Psoriasis treatment: ಸೋರಿಯಾಸಿಸ್ ಕಾಯಿಲೆ ಹೇಗೆ ಬರುತ್ತೆ? ಪತಂಜಲಿ ಔಷಧಿಗಳಿಂದ ಸೈಡ್ ಎಫೆಕ್ಟ್ಸ್ ಇಲ್ಲದೇ ಚಿಕಿತ್ಸೆ

Patanjali Psoriasis treatment: ಪತಂಜಲಿ ಸಂಶೋಧನಾ ಸಂಸ್ಥೆಯು ಸೋರಿಯಾಸಿಸ್‌ಗೆ ಸೊರೊಗ್ರಿಟ್ ಮತ್ತು ದಿವ್ಯ ತೈಲದ ಪರಿಣಾಮಕಾರಿತ್ವವನ್ನು ಸಾಬೀತುಪಡಿಸಿದೆ. ಇದು ಆಯುರ್ವೇದ ಆಧಾರಿತ ಚಿಕಿತ್ಸೆಯಾಗಿದ್ದು, ಚರ್ಮದ ಉರಿಯೂತವನ್ನು ಕಡಿಮೆ ಮಾಡಿ, ರೋಗನಿರೋಧಕ ವ್ಯವಸ್ಥೆಯನ್ನು ಸಮತೋಲನಗೊಳಿಸುತ್ತದೆ. ಅಲೋಪತಿಯಿಂದ ಭಿನ್ನವಾಗಿ, ಇದು ದೀರ್ಘಕಾಲೀನ ಪರಿಹಾರ ನೀಡುತ್ತದೆ ಮತ್ತು ಅಡ್ಡಪರಿಣಾಮಗಳಿಂದ ಮುಕ್ತವಾಗಿದೆ. ಈ ಸಂಶೋಧನೆಯು "ಜರ್ನಲ್ ಆಫ್ ಇನ್ಫ್ಲಮೇಷನ್ ರಿಸರ್ಚ್" ನಲ್ಲಿ ಪ್ರಕಟವಾಗಿದೆ.

Psoriasis treatment: ಸೋರಿಯಾಸಿಸ್ ಕಾಯಿಲೆ ಹೇಗೆ ಬರುತ್ತೆ? ಪತಂಜಲಿ ಔಷಧಿಗಳಿಂದ ಸೈಡ್ ಎಫೆಕ್ಟ್ಸ್ ಇಲ್ಲದೇ ಚಿಕಿತ್ಸೆ
ಸೋರಿಯಾಸಿಸ್

Updated on: Apr 21, 2025 | 6:11 PM

ಸೋರಿಯಾಸಿಸ್ (Psoriasis) ಒಂದು ದೀರ್ಘಕಾಲದ ಮತ್ತು ನೋವಿನಿಂದ ಕೂಡಿದ ಒಂದು ಚರ್ಮ ರೋಗವಾಗಿದೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಈ ಕಾಯಿಲೆಗೆ ಒಳಗಾಗಿದ್ದಾರೆ. ಇದು ಆಟೊ ಇಮ್ಯೂನ್ ಡಿಸೀಸ್ (Auto Immune disease), ಅಂದರೆ ಸ್ವಯಂ ರೋಗನಿರೋಧಕ ಕಾಯಿಲೆ. ಅಂದರೆ, ದೇಹದ ರೋಗನಿರೋಧಕ ವ್ಯವಸ್ಥೆಯೇ ಚರ್ಮದ ಮೇಲೆ ಆಕ್ರಮಣ ಮಾಡುತ್ತದೆ. ಇದರಿಂದಾಗಿ ಚರ್ಮದ ಮೇಲೆ ಕೆಂಪು ದದ್ದುಗಳು, ತುರಿಕೆ ಮತ್ತು ಬಿಳಿ ಪದರಗಳು ಉಂಟಾಗುತ್ತವೆ. ಸಾಮಾನ್ಯವಾಗಿ ಅಲೋಪತಿಯಲ್ಲಿ (ಇಂಗ್ಲೀಷ್ ಮೆಡಿಸಿನ್) ಇದರ ಚಿಕಿತ್ಸೆಯು ರೋಗಲಕ್ಷಣಗಳನ್ನು ನಿಗ್ರಹಿಸುವುದಕ್ಕೆ ಮಾತ್ರ ಸೀಮಿತವಾಗಿರುತ್ತದೆ. ರೋಗಿಗೆ ತಾತ್ಕಾಲಿಕ ಪರಿಹಾರ ಮಾತ್ರವೇ ಸಿಗುತ್ತದೆ. ದೀರ್ಘಾವಧಿಯ ಪರಿಹಾರವನ್ನು ಈ ಮಾಡರ್ನ್ ಆಸ್ಪತ್ರೆಗಳಲ್ಲಿ ಪಡೆಯಲಾಗುವುದಿಲ್ಲ. ಇದೇ ಹೊತ್ತಲ್ಲಿ, ಪತಂಜಲಿ ಆಯುರ್ವೇದ ಸಂಸ್ಥೆಯು ಸೋರಿಯಾಸಿಸ್ ರೋಗಿಗಳಿಗೆ ಹೊಸ ಆಶಾಕಿರಣವಾಗಿ ಪರಿಣಮಿಸಿದೆ. ಈ ರೋಗಕ್ಕೆ ಪತಂಜಲಿಯಿಂದ ಔಷಧಗಳ ಆವಿಷ್ಕಾರ ಆಗಿದೆ.

ಪತಂಜಲಿ ಸಂಶೋಧನಾ ಸಂಸ್ಥೆ ನಡೆಸಿದ ಸಂಶೋಧನೆಯು ವಿಶ್ವಪ್ರಸಿದ್ಧ “ಟೇಲರ್ & ಫ್ರಾನ್ಸಿಸ್” (Taylor & Francis) ಗುಂಪಿನ ಜರ್ನಲ್ ಆಫ್ ಇನ್ಫ್ಲಮೇಷನ್ ರಿಸರ್ಚ್‌ನಲ್ಲಿ (Journal of Inflammation Research) ಪ್ರಕಟವಾಗಿದೆ. ಪತಂಜಲಿ ತಯಾರಿಸಿದ ಸೊರೊಗ್ರಿಟ್ ಟ್ಯಾಬ್ಲೆಟ್ ಮತ್ತು ದಿವ್ಯ ತೈಲವು ಸೋರಿಯಾಸಿಸ್ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿದೆ ಎಂದು ಈ ಸಂಶೋಧನೆ ತೋರಿಸುತ್ತದೆ. ಪತಂಜಲಿಯ ಆಚಾರ್ಯ ಬಾಲಕೃಷ್ಣ ಮಾತನಾಡಿ, ಪತಂಜಲಿ ವಿಜ್ಞಾನಿಗಳು ದೀರ್ಘಕಾಲದವರೆಗೆ ಸಂಶೋಧನೆ ನಡೆಸುವ ಮೂಲಕ ಸೋರಿಯಾಸಿಸ್‌ನ ಮೂಲವನ್ನು ತಲುಪಲು ಪ್ರಯತ್ನಿಸಿದ್ದಾರೆ. ಸೋರಿಯಾಸಿಸ್ ಒಂದು ದೀರ್ಘಕಾಲದ ಚರ್ಮದ ಕಾಯಿಲೆಯಾಗಿದ್ದು, ಇದರಲ್ಲಿ ಚರ್ಮದ ಮೇಲೆ ಬೆಳ್ಳಿಯಂತಹ ಹೊಳೆಯುವ ಹೊರಪದರ ಮತ್ತು ಕೆಂಪು ದದ್ದುಗಳು ಕಾಣಿಸಿಕೊಳ್ಳುತ್ತವೆ ಎಂದು ಅವರು ಹೇಳಿದರು. ಈ ದದ್ದುಗಳು ತುಂಬಾ ತುರಿಕೆಯಿಂದ ಕೂಡಿರುತ್ತವೆ.

ಇದನ್ನೂ ಓದಿ: ಪತಂಜಲಿ ಗುಲಾಬ್ ಶರ್ಬತ್; ಲಾಭಕ್ಕಿಂತ ಜನರ ಆರೋಗ್ಯ ಕಾಳಜಿಯ ಗುರಿ ಇಟ್ಟ ಬಾಬಾ ರಾಮದೇವ್

ಇದನ್ನೂ ಓದಿ
ರಾಷ್ಟ್ರಸೇವೆಯ ಮಂತ್ರದೊಂದಿಗೆ ಪತಂಜಲಿ ಕಟ್ಟಿದ ಬಾಬಾ ರಾಮದೇವ್
ಪತಂಜಲಿ ಗುಲಾಬ್ ಸಿರಪ್​​ನ ಪ್ರತಿ ಹನಿಯಲ್ಲೂ ‘ರಾಷ್ಟ್ರಸೇವೆ’
ಪಾನೀಯ ಉದ್ಯಮದಲ್ಲಿ ಸಂಚಲನ ಸೃಷ್ಟಿಸಿದ ಪತಂಜಲಿ ಗುಲಾಬ್ ಶರ್ಬತ್
ಪ್ರಪಂಚಾದ್ಯಂತ ಪತಂಜಲಿ ಉತ್ಪನ್ನಗಳಿಗೆ ಹೆಚ್ಚಿದ ಬೇಡಿಕೆ

ಅಲೋಪತಿ ಚಿಕಿತ್ಸೆಯಲ್ಲಿ ಸೋರಿಯಾಸಿಸ್ ರೋಗಲಕ್ಷಣಗಳಿಗಷ್ಟೇ ಪರಿಹಾರ

ಅಲೋಪತಿ ಚಿಕಿತ್ಸೆಯಲ್ಲಿ ಸೋರಿಯಾಸಿಸ್ ರೋಗದ ಲಕ್ಷಣಗಳು ಮಾತ್ರ ಕಡಿಮೆಯಾಗುತ್ತವೆ. ಇದರ ಜೊತೆಗೆ, ಅಲೋಪತಿಯ ಅಡ್ಡಪರಿಣಾಮಗಳು ಸಹ ಕಂಡುಬರುತ್ತವೆ. ಸೋರಿಯಾಸಿಸ್ ಒಂದು ಗಂಭೀರವಾದ ಆಟೊ ಇಮ್ಯೂನ್ ಕಾಯಿಲೆಯಾಗಿದ್ದು, ಇದರಲ್ಲಿ ರೋಗಿಯು ಅಸಹನೀಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಲ್ಲಿಯವರೆಗೆ ಅದಕ್ಕೆ ಶಾಶ್ವತ ಚಿಕಿತ್ಸೆ ಇರಲಿಲ್ಲ. ಈಗ ಪತಂಜಲಿಯು ಸೋರಿಯಾಸಿಸ್‌ನಂತಹ ಗುಣಪಡಿಸಲಾಗದ ಕಾಯಿಲೆಯನ್ನು ಸಹ ನೈಸರ್ಗಿಕ ಗಿಡಮೂಲಿಕೆಗಳ ಮೂಲಕ ಗುಣಪಡಿಸಬಹುದು ಎಂದು ಸಾಬೀತುಪಡಿಸಿದೆ.

ಸೋರಿಯಾಸಿಸ್​​ಗೆ ಪತಂಜಲಿಯ ಈ ಚಿಕಿತ್ಸೆಯು ಹೇಗೆ ಕೆಲಸ ಮಾಡುತ್ತದೆ?

ಸೊರೊಗ್ರಿಟ್ ಮತ್ತು ದಿವ್ಯ ತೈಲ ಎರಡೂ ಕೂಡ ಆಯುರ್ವೇದ ಔಷಧಿಗಳನ್ನು ಆಧರಿಸಿವೆ. ಇದರಲ್ಲಿ ಬಳಸುವ ಗಿಡಮೂಲಿಕೆಗಳು ಚರ್ಮದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮತ್ತು ದೇಹದ ರೋಗನಿರೋಧಕ ಶಕ್ತಿಯನ್ನು ಸಮತೋಲನಗೊಳಿಸುತ್ತದೆ. ಈ ಚಿಕಿತ್ಸೆಯು ರೋಗಲಕ್ಷಣಗಳನ್ನು ನಿವಾರಿಸುವುದಲ್ಲದೆ, ರೋಗದ ಮೂಲಕ್ಕೆ ಹೋಗಿ ಅದಕ್ಕೆ ಪರಿಹಾರ ಕೊಡುವ ಕೆಲಸ ಮಾಡುತ್ತದೆ. ಇದರಿಂದಾಗಿ ಸೋರಿಯಾಸಿಸ್​​ಗೆ ದೀರ್ಘಕಾಲೀನ ಪರಿಹಾರ ಸಾಧ್ಯವಾಗಿಸುತ್ತದೆ.

ಸೋರಿಯಾಸಿಸ್ ಚಿಕಿತ್ಸೆಗೆ ಅಲೋಪತಿಗಿಂತ ಪತಂಜಲಿ ಸುರಕ್ಷಿತ ಆಯ್ಕೆ

ಅಲೋಪತಿ ಔಷಧಿಗಳು ರೋಗಲಕ್ಷಣಗಳನ್ನು ನಿಗ್ರಹಿಸುವುದರ ಮೇಲೆ ಕೇಂದ್ರೀಕರಿಸುತ್ತವೆ. ಅವುಗಳ ಹಲವು ಅಡ್ಡಪರಿಣಾಮಗಳು ಸಹ ಕಂಡುಬರುತ್ತವೆ. ಪತಂಜಲಿ ತಯಾರಿಸಿದ ಈ ಆಯುರ್ವೇದ ಚಿಕಿತ್ಸೆಯು ನೈಸರ್ಗಿಕವಾಗಿದ್ದು, ಯಾವುದೇ ಅಡ್ಡಪರಿಣಾಮಗಳು ವರದಿಯಾಗಿಲ್ಲ. ಇದು ರೋಗಿಗೆ ದೈಹಿಕ ಮತ್ತು ಮಾನಸಿಕ ಮಟ್ಟದಲ್ಲಿ ಸಮತೋಲನವನ್ನು ನೀಡುತ್ತದೆ.

ಇದನ್ನೂ ಓದಿ: ಶಿಕ್ಷಣ, ಆರೋಗ್ಯ ಮಾತ್ರವಲ್ಲ, ಪತಂಜಲಿ ಗುಲಾಬ್ ಸಿರಪ್​​ನ ಪ್ರತಿ ಹನಿಯಲ್ಲೂ ‘ರಾಷ್ಟ್ರಸೇವೆ’

ಜಾಗತಿಕವಾಗಿ ಹೆಚ್ಚುತ್ತಿದೆ ಆಯುರ್ವೇದದ ಪ್ರಾಮುಖ್ಯತೆ

ಆಯುರ್ವೇದವು ಇನ್ನು ಮುಂದೆ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಅದರ ವೈಜ್ಞಾನಿಕ ಆಧಾರ ಮತ್ತು ಪರಿಣಾಮಕಾರಿ ಫಲಿತಾಂಶಗಳನ್ನು ಪ್ರಪಂಚದಾದ್ಯಂತ ಗುರುತಿಸಲಾಗುತ್ತಿರುವುದು ಅಂತಾರಾಷ್ಟ್ರೀಯ ಜರ್ನಲ್​​ನಲ್ಲಿ ಪ್ರಕಟವಾದ ಪತಂಜಲಿ ಸಂಶೋಧನಾ ವರದಿಯು ಒಂದು ನಿದರ್ಶನವಾಗಿದೆ. ಇದು ಭಾರತದ ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಗೆ ಸಿಕ್ಕ ದೊಡ್ಡ ಗೌರವ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ