AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

GLP-1 ಔಷಧಿ ನಿಜವಾಗಿಯೂ ಬೊಜ್ಜು ಕಡಿಮೆ ಮಾಡುತ್ತದೆಯೇ? ಕೇಂದ್ರ ಸರ್ಕಾರ ಇದಕ್ಕೆ ನಿಯಂತ್ರಣ ಹೇರಿರುವುದಕ್ಕೆ ಕಾರಣವೇನು?

GLP-1 ಔಷಧಿಗಳ ಬಗ್ಗೆ ನೀವು ಕೇಳಿರಬಹುದು. ಬೊಜ್ಜು ಒಂದು ಪ್ರಮುಖ ಜಾಗತಿಕ ಆರೋಗ್ಯ ಸವಾಲಾಗುತ್ತಿದ್ದು ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಈ ಔಷಧಿಗಳನ್ನು ಬಳಕೆ ಮಾಡಲಾಗುತ್ತಿದೆ. ಈ ಔಷಧಿಗಳು ಮುಖ್ಯವಾಗಿ ಟೈಪ್- 2 ಮಧುಮೇಹ ಮತ್ತು ಅತಿದಪ್ಪತನ ಅಂದರೆ ಒಬೆಸಿಟಿ ಚಿಕಿತ್ಸೆ ನೀಡಲು ಬಳಸಲಾಗುತ್ತವೆ. ಇದೀಗ ಭಾರತ ಸರ್ಕಾರವು ಕೂಡ ಅದರ ಅಪಾಯಗಳು ಹಾಗೂ ನಿಯಂತ್ರಣ ಕುರಿತು ಮಹತ್ವದ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಹಾಗಾದರೆ GLP-1 ಔಷಧಿ ಎಂದರೇನು, ಇದನ್ನು ಹೇಗೆ ಬಳಕೆ ಮಾಡಬೇಕು ಎಂಬುದರ ಕುರಿತ ಮಾಹಿತಿ ಸ್ಟೋರಿಯಲ್ಲಿದೆ.

GLP-1 ಔಷಧಿ ನಿಜವಾಗಿಯೂ ಬೊಜ್ಜು ಕಡಿಮೆ ಮಾಡುತ್ತದೆಯೇ? ಕೇಂದ್ರ ಸರ್ಕಾರ ಇದಕ್ಕೆ ನಿಯಂತ್ರಣ ಹೇರಿರುವುದಕ್ಕೆ ಕಾರಣವೇನು?
GLP-1 Medications: Risks, Benefits, and Prescription RequirementsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Apr 03, 2026 | 7:13 PM

Share

ಇತ್ತೀಚಿನ ದಿನಗಳಲ್ಲಿ ಬೊಜ್ಜು (Obesity) ಒಂದು ಪ್ರಮುಖ ಜಾಗತಿಕ ಆರೋಗ್ಯ ಸವಾಲಾಗುತ್ತಿದ್ದು ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಹರಸಾಹಸ ಪಡುವಂತಾಗಿದೆ. ಇನ್ನು, ಬೊಜ್ಜು ಕಡಿಮೆ ಮಾಡಲು ಕೆಲವರು ಸಾಮಾನ್ಯವಾಗಿ ಸೇವಿಸುವ ಕೆಲವು ಔಷಧಿಗಳು ಅಡ್ಡಪರಿಣಾಮಗಳನ್ನು ಉಂಟುಮಾಡುತ್ತಿವೆ. ಅದರಲ್ಲಿ GLP-1 ರಿಸೆಪ್ಟರ್ ಅಗೋನಿಸ್ಟ್‌ಗಳು ಎಂಬ ಔಷಧಿ ಕೂಡ ಒಂದು. ಈ ಔಷಧಿಯನ್ನು ಬಳಸುವವರಿಗೆ ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ (WHO) ಜಾಗತಿಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತ್ತು. ಇದೀಗ ಭಾರತ ಸರ್ಕಾರವು ಇತ್ತೀಚೆಗೆ GLP-1 (Glucagon-Like Peptide-1 agonist) ಔಷಧಿಗಳ ಬಳಕೆ, ಅದರ ಅಪಾಯಗಳು ಹಾಗೂ ನಿಯಂತ್ರಣ ಕುರಿತು ಮಹತ್ವದ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಈ ಔಷಧಿಗಳು ಮುಖ್ಯವಾಗಿ ಟೈಪ್-2 ಮಧುಮೇಹ ಮತ್ತು ಅತಿದಪ್ಪತನ ಅಂದರೆ ಒಬೆಸಿಟಿ ಚಿಕಿತ್ಸೆ ನೀಡಲು ಬಳಸಲಾಗುತ್ತವೆ. ಹಾಗಾದರೆ GLP-1 ಔಷಧಿ ಎಂದರೇನು, ಇದನ್ನು ಹೇಗೆ ಬಳಕೆ ಮಾಡಬೇಕು ಎಂಬುದರ ಕುರಿತ ಮಾಹಿತಿ ಸ್ಟೋರಿಯಲ್ಲಿದೆ.

GLP-1 ಔಷಧಿಗಳು ಎಂದರೇನು?

ಸಾಮಾನ್ಯವಾಗಿ ಈ GLP-1 ಔಷಧಿಗಳು ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಜೊತೆಗೆ ತೂಕ ಇಳಿಕೆಸಿಕೊಳ್ಳುವವರಿಗೂ ಸಹ ಇದು ಸಹಕಾರಿಯಾಗಿದೆ.

ಇದನ್ನೂ ಓದಿ: ಆತ್ಮಹತ್ಯೆ ಯೋಚನೆ, ಖಿನ್ನತೆ; ತೂಕ ಇಳಿಸುವ ಔಷಧಿಗಳ ಅಡ್ಡಪರಿಣಾಮದ ಬಗ್ಗೆ WHO ಎಚ್ಚರಿಕೆ

ವೈದ್ಯರ ಸಲಹೆ ಇಲ್ಲದೆಯೇ ತೆಗೆದುಕೊಳ್ಳಬಹುದೇ?

ತಜ್ಞರ ಪ್ರಕಾರ, ಈ ಔಷಧಿಗಳನ್ನು ವೈದ್ಯರ ಸಲಹೆಯಿಲ್ಲದೆ ಬಳಸುವುದು ಅಪಾಯಕಾರಿಯಾಗಿದೆ. ಇವುಗಳಿಂದ ಕೆಲವು ಗಂಭೀರ ಪಾರ್ಶ್ವ ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ, ಈ ಔಷಧಿಗಳನ್ನು ಕಡ್ಡಾಯವಾಗಿ ಅರ್ಹ ವೈದ್ಯರ ಮೇಲ್ವಿಚಾರಣೆಯಲ್ಲೇ ತೆಗೆದುಕೊಳ್ಳಬೇಕು. ಅದರಲ್ಲಿಯೂ ಭಾರತದಲ್ಲಿ GLP-1 ಔಷಧಿಗಳನ್ನು ಯಾವುದೇ ಮೆಡಿಕಲ್ ಅಂಗಡಿಗಳಲ್ಲಿ ಸ್ವತಃ ಖರೀದಿಸಲು ಅವಕಾಶ ಇಲ್ಲ. ಇವುಗಳನ್ನು ಎಂಡೋಕ್ರಿನಾಲಜಿಸ್ಟ್‌ಗಳು, ಇಂಟರ್ನಲ್ ಮೆಡಿಸಿನ್ ತಜ್ಞರು, ಕಾರ್ಡಿಯಾಲಜಿಸ್ಟ್‌ಗಳು ಮಾತ್ರ ನೀಡಬಹುದಾಗಿದೆ. ರೋಗಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೈಗೊಂಡ ಕ್ರಮವಾಗಿದ್ದು, ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ರಾಜ್ಯ ಔಷಧ ನಿಯಂತ್ರಕರ ಜೊತೆಗೂಡಿ ಈ ಔಷಧಿಗಳ ಮೇಲಿನ ನಿಯಂತ್ರಣವನ್ನು ಇನ್ನಷ್ಟು ಬಲಪಡಿಸಿದೆ. ವಿವಿಧ ಸ್ಥಳಗಳಲ್ಲಿ ಪರಿಶೀಲನೆಗಳನ್ನು ನಡೆಸಲಾಗುತ್ತಿದ್ದು, ನಿಯಮ ಉಲ್ಲಂಘನೆ ಮಾಡಿದರೆ, ಲೈಸೆನ್ಸ್ ರದ್ದುಪಡಿಸುವುದು, ದಂಡ ವಿಧಿಸುವುದು, ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ.

ಹಾಗಾಗಿ, GLP-1 ಔಷಧಿಗಳು ಪರಿಣಾಮಕಾರಿ ಆಗಿದ್ದರೂ, ಅವುಗಳನ್ನು ಸ್ವಯಂಪ್ರೇರಿತವಾಗಿ ಬಳಸಬಾರದು. ಯಾವುದೇ ಚಿಕಿತ್ಸೆ ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅತ್ಯಂತ ಮುಖ್ಯ. ಒಟ್ಟಿನಲ್ಲಿ, ಈ ಔಷಧಿಗಳ ಸರಿಯಾದ ಬಳಕೆ ಆರೋಗ್ಯಕ್ಕೆ ಸಹಾಯಕವಾಗಬಹುದು, ಆದರೆ ಗೊತ್ತಿಲ್ಲದೆಯೇ, ನೀವಾಗಿಯೇ ಬಳಸಿದರೆ ಗಂಭೀರ ಸಮಸ್ಯೆಗಳಿಗೂ ಕಾರಣವಾಗಬಹುದು. ಆದ್ದರಿಂದ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More