ಯಾವುದೇ ಕಾರಣವಿಲ್ಲದೆ ಕೈಕಾಲುಗಳಲ್ಲಿ ತುರಿಕೆ ಕಾಣಿಸಿಕೊಳ್ಳುತ್ತಿದೆಯೇ? ಈ ಆರೋಗ್ಯ ಸಮಸ್ಯೆಗಳಿರಬಹುದು!

ಕೈಗಳು, ಅಂಗೈಗಳು ಮತ್ತು ಪಾದಗಳ ಅಂಗಾಲುಗಳಲ್ಲಿ ಯಾವುದೇ ಕಾರಣವಿಲ್ಲದೆ ತುರಿಕೆ ಕಾಣಿಸಿಕೊಳ್ಳುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಚರ್ಮ ಒಣಗುವುದು, ಅಲರ್ಜಿ, ಫಂಗಲ್ ಸೋಂಕು, ಎಗ್ಜಿಮಾ ಮತ್ತು ಅತಿಯಾದ ಬೆವರುವಿಕೆ ಇದಕ್ಕೆ ಪ್ರಮುಖ ಕಾರಣಗಳಾಗಿರಬಹುದು. ತುರಿಕೆ ಕಡಿಮೆ ಮಾಡಲು ಅನುಸರಿಸಬೇಕಾದ ಮುನ್ನೆಚ್ಚರಿಕೆಗಳು, ಚರ್ಮದ ಆರೈಕೆ ಮತ್ತು ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಯಾವುದೇ ಕಾರಣವಿಲ್ಲದೆ ಕೈಕಾಲುಗಳಲ್ಲಿ ತುರಿಕೆ ಕಾಣಿಸಿಕೊಳ್ಳುತ್ತಿದೆಯೇ? ಈ ಆರೋಗ್ಯ ಸಮಸ್ಯೆಗಳಿರಬಹುದು!
Severe Itching On Palms And Soles
Image Credit source: Getty Images

Updated on: Nov 17, 2026 | 5:42 PM

ಕೆಲವೊಮ್ಮೆ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಕೈಗಳು, ಅಂಗೈಗಳು ಅಥವಾ ಪಾದಗಳ ಅಂಗಾಲುಗಳಲ್ಲಿ ಹಠಾತ್ತನೆ ತುರಿಕೆ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಸ್ವಲ್ಪ ಸಮಯ ಮಾತ್ರ ಕಾಡುವ ಈ ಸಮಸ್ಯೆ, ಕೆಲವೊಮ್ಮೆ ತೀವ್ರವಾಗಿ ಕಾಡಬಹುದು. ಪದೇಪದೇ ತುರಿಸಿಕೊಳ್ಳುವುದರಿಂದ ಚರ್ಮ ಕೆಂಪಾಗುವುದು, ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳುವುದು ಅಥವಾ ಚರ್ಮದ ಪದರಗಳು ಉದುರುವುದು ಸಂಭವಿಸಬಹುದು. ಇಂತಹ ತುರಿಕೆಗೆ ಹಲವು ಕಾರಣಗಳಿರಬಹುದು.

ಚರ್ಮ ಒಣಗುವುದು

ಸಾಮಾನ್ಯವಾಗಿ ಚರ್ಮದಲ್ಲಿನ ನೈಸರ್ಗಿಕ ತೇವಾಂಶ ಮತ್ತು ಎಣ್ಣೆಯ ಅಂಶ ಕಡಿಮೆಯಾದಾಗ ಒಣಗುವಿಕೆ ಉಂಟಾಗುತ್ತದೆ. ಪದೇಪದೇ ಸಾಬೂನಿನಿಂದ ಕೈ ತೊಳೆಯುವುದು, ಬಿಸಿ ನೀರನ್ನು ಹೆಚ್ಚಾಗಿ ಬಳಸುವುದು ಮತ್ತು ಚರ್ಮಕ್ಕೆ ಹೊಂದಿಕೆಯಾಗದ ಉತ್ಪನ್ನಗಳನ್ನು ಬಳಸುವುದು ಇದಕ್ಕೆ ಕಾರಣವಾಗಬಹುದು. ಇದರಿಂದ ಚರ್ಮ ಬಿಗಿಯಾದಂತೆ ಅನಿಸಿ ತುರಿಕೆ ಉಂಟಾಗುತ್ತದೆ.

Loading...

ಅಲರ್ಜಿ ಅಥವಾ ಚರ್ಮದ ಪ್ರತಿಕ್ರಿಯೆ

ಹೊಸ ಸಾಬೂನು, ಹ್ಯಾಂಡ್‌ವಾಶ್, ಡಿಟರ್ಜೆಂಟ್, ಸ್ಯಾನಿಟೈಸರ್, ಪಾದಗಳಿಗೆ ಹಚ್ಚುವ ಕ್ರೀಮ್ ಅಥವಾ ಪಾದರಕ್ಷೆಗಳಿಂದ ಅಲರ್ಜಿ ಉಂಟಾಗಬಹುದು. ಇದನ್ನು ವೈದ್ಯಕೀಯವಾಗಿ ಕಾಂಟ್ಯಾಕ್ಟ್ ಡರ್ಮಟೈಟಿಸ್ ಎಂದು ಕರೆಯುತ್ತಾರೆ. ತುರಿಕೆಯ ಜೊತೆಗೆ ಕೆಂಪಾಗುವಿಕೆ, ಊತ ಮತ್ತು ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳಬಹುದು.

ಇದನ್ನೂ ಓದಿ: ಚಳಿಗಾಲದಲ್ಲಿ ಕ್ಯಾರೆಟ್ ಮಿಸ್ ಮಾಡ್ದೆ ತಿನ್ನಿ! ಆರೋಗ್ಯಕ್ಕೆ ಸಿಗುತ್ತೆ ನೀವು ಊಹಿಸಲೂ ಸಾಧ್ಯವಾಗದ ಪ್ರಯೋಜನ

ಫಂಗಲ್ ಸೋಂಕು

ಪಾದದ ಬೆರಳುಗಳ ನಡುವಿನ ಭಾಗದಲ್ಲಿ ಬೆವರು ಮತ್ತು ತೇವಾಂಶ ದೀರ್ಘಕಾಲ ಉಳಿದರೆ ಶಿಲೀಂಧ್ರ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ. ಇದರಿಂದ ತುರಿಕೆ, ಉರಿ, ಚರ್ಮ ಬಿರುಕು ಬಿಡುವುದು ಮತ್ತು ಪದರಗಳು ಉದುರುವುದು ಸಂಭವಿಸಬಹುದು. ಹೆಚ್ಚು ಹೊತ್ತು ಮುಚ್ಚಿದ ಶೂ ಧರಿಸುವವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳಬಹುದು.

ಎಗ್ಜಿಮಾ ಸಮಸ್ಯೆ

ಕೆಲವರಲ್ಲಿ ಕೈ ಮತ್ತು ಪಾದಗಳ ಮೇಲೆ ಎಗ್ಜಿಮಾ ಕಾಣಿಸಿಕೊಳ್ಳಬಹುದು. ವಿಶೇಷವಾಗಿ ಡಿಶೈಡ್ರೋಟಿಕ್ ಎಗ್ಜಿಮಾ ಸಮಸ್ಯೆಯಲ್ಲಿ ಸಣ್ಣ ನೀರಿನ ಗುಳ್ಳೆಗಳು, ತೀವ್ರ ತುರಿಕೆ ಮತ್ತು ಚರ್ಮ ಒರಟಾಗುವ ಲಕ್ಷಣಗಳು ಕಂಡುಬರುತ್ತವೆ.

ಅತಿಯಾದ ಬೆವರು ಮತ್ತು ಬಿಸಿ ವಾತಾವರಣ

ಹೆಚ್ಚು ಬೆವರುವುದು, ಬಿಸಿ ವಾತಾವರಣ ಮತ್ತು ನಿರಂತರವಾಗಿ ಶೂ ಧರಿಸುವುದರಿಂದ ಚರ್ಮದಲ್ಲಿ ತೇವಾಂಶ ಹೆಚ್ಚಾಗಿ ತುರಿಕೆ, ಉರಿ ಮತ್ತು ಕಿರಿಕಿರಿ ಉಂಟಾಗಬಹುದು. ತೇವಾಂಶ ಹೆಚ್ಚಿರುವುದರಿಂದ ಕೆಲವು ಸೋಂಕುಗಳ ಅಪಾಯವೂ ಹೆಚ್ಚುತ್ತದೆ.

ತುರಿಕೆ ಕಡಿಮೆ ಮಾಡಲು ಅನುಸರಿಸಬೇಕಾದ ಮುನ್ನೆಚ್ಚರಿಕೆಗಳು

ಕೈ ಮತ್ತು ಪಾದಗಳಲ್ಲಿ ತುರಿಕೆ ಕಾಣಿಸಿಕೊಂಡಾಗ ಪದೇಪದೇ ಬಲವಾಗಿ ಕೆರೆಯಬಾರದು. ಚರ್ಮ ಒಣಗಿದ್ದರೆ ಸುಗಂಧವಿಲ್ಲದ ಮಾಯಿಶ್ಚರೈಸರ್ ಬಳಸಬೇಕು. ಹೊಸ ಉತ್ಪನ್ನ ಬಳಸಿದ ನಂತರ ತುರಿಕೆ ಆರಂಭವಾದರೆ ಅದರ ಬಳಕೆಯನ್ನು ನಿಲ್ಲಿಸಬೇಕು. ಪಾದಗಳನ್ನು ಸ್ವಚ್ಛವಾಗಿಟ್ಟುಕೊಂಡು, ವಿಶೇಷವಾಗಿ ಬೆರಳುಗಳ ನಡುವಿನ ಭಾಗವನ್ನು ಚೆನ್ನಾಗಿ ಒಣಗಿಸಬೇಕು. ತುರಿಕೆ ತೀವ್ರವಾಗಿದ್ದರೆ ಅಥವಾ ದೀರ್ಘಕಾಲ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರ ಸಲಹೆಯಿಲ್ಲದೆ ಸ್ಟೆರಾಯ್ಡ್ ಅಥವಾ ಆಂಟಿಫಂಗಲ್ ಕ್ರೀಮ್‌ಗಳನ್ನು ಬಳಸಬಾರದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Loading...
Unable to load recommendations.
Follow Us