Ramadan Fasting: ಉಪವಾಸ ಮುಗಿದ ನಂತರ ಈ ಆಹಾರಗಳನ್ನು ಸೇವಿಸಬೇಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 14, 2025 | 4:14 PM

ಮುಸ್ಲಿಮರು, ಸೂರ್ಯೋದಯಕ್ಕೂ ಸುಮಾರು ಒಂದೂವರೆ ಘಂಟೆಗೂ ಮೊದಲು ಆಹಾರವನ್ನು ಸೇವಿಸಿ ಪೂರ್ತಿ ದಿನ ಏನನ್ನೂ ಸೇವಿಸದೇ ಸರಿಯಾಗಿ ಸೂರ್ಯಾಸ್ತದ ಸಮಯದಲ್ಲಿ ಆಹಾರ ಸೇವಿಸುವ ಮೂಲಕ ಆ ದಿನದ ಉಪವಾಸ ಸಂಪನ್ನಗೊಳಿಸುತ್ತಾರೆ. ಮರುದಿನ ಮುಂಜಾನೆಯ ವರೆಗೆ ಆಹಾರ ಸೇವಿಸಲು ಕಾಲಾವಕಾಶವಿದ್ದರೂ ಕೂಡ ಈ ಸಮಯದಲ್ಲಿ ಸೇವನೆ ಮಾಡುವ ಆಹಾರ ಆರೋಗ್ಯ ಕಾಪಾಡಿಕೊಳ್ಳಲು ಬಹಳ ಮುಖ್ಯವಾಗಿರುತ್ತದೆ. ಉಪವಾಸವು ಆರೋಗ್ಯಕ್ಕೆ ಒಳ್ಳೆಯದು. ಆದರೆ ಈ ಪ್ರಯೋಜನಗಳನ್ನು ಪಡೆಯಲು, ಉಪವಾಸದ ಬಳಿಕ ಸರಿಯಾದ ಆಹಾರ ಸೇವನೆ ಮಾಡುವುದು ಕೂಡ ಅವಶ್ಯಕವಾಗಿರುತ್ತದೆ.

Ramadan Fasting: ಉಪವಾಸ ಮುಗಿದ ನಂತರ ಈ ಆಹಾರಗಳನ್ನು ಸೇವಿಸಬೇಡಿ
ಸಾಂದರ್ಭಿಕ ಚಿತ್ರ
Follow us on

ಮುಸ್ಲಿಮರ ಪಾಲಿಗೆ ರಮಧಾನ್ ಅಥವಾ ರಂಜಾನ್ (Ramzan) ತಿಂಗಳು ಬಹಳ ಪವಿತ್ರವಾದ ಮಾಸವಾಗಿದೆ. ಈ ತಿಂಗಳಲ್ಲಿ ಅರ್ಹರಾದ ಪ್ರತಿ ವ್ಯಕ್ತಿಯೂ ಕಡ್ಡಾಯವಾಗಿ ಉಪವಾಸ (fasting) ಆಚರಿಸಬೇಕು. ಸೂರ್ಯೋದಯಕ್ಕೂ ಸುಮಾರು ಒಂದೂವರೆ ಘಂಟೆಗೂ ಮೊದಲು ಆಹಾರವನ್ನು ಸೇವಿಸಿ ಪೂರ್ತಿ ದಿನ ಏನನ್ನೂ ಸೇವಿಸದೇ ಸರಿಯಾಗಿ ಸೂರ್ಯಾಸ್ತದ ಸಮಯದಲ್ಲಿ ಆಹಾರ ಸೇವಿಸುವ ಮೂಲಕ ಆ ದಿನದ ಉಪವಾಸ ಸಂಪನ್ನಗೊಳಿಸುತ್ತಾರೆ. ಮರುದಿನ ಮುಂಜಾನೆಯ ವರೆಗೆ ಆಹಾರ ಸೇವಿಸಲು ಕಾಲಾವಕಾಶವಿದ್ದರೂ ಕೂಡ ಈ ಸಮಯದಲ್ಲಿ ಸೇವನೆ ಮಾಡುವ ಆಹಾರ ಆರೋಗ್ಯ ಕಾಪಾಡಿಕೊಳ್ಳಲು ಬಹಳ ಮುಖ್ಯವಾಗಿರುತ್ತದೆ. ಉಪವಾಸವು ಆರೋಗ್ಯಕ್ಕೆ ಒಳ್ಳೆಯದು. ಆದರೆ ಈ ಪ್ರಯೋಜನಗಳನ್ನು ಪಡೆಯಲು, ಉಪವಾಸದ ಬಳಿಕ ಸರಿಯಾದ ಆಹಾರ ಸೇವನೆ ಮಾಡುವುದು ಕೂಡ ಅವಶ್ಯಕವಾಗಿರುತ್ತದೆ.

ಉಪವಾಸವನ್ನು ಕೊನೆಗೊಳಿಸಲು ಅಥವಾ ಪೂರ್ಣಗೊಳಿಸಲು ಸರಿಯಾದ ವಿಧಾನವೂ ಇದೆ. ಹಗಲಿನಲ್ಲಿ ಒಂದು ಹನಿ ನೀರು ಕುಡಿಯದೆ ಸಂಜೆ ಸಮಯದಲ್ಲಿ ಆಹಾರ ಸೇವನೆ ಮಾಡುವುದನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ಆರೋಗ್ಯಕ್ಕೆ ಪ್ರಯೋಜನಕಾರಿ. ನಿಯಮಗಳ ಪ್ರಕಾರ ಉಪವಾಸ ಮುಗಿದಾಗ ನೀವು ಮೊದಲು ಆಹಾರ ಸೇವನೆ ಮಾಡುವ ಬದಲು ನೀರನ್ನು ಕುಡಿಯಬೇಕು. ಬಳಿಕ ಸ್ವಲ್ಪ ಸಮಯದ ನಂತರ ಹಂತ ಹಂತವಾಗಿ ಒಂದೊಂದೇ ಆಹಾರಗಳನ್ನು ಸೇವಿಸಬೇಕು. ಇದು ನಂಬಿಕೆಗಿಂತ ವೈಜ್ಞಾನಿಕವಾಗಿದೆ. ಉಪವಾಸವ ಮುಗಿದ ತಕ್ಷಣ ಒಂದೇ ಸಲ ಆಹಾರ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಸಾಮಾನ್ಯವಾಗಿ ಉಪವಾಸದ ಸಮಯದಲ್ಲಿ ಹೊಟ್ಟೆಯ ಮೂರನೇ ಒಂದು ಭಾಗವನ್ನು ಆಹಾರ ಮತ್ತು ಮೂರನೇ ಒಂದು ಭಾಗದಷ್ಟು ನೀರು ಮತ್ತು ಉಳಿದ ಮೂರನೇ ಒಂದು ಭಾಗವನ್ನು ಖಾಲಿ ಇಡಬೇಕು ಎಂಬ ನಂಬಿಕೆ ಇದೆ.

ಆಹಾರ ಸೇವನೆ ಮಾಡುವಾಗ ಈ ಸಲಹೆಗಳನ್ನು ಪಾಲಿಸಿ

ಉಪವಾಸ ಮುಗಿದ ಬಳಿಕ ಆಹಾರ ಸೇವನೆ ಮಾಡುವಾಗಲೂ ಜಾಗರೂಕರಾಗಿರಬೇಕು. ಹೆಚ್ಚು ಮಾಂಸಾಹಾರವನ್ನು ತಿನ್ನದಿರಲು ಪ್ರಯತ್ನಿಸುವುದು ದೇಹಕ್ಕೆ ಒಳ್ಳೆಯದು. ಇದು ಜೀರ್ಣ ಕ್ರಿಯೆಗೆ ಅಡಚಣೆ ಮಾಡುವುದರ ಜೊತೆಗೆ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಹಾಗೆಯೇ, ನೀವು ತಿನ್ನುವ ಆಹಾರವನ್ನು ನಿಧಾನವಾಗಿ ಅಗಿಯಲು ಪ್ರಯತ್ನಿಸಿ. ಇದು ಅಜೀರ್ಣವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದೆಲ್ಲದರ ಜೊತೆಗೆ ನಿಮ್ಮ ಆಹಾರದಲ್ಲಿ ಹೆಚ್ಚು ಫೈಬರ್ ಭರಿತ ಆಹಾರವನ್ನು ಸೇರಿಸಿಕೊಳ್ಳಲು ಪ್ರಯತ್ನಿಸಿ. ಎಣ್ಣೆಯಲ್ಲಿ ಕರಿದ ಆಹಾರಗಳನ್ನು ತಪ್ಪಿಸುವುದರಿಂದ ಉಪವಾಸದ ಸಮಯದಲ್ಲಿ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದಾಗಿದೆ.

ಇದನ್ನೂ ಓದಿ
ಸಿಹಿತಿಂಡಿ ತಿಂದ ಮೇಲೆ ನೀರು ಕುಡಿಯುತ್ತೀರಾ? ಇದನ್ನು ತಪ್ಪದೆ ಓದಿ
ಪ್ರಯಾಣ ಮಾಡುವಾಗ ಕಾರಿನಲ್ಲಿ ಇಟ್ಟಿರುವ ನೀರನ್ನು ಕುಡಿಯುವಾಗ ಎಚ್ಚರ!
ಜನ ತಂಬಾಕು ಬಿಡಲು ಕಷ್ಟವಾಗುತ್ತೆ ಎನ್ನಲು ಕಾರಣವೇನು?
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಎಚ್ಚರಿಕೆ ಸುದ್ದಿ

ಇದನ್ನೂ ಓದಿ: ಮನೆಯ ಒಳಗೆ ಚಪ್ಪಲಿ ಧರಿಸುವುದು ಆರೋಗ್ಯಕ್ಕೆ ಒಳ್ಳೆಯದೇ? ಯಾವುದು ಸರಿ

ಉಪವಾಸ ಪೂರ್ಣಗೊಂಡಾಗ ಖರ್ಜೂರ ಸೇವನೆ ಮಾಡಲು ಕಾರಣವೇನು?

ಮುಸ್ಲಿಮರು ಉಪವಾಸ ಪೂರ್ಣಗೊಳಿದ ನಂತರ ಖರ್ಜೂರವನ್ನು ಸೇವಿಸುತ್ತಾರೆ. ಇದು ಪ್ರವಾದಿ ಮೊಹಮ್ಮದರು ಆಚರಿಸುತ್ತಿದ್ದ ಆಚರಣೆಯಾಗಿದೆ. ಸಾಮಾನ್ಯವಾಗಿ ಖರ್ಜೂರ ಅತ್ಯಂತ ಪೌಷ್ಟಿಕ ಆಹಾರವಾಗಿದ್ದು ದಿನದ ಉಪವಾಸದಿಂದ ದಣಿದಿದ್ದ ದೇಹಕ್ಕೆ ತಕ್ಷಣವೇ ಶಕ್ತಿಯನ್ನೂ, ಅವಶ್ಯಕ ಪೋಷಕಾಂಶಗಳನ್ನು ನೀಡುತ್ತದೆ. ಜೊತೆಗೆ ಜೀರ್ಣಾಂಗಗಳ ಆರೋಗ್ಯ ವೃದ್ದಿಸುತ್ತದೆ. ಇದರಲ್ಲಿ ಉರಿಯೂತ ನಿವಾರಕ ಗುಣಗಳಿರುವುದರಿಂದ ಉಪವಾಸದ ಬಳಿಕ ಸೇವಿಸಲು ಅತ್ಯುತ್ತಮ ಆಹಾರವಾಗಿದೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ