AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಸಡುಗಳಿಂದ ರಕ್ತಸ್ರಾವವಾಗುವುದಕ್ಕೂ ಹೃದಯ ಸಂಬಂಧಿ ಕಾಯಿಲೆ ಬರುವುದಕ್ಕೂ ಸಂಬಂಧವಿದೆಯೇ?

ಹಾರ್ವರ್ಡ್ ಹೆಲ್ತ್ ನಡೆಸಿದ ಈ ಅಧ್ಯಯನ ಒಸಡುಗಳಿಂದ ರಕ್ತಸ್ರಾವವಾಗುವುದಕ್ಕೂ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ನಡುವೆ ಸಂಬಂಧವಿದೆ ಎಂದು ಬಹಿರಂಗಪಡಿಸಿದೆ. ಬಾಯಿಯ ಆರೋಗ್ಯ ಚೆನ್ನಾಗಿಲ್ಲದೆ ಕಳಪೆಯಾಗಿದ್ದರೆ ವ್ಯಕ್ತಿಗಳಲ್ಲಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಹೆಚ್ಚಾಗುವ ಅಪಾಯವಿರುತ್ತದೆ ಎಂದು ಅಧ್ಯಯನದ ಮೂಲಕ ಗಮನಿಸಲಾಗಿದೆ. ಹೆಚ್ಚುವರಿಯಾಗಿ, ಬಾಯಿಯ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು? ಯಾವ ಸಮಸ್ಯೆಗಳ ಬಗ್ಗೆ ಎಚ್ಚರವಹಿಸಬೇಕು? ಎಂಬುದರ ಬಗ್ಗೆಯೂ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಒಸಡುಗಳಿಂದ ರಕ್ತಸ್ರಾವವಾಗುವುದಕ್ಕೂ ಹೃದಯ ಸಂಬಂಧಿ ಕಾಯಿಲೆ ಬರುವುದಕ್ಕೂ ಸಂಬಂಧವಿದೆಯೇ?
Gum Disease And Heart Health
ಪ್ರೀತಿ ಭಟ್​, ಗುಣವಂತೆ
|

Updated on: Aug 28, 2025 | 3:25 PM

Share

ಒಸಡುಗಳಿಂದ ರಕ್ತಸ್ರಾವವಾಗುತ್ತಿದ್ದರೆ ಅದು ಹಲ್ಲಿನ ಆರೋಗ್ಯಕ್ಕೆ ಮಾತ್ರ ಸಂಬಂಧಿಸಿದೆ ಎಂದು ನಾವು ಭಾವಿಸುತ್ತೇವೆ. ಆದರೆ ಇದರ ಹಿಂದೆ ವಿವಿಧ ಕಾರಣಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಇತ್ತೀಚಿನ ಅಧ್ಯಯನವೊಂದು ಹೃದಯ (Heart) ಸಂಬಂಧಿ ಕಾಯಿಲೆ ಇರುವ ವ್ಯಕ್ತಿಗಳಲ್ಲಿ ಒಸಡುಗಳಿಂದ ರಕ್ತಸ್ರಾವವಾಗುತ್ತದೆ ಎಂದು ಬಹಿರಂಗಪಡಿಸಿದೆ. ಹಾರ್ವರ್ಡ್ ಹೆಲ್ತ್ ನಡೆಸಿದ ಈ ಅಧ್ಯಯನ ಇದಕ್ಕೆ ಸಂಬಂಧಪಟ್ಟಂತೆ ಕೆಲವು ಇತರ ಆಸಕ್ತಿದಾಯಕ ಸಂಶೋಧನೆಗಳನ್ನು ಬಹಿರಂಗಪಡಿಸಿದೆ. ಬಾಯಿಯ ಆರೋಗ್ಯ (Health) ಚೆನ್ನಾಗಿಲ್ಲದೆ ಕಳಪೆಯಾಗಿದ್ದರೆ ವ್ಯಕ್ತಿಗಳಲ್ಲಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಹೆಚ್ಚಾಗುವ ಅಪಾಯವಿರುತ್ತದೆ ಎಂದು ಗಮನಿಸಲಾಗಿದೆ. ಆದರೆ ಇದು ಕೆಲವರಲ್ಲಿ ಕುತೂಹಲ ಮೂಡಿಸಬಹುದು. ಏಕೆಂದರೆ ಒಸಡುಗಳು ಮತ್ತು ಹೃದಯದ ನಡುವೆ ಯಾವ ರೀತಿಯ ಸಂಬಂಧವಿರಲು ಸಾಧ್ಯ ಎಂದು ಆಶ್ಚರ್ಯ ಪಡುತ್ತಾರೆ. ಆದರೆ ಸಂಶೋಧಕರು ಇದರ ಕುರಿತು ಹೆಚ್ಚಿನ ಮಾಹಿತಿ ನೀಡಿದ್ದಾರೆ. ಮಾತ್ರವಲ್ಲ ಹೆಚ್ಚುವರಿಯಾಗಿ, ಬಾಯಿಯ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು? ಯಾವ ಸಮಸ್ಯೆಗಳ ಬಗ್ಗೆ ಎಚ್ಚರವಹಿಸಬೇಕು? ಎಂಬುದರ ಬಗ್ಗೆಯೂ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕೆಲವರಿಗೆ ಹಲ್ಲುಜ್ಜುವಾಗ ಅಥವಾ ಊಟ ಮಾಡುವಾಗ ಒಸಡುಗಳಿಂದ ರಕ್ತಸ್ರಾವವಾಗುತ್ತದೆ. ಇದು ನಿಯಮಿತವಾಗಿ ಸಂಭವಿಸಿದಾಗ ಔಷಧಿಗಳ ಸೇವನೆ ಮಾಡುತ್ತಾರೆ. ಅದು ವಾಸಿಯಾದ ಮೇಲೆ ಅದನ್ನು ಅಲ್ಲಿಗೆ ಬಿಡುತ್ತಾರೆ. ಆದರೆ ಹಾರ್ವರ್ಡ್ ಹೆಲ್ತ್ ಬಹಿರಂಗಪಡಿರುವ ಮಾಹಿತಿ ಪ್ರಕಾರ, ಒಸಡುಗಳಲ್ಲಿ ಕಂಡುಬರುವ ಉರಿಯೂತ ಮತ್ತು ರಕ್ತಸ್ರಾವದಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವ ವ್ಯಕ್ತಿಗೆ ಹೃದಯ ಸಂಬಂಧಿತ ಕಾಯಿಲೆಗಳು ಕಂಡು ಬರುವ ಅಪಾಯ ಹೆಚ್ಚಾಗಿರುತ್ತದೆ. ಇದನ್ನು ಅಧ್ಯಯನದ ಮೂಲಕ ಕಂಡುಕೊಳ್ಳಲಾಗಿದೆ. ಆದರೆ ಇವೆರಡಕ್ಕೂ ಸಂಬಂಧವಿರಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾಡುತ್ತದೆ. ಈ ಅಧ್ಯಯನ ಆ ಗೊಂದಲಕ್ಕೆ ಉತ್ತರ ನೀಡಿದೆ.

ಅಧ್ಯಯನ ಹೇಳುವುದೇನು?

ವಸಡಿನ ಕಾಯಿಲೆಗೂ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ನಡುವೆ ನೇರ ಸಂಬಂಧವಿದೆ ಎಂಬುದನ್ನು ಸ್ಪಷ್ಟಪಡಿಸಲು ಸಾಧ್ಯವಿಲ್ಲ, ಆದರೆ ಇದು ಒಂದು ಕಾರಣವಾಗಿದೆ ಇದೆ ಎಂದು ಸಂಶೋಧಕರು ಹೇಳುತ್ತಾರೆ. ಅದಕ್ಕೆ ಕಾರಣ ಬ್ಯಾಕ್ಟೀರಿಯಾ, ಇವು ಒಸಡುಗಳಿಂದ ರಕ್ತಸ್ರಾವವನ್ನು ಉಂಟುಮಾಡುತ್ತವೆ. ಅದೇ ಬ್ಯಾಕ್ಟೀರಿಯಾ ಬಾಯಿಯ ಮೂಲಕ ರಕ್ತದ ಹರಿವಿಗೆ ಪ್ರವೇಶಿಸಿ ರಕ್ತನಾಳಗಳಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ, ಇದು ಹೃದಯದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಇದೆಲ್ಲವೂ ಹೃದ್ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಮತ್ತೊಂದು ಸಿದ್ಧಾಂತದ ಪ್ರಕಾರ, ಇದು ಬ್ಯಾಕ್ಟೀರಿಯಾಗಳಿಂದ ಮಾತ್ರ ಉಂಟಾಗುವುದಿಲ್ಲ ಬದಲಾಗಿ ವಸಡುಗಳಿಂದ ರಕ್ತಸ್ರಾವವಾದಾಗ, ಪ್ರತಿರಕ್ಷಣಾ ವ್ಯವಸ್ಥೆಯು ತಕ್ಷಣವೇ ಪ್ರತಿಕ್ರಿಯಿಸುತ್ತದೆ. ಈ ಪ್ರತಿಕ್ರಿಯೆಯು ರಕ್ತನಾಳಗಳಿಗೆ ಹಾನಿ ಮಾಡಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಇದನ್ನೂ ಓದಿ
Image
ಖಾಲಿ ಹೊಟ್ಟೆಯಲ್ಲಿ ನಿಂಬೆ ಜ್ಯೂಸ್ ಕುಡಿಯುವ ಅಭ್ಯಾಸ ನಿಮಗೂ ಇದ್ಯಾ?
Image
ಪ್ರತಿನಿತ್ಯ ಬ್ಲಾಕ್ ಕಾಫಿ ಸೇವನೆ ಮಾಡುವವರು ಈ ಸ್ಟೋರಿ ಓದಲೇಬೇಕು
Image
ಈ ಒಂದು ಸಣ್ಣ ಅಭ್ಯಾಸ ರೂಡಿಸಿಕೊಂಡ್ರೆ ಮಲಬದ್ಧತೆ ಸಮಸ್ಯೆನೇ ಬರಲ್ಲ
Image
ವಿಟಮಿನ್ ಡಿ ಕೊರತೆ ಆದ್ರೆ ನಿಮ್ಮ ಮುಖದಲ್ಲಿ ಈ ಲಕ್ಷಣಗಳು ಕಂಡು ಬರುತ್ತೆ

ಇನ್ನೊಂದು ಸಿದ್ಧಾಂತದ ಪ್ರಕಾರ, ಈ ಎರಡೂ ಕಾಯಿಲೆಗಳು ಒಂದೇ ರೀತಿಯ ಕಾರಣಗಳನ್ನು ಹೊಂದಿವೆ. ಅಂದರೆ, ಅಪಾಯಕಾರಿ ಅಂಶಗಳು ಹೋಲುತ್ತವೆ. ಹಲ್ಲುಗಳ ಜೊತೆಗೆ ಹೃದಯಕ್ಕೂ ಹಾನಿ ಮಾಡುವ ಅಭ್ಯಾಸಗಳಿಂದಾಗಿ ಸಮಸ್ಯೆಗಳು ಉದ್ಭವಿಸುತ್ತಿವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಧೂಮಪಾನವು ಸಾಮಾನ್ಯ ಅಂಶವಾಗಿ ಕಂಡುಬರುತ್ತದೆ. ಕೆಲವು ಸಂದರ್ಭಗಳಲ್ಲಿ, ಇದು ಆನುವಂಶಿಕವಾಗಿಯೂ ಬರುತ್ತದೆ. ಆರೋಗ್ಯವನ್ನು ನಿರ್ಲಕ್ಷಿಸುವುದು, ಸಂಸ್ಕರಿಸಿದ ಆಹಾರವನ್ನು ಅತಿಯಾಗಿ ಸೇವಿಸುವುದು ಮತ್ತು ವ್ಯಾಯಾಮ ಮಾಡದಿರುವುದು ಬಾಯಿಯ ಆರೋಗ್ಯಕ್ಕೆ ಮಾತ್ರವಲ್ಲದೆ ಹೃದಯದ ಆರೋಗ್ಯಕ್ಕೂ ಹಾನಿ ಮಾಡುತ್ತದೆ. ಆದರೆ ಒಸಡುಗಳಿಂದ ರಕ್ತಸ್ರಾವವಾಗುವ ಮೊದಲು, ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಸರಿಯಾಗಿ ಗಮನಿಸಿದರೆ, ಸ್ವಲ್ಪ ಮುಂಚಿತವಾಗಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು.

ಲಕ್ಷಣಗಳು ಯಾವವು?

ಹಲ್ಲುಜ್ಜುವಾಗ ಅಥವಾ ಬಾಯಿ ತೊಳೆಯುವಾಗ, ಒಸಡುಗಳಿಂದ ರಕ್ತ ಬರುತ್ತದೆ ಇದರ ಜೊತೆಗೆ, ಕೆಟ್ಟ ವಾಸನೆಯೂ ಇರುತ್ತದೆ. ಆಹಾರವನ್ನು ಅಗಿಯುವಾಗ ತುಂಬಾ ನೋವಿನ ಅನುಭವವಾಗುತ್ತದೆ. ಹಲ್ಲುಗಳು ಸಾಮಾನ್ಯ ಗಾತ್ರಕ್ಕಿಂತ ದೊಡ್ಡದಾಗಿ ಕಾಣುತ್ತವೆ. ಕೆಲವೊಮ್ಮೆ ಅವು ಬಿದ್ದು ಹೋಗುವ ಸಾಧ್ಯತೆ ಇರುತ್ತದೆ. ಹೆಚ್ಚುವರಿಯಾಗಿ, ಕೆಲವು ಅಭ್ಯಾಸಗಳು ಸಹ ಈ ಸಮಸ್ಯೆಗೆ ಕಾರಣವಾಗಬಹುದು. ಅತಿಯಾದ ಧೂಮಪಾನ ಮತ್ತು ಗುಟ್ಕಾ ಅಗಿಯುವುದು ಈ ಸಮಸ್ಯೆಗೆ ಕಾರಣವಾಗುತ್ತದೆ. ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ರೂಪುಗೊಳ್ಳುತ್ತವೆ. ಅದೇ ಸಮಯದಲ್ಲಿ, ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಪರಿಣಾಮವಾಗಿ, ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗುತ್ತವೆ. ಇದಲ್ಲದೆ, ಹೆಚ್ಚಿನ ಮಧುಮೇಹ ಇರುವವರಿಗೆ ಒಸಡುಗಳಿಂದ ರಕ್ತಸ್ರಾವವಾಗುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ.

Heart health: ಈ ಆಹಾರ ಹೃದಯಕ್ಕೆ ಬಹಳ ಅಪಾಯಕಾರಿ, ಎಷ್ಟೇ ಇಷ್ಟವಾಗಿದ್ದರೂ ತಿನ್ನಬೇಡಿ!

ಹೇಗೆ ತಡೆಯಬಹುದು?

ಬೊಜ್ಜು ಕೂಡ ಇದಕ್ಕೆ ಕಾರಣವಾಗಬಹುದು. ದೇಹದಲ್ಲಿ ಉರಿಯೂತ ಹೆಚ್ಚಾಗಿ ಕೊಬ್ಬು ಸಂಗ್ರಹವಾದಾಗ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ. ಮಾತ್ರವಲ್ಲ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಸೇವಿಸುವುದರಿಂದಲೂ ಈ ಸಮಸ್ಯೆಗಳು ಉಂಟಾಗಬಹುದು. ಆದರೆ ಬಾಯಿಯ ಆರೋಗ್ಯವನ್ನು ಕಾಪಾಡಿಕೊಂಡರೆ, ಈ ರೀತಿಯ ಸಮಸ್ಯೆಗಳನ್ನು ತಪ್ಪಿಸಬಹುದು. ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಹಲ್ಲುಜ್ಜುವುದು ಅತ್ಯಗತ್ಯ. ಮೃದುವಾದ ಬ್ರಷ್‌ಗಳನ್ನು ಮಾತ್ರ ಬಳಸಬೇಕು. ಮೂರು ತಿಂಗಳಿಗಿಂತ ಹೆಚ್ಚು ಕಾಲ ಯಾವುದೇ ಬ್ರಷ್ ಅನ್ನು ಬಳಸಬಾರದು. ಫ್ಲೋರೈಡ್ ಇರುವ ಟೂತ್‌ಪೇಸ್ಟ್ ಅನ್ನು ಬಳಸಬೇಕು. ಮೌತ್‌ವಾಶ್ ಬಳಸುವುದು ಒಳ್ಳೆಯದು. ಹೆಚ್ಚುವರಿಯಾಗಿ, ನಿಯಮಿತವಾಗಿ ದಂತ ತಪಾಸಣೆ ಮಾಡಿಸಿಕೊಳ್ಳುವುದರಿಂದ ಈ ರೀತಿ ಸಮಸ್ಯೆ ಬರುವುದನ್ನು ತಡೆಯಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ