
ಮಳೆಗಾಲ ಆರಂಭವಾಗುತ್ತಿದ್ದಂತೆ ಶೀತ, ಕೆಮ್ಮು ಮತ್ತು ವೈರಲ್ ಸೋಂಕಿನ ಬಗ್ಗೆ ಹೆಚ್ಚು ಗಮನ ಹರಿಸುತ್ತೇವೆ. ಆದರೆ ಈ ಸಮಯದಲ್ಲಿ ಕಿವಿಯ ಸೋಂಕು (Ear Infection) ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಕಿವಿಯಲ್ಲಿ ನೀರು ಸೇರುವುದು, ನಿರಂತರ ತುರಿಕೆ, ನೋವು, ಕಿವಿಯಿಂದ ದ್ರವ ಹೊರಬರುವುದು ಅಥವಾ ಕೇಳಿಸುವಿಕೆ ಕಡಿಮೆಯಾಗುವುದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡಬಾರದು. ಮಳೆ ಮತ್ತು ತೇವಾಂಶ ಹೆಚ್ಚಿರುವ ವಾತಾವರಣದಲ್ಲಿ ಕಿವಿಯೊಳಗೆ ದೀರ್ಘಕಾಲ ತೇವಾಂಶ ಉಳಿದರೆ ಬ್ಯಾಕ್ಟೀರಿಯಾ ಮತ್ತು ಫಂಗಸ್ ಬೆಳೆಯಲು ಅನುಕೂಲಕರ ಪರಿಸ್ಥಿತಿ ಉಂಟಾಗಬಹುದು. ಹಾಗಾಗಿ ಮಳೆಗಾಲದಲ್ಲಿ ಕಿವಿಯ ಸ್ವಚ್ಛತೆ ಮತ್ತು ಒಣತನದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮುಖ್ಯ.
ಆಕಾಶ್ ಹೆಲ್ತ್‌ಕೇರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ENT ವಿಭಾಗದ ಹಿರಿಯ ಸಲಹೆಗಾರ ಡಾ. ಅಭಿನೀತ್ ಕುಮಾರ್ ಅವರು ಹೇಳುವ ಪ್ರಕಾರ, ಕಿವಿಯ ಒಳಭಾಗ ಬಹಳ ಸೂಕ್ಷ್ಮವಾಗಿರುತ್ತದೆ. ಕಿವಿಗೆ ನೀರು ಸೇರಿದ ನಂತರ ಅದು ದೀರ್ಘಕಾಲ ಉಳಿದರೆ ಸೋಂಕಿನ ಅಪಾಯ ಹೆಚ್ಚಬಹುದು. ಮಳೆಯಲ್ಲಿ ನೆನೆಯುವುದು, ಈಜಿದ ನಂತರ ಕಿವಿಯಲ್ಲಿ ನೀರು ಉಳಿಯುವುದು ಮತ್ತು ಒದ್ದೆಯಾದ ಇಯರ್‌ಫೋನ್ ಅಥವಾ ಇಯರ್‌ಬಡ್ಸ್ ಬಳಸುವುದು ಕೂಡ ಸಮಸ್ಯೆಗೆ ಕಾರಣವಾಗಬಹುದು. ಈಗಾಗಲೇ ಅಲರ್ಜಿ ಅಥವಾ ಸೈನಸ್ ಸಮಸ್ಯೆ ಇರುವವರು ಹಾಗೂ ರೋಗನಿರೋಧಕ ಶಕ್ತಿ ದುರ್ಬಲವಾಗಿರುವವರಲ್ಲಿಯೂ ಸೋಂಕಿನ ಅಪಾಯ ಹೆಚ್ಚಿರಬಹುದು.
ಈ ಲಕ್ಷಣಗಳು 2–3 ದಿನಗಳಿಗಿಂತ ಹೆಚ್ಚು ಮುಂದುವರಿದರೆ ENT ತಜ್ಞರನ್ನು ಸಂಪರ್ಕಿಸುವುದು ಉತ್ತಮ.
ಇಲ್ಲ. ಕಿವಿ ನೋವಿಗೆ ಸೋಂಕು ಮಾತ್ರ ಕಾರಣವಾಗಬೇಕೆಂದಿಲ್ಲ. ಕಿವಿಯಲ್ಲಿ ಮೇಣ (Earwax) ಜಮೆಯಾಗುವುದು, ಗಂಟಲಿನ ಸೋಂಕು, ಸೈನಸ್ ಸಮಸ್ಯೆ ಅಥವಾ ದವಡೆಯ ಸಮಸ್ಯೆಯಿಂದಲೂ ಕಿವಿಯಲ್ಲಿ ನೋವು ಕಾಣಿಸಿಕೊಳ್ಳಬಹುದು. ಆದರೆ ಮಳೆಗಾಲದಲ್ಲಿ ಕಿವಿಯಲ್ಲಿ ತೇವಾಂಶ ಹೆಚ್ಚಾಗುವುದರಿಂದ ಸೋಂಕಿನ ಸಾಧ್ಯತೆ ಇರಬಹುದು. ಆದ್ದರಿಂದ ವೈದ್ಯಕೀಯ ಪರೀಕ್ಷೆ ಇಲ್ಲದೆ ಸ್ವಯಂ ಔಷಧ ಸೇವಿಸುವುದು ಅಥವಾ ಕಿವಿಗೆ ಡ್ರಾಪ್ಸ್ ಹಾಕುವುದು ತಪ್ಪು.
ಮಳೆಯಲ್ಲಿ ನೆನೆದ ನಂತರ ಕಿವಿಯ ಹೊರಭಾಗವನ್ನು ಮೃದುವಾಗಿ ಒಣಗಿಸಿ. ಈಜಿದ ನಂತರ ಕಿವಿಯಲ್ಲಿ ನೀರು ಉಳಿಯದಂತೆ ನೋಡಿಕೊಳ್ಳಿ. ಒದ್ದೆಯಾಗಿರುವ ಅಥವಾ ಸರಿಯಾಗಿ ಸ್ವಚ್ಛಗೊಳಿಸದ ಇಯರ್‌ಫೋನ್ ಮತ್ತು ಇಯರ್‌ಬಡ್ಸ್ ಬಳಸುವುದನ್ನು ತಪ್ಪಿಸಿ. ಕಿವಿಯಲ್ಲಿ ಸ್ವಾಭಾವಿಕವಾಗಿ ಇರುವ Earwax ಅನ್ನು ಪದೇಪದೇ ತೆಗೆದುಹಾಕುವ ಅಗತ್ಯವಿಲ್ಲ. ಅತಿಯಾಗಿ ಕಿವಿ ಸ್ವಚ್ಛಗೊಳಿಸುವುದರಿಂದ ಕಿವಿಯ ಚರ್ಮಕ್ಕೆ ಹಾನಿಯಾಗಬಹುದು ಮತ್ತು ಸೋಂಕಿನ ಅಪಾಯ ಹೆಚ್ಚಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ