AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಿಗ್ಗೆ ಎದ್ದಾಗ ಮುಖ ಊದಿಕೊಂಡಿರುತ್ತಾ, ಇದಕ್ಕೆ ಕಾರಣ ತಿಳಿಯಲು ಈ ಸ್ಟೋರಿ ಓದಿ

ಕೆಲವರು ಬೆಳಿಗ್ಗೆ ಎದ್ದ ತಕ್ಷಣ ಮುಖ ನೋಡಿಕೊಂಡರೆ ಅದು ಊದಿಕೊಂಡಿರುತ್ತದೆ. ಸಾಮಾನ್ಯವಾಗಿ ಇದನ್ನು ಎಲ್ಲರೂ ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಇದು ಸಣ್ಣ ಸಮಸ್ಯೆಯಲ್ಲ ಇದಕ್ಕೆ ಕಾರಣ ಬೇರೆಯೇ ಇದೆ. ನಿಮ್ಮ ಕೆಲವು ಅನಾರೋಗ್ಯಕರ ಅಭ್ಯಾಸಗಳು ಈ ರೀತಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದರೆ ಇದನ್ನು ನೀವಾಗಿಯೇ ಕಡಿಮೆ ಮಾಡಿಕೊಳ್ಳಬಹುದು. ಆದರೆ ಈ ರೀತಿಯಾಗುವುದಕ್ಕೆ ನಿಖರವಾದ ಕಾರಣವೇನು, ಕಳೆದ ಕೆಲವು ವರ್ಷಗಳಿಂದ ಈ ರೀತಿ ಸಮಸ್ಯೆ ಕಂಡುಬರುತ್ತಿರುವುದಕ್ಕೆ ಕಾರಣವೇನು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬೆಳಿಗ್ಗೆ ಎದ್ದಾಗ ಮುಖ ಊದಿಕೊಂಡಿರುತ್ತಾ, ಇದಕ್ಕೆ ಕಾರಣ ತಿಳಿಯಲು ಈ ಸ್ಟೋರಿ ಓದಿ
Morning Face Swelling
ಪ್ರೀತಿ ಭಟ್​, ಗುಣವಂತೆ
|

Updated on: Oct 06, 2025 | 5:16 PM

Share

ಇತ್ತೀಚಿಗೆ ಆರೋಗ್ಯ (Health) ಕಾಪಾಡಿಕೊಳ್ಳುವುದು ಒಂದು ರೀತಿಯ ಸವಾಲಾಗಿದೆ. ಒಂದಿಲ್ಲೊಂದು ರೀತಿಯಲ್ಲಿ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಲೇ ಇರುತ್ತದೆ. ಕೆಲವು ಗಂಭೀರ ಸಮಸ್ಯೆಗಳಾಗಿದ್ದರೆ ಇನ್ನು ಕೆಲವು ಬಗೆಹರಿಸಿಕೊಳ್ಳಬಹುದಾಗಿರುತ್ತದೆ. ಅಂತವುಗಳಲ್ಲಿ ಈ ಮುಖ (Face) ಊದಿಕೊಳ್ಳುವ ಸಮಸ್ಯೆಯೂ ಒಂದು. ಅನೇಕರು ಬೆಳಿಗ್ಗೆ ಎದ್ದು ಮುಖವನ್ನು ಕನ್ನಡಿಯಲ್ಲಿ ನೋಡಿಕೊಂಡರೆ ಮುಖ ಸ್ವಲ್ಪ ಊದಿಕೊಂಡಂತೆ (Face Swelling) ಕಾಣುವುದನ್ನು ಗಮನಿಸಿರುತ್ತಾರೆ. ಸ್ನಾನ, ಚಹಾ ಅಥವಾ ಕಾಫಿ ಕುಡಿದ ನಂತರವೂ ಮುಖದ ಮೇಲಿನ ಊತವು ಕಡಿಮೆ ಆಗುವುದಿಲ್ಲ. ಆದರೆ ಈ ರೀತಿಯಾಗುವುದಕ್ಕೆ ನಿಖರವಾದ ಕಾರಣವೇನು, ಕಳೆದ ಕೆಲವು ವರ್ಷಗಳಿಂದ ಈ ರೀತಿ ಸಮಸ್ಯೆ ಕಂಡುಬರುತ್ತಿರುವುದಕ್ಕೆ ಕಾರಣವೇನು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬೆಳಿಗ್ಗೆ ಎದ್ದ ತಕ್ಷಣ ಅನೇಕರಲ್ಲಿ ಮುಖದ ಊತ ಕಾಣಿಸಿಕೊಳ್ಳುತ್ತದೆ. ಕಳೆದ ಕೆಲವು ವರ್ಷಗಳಿಂದ, ಮುಖದ ಊತದ ಸಮಸ್ಯೆ ಅನೇಕರಲ್ಲಿ ಹೆಚ್ಚುತ್ತಿದೆ. ಇದು ಸಂಭವಿಸಲು ಕಾರಣ, ಊಟಕ್ಕೆ ಕುಳಿತಾಗ ಅಗತ್ಯಕ್ಕಿಂತ ಹೆಚ್ಚಾಗಿ ಉಪ್ಪನ್ನು ಸೇವನೆ ಮಾಡುವುದಾಗಿದೆ. ಈ ರೀತಿ ಹೆಚ್ಚಿನ ಪ್ರಮಾಣದಲ್ಲಿ ಉಪ್ಪನ್ನು ಸೇವನೆ ಮಾಡಿದಾಗ ಮುಖದ ಊತ ಉಂಟಾಗುತ್ತದೆ. ಆದ್ದರಿಂದ, ಊಟ ಮಾಡುವಾಗ ಉಪ್ಪನ್ನು ಕಡಿಮೆ ಸೇವನೆ ಮಾಡುವುದು ಅವಶ್ಯಕ. ಉಪ್ಪು ದೇಹದಲ್ಲಿ ಸೋಡಿಯಂ ಮಟ್ಟವನ್ನು ಹೆಚ್ಚಿಸುತ್ತದೆ, ಮಾತ್ರವಲ್ಲ ಮುಖ ಊದಿಕೊಂಡ ಹಾಗೆ ಕಾಣುವಂತೆ ಮಾಡುತ್ತದೆ.

ಇದನ್ನೂ ಓದಿ: ಬಾಳೆಹಣ್ಣಿನ ಸಿಪ್ಪೆಗೆ ಈ 2 ವಸ್ತುಗಳನ್ನು ಬೆರೆಸಿ ಮುಖಕ್ಕೆ ಹಚ್ಚಿದ್ರೆ ಮುಖ ಹೊಳೆಯುವುದು ಖಂಡಿತ

ಮುಖದ ಊತವನ್ನು ಕಡಿಮೆ ಮಾಡಲು ಸಲಹೆಗಳು:

ರಾತ್ರಿ ಮಲಗುವ ಮೊದಲು ಹೆಚ್ಚು ಆಹಾರ ಸೇವನೆ ಮಾಡಬಾರದು ಜೊತೆಗೆ ಉಪ್ಪು ಕಡಿಮೆ ಇರುವಂತಹ ಆಹಾರವನ್ನು ಸೇವನೆ ಮಾಡಬೇಕು. ಈ ರೀತಿ ಮಾಡುವುದರಿಂದ ಮುಖದ ಊತವನ್ನು ಕಡಿಮೆ ಮಾಡಬಹುದಾಗಿದೆ. ಉಪ್ಪಿನ ಸೇವನೆಯ ಜೊತೆಗೆ, ನಿದ್ರೆಯ ಗುಣಮಟ್ಟವೂ ಸಹ ಇದಕ್ಕೆ ಕಾರಣವಾಗಿದೆ. ಹಾಗಾಗಿ ರಾತ್ರಿ ಸಮಯದಲ್ಲಿ ತುಂಬಾ ಕಡಿಮೆ ನಿದ್ರೆ ಮಾಡಿದರೆ ಅಥವಾ ಒಂದೇ ಬದಿಯಲ್ಲಿ ಮಲಗಿದರೆ, ಮುಖಕ್ಕೆ ರಕ್ತ ಪರಿಚಲನೆ ಸರಿಯಾಗಿ ಆಗುವುದಿಲ್ಲ. ಹಾಗಾಗಿ ಇದು ಕೂಡ ಮುಖದ ಊತಕ್ಕೆ ಕಾರಣವಾಗುತ್ತದೆ. ಅದಕ್ಕಾಗಿಯೇ ರಾತ್ರಿ 7 ರಿಂದ 8 ಗಂಟೆ ಚೆನ್ನಾಗಿ ನಿದ್ರಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಇದು ಮುಖದ ಊತದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ಇದು ನಿಮಗೆ ಚೆನ್ನಾಗಿ ನಿದ್ರೆ ಮಾಡುವುದಕ್ಕೆ ಸಹಾಯ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್