Milk Teeth: ಮಕ್ಕಳು ಹಲ್ಲು ನುಂಗಿದರೆ ಏನಾಗುತ್ತೆ? ಎಲ್ಲಾ ಪೋಷಕರಿಗಿರುವ ಆತಂಕ ನಿಮಗೂ ಇದೆಯಾ?
ಮಕ್ಕಳು ಸಾಮಾನ್ಯವಾಗಿ 5-6ರ ವಯಸ್ಸಿಗೆ ಬರುತ್ತಿರುವಂತೆ ಹಾಲು ಹಲ್ಲುಗಳು ಬಿದ್ದು ಶಾಶ್ವತ ಹಲ್ಲುಗಳು ಹುಟ್ಟಲು ಶುರುವಾಗುತ್ತದೆ. ಆ ವಯಸ್ಸಿನಲ್ಲೋ ಪಾಠಕ್ಕಿಂತ ಆಟವೇ ಹೆಚ್ಚು, ಹೀಗಿರುವಾಗ ಅಲುಗಾಡುತ್ತಿರುವ ಹಲ್ಲುಗಳನ್ನು ಆಗಾಗ ಕೈಯಿಂದ ಮುಟ್ಟಿಕೊಳ್ಳುತ್ತಲೇ ಇರುತ್ತಾರೆ
ಮಕ್ಕಳು ಸಾಮಾನ್ಯವಾಗಿ 5-6ರ ವಯಸ್ಸಿಗೆ ಬರುತ್ತಿರುವಂತೆ ಹಾಲು ಹಲ್ಲುಗಳು ಬಿದ್ದು ಶಾಶ್ವತ ಹಲ್ಲುಗಳು ಹುಟ್ಟಲು ಶುರುವಾಗುತ್ತದೆ. ಆ ವಯಸ್ಸಿನಲ್ಲೋ ಪಾಠಕ್ಕಿಂತ ಆಟವೇ ಹೆಚ್ಚು, ಹೀಗಿರುವಾಗ ಅಲುಗಾಡುತ್ತಿರುವ ಹಲ್ಲುಗಳನ್ನು ಆಗಾಗ ಕೈಯಿಂದ ಮುಟ್ಟಿಕೊಳ್ಳುತ್ತಲೇ ಇರುತ್ತಾರೆ. ಹಾಗೆಯೇ ಹಲ್ಲುಗಳನ್ನು ಕೆಲವು ಬಾರಿ ಆಟವಾಡುತ್ತಾ ಗೊತ್ತಿಲ್ಲದೇ ನುಂಗಿಯೂ ಇರಬಹುದು.
ಒಂದೊಮ್ಮೆ ಮಕ್ಕಳು ಹಲ್ಲು ನುಂಗಿದರೆ ಏನಾಗುತ್ತದೆ ಎನ್ನುವ ವಿಚಾರದ ಕುರಿತು ನಾವಿಲ್ಲಿ ಮಾಹಿತಿ ನೀಡಲಿದ್ದೇವೆ. ಹಲ್ಲು ಅಥವಾ ಹಲ್ಲಿನ ತುಣಕನ್ನು ನುಂಗುವುದು ಅಸಮಾನ್ಯವೇನಲ್ಲ, ಹಲ್ಲುಗಳು ತುಂಬಾ ಚಿಕ್ಕದಾಗಿರುವ ಕಾರಣ ನುಂಗಿಬಿಡಬಹುದು.
ಮಕ್ಕಳು ಯಾವಾಗ ವೈದ್ಯಕೀಯ ಸಹಾಯ ಪಡೆಯಬೇಕು? ಸಾಮಾನ್ಯವಾಗಿ ಹಲ್ಲು ಜೀರ್ಣವಾಗುತ್ತದೆ, ನ್ಯಾಷನಲ್ ಹೆಲ್ತ್ ಸರ್ವೀಸ್ ವರದಿ ಮಾಡಿದಂತೆ ಬಹುತೇಕ ನುಂಗಿದ ಎಲ್ಲಾ ವಸ್ತುಗಳು, ಚೂಪಾದ ವಸ್ತುಗಳು ಸೇರಿದಮತೆ ಎಲ್ಲವೂ ಯಾವುದೇ ಹಾನಿ ಮಾಡದೇ ಜೀರ್ಣಾಂಗ ವ್ಯವಸ್ಥೆಯ ಮೂಲಕ ಹಾದು ಹೋಗುತ್ತವೆ.
ಜೀರ್ಣಾಂಗವ್ಯೂಹದ ಕಿರಿದಾದ ಭಾಗದಿಂದ ಒಂದು ವಸ್ತುವು ಹಾದುಹೋಗಿ, ಅನ್ನನಾಳವು ಹೊಟ್ಟೆಯನ್ನು ಸೇರುತ್ತದೆ. ಅದು ಯಾವುದೇ ತೊಂದರೆ ಇಲ್ಲದೆ ಹಾದುಹೋಗುತ್ತದೆ ಎಂದು ಯುರೋಪಿಯನ್ ಸೊಸೈಟಿ ಆಫ್ ಗ್ಯಾಸ್ಟ್ರೋಇಂಟೆಸ್ಟಿನ್ ಎಂಡೋಸ್ಕೋಪಿ ಹೇಳಿದೆ.
ನೀವು ಯಾವಾಗ ಮಕ್ಕಳ ಬಗ್ಗೆ ಕಾಳಜಿವಹಿಸಬೇಕು? ಒಂದೊಮ್ಮೆ ಹಲ್ಲನ್ನು ನುಂಗಿದ ಬಳಿಕ ಆಹಾರ ನುಂಗಲು ತೊಂದರೆ, ಕುತ್ತಿಗೆ ಅಥವಾ ಎದೆನೋವು, ವಾಂತಿ, ಮಲದಲ್ಲಿ ರಕ್ತ, ಹೊಟ್ಟೆನೋವು, ಜ್ವರ ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರನ್ನು ಭೇಟಿ ಮಾಡಬೇಕು. ವೈದ್ಯರು ಎಂಡೋಸ್ಕೋಪಿ ಮಾಡಬೇಕಾಗಬಹುದು.
-ಹಲ್ಲುಗಳು ತುಂಬಾ ಸಡಿಲವಾಗಿದೆ ಎನಿಸಿದರೆ ನೀವು ಮಕ್ಕಳ ಹಲ್ಲನ್ನು ಸುಲಭವಾಗಿ ಕೀಳಬಹುದು -ಮಕ್ಕಳಿಗೆ ಹಲ್ಲು ಬೀಳುವ ಕುರಿತು, ಹಾಗೂ ಅದನ್ನು ನುಂಗದಂತೆ ಅರಿವು ಮೂಡಿಸಬೇಕು -ಆಹಾರ ಸೇವಿಸುವಾಗ ಅಥವಾ ಏನನ್ನಾದರೂ ಕಚ್ಚುವಾಗ ತುಂಬಾ ಜಾಗ್ರತೆಯಿಂದ ಇರುವಂತೆ ಸೂಚಿಸಬೇಕು. -ಹಲ್ಲುಜ್ಜುವಾಗ ಸಡಿಲಗೊಂಡಿರುವ ಹಲ್ಲುಗಳ ಜಾಗದಲ್ಲಿ ಒತ್ತಿ ಬ್ರಷ್ ಮಾಡದೇ ಇರುವುದು ಉತ್ತಮ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ