Okra Water: ಮಧುಮೇಹಿಗಳು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರು ಸೇವಿಸಿ ನೋಡಿ

ಬೆಂಡೆಕಾಯಿಯನ್ನು ಕೇವಲ ತರಕಾರಿಯಾಗಿ ಮಾತ್ರ ನೋಡದೆ ನಿಮ್ಮ ದಿನನಿತ್ಯದ ಡಯಟ್​ನಲ್ಲಿಯೂ ಬಳಸಿಕೊಳ್ಳಬಹುದು. ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು, ರಾತ್ರಿ ಪೂರ್ತಿ ಸ್ವಚ್ಛವಾದ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಆ ನೀರನ್ನು ಕುಡಿದರೆ ರಕ್ತ ಹೀನತೆಯನ್ನು ತಡೆಗಟ್ಟಬಹುದು.

Okra Water: ಮಧುಮೇಹಿಗಳು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರು ಸೇವಿಸಿ ನೋಡಿ
ಬೆಂಡೆಕಾಯಿಯ ನೀರುImage Credit source: iStock
Follow us
|

Updated on: Nov 14, 2023 | 6:06 PM

ಮಧುಮೇಹ ಸಮಸ್ಯೆ ಇರುವವರು ಎಲ್ಲ ತರಕಾರಿ, ಹಣ್ಣುಗಳನ್ನೂ ಧೈರ್ಯವಾಗಿ ತಿನ್ನಲು ಹಿಂದೇಟು ಹಾಕುತ್ತಾರೆ. ಕೆಲವು ತರಕಾರಿ ಅಥವಾ ಹಣ್ಣುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಗುಣ ಹೊಂದಿರುತ್ತವೆ. ನಿಮಗೂ ಆ ರೀತಿಯ ಆತಂಕವಿದ್ದರೆ ಬೆಂಡೆಕಾಯಿಯ ನೀರನ್ನು ಸೇವಿಸಬಹುದು. ತಮ್ಮ ಮಧುಮೇಹವನ್ನು ನಿಯಂತ್ರಿಸಲು ಬಯಸುವ ವ್ಯಕ್ತಿಗಳಿಗೆ ಬೆಂಡೆಕಾಯಿಯ ನೀರು ಅತ್ಯುತ್ತಮ ಪರಿಹಾರ. ಮಧುಮೇಹವನ್ನು ನಿರ್ವಹಿಸಲು ಮತ್ತು ಆರೋಗ್ಯವಾಗಿರಲು ಬೆಂಡೆಕಾಯಿಯನ್ನು ನೆನೆಸಿಟ್ಟ ನೀರು ಸೇವಿಸಬಹುದು.

ಬೆಂಡೆಕಾಯಿಯ ನೀರು ಒಂದು ಸರಳ, ಸುಲಭ ಮತ್ತು ಪರಿಣಾಮಕಾರಿ ಮನೆಮದ್ದಾಗಿದ್ದು, ರಾತ್ರಿಯಿಡೀ ನೀರಿನಲ್ಲಿ ಬೆಂಡೆಕಾಯಿಯನ್ನು ನೆನೆಸಿಡಬೇಕು. ಆಗ ಬೆಂಡೆಕಾಯಿ ಬೀಜಗಳಿಂದ ಲೋಳೆ ಅಥವಾ ಜೆಲ್ ತರಹದ ವಸ್ತುವು ನೀರಿನಲ್ಲಿ ಬಿಡುಗಡೆಯಾಗುತ್ತದೆ. ಇದು ಪೌಷ್ಟಿಕ ಮತ್ತು ಮಧುಮೇಹ ಸ್ನೇಹಿ ಕಷಾಯವನ್ನು ಸೃಷ್ಟಿಸುತ್ತದೆ. ಇದು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಅನ್ನು ಹೊಂದಿದ್ದು ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿರಿಸುತ್ತದೆ. ಹಾಗೇ, ಇದರಿಂದ ಆಹಾರದಿಂದ ಬಿಡುಗಡೆಯಾಗುವ ಸಕ್ಕರೆಯು ನಿಧಾನವಾಗಿ ಚಯಾಪಚಯಗೊಳ್ಳುತ್ತದೆ.

ಇದನ್ನೂ ಓದಿ: Health Tips: ಅಪ್ಪಿ ತಪ್ಪಿಯೂ ಈ ಹಣ್ಣು ತಿಂದ ಕೂಡಲೇ ನೀರು ಕುಡಿಯಬೇಡಿ

ಮಧುಮೇಹ ನಿಯಂತ್ರಣಕ್ಕೆ ಬೆಂಡೆಕಾಯಿ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು ಇಲ್ಲಿವೆ:

ಬೆಂಡೆಕಾಯಿಯಲ್ಲಿ ವಿಟಮಿನ್ ಬಿ, ವಿಟಮಿನ್ ಸಿ ಫೋಲಿಕ್ ಆ್ಯಸಿಡ್, ಕ್ಯಾಲ್ಷಿಯಂ, ಪೊಟ್ಯಾಸಿಯಂ ಅಂಶಗಳು ಹೆಚ್ಚಾಗಿ ಇರುವುದರಿಂದ ಇದರಲ್ಲಿ ನಮ್ಮ ದೇಹಕ್ಕೆ ಬೇಕಾದ ಲವಣಾಂಶ, ಪೌಷ್ಠಿಕಾಂಶಗಳು ಹೇರಳವಾಗಿವೆ. ಬೆಂಡೆಕಾಯಿ ಡಯಾಬಿಟಿಸ್ ಇರುವವರಿಗೆ ಬಹಳ ಉತ್ತಮವಾದ ತರಕಾರಿಯಾಗಿದೆ.

ಬೆಂಡೆಕಾಯಿಯಲ್ಲಿ ಹೇರಳವಾದ ಫೈಬರ್ ಅಥವಾ ನಾರಿನಂಶ ಇರುವುದರಿಂದ ಡಯಾಬಿಟಿಸ್​ಗೆ ರಾಮಬಾಣವಿದ್ದಂತೆ. ಹಾಗೇ, ಇದು ರಕ್ತದ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿ, ಜೀರ್ಣಕ್ರಿಯೆ ಸುಧಾರಿಸಲು ಕೂಡ ಸಹಕಾರಿಯಾಗಿದೆ. ಡಯಾಬಿಟಿಸ್ ಇರುವರಲ್ಲಿ ಬಹುತೇಕರಲ್ಲಿ ಅಧಿಕ ಕೊಬ್ಬಿನಂಶ (ಕೊಲೆಸ್ಟ್ರಾಲ್) ಇರುತ್ತದೆ. ಅಂಥವರು ಬೆಂಡೆಕಾಯಿಯಂತಹ ಆ್ಯಂಟಿಆಕ್ಸಿಡೆಂಟ್​ ಹೆಚ್ಚಾಗಿರುವ ತರಕಾರಿಯನ್ನು ತಿನ್ನುವುದರಿಂದ ದೇಹದ ಕೊಬ್ಬಿನಾಂಶ ಕಡಿಮೆಯಾಗುತ್ತದೆ.

ಬೆಂಡೆಕಾಯಿಯನ್ನು ಕೇವಲ ತರಕಾರಿಯಾಗಿ ಮಾತ್ರ ನೋಡದೆ ನಿಮ್ಮ ದಿನನಿತ್ಯದ ಡಯಟ್​ನಲ್ಲಿಯೂ ಬಳಸಿಕೊಳ್ಳಬಹುದು. ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು, ರಾತ್ರಿ ಪೂರ್ತಿ ಸ್ವಚ್ಛವಾದ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಆ ನೀರನ್ನು ಕುಡಿದರೆ ರಕ್ತ ಹೀನತೆಯನ್ನು ತಡೆಗಟ್ಟಬಹುದು. ಬೆಂಡೆಕಾಯಿಯ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಾಗುತ್ತದೆ. ಹಾಗೇ, ಗಂಟಲಿನ ಸಮಸ್ಯೆ, ಕೆಮ್ಮು ಮುಂತಾದ ಸಮಸ್ಯೆಗಳು ದೂರವಾಗುತ್ತವೆ.

ಇದನ್ನೂ ಓದಿ: Cooking Tips: ಬೆಂಡೆಕಾಯಿಯನ್ನು ಲೋಳೆಯಾಗದಂತೆ ಫ್ರೈ ಮಾಡುವುದು ಹೇಗೆ?; ಸುಲಭದ ಉಪಾಯ ಹೀಗಿದೆ

ಬೆಂಡೆಕಾಯಿಯ ನೀರಿನ ನಿಯಮಿತ ಸೇವನೆಯು ಹೆಚ್ಚಿದ ಇನ್ಸುಲಿನ್ ಸಂವೇದನೆಗೆ ಸಂಬಂಧಿಸಿದೆ. ಇನ್ಸುಲಿನ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಜವಾಬ್ದಾರಿಯುತ ಹಾರ್ಮೋನ್ ಮತ್ತು ವರ್ಧಿತ ಸಂವೇದನೆ ಎಂದರೆ ದೇಹವು ಇನ್ಸುಲಿನ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತದೆ. ಬೆಂಡೆಕಾಯಿಯು ಉತ್ಕರ್ಷಣ ನಿರೋಧಕಗಳು ಮತ್ತು ಫೋಲೇಟ್, ಬೀಟಾ-ಕ್ಯಾರೋಟಿನ್ ಮತ್ತು ಲುಟೀನ್‌ನಂತಹ ಪೋಷಕಾಂಶಗಳ ಸಂಪತ್ತನ್ನು ಹೊಂದಿದೆ.

ಬೆಂಡೆಕಾಯಿ ನೀರನ್ನು ಹೇಗೆ ತಯಾರಿಸುವುದು?:

4-5 ಬೆಂಡೆಕಾಯಿಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ತೊಳೆಯಿರಿ. ಬೆಂಡೆಕಾಯಿಯ ಎರಡೂ ತುದಿಗಳನ್ನು ಕತ್ತರಿಸಿ. ಬೆಂಡೆಕಾಯಿಯನ್ನು ತೆಳುವಾದ ಹೋಳುಗಳಾಗಿ ಕತ್ತರಿಸಿ ಅಥವಾ ಅರ್ಧದಷ್ಟು ಉದ್ದವಾಗಿ ವಿಭಜಿಸಿ. 1 ಲೋಟ ನೀರು ತೆಗೆದುಕೊಂಡು ಕತ್ತರಿಸಿದ ಬೆಂಡೆಕಾಯಿಯನ್ನು ಅದರಲ್ಲಿ ಹಾಕಿ. ನಂತರ ಅದನ್ನು ಮುಚ್ಚಿಟ್ಟು, ರಾತ್ರಿಯಿಡೀ ಬೆಂಡೆಕಾಯಿಯನ್ನು ನೆನೆಯಲು ಬಿಡಿ. ಆಗ ಬೆಂಡೆಕಾಯಿಯ ಲೋಳೆ ನೀರಿನಲ್ಲಿ ಮಿಶ್ರಣವಾಗುತ್ತದೆ. ಬೆಳಗ್ಗೆ ಬೆಂಡೆಕಾಯಿಯನ್ನು ಬಿಟ್ಟು ಖಾಲಿ ಹೊಟ್ಟೆಯಲ್ಲಿ ಬೆಂಡೆಕಾಯಿ ನೆನಸಿಟ್ಟ ಲೋಳೆಯುಳ್ಳ ನೀರನ್ನು ಕುಡಿಯಿರಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ