ಕರ್ಬೂಜ ತಿಂದು ಅದರ ಬೀಜ ಎಸೆಯುತ್ತಿದ್ದೀರಾ? ಇವುಗಳ ಆರೋಗ್ಯ ಪ್ರಯೋಜನ ತಿಳಿದರೆ ಶಾಕ್ ಆಗ್ತೀರಾ!

ಕರ್ಬೂಜ ಅತ್ಯಂತ ದೇಹವನ್ನು ತಂಪಾಗಿಸುವುದಲ್ಲದೆ, ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಆದರೆ ಈ ಹಣ್ಣನ್ನು ತಿನ್ನುವಾಗ ನಾವು ಮಾಡುವ ದೊಡ್ಡ ತಪ್ಪು ಎಂದರೆ ಅದರೊಳಗಿನ ಬೀಜಗಳನ್ನು ಎಸೆಯುವುದು. ವಾಸ್ತವದಲ್ಲಿ ಈ ಬೀಜಗಳು ಹಣ್ಣಿಗಿಂತ ಹೆಚ್ಚು ಪೌಷ್ಟಿಕವಾಗಿರುತ್ತದೆ. ಅದಕ್ಕಾಗಿಯೇ ಇದನ್ನು ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ. ಹಾಗಾದರೆ ಇದು ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ ಮತ್ತು ಯಾವ ರೀತಿ ಸೇವನೆ ಮಾಡುವುದು ಬಹಳ ಉತ್ತಮ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕರ್ಬೂಜ ತಿಂದು ಅದರ ಬೀಜ ಎಸೆಯುತ್ತಿದ್ದೀರಾ? ಇವುಗಳ ಆರೋಗ್ಯ ಪ್ರಯೋಜನ ತಿಳಿದರೆ ಶಾಕ್ ಆಗ್ತೀರಾ!
Muskmelon Seeds Benefits
Image Credit source: Getty Images

Updated on: Jun 22, 2026 | 3:32 PM

ಕರ್ಬೂಜ ಹಣ್ಣು (Muskmelon) ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವುದಿಲ್ಲ ಆದರೆ ದೇಹಕ್ಕೆ ತಂಪು ನೀಡುವುದರಿಂದ ಇದರ ಜ್ಯೂಸ್ ಮಾಡಿ ಕುಡಿಯುತ್ತಾರೆ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದಾದ್ದರಿಂದ ಇದನ್ನು ಸೇವನೆ ಮಾಡಲು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಹೆಚ್ಚಿನವರು ಅದರ ಬೀಜಗಳು ಉಪಯೋಗವಿಲ್ಲವೆಂದು ಭಾವಿಸಿ ಅದನ್ನು ಎಸೆಯುತ್ತಾರೆ. ವಾಸ್ತವದಲ್ಲಿ ಕರ್ಬೂಜ ಬೀಜಗಳಲ್ಲಿ ಅನೇಕ ರೀತಿಯ ಪೋಷಕಾಂಶಗಳು ಅಡಕವಾಗಿದ್ದು ಪೋಷಕಾಂಶದ ಖಜಾನೆಯಾಗಿದೆ, ಹಾಗಾದರೆ ಇದು ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ ಮತ್ತು ಯಾವ ರೀತಿ ಸೇವನೆ ಮಾಡುವುದು ಬಹಳ ಉತ್ತಮ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೃದಯದ ಆರೋಗ್ಯಕ್ಕೆ ಉತ್ತಮ: ಕರ್ಬೂಜ ಬೀಜಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಪೊಟ್ಯಾಸಿಯಂ ಸಮೃದ್ಧವಾಗಿವೆ. ಇವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಹಾಗೂ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಇದರಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ.

ಪ್ರೋಟೀನ್‌ನ ಉತ್ತಮ ಮೂಲ: ಸಸ್ಯಹಾರಿಗಳಿಗೆ ಕರ್ಬೂಜದ ಬೀಜಗಳು ಉತ್ತಮ ಪ್ರೋಟೀನ್ ಮೂಲವಾಗಿದ್ದು ದೇಹದ ಸ್ನಾಯುಗಳ ಬೆಳವಣಿಗೆ, ಶಕ್ತಿಯ ಉತ್ಪಾದನೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಈ ಬೀಜಗಳಲ್ಲಿ ಜಿಂಕ್, ಮೆಗ್ನೀಷಿಯಂ ಮತ್ತು ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇವು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿ ಸೋಂಕುಗಳು ಹಾಗೂ ವೈರಲ್ ಕಾಯಿಲೆಗಳ ವಿರುದ್ಧ ಹೋರಾಡಲು ನೆರವಾಗುತ್ತವೆ.

ಇದನ್ನೂ ಓದಿ: ದಿನಕ್ಕೆ ಒಂದು ಮುಷ್ಟಿ ಕಡಲೆಕಾಯಿ ನಮ್ಮ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆಯೇ?

ಜೀರ್ಣಕ್ರಿಯೆ ಮತ್ತು ಚರ್ಮದ ಆರೈಕೆಗೆ ಒಳ್ಳೆಯದು: ಕರ್ಬೂಜ ಬೀಜಗಳಲ್ಲಿ ಫೈಬರ್ ಹೆಚ್ಚಿರುವುದರಿಂದ ಜೀರ್ಣಕ್ರಿಯೆ ಸುಧಾರಿಸಿ ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ವಿಟಮಿನ್ ಎ, ಇ ಮತ್ತು ಇತರ ಪೋಷಕಾಂಶಗಳು ಚರ್ಮದ ಕಾಂತಿಯನ್ನು ಹೆಚ್ಚಿಸಿ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.

ಆಹಾರದಲ್ಲಿ ಹೇಗೆ ಸೇರಿಸಬೇಕು?

ಕರ್ಬೂಜ ಬೀಜಗಳನ್ನು ಚೆನ್ನಾಗಿ ತೊಳೆದು ಒಣಗಿಸಿದ ಬಳಿಕ ಸ್ವಲ್ಪ ಹುರಿದು ಸೇವಿಸಬಹುದು. ಇವುಗಳನ್ನು ಸ್ಮೂಥಿ, ಮೊಸರು, ಸಲಾಡ್ ಅಥವಾ ಸೂಪ್‌ಗಳಿಗೆ ಸೇರಿಸಬಹುದು. ಆರೋಗ್ಯಕರ ಸ್ನ್ಯಾಕ್ ಆಗಿಯೂ ಬಳಸಬಹುದು. ಕರ್ಬೂಜ ಹಣ್ಣಿನಷ್ಟೇ ಅದರ ಬೀಜಗಳೂ ಆರೋಗ್ಯಕರವಾಗಿವೆ. ಆದ್ದರಿಂದ ಮುಂದಿನ ಬಾರಿ ಕರ್ಬೂಜ ತಿನ್ನುವಾಗ ಬೀಜಗಳನ್ನು ಎಸೆಯದೇ ಆಹಾರದಲ್ಲಿ ಸೇರಿಸಿ ಆರೋಗ್ಯದ ಲಾಭ ಪಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us