AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಕೂಡ ಕಿವಿ ಸ್ವಚ್ಛಗೊಳಿಸಲು ಇಯರ್ ಬಡ್ಸ್ ಬಳಸುತ್ತೀರಾ? ಹಾಗಿದ್ರೆ ಈ ಸ್ಟೋರಿ ಓದಿ

ನಮ್ಮ ಕಿವಿ ಸರಿಯಾಗಿ ಕಾರ್ಯನಿರ್ವಹಿಸಲು ಕಿವಿಯೊಳಗಿರುವ ಮೇಣ ಅಥವಾ ಸೆರುಮೆನ್ ಬಹಳ ಅವಶ್ಯಕ. ಕಿವಿಯ ಒಳಭಾಗವನ್ನು ರಕ್ಷಿಸಲು ಮತ್ತು ಶುಚಿತ್ವ ಕಾಪಾಡಿಕೊಳ್ಳುವುದು ಇದು ಬಹಳ ಅವಶ್ಯಕ. ಆದರೆ ಕೆಲವರು ನಮ್ಮ ಕಿವಿಯಲ್ಲಿ ಉತ್ಪತ್ತಿಯಾಗುವ ಇಯರ್‌ವಾಕ್ಸ್ ಕೊಳಕು ಎಂದು ಭಾವಿಸುತ್ತಾರೆ. ಹಾಗಾದರೆ ಕಿವಿಯಲ್ಲಿರುವ ವಾಕ್ಸ್ ಒಳ್ಳೆಯದಲ್ಲವೇ? ಯಾಕೆ ಇದನ್ನು ತೆಗೆಯಬೇಕು? ಇದರಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನೀವು ಕೂಡ ಕಿವಿ ಸ್ವಚ್ಛಗೊಳಿಸಲು ಇಯರ್ ಬಡ್ಸ್ ಬಳಸುತ್ತೀರಾ? ಹಾಗಿದ್ರೆ ಈ ಸ್ಟೋರಿ ಓದಿ
Cotton Buds For Ear Cleaning
ಪ್ರೀತಿ ಭಟ್​, ಗುಣವಂತೆ
|

Updated on: Aug 28, 2025 | 4:35 PM

Share

ಕೆಲವರು ಕಿವಿಗಳನ್ನು ಸ್ವಚ್ಛಗೊಳಿಸಲು ಇಯರ್‌ಬಡ್‌, ಬೆಂಕಿಕಡ್ಡಿ, ಪಿನ್‌ ಹೀಗೆ ಕಂಡ ಕಂಡ ವಸ್ತುಗಳನ್ನು ಕಿವಿಯೊಳಗೆ ಹಾಕಿ ಕಿವಿ ಮೇಣ, ಅಥವಾ ಸೆರುಮೆನ್ (earwax) ಅನ್ನು ತೆಗೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಇದು ತುಂಬಾ ಸಾಮಾನ್ಯವಾಗಿ ಬಿಟ್ಟಿದೆ. ದೊಡ್ಡವರಿಂದ ಹಿಡಿದು ಸಣ್ಣ ಮಕ್ಕಳ ವರೆಗೆ ಎಲ್ಲರೂ ಈ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಆದರೆ ಇದು ಎಷ್ಟು ಅಪಾಯಕಾರಿ ಎಂಬುದು ನಿಮಗೆ ತಿಳಿದಿದೆಯೇ? ಈ ಅಭ್ಯಾಸವು ನಮ್ಮ ಶ್ರವಣ ಸಾಮರ್ಥ್ಯವನ್ನೇ ಹಾನಿಗೊಳಿಸಬಹುದು ಎಂದರೆ ನೀವು ನಂಬುತ್ತೀರಾ? ಮಾತ್ರವಲ್ಲ ಇದು ಕಿವಿಯ ಸೋಂಕಿಗೂ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಕಿವಿಯಲ್ಲಿರುವ ವಾಕ್ಸ್ ಒಳ್ಳೆಯದಲ್ಲವೇ? ಯಾಕೆ ಇದನ್ನು ತೆಗೆಯಬೇಕು? ಇದರಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕಿವಿಯಲ್ಲಿರುವ ವಾಕ್ಸ್ ಒಳ್ಳೆಯದೋ, ಅಲ್ಲವೋ?

ಪ್ರತಿ ವ್ಯಕ್ತಿಯ ಕಿವಿಯಲ್ಲಿರುವ ಇಯರ್‌ವಾಕ್ಸ್ ವಾಸ್ತವವದಲ್ಲಿ ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ ಎಂಬುದು ಅನೇಕರಿಗೆ ತಿಳಿದಿಲ್ಲ. ಇದು ಕಿವಿಗಳನ್ನು ರಕ್ಷಿಸುವ ನೈಸರ್ಗಿಕ ರಕ್ಷಣಾತ್ಮಕ ಪದರವಾಗಿದೆ. ಕಿವಿ ಮೇಣ ನಾವು ತಿಳಿದಂತೆ ಕೊಳಕಲ್ಲ. ಆದರೆ ಅನೇಕರು ಕಿವಿಯಲ್ಲಿ ಸಂಗ್ರಹವಾಗುವ ವಾಕ್ಸ್ ಅನ್ನು ಕೊಳಕು ಎಂದು ತಿಳಿದು ಪದೇ ಪದೇ ಅದನ್ನು ಸ್ವಚ್ಛಗೊಳಿಸುತ್ತಾರೆ. ಆದರೆ ಅದು ನಿಜವಲ್ಲ. ಕಿವಿ ಮೇಣವು ಎರಡು ರೀತಿಯ ಗ್ರಂಥಿಗಳಿಂದ ಉತ್ಪತ್ತಿಯಾಗುವ ರಕ್ಷಣಾತ್ಮಕ ವಸ್ತುವಾಗಿದೆ. ಇದು ಕಿವಿಯ ಒಳಭಾಗವನ್ನು ಧೂಳು, ಕೊಳಕು ಮತ್ತು ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ. ಮಾತ್ರವಲ್ಲ ಕಿವಿಯ ಒಳಭಾಗವನ್ನು ತೇವಾಂಶದಿಂದಿಡಲು ಸಹಾಯ ಮಾಡುತ್ತದೆ.

ಹೇಗೆ ಅಪಾಯಕಾರಿ?

ಕಿವಿ ಸ್ವಚ್ಛಗೊಳಿಸಲು ಬಳಸುವ ಇಯರ್ ಬಡ್ಸ್ ಅನ್ನು ಕಿವಿಯೊಳಗೆ ತಳ್ಳಿದಾಗ, ಅವು ಒಳಗಿರುವ ಸೂಕ್ಷ್ಮ ಚರ್ಮವನ್ನು ಹಾನಿಗೊಳಿಸಬಹುದು. ಇದಲ್ಲದೆ, ಮತ್ತಷ್ಟು ಒಳಗೆ ತಳ್ಳಿದಾಗ, ಕಿವಿ ಮೇಣ ಮತ್ತಷ್ಟು ಮುಂದಕ್ಕೆ ಹೋಗುತ್ತದೆ. ಇದು ಕಿವಿ ಮೇಣವನ್ನು ಸಂಕುಚಿತಗೊಳಿಸಿ ಹೊರಬರುವುದನ್ನು ತಡೆಯಬಹುದು. ಇವೆಲ್ಲಾ ಕಿವಿ ನೋವು ಅಥವಾ ಶ್ರವಣ ನಷ್ಟಕ್ಕೆ ಕಾರಣವಾಗಬಹುದು.

ಇದನ್ನೂ ಓದಿ
Image
ಖಾಲಿ ಹೊಟ್ಟೆಯಲ್ಲಿ ನಿಂಬೆ ಜ್ಯೂಸ್ ಕುಡಿಯುವ ಅಭ್ಯಾಸ ನಿಮಗೂ ಇದ್ಯಾ?
Image
ಪ್ರತಿನಿತ್ಯ ಬ್ಲಾಕ್ ಕಾಫಿ ಸೇವನೆ ಮಾಡುವವರು ಈ ಸ್ಟೋರಿ ಓದಲೇಬೇಕು
Image
ಈ ಒಂದು ಸಣ್ಣ ಅಭ್ಯಾಸ ರೂಡಿಸಿಕೊಂಡ್ರೆ ಮಲಬದ್ಧತೆ ಸಮಸ್ಯೆನೇ ಬರಲ್ಲ
Image
ವಿಟಮಿನ್ ಡಿ ಕೊರತೆ ಆದ್ರೆ ನಿಮ್ಮ ಮುಖದಲ್ಲಿ ಈ ಲಕ್ಷಣಗಳು ಕಂಡು ಬರುತ್ತೆ

ಇದನ್ನೂ ಓದಿ: How to identify fake medicines: ನಕಲಿ ಔಷಧಿಗಳನ್ನು ಗುರುತಿಸಲು ಇಲ್ಲಿದೆ ಸುಲಭ ಮಾರ್ಗ

ಸೋಂಕಿಗೆ ಕಾರಣಗಳೇನು?

ಯರ್ ಬಡ್ಸ್ ಬಳಸುವಾಗ, ಹೊರಗಿನ ಬ್ಯಾಕ್ಟೀರಿಯಾಗಳು ಕಿವಿಗೆ ಪ್ರವೇಶಿಸಬಹುದು, ಮಾತ್ರವಲ್ಲ ಒಳಗಿರುವ ಸೂಕ್ಷ್ಮ ಚರ್ಮಕ್ಕೆ ಗಾಯಗಳನ್ನು ಉಂಟುಮಾಡಬಹುದು ಮತ್ತು ಸೋಂಕಿಗೂ ಕಾರಣವಾಗಬಹುದು. ಈ ಸೋಂಕು ತೀವ್ರ ನೋವು, ತುರಿಕೆ ಮತ್ತು ದುರ್ವಾಸನೆಗೆ ಕಾರಣವಾಗಬಹುದು. ಇಯರ್‌ವಾಕ್ಸ್ ಗಟ್ಟಿಯಾದಾಗ, ಅದು ಶಬ್ದ ತರಂಗಗಳು ಕಿವಿಯೋಳಗೆ ತಲುಪುವುದನ್ನು ತಡೆಯಬಹುದು. ಇದು ತಾತ್ಕಾಲಿಕ ಅಥವಾ ಶಾಶ್ವತ ಶ್ರವಣ ನಷ್ಟದ ಅಪಾಯಕ್ಕೆ ಕಾರಣವಾಗಬಹುದು. ನಮ್ಮ ಕಿವಿಗಳು ತಮ್ಮನ್ನು ತಾವು ಸ್ವಚ್ಛಗೊಳಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಹೆಚ್ಚಿನ ಸಂದರ್ಭಗಳಲ್ಲಿ, ಇಯರ್‌ವಾಕ್ಸ್ ಸ್ವಾಭಾವಿಕವಾಗಿ ಹೊರಬರುತ್ತದೆ. ನಿಮ್ಮ ಕಿವಿಯಲ್ಲಿ ನೋವು, ತುರಿಕೆ ಅಥವಾ ನಿಮ್ಮ ಶ್ರವಣದಲ್ಲಿ ಯಾವುದೇ ಸಮಸ್ಯೆಗಳನ್ನು ಅನುಭವಿಸಿದರೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ವೈದ್ಯಕೀಯ ವೃತ್ತಿಪರರು ಮಾತ್ರ ಸರಿಯಾದ ವಿಧಾನಗಳನ್ನು ಬಳಸಿಕೊಂಡು ಇಯರ್‌ವಾಕ್ಸ್ ಅನ್ನು ಸುರಕ್ಷಿತವಾಗಿ ತೆಗೆದುಹಾಕಬಹುದು. ನೆನಪಿಡಿ, ನಾವು ನಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಕಿವಿಗೆ ಸಂಬಂಧಿಸಿದ ಸಮಸ್ಯೆಗಳ ವಿಷಯಕ್ಕೆ ಬಂದಾಗ ಎಂದಿಗೂ ನಿರ್ಲಕ್ಷ್ಯ ವಹಿಸಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ