ಗರ್ಭಪಾತ ಆದವರು ಯಾವ ರೀತಿಯ ಆಹಾರ ಸೇವನೆ ಮಾಡಬೇಕು? ತ್ವರಿತ ಪರಿಹಾರ ಸಿಗಲು ಇಲ್ಲಿದೆ ಸಲಹೆ

ಪ್ರತಿಯೊಬ್ಬ ಹೆಣ್ಣಿಗೂ ತಾಯ್ತನ ಎನ್ನುವುದು ಒಂದು ಸುಂದರ ಭಾವನೆ. ಆದರೆ ಎಲ್ಲರೂ ತಾಯಂದಿರಾಗಲು ಬಯಸುವುದಿಲ್ಲ. ಅದರಲ್ಲಿಯೂ ಇಂದಿನ ಪೀಳಿಗೆಯವರು ತಮ್ಮ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ಮಕ್ಕಳನ್ನು ಮಾಡಿಕೊಳ್ಳಲು ಬಯಸುವುದಿಲ್ಲ. ಹಾಗಾಗಿ ಕೆಲವೊಮ್ಮೆ, ಗರ್ಭಪಾತ ಸ್ವಯಂಪ್ರೇರಿತವಾಗಿರುತ್ತದೆ, ಮತ್ತೊಂದಿಷ್ಟು ಸಂದರ್ಭಗಳಲ್ಲಿ ಬಲವಂತವಾಗಿರುತ್ತದೆ. ಆದರೆ ಒಂದು ಹೆಣ್ಣು ಗರ್ಭಪಾತವಾದ ಮೇಲೆ ಕೆಲವು ಸಲಹೆಗಳನ್ನು ಪಾಲನೆ ಮಾಡಬೇಕಾಗುತ್ತದೆ. ಹಾಗಾದರೆ ಗರ್ಭಪಾತ ಆದವರು ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು? ತ್ವರಿತವಾಗಿ ಪರಿಹಾರ ಸಿಗಲು ಏನು ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಗರ್ಭಪಾತ ಆದವರು ಯಾವ ರೀತಿಯ ಆಹಾರ ಸೇವನೆ ಮಾಡಬೇಕು? ತ್ವರಿತ ಪರಿಹಾರ ಸಿಗಲು ಇಲ್ಲಿದೆ ಸಲಹೆ
Healing Foods After An Abortion

Updated on: Aug 29, 2025 | 5:25 PM

ಪ್ರತಿಯೊಬ್ಬ ಹೆಣ್ಣು ಕೂಡ ತಾಯ್ತನದ ವಿಶಿಷ್ಟ ಭಾವನೆಯನ್ನು ಆನಂದಿಸಲು ಬಯಸುತ್ತಾಳೆ. ಆದರೆ ಇದು ಎಲ್ಲರಿಗೂ ಅನ್ವಯವಾಗುವುದಿಲ್ಲ. ಏಕೆಂದರೆ ತಾಯಂದಿರಾಗಲು ಎಲ್ಲರೂ ಬಯಸುವುದಿಲ್ಲ. ಅದರಲ್ಲಿಯೂ ಇಂದಿನ ಪೀಳಿಗೆಯ ಅನೇಕ ಯುವತಿಯರು ತಮ್ಮ ವೃತ್ತಿಜೀವನದ ಆರಂಭಿಕ ಹಂತಗಳಲ್ಲಿ ಮಕ್ಕಳನ್ನು ಮಾಡಿಕೊಳ್ಳಲು ಬಯಸುವುದಿಲ್ಲ. ಬದಲಾಗಿ ಅವರು ತಮ್ಮದೇ ಆದ ಜೀವನವನ್ನು ನಡೆಸಲು ಬಯಸುತ್ತಾರೆ. ಇಂತಹ ಪ್ರಕ್ರಿಯೆಯಲ್ಲಿ, ಬೇಗನೆ ತಾಯಿಯಾಗಲು ಕೆಲವರು ಇಷ್ಟಪಡುವುದಿಲ್ಲ. ಹಾಗಾಗಿಯೇ ಗರ್ಭಪಾತ (Abortion) ಸ್ವಯಂಪ್ರೇರಣೆಯಿಂದಲೂ, ಇನ್ನು ಕೆಲವೊಮ್ಮೆ ಸಂದರ್ಭಗಳಿಗನುಗುಣವಾಗಿ ಆಗುತ್ತದೆ. ಹಾಗಾದರೆ ಗರ್ಭಪಾತ ಆದವರು ಯಾವ ರೀತಿಯ ಆಹಾರಗಳ ಸೇವನೆ (Healing Foods) ಮಾಡಬೇಕು? ತ್ವರಿತವಾಗಿ ಪರಿಹಾರ ಸಿಗಲು ಏನು ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರ

ಕಬ್ಬಿಣ ಮತ್ತು ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರಗಳನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದು ಸೋಂಕಿನ ಅಪಾಯವನ್ನು ತಡೆಯುತ್ತದೆ. ಇದು ರಕ್ತದಲ್ಲಿನ ಕೆಂಪು ರಕ್ತ ಕಣಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಹಾಗಾಗಿ ಖರ್ಜೂರ, ಬಾದಾಮಿ, ಪಾಲಕ್, ಆಲೂಗಡ್ಡೆ, ಕ್ಯಾರೆಟ್, ಸಿಟ್ರಸ್ ಹಣ್ಣು ಮತ್ತು ಸೇಬುಗಳನ್ನು ತಿನ್ನಬಹುದು.

ಫೋಲಿಕ್ ಆಮ್ಲ ಸಮೃದ್ಧವಾಗಿರುವ ಆಹಾರ

ಗರ್ಭಪಾತದ ನಂತರ, ದೇಹದಲ್ಲಿ ಕಬ್ಬಿಣದ ಕೊರತೆ ಇರುತ್ತದೆ. ಈ ಸಮಯದಲ್ಲಿ, ನೀವು ಫೋಲಿಕ್ ಆಮ್ಲ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಇದು ಖಿನ್ನತೆಯಿಂದ ಚೇತರಿಸಿಕೊಳ್ಳಲು ಮತ್ತು ಕೆಂಪು ರಕ್ತ ಕಣಗಳ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಂದರೆ ಈ ಸಮಯದಲ್ಲಿ, ಆದಷ್ಟು ಬಾದಾಮಿ ಮತ್ತು ವಾಲ್ನಟ್ಗಳನ್ನು ತಿನ್ನಬೇಕು.

ಇದನ್ನೂ ಓದಿ
ಚಹಾ ಕುಡಿಯುತ್ತಾ ಸ್ಟೈಲ್ ಆಗಿ ಸಿಗರೇಟ್ ಸೇದುವ ಅಭ್ಯಾಸ ನಿಮಗೂ ಇದ್ಯಾ?
ಕಿವಿಯಲ್ಲಿರುವ ವಾಕ್ಸ್ ಪದೇ ಪದೇ ಸ್ವಚ್ಛಗೊಳಿಸುವವರು ಈ ಸ್ಟೋರಿ ತಪ್ಪದೆ ಓದಿ
ಒಸಡುಗಳಿಂದ ರಕ್ತಸ್ರಾವವಾಗುವುದಕ್ಕೂ ಹೃದಯಕ್ಕೂ ಸಂಬಂಧವಿದೆಯೇ?
ನಕಲಿ ಔಷಧಿಗಳನ್ನು ಗುರುತಿಸುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

ಇದನ್ನೂ ಓದಿ: ಗರ್ಭಿಣಿಯರಲ್ಲಿ ಕ್ಯಾಲ್ಸಿಯಂ ಕೊರತೆಯಾದರೆ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಬರುತ್ತೆ ನೋಡಿ

ಕ್ಯಾಲ್ಸಿಯಂ ಅಧಿಕವಾಗಿರುವ ಆಹಾರ

ಅದೇ ರೀತಿ, ಕ್ಯಾಲ್ಸಿಯಂ ಅಧಿಕವಾಗಿರುವ ಆಹಾರವನ್ನು ಸಹ ಸೇವಿಸಬೇಕು. ಕ್ಯಾಲ್ಸಿಯಂ ಗರ್ಭಪಾತದ ನಂತರ ದೇಹವು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಸಮಯದಲ್ಲಿ, ಹೆಚ್ಚು ಹಾಲು, ಒಣ ಹಣ್ಣುಗಳು, ಸೊಪ್ಪು ಮತ್ತು ತರಕಾರಿಗಳನ್ನು ಸೇವನೆ ಮಾಡುವುದು ಬಹಳ ಮುಖ್ಯ. ಧಾನ್ಯಗಳು ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸುತ್ತದೆ. ಹಾಗಾಗಿ ಗರ್ಭಪಾತದ ನಂತರ ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡಲು ಓಟ್ಸ್, ಬ್ರೌನ್ ರೈಸ್ ಮತ್ತು ಕ್ವಿನೋವಾದಂತಹ ಆಹಾರಗಳನ್ನು ಸೇರಿಸಿಕೊಳ್ಳಬೇಕು. ಹೆಚ್ಚುವರಿಯಾಗಿ, ಕೋಳಿ ಮತ್ತು ಮೀನುಗಳನ್ನು ಖಂಡಿತವಾಗಿಯೂ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಆ ಮೂಲಕ ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ