ಪಿಸಿಒಡಿ ಎಂದರೇನು? ಲಕ್ಷಣಗಳು, ಕಾರಣಗಳು ಮತ್ತು ಚಿಕಿತ್ಸೆಯ ಬಗ್ಗೆ ಯುವತಿಯರು ತಿಳಿಯಲೇಬೇಕು
ಪಿಸಿಒಡಿಯ ಲಕ್ಷಣಗಳೆಂದರೆ ಮೊಡವೆಗಳು, ತಲೆಯ ನೆತ್ತಿಯ ಭಾಗದಲ್ಲಿ ಕೂದಲು ಉದುರುವುದು, ಮುಖ್ಯವಾಗಿ ಹೆಣ್ಣಿಗೆ ಗರ್ಭಾವಸ್ಥೆಗೆ ತೊಂದರೆಯಾಗುತ್ತದೆ. ಇದರಿಂದ ಹೆಣ್ಣು ಗರ್ಭಧರಿಸಲು ಕಷ್ಟವಾಗುತ್ತದೆ.
ಪಿಸಿಒಡಿ ಅಂದರೆ ಪಾಲಿಸಿಸ್ಟಿಕ್ ಓವರಿ ಡಿಸಾರ್ಡರ್ ಎಂದರ್ಥ. ಸಾಮಾನ್ಯವಾಗಿ 12-45 ವರ್ಷದೊಳಿಗಿನ ಮಹಿಳೆಯರಲ್ಲಿ ಕಂಡು ಬರುವ ಒಂದು ಸ್ಥಿತಿ. ದೇಹದಲ್ಲಿ ಉತ್ಪತ್ತಿಯಾಗುವ ಹಾರ್ಮೋನುಗಳ ಅಸಮತೋಲನದಿಂದ ಉಂಟಾಗುವ ಒಂದು ಸಮಸ್ಯೆಯಾಗಿದೆ. ದೇಹದ ಅಸ್ವಸ್ಥತೆಯಿಂದ ಅಂಡಾಶಗಳು ಹಿಗ್ಗುತ್ತವೆ. ಜತೆಗೆ ಹೊರ ಪರದೆಯ ಅಂಚಿನಲ್ಲಿ ಸಣ್ಣ ಚೀಲಗಳು ಬೆಳೆಯುತ್ತವೆ. ಪಿಸಿಒಡಿಯ ಲಕ್ಷಣಗಳೆಂದರೆ ಮೊಡವೆಗಳು, ಅತಿಯಾಗಿ ದೇಹದಲ್ಲಿ ಕೂದಲು ಬೆಳೆಯುವುದು, ತಲೆಯ ನೆತ್ತಿಯ ಭಾಗದಲ್ಲಿ ಕೂದಲು ಉದುರುವುದು, ಮುಖ್ಯವಾಗಿ ಹೆಣ್ಣಿಗೆ ಗರ್ಭಾವಸ್ಥೆಗೆ ತೊಂದರೆಯಾಗುತ್ತದೆ. ಇದರಿಂದ ಹೆಣ್ಣು ಗರ್ಭಧರಿಸಲು ಕಷ್ಟವಾಗುತ್ತದೆ.
ಪಿಸಿಒಡಿಯ ಮೂಲ ಕಾರಣವೆಂದರೆ ಹಾರ್ಮೋನುಗಳ ಅಸಮತೋಲನ. ಸಾಮಾನ್ಯವಾಗಿ ಅಂಡಾಂಶಗಳು ಈಸ್ಟರೊಜೆನ್, ಪ್ರೊಜೆಸ್ಟರಾನ್ ಮತ್ತು ಟೆಸ್ಟೋಸ್ಟೆರಾನ್ ಅನ್ನು ಉತ್ಪಾದಿಸುತ್ತವೆ. ಪಿಸಿಒಡಿಯಲ್ಲಿ ಆಂಡ್ರೊಜೆನ್ ಅಂಡಾಂಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಇದನ್ನು ಹೈಪರಾಂಡ್ರೊಜೆನಿಸಮ್ ಎಂದು ಕರೆಯಲಾಗುತ್ತದೆ. ಇದು ಋತು ಚಕ್ರಕ್ಕೆ ತೊಂದರೆಯನ್ನು ಉಂಟು ಮಾಡುತ್ತದೆ. ಹಾಗಿರುವಾಗ ಹೆಣ್ಣು ಮಕ್ಕಳು ಅಥವಾ ಯುವತಿಯರು ಇದರ ಬಗ್ಗೆ ಹೆಚ್ಚು ಗಮನಹರಿಸಲೇ ಬೇಕು.
ಪಿಸಿಒಡಿ ಹೆಚ್ಚಿನ ಸಂದರ್ಭದಲ್ಲಿ ಆಯುರ್ವೇದದ ಮೂಲಕವಾಗಿ ಪರಿಹಾರ ಕಂಡುಕೊಳ್ಳಬಹುದು ಎಂದು ಅಧ್ಯಯನಗಳು ತಿಳಿಸಿವೆ. ಜತೆಗೆ ವೈದ್ಯರೂ ಸಹ ಸಲಹೆ ನೀಡುತ್ತಾರೆ. ಆಯುರ್ವೇದ ಔಷಧದಿಂದ ಸ್ತ್ರೀರೋಗ ಅಸ್ವಸ್ಥತೆಗಳನ್ನು ತಡೆಗಟ್ಟಲು ಜತೆಗೆ ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಮುನ್ನೆಚ್ಚರಿಕೆ ಕ್ರಮಗಳು *ದೇಹದ ತೂಕದ ಪರಿಶೀಲನೆ *ಪೌಷ್ಠಿಕ ಆಹಾರವನ್ನು ಸೇವಿಸಿ *ನಿಯಮಿತವಾಗಿ ಯೋಗಾಭ್ಯಾಸವನ್ನು ಮಾಡಿ *ಒತ್ತಡವನ್ನು ಉಂಟು ಮಾಡುವ ಕೆಲಸದಲ್ಲಿ ತೊಡಗದಿರಿ
ಇದನ್ನೂ ಓದಿ:
Pregnancy Care: ಕೊವಿಡ್ ಸಮಯದಲ್ಲಿ ಗರ್ಭಿಣಿಯರಿಗಾಗಿ ಆರೋಗ್ಯ ಸಲಹೆಗಳು; ಆರೋಗ್ಯವನ್ನು ಕಾಳಜಿಯಿಂದ ನೋಡಿಕೊಳ್ಳಿ
Published On - 9:55 am, Fri, 9 July 21