AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗರ್ಭಿಣಿಯರಲ್ಲಿ ಕ್ಯಾಲ್ಸಿಯಂ ಕೊರತೆಯಾದರೆ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಬರುತ್ತೆ ನೋಡಿ

ಗರ್ಭಾವಸ್ಥೆಯಲ್ಲಿ ಕ್ಯಾಲ್ಸಿಯಂ ನಿರ್ಣಾಯಕ ಪಾತ್ರ ವಹಿಸುತ್ತದೆ. ಆದರೆ ಈ ಜೀವಸತ್ವ ಅಥವಾ ಕ್ಯಾಲ್ಸಿಯಂ ಕೊರತೆಯಾದಾಗ ಇದು ಅನೇಕ ರೀತಿಯ ತೊಡಕುಗಳಿಗೆ ಕಾರಣವಾಗುತ್ತದೆ. ತಜ್ಞರು ಕೂಡ ಆರೋಗ್ಯ ಸರಿಯಾಗಿ ಕಾಪಾಡಿಕೊಳ್ಳಲು ಕ್ಯಾಲ್ಸಿಯಂ ಅತ್ಯಗತ್ಯ ಎನ್ನುತ್ತಾರೆ. ಅದರಲ್ಲಿಯೂ ಪ್ರತಿನಿತ್ಯ ಸೇವಿಸುವ ಆಹಾರದ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು. ಗರ್ಭದಲ್ಲಿರುವ ಮಗುವಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಆಹಾರವನ್ನು ತಾಯಿ ತೆಗೆದುಕೊಳ್ಳಬೇಕಾಗುತ್ತದೆ. ಹಾಗಾದರೆ, ಕ್ಯಾಲ್ಸಿಯಂ ಯಾಕೆ ಅವಶ್ಯಕ? ಅದರ ಕೊರತೆಯಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಗರ್ಭಿಣಿಯರಲ್ಲಿ ಕ್ಯಾಲ್ಸಿಯಂ ಕೊರತೆಯಾದರೆ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಬರುತ್ತೆ ನೋಡಿ
Calcium Deficiency In Pregnancy
ಪ್ರೀತಿ ಭಟ್​, ಗುಣವಂತೆ
|

Updated on: Aug 26, 2025 | 4:04 PM

Share

ಗರ್ಭಾವಸ್ಥೆ (Pregnancy) ಪ್ರತಿಯೊಬ್ಬ ಮಹಿಳೆಗೂ ಜೀವನದ ಒಂದು ಪ್ರಮುಖ ಘಟ್ಟವಾಗಿರುತ್ತದೆ. ಒಂದೆಡೆ, ಹೊಸ ಜೀವನವನ್ನು ಜಗತ್ತಿಗೆ ತರುವ ಸಂತೋಷವಿದ್ದರೆ, ಮತ್ತೊಂದೆಡೆ, ಹೇಗಾಗುತ್ತದೋ ಎನ್ನುವ ಭಯವಿರುತ್ತದೆ. ಇದು ಮಹಿಳೆಯರಲ್ಲಿ ಮಾನಸಿಕ ತೊಂದರೆಗೂ ಕಾರಣವಾಗಬಹುದು. ಆದ್ದರಿಂದ, ಗರ್ಭಾವಸ್ಥೆಯಲ್ಲಿ ಬಹಳ ಜಾಗರೂಕರಾಗಿರುವುದು ಅವಶ್ಯವಾಗಿದೆ. ಅದರಲ್ಲಿಯೂ ಪ್ರತಿನಿತ್ಯ ಸೇವಿಸುವ ಆಹಾರದ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು. ಗರ್ಭದಲ್ಲಿರುವ ಮಗುವಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವ ಆಹಾರವನ್ನು ತಾಯಿ ತೆಗೆದುಕೊಳ್ಳಬೇಕಾಗುತ್ತದೆ. ಈ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಜೀವಸತ್ವ ಅಥವಾ ಕ್ಯಾಲ್ಸಿಯಂ ಕೊರತೆ (Calcium Deficiency) ಇರಬಾರದು. ಏಕೆಂದರೆ ಗರ್ಭಾವಸ್ಥೆ ಸಮಯದಲ್ಲಿ ದೇಹದಲ್ಲಿ ಕ್ಯಾಲ್ಸಿಯಂ ನಿರ್ಣಾಯಕ ಪಾತ್ರ ವಹಿಸುತ್ತದೆ. ಹಾಗಾದರೆ, ಕ್ಯಾಲ್ಸಿಯಂ ಯಾಕೆ ಅವಶ್ಯಕ? ಅದರ ಕೊರತೆಯಿಂದ ಯಾವ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮೂಳೆಗಳು ದುರ್ಬಲವಾಗುತ್ತವೆ

ಸಾಮಾನ್ಯವಾಗಿ ಮೂಳೆ ಮತ್ತು ಹಲ್ಲುಗಳನ್ನು ಬಲಪಡಿಸುವಲ್ಲಿ ಕ್ಯಾಲ್ಸಿಯಂ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದು ಹಲವರಿಗೆ ತಿಳಿದಿರಬಹುದು. ಆದರೆ ಗರ್ಭಾವಸ್ಥೆಯಲ್ಲಿಯು ಮಗುವಿನ ಮೂಳೆಗಳ ಬೆಳವಣಿಗೆಗೆ ಕ್ಯಾಲ್ಸಿಯಂ ಅತ್ಯಗತ್ಯವಾಗಿರುತ್ತದೆ. ಮಗು ತಾಯಿಯ ದೇಹದಿಂದ ಕ್ಯಾಲ್ಸಿಯಂ ಪಡೆಯುತ್ತದೆ. ಹಾಗಾಗಿ ತಾಯಿಯ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿದ್ದರೆ, ಅದು ಹುಟ್ಟಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಇದಲ್ಲದೆ, ಗರ್ಭಿಣಿಯ ಮೂಳೆಗಳು ಸಹ ದುರ್ಬಲವಾಗುತ್ತವೆ, ಇದು ಭವಿಷ್ಯದಲ್ಲಿ ಆಸ್ಟಿಯೊಪೊರೋಸಿಸ್‌ನಂತಹ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: Pregnancy care: ಗರ್ಭಾವಸ್ಥೆಯಲ್ಲಿ ವಾಂತಿಯಾಗುವುದಕ್ಕೆ ಕಾರಣವೇನು? ಅದನ್ನು ತಡೆಯಲು ಇಲ್ಲಿದೆ ಸರಳ ಸಲಹೆಗಳು

ದೌರ್ಬಲ್ಯಕ್ಕೆ ಕಾರಣವಾಗುತ್ತದೆ

ಕ್ಯಾಲ್ಸಿಯಂ ಕೊರತೆಯು ಹುಟ್ಟಲಿರುವ ಮಗುವಿನ ಆರೋಗ್ಯದ ಮೇಲೂ ತೀವ್ರ ಪರಿಣಾಮ ಬೀರುತ್ತದೆ. ಮಗುವಿನ ಮೂಳೆಗಳು ಸರಿಯಾಗಿ ಬೆಳೆಯುವುದಿಲ್ಲ. ಇದು ಜನನದ ನಂತರ ಮಗುವಿನಲ್ಲಿ ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಹೆಚ್ಚುವರಿಯಾಗಿ, ಇದು ಮಗುವಿನ ಹೃದಯ, ಸ್ನಾಯುಗಳು ಮತ್ತು ನರಗಳ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮಗುವಿಗೆ ಗರ್ಭದಲ್ಲಿ ಸಾಕಷ್ಟು ಕ್ಯಾಲ್ಸಿಯಂ ಸಿಗದಿದ್ದರೆ, ಅದು ಭವಿಷ್ಯದಲ್ಲಿ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು?

ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಪ್ರತಿದಿನ 1000 ರಿಂದ 1200 ಮಿಗ್ರಾಂ ಕ್ಯಾಲ್ಸಿಯಂ ಅಗತ್ಯವಿರುತ್ತದೆ. ಇದನ್ನು ಹಾಲು, ಮೊಸರು, ಚೀಸ್, ಸೊಪ್ಪು, ಎಳ್ಳು ಮತ್ತು ಬಾದಾಮಿ ಮುಂತಾದ ಆಹಾರ ಪದಾರ್ಥಗಳಿಂದ ಪಡೆಯಬಹುದು. ನಿಮಗೂ ಕ್ಯಾಲ್ಸಿಯಂ ಕೊರತೆಯಿದ್ದರೆ, ವೈದ್ಯರ ಸಲಹೆಯ ಮೇರೆಗೆ ಕ್ಯಾಲ್ಸಿಯಂ ಪೂರಕಗಳನ್ನು ತೆಗೆದುಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ