ಫಾಸ್ಟ್ ಆಗಿ ಊಟ ಮಾಡುವ ಅಭ್ಯಾಸದಿಂದ ದೇಹದ ತೂಕ ಹೆಚ್ಚಾಗುತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಕೆಲಸದ ನಡುವೆ ಸಮಯದ ಅಭಾವದಿಂದ ಜನರು ಸರಿಯಾಗಿ ಊಟ, ತಿಂಡಿ ಮಾಡುವುದಿಲ್ಲ. ಮಾಡುವುದಾದರೂ ಕೂಡ ಬೇಗ ಬೇಗನೆ ತಿನ್ನುತ್ತಾರೆ. ಆದರೆ ಈ ಅಭ್ಯಾಸ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ತಿಳಿದಿದೆಯೇ? ಹೌದು, ವೇಗವಾಗಿ ಊಟ ಮಾಡುವುದು ನಾನಾ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ, ಹಾಗಾದರೆ ಇದನ್ನು ತಡೆಯಲು ಏನು ಮಾಡಬಹುದು, ಇದರ ಬದಲಾಗಿ ಆರೋಗ್ಯಕರ ಅಭ್ಯಾಸಗಳು ಬೆಳೆಸಿಕೊಳ್ಳಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಫಾಸ್ಟ್ ಆಗಿ ಊಟ ಮಾಡುವ ಅಭ್ಯಾಸದಿಂದ ದೇಹದ ತೂಕ ಹೆಚ್ಚಾಗುತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
Eating Fast, Gaining Weight: How to Break the Cycle
Image Credit source: Getty Images

Updated on: Apr 13, 2026 | 7:19 PM

ಇಂದಿನ ವೇಗದ ಜೀವನಶೈಲಿಯಲ್ಲಿ ಜನರು ಎಲ್ಲ ಕೆಲಸಗಳನ್ನು ಬೇಗ ಮುಗಿಸಲು ಪ್ರಯತ್ನಿಸುತ್ತಾರೆ. ಇದರಲ್ಲಿ ಊಟ ಮಾಡುವುದು ಕೂಡ ಹೊರತಾಗಿಲ್ಲ. ಕೆಲಸದ ಒತ್ತಡದಲ್ಲಿ ಊಟ, ತಿಂಡಿಯನ್ನು ಸರಿಯಾಗಿ ಮಾಡಲು ಕೂಡ ಸರಿಯಾಗಿ ಸಮಯವಿರುವುದಿಲ್ಲ. ಈ ರೀತಿ ಬದಲಾದ ಜೀವನಶೈಲಿಯಿಂದ ಹಲವರು ತ್ವರಿತವಾಗಿ ಅಂದರೆ ಫಾಸ್ಟ್ ಆಗಿ ಊಟ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಆದರೆ ಈ ಅಭ್ಯಾಸ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಅದರಲ್ಲಿಯೂ ಬೊಜ್ಜಿನ ಸಮಸ್ಯೆಯನ್ನು (Obesity) ಹೆಚ್ಚಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ, ಹೌದು ವೇಗವಾಗಿ ಊಟ ಮಾಡುವುದು ನಾನಾ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ, ಹಾಗಾದರೆ ಇದನ್ನು ತಡೆಯಲು ಏನು ಮಾಡಬಹುದು, ಇದರ ಬದಲಾಗಿ ಆರೋಗ್ಯಕರ ಅಭ್ಯಾಸಗಳು ಬೆಳೆಸಿಕೊಳ್ಳಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ವೇಗವಾಗಿ ಊಟ ಮಾಡುವುದರಿಂದ ಏನಾಗುತ್ತದೆ?

ಆರೋಗ್ಯ ತಜ್ಞರು ಹೇಳುವ ಪ್ರಕಾರ, ವೇಗವಾಗಿ ಊಟ ಮಾಡಿದಾಗ ದೇಹಕ್ಕೆ ಹೊಟ್ಟೆ ತುಂಬಿದ ಸೂಚನೆ ಸರಿಯಾಗಿ ತಲುಪುವುದಿಲ್ಲ. ಇದರಿಂದ ವ್ಯಕ್ತಿ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುತ್ತಾನೆ. ಇದರ ಪರಿಣಾಮವಾಗಿ ದೇಹದ ತೂಕ ಹೆಚ್ಚಾಗಿ, ಬೊಜ್ಜಿನ ಸಮಸ್ಯೆ ಉಂಟಾಗುತ್ತದೆ. ಅಷ್ಟೇಅಲ್ಲ, ಆಹಾರವನ್ನು ಸರಿಯಾಗಿ ಜಗಿದು ತಿನ್ನುವುದರಿಂದ ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ. ಇದರಿಂದ ಅಜೀರ್ಣ, ಹೊಟ್ಟೆ ಉಬ್ಬರ ಸಮಸ್ಯೆಗಳು ಉಂಟಾಗುತ್ತವೆ. ದೀರ್ಘಕಾಲ ಈ ಅಭ್ಯಾಸ ಮುಂದುವರಿದರೆ ಮೆಟಾಬಾಲಿಸಂ ಕಡಿಮೆಯಾಗುತ್ತದೆ ಮತ್ತು ದೇಹದಲ್ಲಿ ಕೊಬ್ಬು ಜಮೆಯಾಗಲು ಶುರುವಾಗುತ್ತದೆ.

ಇದನ್ನೂ ಓದಿ: ಮಹಿಳೆಯರೇ… ನೀವು ಬಲು ಬೇಗನೆ ವಯಸ್ಸಾದವರಂತೆ ಕಾಣಲು ಇದೇ ಕಾರಣವಂತೆ

ಇತರ ಆರೋಗ್ಯ ಸಮಸ್ಯೆಗಳು:

ತ್ವರಿತವಾಗಿ ಊಟ ಮಾಡುವವರು ಹೆಚ್ಚು ಕ್ಯಾಲೊರಿ ಸೇವಿಸುವ ಸಾಧ್ಯತೆ ಇರುವುದರಿಂದ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ. ಜೊತೆಗೆ ಇನ್ಸುಲಿನ್ ಅಸಮತೋಲನ ಉಂಟಾಗಿ ಟೈಪ್- 2 ಮಧುಮೇಹದ ಅಪಾಯ ಹೆಚ್ಚಬಹುದು. ಹಾರ್ಮೋನ್ ಅಸಮತೋಲನ ಮತ್ತು ದಣಿವು ಕೂಡ ಹೆಚ್ಚಾಗಬಹುದು.

ಹೇಗೆ ತಡೆಯಬೇಕು?

ಈ ಸಮಸ್ಯೆಯನ್ನು ತಪ್ಪಿಸಲು ನಿಧಾನವಾಗಿ, ಊಟವನ್ನು ಆಸ್ವಾದಿಸುತ್ತಾ ತಿನ್ನುವುದು ಬಹಳ ಮುಖ್ಯ. ಆಹಾರವನ್ನು ಯಾವಾಗಲು ಚೆನ್ನಾಗಿ ಅಗಿದು ತಿನ್ನಬೇಕು. ಮೊಬೈಲ್ ಅಥವಾ ಟಿವಿ ನೋಡುತ್ತಾ ಊಟ ಮಾಡುವುದನ್ನು ತಪ್ಪಿಸಬೇಕು. ಇದೆಲ್ಲದರ ಜೊತೆಗೆ ಊಟದ ನಡುವೆ ಸ್ವಲ್ಪ ವಿರಾಮ ತೆಗೆದುಕೊಳ್ಳುವುದು ಕೂಡ ಸಹಾಯಕವಾಗುತ್ತದೆ. ನಿಯಮಿತ ಸಮಯಕ್ಕೆ ಊಟ ಮಾಡುವುದು, ಸಮತೋಲನ ಆಹಾರ ಸೇವಿಸುವುದು ಮತ್ತು ಜಂಕ್ ಫುಡ್ ಕಡಿಮೆ ಮಾಡುವುದು ಮುಖ್ಯ. ಹಣ್ಣು, ತರಕಾರಿ, ಪ್ರೋಟೀನ್ ಮತ್ತು ಫೈಬರ್ ಇರುವ ಆಹಾರವನ್ನು ಒಳಗೊಂಡ ಡೈಟ್ ಅನುಸರಿಸಬೇಕು. ದಿನವೂ ವ್ಯಾಯಾಮ ಮತ್ತು ಸರಿಯಾಗಿ ನಿದ್ರೆ ಮಾಡುವುದರಿಂದ ಆರೋಗ್ಯ ಕಾಪಾಡಲು ಸಹಾಯವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us