0-3 ವರ್ಷದೊಳಗಿನ ಶೇ.40ರಷ್ಟು ಮಕ್ಕಳು ದೀರ್ಘಕಾಲದ ಕೋವಿಡ್ನಿಂದ ಬಳಲಿದ್ದಾರೆ ಎಂದು ಲ್ಯಾನ್ಸೆಟ್ ವರದಿ ಹೇಳಿದೆ. ಈ ಮಕ್ಕಳು ಕನಿಷ್ಠ 2 ತಿಂಗಳುಗಳ ಕಾಲ ಕೋವಿಡ್ ಲಕ್ಷಣಗಳನ್ನು ಹೊಂದಿದ್ದರು ಎನ್ನಲಾಗಿದೆ. ಈ ಮಕ್ಕಳು ಮೂಡ್ ಸ್ವಿಂಗ್ಸ್, ತುರಿಕೆ, ಹೊಟ್ಟೆ ನೋವಿನ ರೀತಿಯ ಲಕ್ಷಣಗಳು ಕಂಡುಬಂದಿತ್ತು.
ಡೆನ್ಮಾರ್ಕ್ನ ಕೋಪೆನ್ಹ್ಯಾಗನ್ ಯೂನಿವರ್ಸಿಟಿ ಆಸ್ಪತ್ರೆಯ ಸಂಶೋಧಕರ ಪ್ರಕಾರ, 0-14 ವರ್ಷದ ಕೊರೊನಾ ಸೋಂಕಿಗೆ ಒಳಗಾಗಿರುವ ಒಟ್ಟು 11,000 ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. 2020ರ ಜನವರಿಯಿಂದ 2021ರ ಜುಲೈವರೆಗೆ ಸಮೀಕ್ಷೆ ನಡೆಸಲಾಗಿತ್ತು.
4-14 ವರ್ಷದ ಮಕ್ಕಳಲ್ಲಿ ಮೂಡ್ ಸ್ವಿಂಗ್ಸ್, ತುರಿಕೆ, ಹೊಟ್ಟೆ ಉಬ್ಬುವುದು, ಏಕಾಗ್ರತೆ ಕೊರತೆ, ಮರೆವು ರೀತಿಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಈ ಮಕ್ಕಳಲ್ಲಿ ಕನಿಷ್ಠ 2 ತಿಂಗಳುಗಳ ಕಾಲ ಕೊರೊನಾ ಸೋಂಕಿನ ಲಕ್ಷಣಗಳಿದ್ದವು ಎಂದು ಹೇಳಲಾಗಿದೆ.
ಕೊರೊನಾ ವೈರಸ್(Corona Virus)ನ ಲಕ್ಷಣಗಳು ಈಗ 10 ಅಥವಾ 14 ದಿನಗಳ ಬದಲು ಕೇವಲ 2 ದಿನಗಳಲ್ಲಿ ಮಾತ್ರ ಗೋಚರಿಸುತ್ತವೆ ಎಂದು ಈ ಸಂಶೋಧನೆಯೊಂದು ಹೇಳಿದೆ. DHSC ಮತ್ತು ರಾಯಲ್ ಫ್ರೀ ಲಂಡನ್ NHS ಫೌಂಡೇಶನ್ ಟ್ರಸ್ಟ್ ನ ಸಹಯೋಗದೊಂದಿಗೆ ಲಂಡನ್ನ ಇಂಪೀರಿಯಲ್ ಕಾಲೇಜ್ ಈ ಅಧ್ಯಯನವನ್ನು ನಡೆಸಿದೆ.
ಆರೋಗ್ಯವಂತ ಜನರಿಗೆ ಕೊರೊನಾ ಸೋಂಕು
ಈ ಅಧ್ಯಯನದಲ್ಲಿ ಆರೋಗ್ಯವಂತ ಜನರೇ ಕೊರೊನಾ ಸೋಂಕಿಗೆ ತುತ್ತಾಗಿರುವುದು ಕಂಡುಬಂದಿದೆ. ಈ ಎಲ್ಲಾ ಜನರನ್ನು ವೀಕ್ಷಣೆಯಲ್ಲಿಟ್ಟು ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿತ್ತು.
ಸೋಂಕಿಗೆ ಒಳಗಾದ ನಂತರ ದೇಹದಲ್ಲಿ ವೈರಸ್ ಬೆಳವಣಿಗೆ ಮತ್ತು ಅದರ ರೋಗಲಕ್ಷಣಗಳನ್ನು ನಿಕಟವಾಗಿ ಪತ್ತೆಹಚ್ಚಲಾಗಿದೆ. ಈ ಅಧ್ಯಯನವನ್ನು ಇಲ್ಲಿಯವರೆಗಿನ ಅಧ್ಯಯನಕ್ಕಿಂತಲೂ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಹೇಳಲಾಗಿದೆ.