AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಮನೆಯೊಳಗೆ ಚಪ್ಪಲಿ ತರುವ ಅಭ್ಯಾಸ ಇದೆಯೇ, ಮಕ್ಕಳ ಬ್ರೈನ್ ಡ್ಯಾಮೇಜ್ ಆಗಬಹುದು ಎಚ್ಚರ

ಮನೆಯೊಳಗೆ ಚಪ್ಪಲಿ ತರುವ ಅಭ್ಯಾಸ ನಿಮಗೂ ಇದೆಯೇ? ಪಟ್ಟಣ ಪ್ರದೇಶಗಳಲ್ಲಿ ವಾಸ ಮಾಡುವ ಜನ ಗ್ರಾನೈಟ್ ಗಳಿಂದ ಪಾದಗಳನ್ನು ರಕ್ಷಿಸಲು, ಇನ್ನು ಕೆಲವರು ಫ್ಯಾಷನ್ ಪ್ರೀಯರಾಗಿ ತಮ್ಮ ಮನೆಯೊಳಗೆ ಚಪ್ಪಲಿ ಧರಿಸಿ ತಿರುಗಾಡಲು ಆರಂಭಿಸಿದ್ದರು. ಈಗ ಇದೆಲ್ಲಾ ಸಾಮಾನ್ಯವಾಗಿ ಬಿಟ್ಟಿದೆ. ಹಾಗಾಗಿ ಈ ವಿಷಯ ನಮಗೆ ಅಷ್ಟೊಂದು ಗಂಭೀರ ಎಂದು ಎನಿಸದಿರಬಹುದು. ಆದರೆ ನಾವು ತಿಳಿದುಕೊಳ್ಳಬೇಕಾದ ಮುಖ್ಯ ವಿಷಯಗಳಲ್ಲಿ ಇದು ಒಂದಾಗಿದೆ. ಹಾಗಾದರೆ ಯಾಕೆ ಮನೆಯೊಳಗೆ ಚಪ್ಪಲಿಗಳನ್ನು ತೆಗೆದುಕೊಂಡು ಹೋಗಬಾರದು? ಎಂಬುದಕ್ಕೆ ಇಲ್ಲಿದೆ ವೈದ್ಯರ ಉತ್ತರ.

Health Tips: ಮನೆಯೊಳಗೆ ಚಪ್ಪಲಿ ತರುವ ಅಭ್ಯಾಸ ಇದೆಯೇ, ಮಕ್ಕಳ ಬ್ರೈನ್ ಡ್ಯಾಮೇಜ್ ಆಗಬಹುದು ಎಚ್ಚರ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Sep 06, 2024 | 12:08 PM

Share

ಮನೆಯೊಳಗೆ ಚಪ್ಪಲಿ ತರುವ ಅಭ್ಯಾಸ ನಿಮಗೂ ಇದೆಯೇ? ಹಾಗಾದರೆ ನೀವು ಈ ವಿಷಯವನ್ನು ತಿಳಿಯಬೇಕು. ಹಿಂದೆ ಚಪ್ಪಲಿಗಳನ್ನು ಮನೆಯ ಹೊರಗೆ ಇಡುವ ಸಂಪ್ರದಾಯವಿತ್ತು. ನಮ್ಮ ಜೊತೆಯೇ ಊರು ತಿರುಗಿ ಬಂದರೂ ಕೂಡ ನಮ್ಮ ಪಾದರಕ್ಷೆಗಳಿಗೆ ಮನೆಯೊಳಕ್ಕೆ ಪ್ರವೇಶವಿರಲಿಲ್ಲ. ಆದರೆ ಕಾಲ ಬದಲಾದಂತೆ, ಸಣ್ಣ ಮನೆಯಿರುವವರು, ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸುವ ಜನ, ಬಾಡಿಗೆಯ ಮನೆಯಲ್ಲಿ ಇರುವವರು ತಮ್ಮ ಚಪ್ಪಲಿಗಳನ್ನು ಮನೆಯ ಒಳಗೆ ಸಣ್ಣ ಜಾಗ ಮಾಡಿ ಇಡುತ್ತಿದ್ದರು. ಇನ್ನು ಪಟ್ಟಣ ಪ್ರದೇಶಗಳಲ್ಲಿ ವಾಸ ಮಾಡುವ ಜನ ಗ್ರಾನೈಟ್ ಗಳಿಂದ ಪಾದಗಳನ್ನು ರಕ್ಷಿಸಲು, ಇನ್ನು ಕೆಲವರು ಫ್ಯಾಷನ್ ಪ್ರೀಯರಾಗಿ ತಮ್ಮ ಮನೆಯೊಳಗೆ ಚಪ್ಪಲಿ ಧರಿಸಿ ತಿರುಗಾಡಲು ಆರಂಭಿಸಿದರು. ಈಗ ಇದೆಲ್ಲಾ ಸಾಮಾನ್ಯವಾಗಿ ಬಿಟ್ಟಿದೆ. ಹಾಗಾಗಿ ಈ ವಿಷಯ ನಮಗೆ ಅಷ್ಟೊಂದು ಗಂಭೀರ ಎಂದು ಎನಿಸದಿರಬಹುದು. ಆದರೆ ನಾವು ತಿಳಿದುಕೊಳ್ಳಬೇಕಾದ ಮುಖ್ಯ ವಿಷಯಗಳಲ್ಲಿ ಇದು ಒಂದಾಗಿದೆ. ಯಾಕೆ ಮನೆಯೊಳಗೆ ಚಪ್ಪಲಿಗಳನ್ನು ತೆಗೆದುಕೊಂಡು ಹೋಗಬಾರದು? ಎಂಬುದಕ್ಕೆ ಇಲ್ಲಿದೆ ವೈದ್ಯರ ಉತ್ತರ.

ಬ್ರೈನ್ ಡ್ಯಾಮೇಜ್ ಆಗಬಹುದು ಎಚ್ಚರ

ಡಾ. ರಾಹುಲ್ ದೇವರಾಜ್ ಅವರು ಹೇಳುವ ಪ್ರಕಾರ ನಾವು ಪ್ರತಿದಿನ ಚಪ್ಪಲಿ ಮತ್ತು ಶೂಗಳನ್ನು ಮನೆಯೊಳಗೆ ತರುವುದರಿಂದ ಅದರಲ್ಲಿ ಭಯಾನಕ ಬ್ಯಾಕ್ಟೀರಿಯಾಗಳಾದ ಇ.ಕೊಲೈ (E.coli) ಮತ್ತು ಮರ್ಸ (MRSA) ಇರುತ್ತದೆ. ಇದರ ಜೊತೆಗೆ ಬಹಳಷ್ಟು ವೈರಸ್ ಮತ್ತು ಅಪಾಯಕಾರಿ ಅಂಶಗಳಿರುತ್ತವೆ. ಇದರಿಂದ ನಿಮ್ಮ ಮನೆಯಲ್ಲಿರುವವರು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವುದು, ಹೊಟ್ಟೆ ಕೆಡುವುದು ಆಗುತ್ತದೆ. ಮನೆಯಲ್ಲಿ ಮಕ್ಕಳಿದ್ದು ಅವರಿಗೂ ಇದು ಅಪಾಯಕಾರಿಯಾಗಬಹುದು. ಇದರಿಂದ ಅವರ ಬ್ರೈನ್ ಡ್ಯಾಮೇಜ್ ಕೂಡ ಆಗಬಹುದು. ಹಾಗಾಗಿ ಆದಷ್ಟು ನಿಮ್ಮ ಚಪ್ಪಲಿ ಮತ್ತು ಶೂಗಳನ್ನು ಮನೆಯ ಹೊರಗೆ ಬಿಡಿ. ಜೊತೆಗೆ ಚಪ್ಪಲಿ ಇಡುವ ಜಾಗವನ್ನು ಮನೆಯ ಒಳ ಭಾಗದಲ್ಲಿ ಮಾಡಬೇಡಿ ಎಂದಿದ್ದಾರೆ.

ಇದನ್ನೂ ಓದಿ: ಮಳೆಗಾಲದಲ್ಲಿ ತಪ್ಪಿಸಬೇಕಾದ ಆಹಾರಗಳಿವು

ಈ ಕಾರಣಗಳಿಂದಲೇ ನಮ್ಮ ಹಳೆಯವರು ಚಪ್ಪಲಿಗಳನ್ನು ಮನೆಯ ಒಳಗೆ ತರುತ್ತಿರಲಿಲ್ಲ. ನಿಮಗೂ ನಿಮ್ಮ ಕುಟುಂಬಕ್ಕೂ ತೊಂದರೆ ಆಗಬಾರದು ಎಂಬ ಕಾಳಜಿ ಇದ್ದಲ್ಲಿ ಇದನ್ನು ಪಾಲನೆ ಮಾಡಲು ಪ್ರಯತ್ನಿಸಿ. ಇದರಿಂದ ಎಲ್ಲರ ಆರೋಗ್ಯವೂ ಚೆನ್ನಾಗಿ ಇರುತ್ತದೆ.

ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ