹಾರದಲ್ಲಿ ಮಿಶ್ರಣವಾಗುವುದರಿಂದ ಜೀರ್ಣಕ್ರಿಯೆಯ ತೊಂದರೆಗಳು ಬೇಗನೆ ಉಂಟಾಗುತ್ತವೆ ಎಂದು ಎಚ್ಚರಿಸಲಾಗಿದೆ. ಕೋಬಾಲ್ಟ್ ಮತ್ತು ಸೀಸದ ಅಂಶಗಳು ಕ್ಯಾನ್ಸರ್ ಅನ್ನು ಪ್ರಚೋದಿಸುತ್ತವೆ.

ಗಾಜಿನ ಪಾತ್ರೆಗಳಲ್ಲಿ ಬೇಯಿಸಿದ ಮತ್ತು ಸಂಗ್ರಹಿಸಿದ ಆಹಾರವನ್ನು ತಿನ್ನಬಹುದೇ? ಹುಷಾರು!
ಗಾಜಿನ ಪಾತ್ರೆಗಳಲ್ಲಿ ಬೇಯಿಸಿದ ಮತ್ತು ಸಂಗ್ರಹಿಸಿದ ಆಹಾರ ತಿನ್ನಬಹುದೇ?
Follow us
ಸಾಧು ಶ್ರೀನಾಥ್​
|

Updated on: Aug 20, 2023 | 6:06 AM

ಪ್ರತಿದಿನ ನಾವು ಮನೆಯಲ್ಲಿ ಅಡುಗೆ ಮಾಡಲು ವಿವಿಧ ರೀತಿಯ ಪಾತ್ರೆಗಳನ್ನು ಬಳಸುತ್ತೇವೆ. ಸ್ಟೀಲ್, ಅಲ್ಯೂಮಿನಿಯಂ, ತಾಮ್ರ, ನಾನ್ ಸ್ಟಿಕ್ ಮತ್ತು ಮಣ್ಣಿನ ಪಾತ್ರೆಗಳನ್ನು ನಾವು ಬಳಸುತ್ತೇವೆ. ಹಾಗೆ ನೋಡಿದರೆ ಮಣ್ಣಿನ ಪಾತ್ರೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಪಾತ್ರೆಗಳಲ್ಲಿ ಅಡುಗೆ (food) ಮಾಡುವುದು ಆರೋಗ್ಯಕ್ಕೆ (health) ಹಾನಿಕರ. ಗೊತ್ತಿದ್ದರೂ ಅವರಲ್ಲಿ ಅಡುಗೆ (cooking) ಮಾಡುತ್ತೇವೆ. ನಮ್ಮ ಜೀವನ ಶೈಲಿ ಅದಕ್ಕೆ ಒಗ್ಗಿಕೊಂಡುಬಿಟ್ಟಿದೆ. ಲೋಹದ ಪಾತ್ರೆಗಳಿಗಿಂತ ಗಾಜಿನಲ್ಲಿ ಬೇಯಿಸುವುದು ಉತ್ತಮ ಎಂದು ಕೆಲವರು ಭಾವಿಸುತ್ತಾರೆ. ಬೇಯಿಸಿದ ಭಕ್ಷ್ಯಗಳನ್ನು ಸಹ ಗಾಜಿನ (glass) ಪಾತ್ರೆಗಳಲ್ಲಿ ಸಂಗ್ರಹಿಸಿಡುತ್ತಾರೆ.

ಪ್ರತಿದಿನ ನಾವು ಮನೆಯಲ್ಲಿ ಅಡುಗೆ ಮಾಡಲು ವಿವಿಧ ರೀತಿಯ ಪಾತ್ರೆಗಳನ್ನು ಬಳಸುತ್ತೇವೆ. ಸ್ಟೀಲ್, ಅಲ್ಯೂಮಿನಿಯಂ, ತಾಮ್ರ, ನಾನ್ ಸ್ಟಿಕ್ ಮತ್ತು ಮಣ್ಣಿನ ಪಾತ್ರೆಗಳನ್ನು ನಾವು ಬಳಸುತ್ತೇವೆ. ಹಾಗೆ ನೋಡಿದರೆ ಮಣ್ಣಿನ ಪಾತ್ರೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಪಾತ್ರೆಗಳಲ್ಲಿ ಅಡುಗೆ ಮಾಡುವುದು ಆರೋಗ್ಯಕ್ಕೆ ಹಾನಿಕರ. ಗೊತ್ತಿದ್ದರೂ ಅವರಲ್ಲಿ ಅಡುಗೆ ಮಾಡುತ್ತೇವೆ. ನಮ್ಮ ಜೀವನ ಶೈಲಿ ಅದಕ್ಕೆ ಒಗ್ಗಿಕೊಂಡುಬಿಟ್ಟಿದೆ. ಲೋಹದ ಪಾತ್ರೆಗಳಿಗಿಂತ ಗಾಜಿನಲ್ಲಿ ಬೇಯಿಸುವುದು ಉತ್ತಮ ಎಂದು ಕೆಲವರು ಭಾವಿಸುತ್ತಾರೆ. ಬೇಯಿಸಿದ ಭಕ್ಷ್ಯಗಳನ್ನು ಸಹ ಗಾಜಿನ ಪಾತ್ರೆಗಳಲ್ಲಿ ಸಂಗ್ರಹಿಸಿಡುತ್ತಾರೆ. ಗಾಜಿನ ಪಾತ್ರೆಗಳಲ್ಲಿ ಬೇಯಿಸಿದ ಆಹಾರವನ್ನು ಸೇವಿಸುವುದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು.

ಗಾಜಿನ ಪಾತ್ರೆಗಳಲ್ಲಿ ಅಡುಗೆ ಮಾಡಿದರೆ ಆಹಾರ ಪದಾರ್ಥಗಳ ಆಮ್ಲೀಯತೆಯಿಂದಾಗಿ ರಾಸಾಯನಿಕ ಕ್ರಿಯೆಗಳು ನಡೆದು ಗಾಜಿನಲ್ಲಿರುವ ಪದಾರ್ಥಗಳು ಭಕ್ಷ್ಯಗಳಲ್ಲಿ ಬೆರೆಯುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಗಾಜಿನ ಸಾಮಾನುಗಳ ತಯಾರಿಕೆಯಲ್ಲಿ ಸೀಸ, ಕೋಬಾಲ್ಟ್, ಕ್ಯಾಡ್ಮಿಯಮ್ ಅನ್ನು ಬಳಸಲಾಗುತ್ತದೆ. ಅಡುಗೆ ಮಾಡುವಾಗ ಗಾಜಿನ ಪಾತ್ರೆಗಳಲ್ಲಿ ಇರುವ ಈ ಅಂಶಗಳು ಕರಗಿ ಆಹಾರದಲ್ಲಿ ಮಿಶ್ರಣವಾಗುವುದರಿಂದ ಜೀರ್ಣಕ್ರಿಯೆಯ ತೊಂದರೆಗಳು ಬೇಗನೆ ಉಂಟಾಗುತ್ತವೆ ಎಂದು ಎಚ್ಚರಿಸಲಾಗಿದೆ. ಕೋಬಾಲ್ಟ್ ಮತ್ತು ಸೀಸದ ಅಂಶಗಳು ಕ್ಯಾನ್ಸರ್ ಅನ್ನು ಪ್ರಚೋದಿಸುತ್ತವೆ.

ಗಾಜಿನ ಪಾತ್ರೆಗಳಲ್ಲಿ ಬೇಯಿಸಿದ ಆಹಾರವನ್ನು ಹೆಚ್ಚಾಗಿ ಸೇವಿಸಿದರೆ, ಡಿಎನ್‌ಎ ಬದಲಾವಣೆ ಮತ್ತು ಕ್ಯಾನ್ಸರ್ ಕೋಶಗಳ ಬೆಳವಣಿಗೆಯಿಂದ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ.. ಸಂತಾನೋತ್ಪತ್ತಿ ಸಾಮರ್ಥ್ಯ ಹಾನಿಗೊಳಗಾಗುತ್ತದೆ, ಇದು ಬಂಜೆತನಕ್ಕೆ ಕಾರಣವಾಗಬಹುದು. ದೇಹದಲ್ಲಿ ಉರಿಯೂತ ಹೆಚ್ಚುತ್ತದೆ ಮತ್ತು ದೇಹವನ್ನು ದುರ್ಬಲಗೊಳಿಸುತ್ತದೆ ಮತ್ತು ಮೂತ್ರಪಿಂಡಗಳು ಸಹ ಹಾನಿಗೊಳಗಾಗುತ್ತವೆ ಎಂದು ಹೇಳಲಾಗುತ್ತದೆ.

ಗಾಜಿನ ಹೊರತಾಗಿ, ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಬೇಯಿಸಿದ ಭಕ್ಷ್ಯಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಮಣ್ಣಿನ ಪಾತ್ರೆಗಳಲ್ಲಿ ಬೇಯಿಸಿದ ಆಹಾರವನ್ನು ಸೇವಿಸುವುದು ಆರೋಗ್ಯವಾಗಿರಲು ಸಲಹೆ ನೀಡಲಾಗುತ್ತದೆ. ಇನ್ಮುಂದೆ ಅಡುಗೆ ಮಾಡುವ ಪಾತ್ರೆ ಬದಲಿಸಿ.. ಆರೋಗ್ಯ ಕಾಪಾಡಿಕೊಳ್ಳಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು