Menstrual Health: ಪಿರಿಯಡ್ಸ್ ಆಗಿಲ್ಲ ಅಂದರೆ ಈ ರೀತಿ ಮಾಡಿ
ನಮ್ಮ ಜೀವನಶೈಲಿ ಮತ್ತು ಆಹಾರದಲ್ಲಿ ಆಗುವಂತಹ ಬದಲಾವಣೆಗಳಿಂದ ಅನಿಯಮಿತ ಪಿರಿಯಡ್ಸ್ ಉಂಟಾಗಬಹುದು. ಆದರೆ ಒಂದು ತಿಂಗಳಾದರೂ ಮುಟ್ಟಾಗದಿದ್ದರೆ ಅಥವಾ ಮೂರು ತಿಂಗಳಾದರೂ ಆಗಿಲ್ಲ ಎಂದರೆ ಔಷಧಿಗಳ ಮೊರೆ ಹೋಗುವ ಬದಲು ಮನೆಯಲ್ಲಿಯೇ ಮಾಡಿದ ಈ ಕಷಾಯ ಕುಡಿಯುವುದರಿಂದ ಪಿರಿಯಡ್ಸ್ ಆಗುತ್ತದೆ.
Updated on: Sep 20, 2024 | 5:34 PM

ನಮ್ಮ ಜೀವನಶೈಲಿ ಮತ್ತು ಆಹಾರದಲ್ಲಿ ಆಗುವಂತಹ ಬದಲಾವಣೆಗಳಿಂದ ಅನಿಯಮಿತ ಪಿರಿಯಡ್ಸ್ ತುಂಬಾ ಸಾಮಾನ್ಯವಾಗಿದೆ. ಆದರೆ ಒಂದು ತಿಂಗಳಾದರೂ ಮುಟ್ಟಾಗದಿದ್ದರೆ ಅಥವಾ ಮೂರು ತಿಂಗಳಾದರೂ ಆಗಿಲ್ಲ ಎಂದರೆ ಔಷಧಿಗಳ ಮೊರೆ ಹೋಗುವ ಬದಲು ಮನೆಯಲ್ಲಿಯೇ ಮಾಡಿದ ಈ ಕಷಾಯ ಕುಡಿಯುವುದರಿಂದ ಪಿರಿಯಡ್ಸ್ ಆಗುತ್ತದೆ.

ಕೆಲವರಲ್ಲಿ ಹಾರ್ಮೋನುಗಳ ಬದಲಾವಣೆಗಳಿಂದ ಪಿರಿಯಡ್ಸ್ ದಿನಗಳಲ್ಲಿ ಏರುಪೇರಾಗುತ್ತದೆ. ಅದೇ ರೀತಿ, ಒತ್ತಡ, ಬೊಜ್ಜು, ಥೈರಾಯ್ಡ್, ಪಿಸಿಓಡಿ, ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ವಿವಿಧ ಕಾರಣಗಳಿಂದ ಅನಿಯಮಿತ ಪಿರಿಯಡ್ಸ್ ಉಂಟಾಗಬಹುದು.

ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಬಳಸಿಕೊಂಡು ಈ ಕಷಾಯವನ್ನು ಮಾಡಿ ಕುಡಿಯಬಹುದು. ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಇರುವುದಿಲ್ಲ. ಒಂದು ಪಾತ್ರೆಗೆ ಎರಡು ಗ್ಲಾಸ್ ನೀರು ಹಾಕಿ ಶುಂಠಿ, ಅಜ್ವಾನ, ಜೀರಿಗೆ, ಸೋಂಪು, ಚಕ್ಕೆ, ಅರಿಶಿನ ಪುಡಿ ಜೊತೆಗೆ ಬೆಲ್ಲವನ್ನು ಸೇರಿಸಿ.

ಈ ಎಲ್ಲಾ ಪದಾರ್ಥಗಳನ್ನು ಹಾಕಿ ಹತ್ತು ನಿಮಿಷ ಕುದಿಸಿ. ಎರಡು ಲೋಟ ನೀರು ಒಂದು ಲೋಟಕ್ಕೆ ಬರುವ ತನಕ ಅದನ್ನು ಕುದಿಸಿರಿ. ಅದನ್ನು ಸೋಸಿಕೊಂಡು ಒಂದು ಗ್ಲಾಸ್ ಗೆ ಹಾಕಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

ಈ ರೀತಿ ಎರಡರಿಂದ ಮೂರು ದಿನ ಕುಡಿದರೆ ಪಿರಿಯಡ್ಸ್ ಆಗುತ್ತದೆ. ಪಿಸಿಒಡಿ, ಪಿಸಿಒಎಸ್, ಅನಿಯಮಿತ ಮುಟ್ಟಿನ ಸಮಸ್ಯೆ ಇರುವವರು ಕೂಡ ಇದನ್ನು ಕುಡಿಯಬಹುದು. ಪದೇ ಪದೇ ಮುಟ್ಟಿನ ಸಮಸ್ಯೆ, ಹೊಟ್ಟೆ ನೋವು ಬರುತ್ತಿದ್ದರೆ ನಿಯಮಿತವಾಗಿ ಈ ಕಷಾಯವನ್ನು ಸೇವನೆ ಮಾಡಿ.

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.
Read More



