Palm Rubbing Benefits: ಅಂಗೈ ಉಜ್ಜುವ ಅಭ್ಯಾಸವಿದ್ದರೆ ನಿಮಗಿಂತ ಆರೋಗ್ಯವಂತರಿಲ್ಲ!
ಹಿರಿಯರು ಹೇಳಿದಂತೆ ಬೆಳಿಗ್ಗೆ ಎದ್ದ ಕೂಡಲೇ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ನಿಮ್ಮ ಎರಡೂ ಅಂಗೈಗಳನ್ನು ಉಜ್ಜುವುದು. ಆಗ ಉತ್ಪತ್ತಿಯಾಗುವ ಶಾಖವನ್ನು ನಿಮ್ಮ ಕಣ್ಣುಗಳ ಮೇಲಿಟ್ಟು ಬಿಸಿ ಮಾಡಿ. ಇದನ್ನು ಮಾಡುವುದರಿಂದ ನೀವು ನಿದ್ದೆಯಿಂದ ಸರಿಯಾಗಿ ಎಚ್ಚರಗೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಈ ಅಭ್ಯಾಸವು ನಿಮಗೆ ದೇಹವು ತಕ್ಷಣದ ಶಕ್ತಿಯನ್ನು ಪಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಮುಖ್ಯವಾಗಿ ಇದು ಕಣ್ಣುಗಳಿಗೆ ಒಳ್ಳೆಯದು. ಜೊತೆಗೆ ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಹಾಗಾದರೆ ನಿಮ್ಮ ಕೈಗಳನ್ನು ಉಜ್ಜುವುದರಿಂದ ಯಾವ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಅಂಗೈ ಉಜ್ಜುವ ಅಭ್ಯಾಸ ನಿಮಗಿದೆಯೇ? ಇದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ? ಹಿರಿಯರು ಹೇಳಿದಂತೆ ಬೆಳಿಗ್ಗೆ ಎದ್ದ ಕೂಡಲೇ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ನಿಮ್ಮ ಎರಡೂ ಅಂಗೈಗಳನ್ನು ಉಜ್ಜುವುದು. ಆಗ ಉತ್ಪತ್ತಿಯಾಗುವ ಶಾಖವನ್ನು ನಿಮ್ಮ ಕಣ್ಣುಗಳ ಮೇಲಿಟ್ಟು ಬಿಸಿ ಮಾಡಿ. ಇದನ್ನು ಮಾಡುವುದರಿಂದ ನೀವು ನಿದ್ದೆಯಿಂದ ಸರಿಯಾಗಿ ಎಚ್ಚರಗೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಈ ಅಭ್ಯಾಸವು ನಿಮಗೆ ದೇಹವು ತಕ್ಷಣದ ಶಕ್ತಿಯನ್ನು ಪಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಮುಖ್ಯವಾಗಿ ಇದು ಕಣ್ಣುಗಳಿಗೆ ಒಳ್ಳೆಯದು. ಜೊತೆಗೆ ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಹಾಗಾದರೆ ನಿಮ್ಮ ಕೈಗಳನ್ನು ಉಜ್ಜುವುದರಿಂದ ಯಾವ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
- ಬೆಳಿಗ್ಗೆ ಎದ್ದ ಕೂಡಲೇ ಎರಡೂ ಅಂಗೈಗಳನ್ನು ಉಜ್ಜುವುದರಿಂದ ನಿಮ್ಮ ಉದ್ವೇಗ ಮತ್ತು ಒತ್ತಡ ಕಡಿಮೆಯಾಗುತ್ತದೆ. ಅಂಗೈಗಳನ್ನು ಉಜ್ಜುವುದರಿಂದ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಇದು ಮೆದುಳಿಗೆ ಶಾಂತತೆ ಮತ್ತು ವಿಶ್ರಾಂತಿಯನ್ನು ನೀಡುತ್ತದೆ. ಈ ಸಣ್ಣ ಚಟುವಟಿಕೆಯಿಂದ ನೀವು ಮಾನಸಿಕ ಒತ್ತಡದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.
- ನೀವು ಬೆಳಿಗ್ಗೆ ಬೇಗನೆ ಎದ್ದು ಎರಡೂ ಅಂಗೈಗಳನ್ನು 2- 3 ನಿಮಿಷಗಳ ಕಾಲ ಉಜ್ಜಿದರೆ, ಮನಸ್ಸು ಹಗುರಾಗುತ್ತದೆ. ಯವಾಗಲೂ ಕ್ರಿಯಾಶೀಲರಾಗಿರಲು ಇದು ಸಹಾಯ ಮಾಡುತ್ತದೆ. ಜೊತೆಗೆ ಇದು ನಿಮ್ಮ ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ. ಅಲ್ಲದೆ ಈ ಅಭ್ಯಾಸ ನಿಮಗೆ ಕೆಲಸ ಮತ್ತು ಅಧ್ಯಯನದ ಮೇಲೆ ಗಮನ ಹರಿಸುವುದಕ್ಕೆ ಸುಲಭವಾಗುತ್ತದೆ.
- ಅಂಗೈಗಳನ್ನು ಉಜ್ಜುವುದು ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಒಂದು ವಿಷಯವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮ್ಮ ಅಂಗೈಗಳನ್ನು ಉಜ್ಜುವುದರಿಂದ ಮನಸ್ಥಿತಿ ಸುಧಾರಿಸುತ್ತದೆ. ನಮ್ಮ ಕೈಗಳನ್ನು 2 ನಿಮಿಷಗಳ ಕಾಲ ಬಿಗಿಯಾಗಿ ಉಜ್ಜುವುದರಿಂದ ಮೆದುಳಿನಲ್ಲಿ ಸಂತೋಷದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಸಂತೋಷದ ಹಾರ್ಮೋನುಗಳ ಪರಿಣಾಮದಿಂದಾಗಿ, ಮನಸ್ಥಿತಿ ಉತ್ತಮವಾಗಿರುತ್ತದೆ. ಕಿರಿಕಿರಿ ಕಡಿಮೆಯಾಗುತ್ತದೆ.
- ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಇಂದಿನಿಂದಲೇ ಈ 2 ನಿಮಿಷಗಳ ಅಭ್ಯಾಸವನ್ನು ಮಾಡಲು ಪ್ರಾರಂಭಿಸಿ. ನಿಮ್ಮ ಕೈಗಳನ್ನು ಉಜ್ಜುವುದು ನಿಮ್ಮ ಮನಸ್ಸನ್ನು ವಿಶ್ರಾಂತಿಗೊಳಿಸುತ್ತದೆ. ರಾತ್ರಿ ಮಲಗುವ ಮೊದಲು ನಿಮ್ಮ ಕೈಗಳನ್ನು ಉಜ್ಜುವುದರಿಂದ ಉತ್ತಮ ನಿದ್ರೆ ಮಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ರಾತ್ರಿ ಸಮಯದಲ್ಲಿ ಚಳಿ ಹೆಚ್ಚಾದರೆ ಕೈಗಳನ್ನು ಉಜ್ಜುವುದು ಉಷ್ಣತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಚಳಿಯಿಂದ ಆದ ಬೆರಳುಗಳ ಗಡಸುತನ ಕಡಿಮೆಯಾಗುತ್ತದೆ. ನಡುಕವೂ ದೂರವಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ