Muskmelon Benefits: ಬೇಸಿಗೆಯಲ್ಲಿ ಹೆಚ್ಚು ಕರ್ಬೂಜ ಹಣ್ಣುಗಳನ್ನು ಸೇವಿಸಲು ಏನೆಲ್ಲ ಉಪಯೋಗವಿದೆ ಗೊತ್ತಾ?

Health Tips: ಸಾಕಷ್ಟು ನೀರು ಮತ್ತು ಹಣ್ಣಿನ ಸೇವನೆ ಸೇರಿದಂತೆ ಸರಿಯಾದ ಆಹಾರವು ದೇಹ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಹೆಚ್ಚಿನ ನೀರಿನ ಅಂಶ ಮತ್ತು ಪುನಶ್ಚೇತನಗೊಳಿಸುವ ಪೋಷಕಾಂಶಗಳನ್ನು ಹೊಂದಿರುವ ಹಣ್ಣುಗಳು ಬೇಸಿಗೆ ತಿಂಗಳಲ್ಲಿ ವರದಾನವಾಗಿದೆ.

Muskmelon Benefits: ಬೇಸಿಗೆಯಲ್ಲಿ ಹೆಚ್ಚು ಕರ್ಬೂಜ ಹಣ್ಣುಗಳನ್ನು ಸೇವಿಸಲು ಏನೆಲ್ಲ ಉಪಯೋಗವಿದೆ ಗೊತ್ತಾ?
ಕರ್ಬೂಜ ಹಣ್ಣು
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Apr 12, 2022 | 5:05 PM

ಬೇಸಿಗೆ ಶುರುವಾಗಿರುವುದರಿಂದ ಇನ್ನು ಹೆಚ್ಚೆಚ್ಚು ನೀರು ಹಾಗೂ ನೀರನಾಂಶ ಇರುವ ಆಹಾರವನ್ನು ಸೇವಿಸಲು ಮರೆಯಬೇಡಿ. ಬೇಸಿಗೆಯ ತಿಂಗಳುಗಳು ಆಯಾಸವಾಗಬಹುದು. ಈ ಸಂದರ್ಭದಲ್ಲಿ ಸಾಕಷ್ಟು ನೀರು ಮತ್ತು ಹಣ್ಣಿನ ಸೇವನೆ ಸೇರಿದಂತೆ ಸರಿಯಾದ ಆಹಾರವು ದೇಹ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಹೆಚ್ಚಿನ ನೀರಿನ ಅಂಶ ಮತ್ತು ಪುನಶ್ಚೇತನಗೊಳಿಸುವ ಪೋಷಕಾಂಶಗಳನ್ನು ಹೊಂದಿರುವ ಹಣ್ಣುಗಳು ಬೇಸಿಗೆ ತಿಂಗಳುಗಳಲ್ಲಿ ವರದಾನವಾಗಿದೆ. ಕರ್ಬೂಜ ಹಣ್ಣು (Muskmelon Fruit) ಈ ಋತುವಿನಲ್ಲಿ ನಿಮ್ಮ ಆಹಾರದಲ್ಲಿ ಸೇರಿಸಬಹುದಾದ ಅತ್ಯಗತ್ಯ ಹಣ್ಣು. ಇದು ಹೈಡ್ರೇಟಿಂಗ್ ಮಾತ್ರವಲ್ಲದೇ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಕೂಡ ಒದಗಿಸುತ್ತದೆ. ಈ ಹಣ್ಣಿನ ಉಪಯೋಗಗಳ ಪಟ್ಟಿ ಹೀಗಿದೆ…

ಹೃದಯವನ್ನು ಆರೋಗ್ಯವಾಗಿಡುತ್ತದೆ: ಸೀಬೆಹಣ್ಣುಗಳು ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿವೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಹೃದಯ ಆರೋಗ್ಯಕರವಾಗಿರುತ್ತದೆ. ಅಲ್ಲದೆ, ಮಸ್ಕ್ಮೆಲೋನ್‌ನಲ್ಲಿರುವ ಅಡೆನೊಸಿನ್ ರಕ್ತವನ್ನು ತೆಳುಗೊಳಿಸುವ ಗುಣಗಳನ್ನು ಹೊಂದಿದೆ. ಇದು ಹೃದಯದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನಿಮ್ಮ ಕಣ್ಣುಗಳಿಗೆ ಒಳ್ಳೆಯದು: ಕರ್ಬೂಜ ಹಣ್ಣಿನಲ್ಲಿರುವ ಹೆಚ್ಚಿನ ಪ್ರಮಾಣದ ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ದೃಷ್ಟಿಯನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ ಮತ್ತು ಕಣ್ಣಿನ ಪೊರೆಗಳ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಮೂತ್ರಪಿಂಡದ ಕಲ್ಲುಗಳನ್ನು ತಡೆಯುತ್ತದೆ: ಆಕ್ಸಿಕಿನ್ ಎಂಬ ಕಸ್ತೂರಿಯ ಸಾರವು ಮೂತ್ರಪಿಂಡದ ಅಸ್ವಸ್ಥತೆಗಳು ಮತ್ತು ಕಲ್ಲುಗಳನ್ನು ಗುಣಪಡಿಸುವ ಗುಣಗಳನ್ನು ಸಾಬೀತುಪಡಿಸಿದೆ. ಕರ್ಬೂಜದಲ್ಲಿರುವ ಹೆಚ್ಚಿನ ನೀರಿನ ಅಂಶ ಮೂತ್ರಪಿಂಡಗಳನ್ನು ಶುದ್ಧೀಕರಿಸುತ್ತದೆ.

ದೇಹದ ಬೊಜ್ಜನ್ನು ಕರಗಿಸುತ್ತದೆ: ದೇಹದ ತೂಕ ಅಧಿಕವಾಗಿದ್ದರೆ ಕರ್ಬೂಜ ಹಣ್ಣನ್ನು ಹೆಚ್ಚಾಗಿ ಸೇವಿಸಿ. ಕರ್ಬೂಜ ಹಣ್ಣಿನಲ್ಲಿ ಇತರ ಹಣ್ಣುಗಳಿಗೆ ಹೋಲಿಸಿದರೆ ಬಹಳಷ್ಟು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಆಹಾರ ಸೇವನೆಗಳ ಮಧ್ಯೆ ಹಸಿವೆಯಿಂದ ಬಳಲುವವರು ಕರ್ಬೂಜ ಹಣ್ಣನ್ನು ಸೇವನೆ ಮಾಡಬಹುದು. ಇದರಲ್ಲಿರುವ ಅತಿ ಹೆಚ್ಚಿನ ನೀರಿನ ಅಂಶ ಮನುಷ್ಯನ ದೇಹ ಡಿ-ಹೈಡ್ರೇಟ್ ಆಗದಂತೆ ನೋಡಿಕೊಳ್ಳುತ್ತದೆ.

View this post on Instagram

A post shared by Lovneet Batra (@lovneetb)

ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ: ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕರ್ಬೂಜ ಹಣ್ಣುಒಳ್ಳೆಯ ಔಷಧಿ. ಇದರ ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಉಂಟಾದ ಅಸಿಡಿಟಿಯನ್ನು ದೂರ ಮಾಡಿ ಜೀರ್ಣ ಶಕ್ತಿಯನ್ನು ಹೆಚ್ಚುವಂತೆ ಮಾಡುತ್ತದೆ. ದೇಹದಲ್ಲಿ ನಾರಿನ ಅಂಶದ ಕೊರತೆ ಉಂಟಾದಾಗ ಮನುಷ್ಯನಿಗೆ ಮಲಬದ್ಧತೆಯ ಸಮಸ್ಯೆ ಕಾಡುತ್ತದೆ. ಆದರೆ ಕರ್ಬೂಜ ಹಣ್ಣಿನಲ್ಲಿರುವ ನಾರಿನ ಅಂಶಗಳು ದೇಹಕ್ಕೆ ಅಗತ್ಯವಾದ ನಾರಿನ ಅಂಶಗಳನ್ನು ಒದಗಿಸುವುದರ ಜೊತೆಗೆ ಮಲಬದ್ಧತೆಯನ್ನು ನಿವಾರಿಸುತ್ತದೆ.

ಸೌತೆಕಾಯಿ, ಕಲ್ಲಂಗಡಿ, ಕುಂಬಳಕಾಯಿ ಜಾತಿಗೆ ಸೇರಿದ ಕರ್ಬೂಜ ಹಣ್ಣನ್ನು ಕೆಲ ದೇಶಗಳ ಕಡೆ ತರಕಾರಿ ಗುಂಪಿಗೆ ಸೇರಿಸುತ್ತಾರೆ. ಮೊದಲು ಪರ್ಷಿಯಾ ದೇಶದಲ್ಲಿ ರೈತರ ಜೀವನೋಪಾಯಕ್ಕೆ ಎಂದು ಬೆಳೆದ ಈ ಹಣ್ಣುಗಳು ನಂತರ ಕ್ರಮೇಣವಾಗಿ ಬ್ರೆಜಿಲ್, ಅಮೇರಿಕಾ ದೇಶಗಳಲ್ಲಿ ಬಳಸಲ್ಪಟ್ಟಿತು. ಈಗ ಭಾರತದ ಹಲವು ರಾಜ್ಯಗಳಲ್ಲಿ ಈ ಹಣ್ಣನ್ನು ಬೆಳೆಯುತ್ತಾರೆ.

ಇದನ್ನೂ ಓದಿ: Bael Fruit or Wood Apple: ಬೇಸಿಗೆಯಲ್ಲಿ ಸಿಗುವ ಬೇಲದ ಹಣ್ಣು ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು ಅನೇಕ

Health Tips: ಹಣ್ಣುಗಳನ್ನು ಸೇವಿಸಲು ಸರಿಯಾದ ಸಮಯ ಯಾವುದು? ಇಲ್ಲಿದೆ ಮಾಹಿತಿ

Published On - 5:05 pm, Tue, 12 April 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ