
ಮಳೆಗಾಲ ಆರಂಭವಾದರೆ ಸಾಕು, ದೇಶದ ಹಲವು ರಾಜ್ಯಗಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತವೆ. ಪ್ರತಿ ವರ್ಷ ಸಾವಿರಾರು ಮಂದಿ ಡೆಂಗ್ಯೂ ಸೋಂಕಿಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಡೆಂಗ್ಯೂ ತಡೆಗಟ್ಟಲು ಕ್ಯೂಡೆಂಗಾ (QDENGA) ಎಂಬ ಮೊದಲ ಲಸಿಕೆಯನ್ನು ಬಿಡುಗಡೆ ಮಾಡಿದೆ. ಇದನ್ನು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಜಪಾನ್‌ನ ಔಷಧ ಕಂಪನಿ ಟಕೆಡಾ (Takeda) ಅಭಿವೃದ್ಧಿಪಡಿಸಿದ್ದು ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಆದರೆ, ಈ ಲಸಿಕೆ ತೆಗೆದುಕೊಳ್ಳುವ ಮುನ್ನ ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು. ಹಾಗಾದರೆ ಇದು ಡೆಂಗ್ಯೂ ವಿರುದ್ಧ ಸಂಪೂರ್ಣ ರಕ್ಷಣೆ ನೀಡುತ್ತದೆಯೇ, ಎಲ್ಲರೂ ಇದನ್ನು ತೆಗೆದುಕೊಳ್ಳಬೇಕೇ, ಯಾರಿಗೆ ಈ ಲಸಿಕೆ ಸೂಕ್ತವಲ್ಲ ಎಂಬ ಪ್ರಶ್ನೆಗಳಿಗೆ ಪಿಎಸ್ಆರ್ಐ ಆಸ್ಪತ್ರೆಯ ಪಲ್ಮನರಿ, ಕ್ರಿಟಿಕಲ್ ಕೇರ್ ಮತ್ತು ಸ್ಲೀಪ್ ಮೆಡಿಸಿನ್ ವಿಭಾಗದ ಹಿರಿಯ ತಜ್ಞೆ ಡಾ. ನೀತು ಜೈನ್ ಉತ್ತರ ನೀಡಿದ್ದಾರೆ.
QDENGA ಎಂಬುದು ಡೆಂಗ್ಯೂ ವೈರಸ್‌ನ ಎಲ್ಲಾ ನಾಲ್ಕು ಸೆರೋಟೈಪ್‌ಗಳ (DENV-1, DENV-2, DENV-3 ಮತ್ತು DENV-4) ವಿರುದ್ಧ ರೋಗನಿರೋಧಕ ಶಕ್ತಿಯನ್ನು ಬೆಳೆಸಲು ವಿನ್ಯಾಸಗೊಳಿಸಲಾದ ಲಸಿಕೆಯಾಗಿದೆ. ಒಮ್ಮೆ ಒಂದು ವಿಧದ ಡೆಂಗ್ಯೂ ಸೋಂಕು ಬಂದರೆ ಉಳಿದ ಮೂರು ವಿಧಗಳ ವಿರುದ್ಧ ಸಂಪೂರ್ಣ ರಕ್ಷಣೆ ದೊರೆಯುವುದಿಲ್ಲ. ಆದ್ದರಿಂದ ವ್ಯಕ್ತಿಗೆ ಜೀವನದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಡೆಂಗ್ಯೂ ಬರುವ ಸಾಧ್ಯತೆ ಇರುತ್ತದೆ. ಈ ಅಪಾಯವನ್ನು ಕಡಿಮೆ ಮಾಡಲು ಈ ಲಸಿಕೆ ಸಹಾಯಕವಾಗಬಹುದು.
ಕ್ಯೂಡೆಂಗಾ ಲಸಿಕೆಯನ್ನು ಎರಡು ಡೋಸ್‌ಗಳಲ್ಲಿ ನೀಡಲಾಗುತ್ತದೆ. ಸಾಮಾನ್ಯವಾಗಿ ಮೊದಲ ಡೋಸ್‌ನ ನಂತರ ಮೂರು ತಿಂಗಳ ಅಂತರದಲ್ಲಿ ಎರಡನೇ ಡೋಸ್ ನೀಡಲಾಗುತ್ತದೆ. ತಜ್ಞರ ಪ್ರಕಾರ, ಉತ್ತಮ ರಕ್ಷಣೆಯನ್ನು ಪಡೆಯಲು ಎರಡೂ ಡೋಸ್‌ಗಳನ್ನು ಪೂರ್ಣಗೊಳಿಸುವುದು ಅಗತ್ಯ.
ಇಲ್ಲ. ತಜ್ಞರ ಪ್ರಕಾರ, ಈ ಲಸಿಕೆ 100 ಪ್ರತಿಶತ ಡೆಂಗ್ಯೂ ಸೋಂಕನ್ನು ತಡೆಯುವುದಿಲ್ಲ. ಲಸಿಕೆ ಪಡೆದವರಿಗೂ ಡೆಂಗ್ಯೂ ಬರಬಹುದು. ಆದರೆ, ತೀವ್ರ ಸ್ವರೂಪದ ಡೆಂಗ್ಯೂ, ಆಸ್ಪತ್ರೆ ದಾಖಲಾತಿ ಹಾಗೂ ಗಂಭೀರ ತೊಂದರೆಗಳ ಅಪಾಯವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಅದಕ್ಕಾಗಿ ಲಸಿಕೆ ಪಡೆದ ನಂತರವೂ ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು. ಅಂದರೆ ಮನೆಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಕೂಲರ್, ಹೂವಿನ ಕುಂಡ, ಟೈರ್, ಬಕೆಟ್‌ಗಳಲ್ಲಿ ನೀರು ಸಂಗ್ರಹವಾಗದಂತೆ ಸ್ವಚ್ಛಗೊಳಿಸಬೇಕು. ಸೊಳ್ಳೆ ನಿವಾರಕ ಕ್ರೀಮ್ ಅಥವಾ ಸ್ಪ್ರೇ ಬಳಸಿ. ಮೈ ಸರಿಯಾಗಿ ಮುಚ್ಚುವಂತಹ ಬಟ್ಟೆ ಧರಿಸಿ, ಸಾಧ್ಯವಾದಲ್ಲಿ ಕಿಟಕಿ ಮತ್ತು ಬಾಗಿಲುಗಳಿಗೆ ಸೊಳ್ಳೆ ಜಾಲರಿ ಅಳವಡಿಸಿ.
ಇದನ್ನೂ ಓದಿ: ಮೊದಲ ಡೆಂಗ್ಯೂ ಲಸಿಕೆಗೆ ಭಾರತ ಅನುಮೋದನೆ: ವ್ಯಾಕ್ಸಿನ್ ಪರಿಣಾಮಕಾರಿತ್ವ, ಬೆಲೆ ಬಗ್ಗೆ ಇಲ್ಲಿದೆ ಮಾಹಿತಿ
ಇಲ್ಲ. QDENGA ಡೆಂಗ್ಯೂ ತಡೆಗಟ್ಟುವ ಲಸಿಕೆ ಮಾತ್ರ. ಈಗಾಗಲೇ ಡೆಂಗ್ಯೂ ಸೋಂಕು ಬಂದಿರುವವರಿಗೆ ಇದು ಔಷಧೋಪಚಾರವಾಗಿ ಕೆಲಸ ಮಾಡುವುದಿಲ್ಲ. ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು:
ಅಗತ್ಯವಿಲ್ಲ. ಯಾವ ವಯೋಮಾನದವರು ಮತ್ತು ಯಾವ ಪ್ರದೇಶದ ಜನರಿಗೆ ಮೊದಲ ಆದ್ಯತೆ ನೀಡಬೇಕು ಎಂಬುದನ್ನು ಸರ್ಕಾರ ಮತ್ತು ಸಾರ್ವಜನಿಕ ಆರೋಗ್ಯ ಇಲಾಖೆ ಸ್ಥಳೀಯ ಡೆಂಗ್ಯೂ ಸೋಂಕಿನ ಪ್ರಮಾಣ, ಲಸಿಕೆಯ ಲಭ್ಯತೆ ಹಾಗೂ ಸುರಕ್ಷತೆಯ ಆಧಾರದ ಮೇಲೆ ನಿರ್ಧರಿಸಲಿದೆ. ವೈದ್ಯರ ಸಲಹೆ ಪಡೆಯದೇ ಸ್ವಯಂ ನಿರ್ಧಾರದಿಂದ ಲಸಿಕೆ ಪಡೆಯಬಾರದು.
ತಜ್ಞರ ಅಭಿಪ್ರಾಯದಂತೆ, QDENGA ಲಸಿಕೆ ಡೆಂಗ್ಯೂ ನಿಯಂತ್ರಣದಲ್ಲಿ ಮಹತ್ವದ ಸಾಧನೆಯಾಗಿದ್ದರೂ, ಇದು ಒಂದೇ ಪರಿಹಾರವಲ್ಲ. ಲಸಿಕೆ, ಸೊಳ್ಳೆ ನಿಯಂತ್ರಣ, ಆರಂಭಿಕ ರೋಗ ಪತ್ತೆ, ಸಮಯಕ್ಕೆ ಸರಿಯಾದ ಪರಿಹಾರ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಹೀಗೆ ಎಲ್ಲ ಕ್ರಮಗಳನ್ನು ಒಟ್ಟಾಗಿ ಅನುಸರಿಸಿದಾಗ ಮಾತ್ರ ಡೆಂಗ್ಯೂನಿಂದ ಉಂಟಾಗುವ ಗಂಭೀರ ಪರಿಣಾಮಗಳನ್ನು ಕಡಿಮೆ ಮಾಡಬಹುದು.
ಸೂಚನೆ: ಈ ಲೇಖನವು ಆರೋಗ್ಯ ಜಾಗೃತಿಗಾಗಿ ಮಾತ್ರ. ಡೆಂಗ್ಯೂ ಲಸಿಕೆ ಪಡೆಯುವ ಮೊದಲು ಅಥವಾ ಯಾವುದೇ ಆರೋಗ್ಯ ಸಂಬಂಧಿತ ನಿರ್ಧಾರ ಕೈಗೊಳ್ಳುವ ಮೊದಲು ಅರ್ಹ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ