ಪ್ರತಿ ಸಣ್ಣ ಆರೋಗ್ಯ ಸಮಸ್ಯೆಗೂ ಔಷಧಿ ಸೇವಿಸುತ್ತೀರಾ? ಈ ಅಭ್ಯಾಸ ಎಷ್ಟು ಅಪಾಯಕಾರಿ ಗೊತ್ತಾ?

ಪ್ರತಿ ವರ್ಷ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಗೌರವಿಸುವುದೇ ಇದರ ಮುಖ್ಯ ಉದ್ದೇಶ. ಇಂದಿಗೂ ವೈದ್ಯರನ್ನು ದೇವರ ಸಮಾನರೆಂದು ಪರಿಗಣಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಹಲವರು ವೈದ್ಯರ ಸಲಹೆಯಿಲ್ಲದೆ ತಾವೇ ಔಷಧಿ ಸೇವಿಸಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಯಾವುದೇ ಸಣ್ಣ ಆರೋಗ್ಯ ಸಮಸ್ಯೆ ಬಂದರೂ ಔಷಧಿ ಸೇವಿಸುವ ಈ ಅಭ್ಯಾಸ ಎಷ್ಟು ಅಪಾಯಕಾರಿ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪ್ರತಿ ಸಣ್ಣ ಆರೋಗ್ಯ ಸಮಸ್ಯೆಗೂ ಔಷಧಿ ಸೇವಿಸುತ್ತೀರಾ? ಈ ಅಭ್ಯಾಸ ಎಷ್ಟು ಅಪಾಯಕಾರಿ ಗೊತ್ತಾ?
Self Medication Side Effects
Image Credit source: Getty Images

Updated on: Jul 01, 2026 | 8:20 PM

ಮುಖ್ಯಾಂಶಗಳು

  • ವೈದ್ಯರ ಸಲಹೆ ಇಲ್ಲದೆ ಔಷಧಿ ಸೇವಿಸುವ ಮೊದಲು ಇದನ್ನು ತಿಳಿಯಿರಿ
  • ವೈದ್ಯರು ಸೂಚಿಸಿದ ಕೋರ್ಸ್ ಪೂರ್ಣಗೊಳಿಸದೆಯೇ ಆ್ಯಂಟಿಬಯೋಟಿಕ್ ಸೇವಿಸಿದರೆ ಏನಾಗುತ್ತೆ?
  • ಸ್ವಯಂ ಚಿಕಿತ್ಸೆ ಮಾಡುವುದು ಏಕೆ ಅಪಾಯಕಾರಿ?

ತಲೆನೋವು (Headache), ಆಸಿಡಿಟಿ, ಜ್ವರ ಅಥವಾ ದೇಹ ನೋವು ಕಾಣಿಸಿಕೊಂಡ ತಕ್ಷಣ ವೈದ್ಯರ ಸಲಹೆಯಿಲ್ಲದೆ ಔಷಧಿ ಸೇವಿಸುವ ಅಭ್ಯಾಸ ಹಲವರಲ್ಲಿ ಇದೆ. ಆದರೆ ಈ ಸ್ವಯಂ ಔಷಧಿ (Self-medication) ಪದ್ಧತಿ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟು ಮಾಡಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ. ಹಾಗಾದರೆ ಸ್ವಯಂ ಔಷಧಿ ಸೇವನೆ ಏಕೆ ಅಪಾಯಕಾರಿ, ಇದರಿಂದ ಯಾವ ರೀತಿಯ ತೊಂದರೆಗಳಾಗುತ್ತವೆ, ಯಾಕೆ ವೈದ್ಯರು ಸೂಚಿಸದೆಯೇ ಆ್ಯಂಟಿಬಯೋಟಿಕ್ ಸೇವನೇ ಮಾಡಬಾರದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸ್ವಯಂ ಔಷಧಿ ಸೇವನೆ ಏಕೆ ಅಪಾಯಕಾರಿ?

ಪ್ರತಿಯೊಂದು ಔಷಧಿಯೂ ನಿರ್ದಿಷ್ಟ ಕಾಯಿಲೆಗಾಗಿ ನೀಡಲಾಗುತ್ತದೆ. ಕಾರಣ ತಿಳಿಯದೇ ಪದೇಪದೇ ಔಷಧಿ ಸೇವಿಸಿದರೆ ತಾತ್ಕಾಲಿಕವಾಗಿ ಲಕ್ಷಣಗಳು ಕಡಿಮೆಯಾಗಬಹುದು. ಆದರೆ ಮೂಲ ಕಾಯಿಲೆ ಪತ್ತೆಯಾಗದೇ ಇರುವ ಸಾಧ್ಯತೆ ಇರುತ್ತದೆ. ಇದರಿಂದ ಆರೋಗ್ಯ ಸಮಸ್ಯೆ ಮತ್ತಷ್ಟು ಗಂಭೀರವಾಗಬಹುದು ಅಥವಾ ಪದೇ ಪದೇ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡಬಹುದು.

ಇದನ್ನೂ ಓದಿ: ಬದಲಾಗುತ್ತಿರುವ ಆರೋಗ್ಯ ವ್ಯವಸ್ಥೆಯಲ್ಲಿ ವೈದ್ಯರ ಪಾತ್ರ ಎಷ್ಟು ಮಹತ್ವದ್ದು ಗೊತ್ತಾ?

ಅಡ್ಡಪರಿಣಾಮಗಳ ಅಪಾಯ:

ಈಗಾಗಲೇ ಬೇರೆ ಕಾಯಿಲೆಗೆ ಔಷಧಿ ತೆಗೆದುಕೊಳ್ಳುತ್ತಿರುವವರು ವೈದ್ಯರ ಸಲಹೆಯಿಲ್ಲದೆ ಹೊಸ ಔಷಧಿ ಆರಂಭಿಸಿದರೆ ಔಷಧಿಗಳ ಪರಸ್ಪರ ಪರಿಣಾಮದಿಂದ ಅಡ್ಡಪರಿಣಾಮಗಳು ಉಂಟಾಗಬಹುದು. ಆದ್ದರಿಂದ ವೈದ್ಯರನ್ನು ಭೇಟಿಯಾದಾಗ ನೀವು ಸೇವಿಸುತ್ತಿರುವ ಎಲ್ಲಾ ಔಷಧಿಗಳು, ವಿಟಮಿನ್‌ಗಳು ಹಾಗೂ ಆಯುರ್ವೇದ ಅಥವಾ ಹರ್ಬಲ್ ಉತ್ಪನ್ನಗಳ ಮಾಹಿತಿಯನ್ನು ತಿಳಿಸುವುದು ಮುಖ್ಯ.

ಆ್ಯಂಟಿಬಯೋಟಿಕ್ ದುರುಪಯೋಗ ಬೇಡ

ಅಗತ್ಯವಿಲ್ಲದೆ ಅಥವಾ ವೈದ್ಯರು ಸೂಚಿಸಿದ ಕೋರ್ಸ್ ಪೂರ್ಣಗೊಳಿಸದೆ ಆ್ಯಂಟಿಬಯೋಟಿಕ್ ಸೇವಿಸುವುದರಿಂದ ಆ್ಯಂಟಿಬಯೋಟಿಕ್ ರೆಸಿಸ್ಟೆನ್ಸ್ ಉಂಟಾಗಬಹುದು. ಇದರಿಂದ ಮುಂದಿನ ದಿನಗಳಲ್ಲಿ ಸೋಂಕಿನ ಚಿಕಿತ್ಸೆಯೇ ಕಷ್ಟವಾಗುವ ಅಪಾಯವಿದೆ.

ಏನು ಮಾಡಬೇಕು?

ಸಣ್ಣ ಆರೋಗ್ಯ ಸಮಸ್ಯೆಗಳಿಗೆ ಔಷಧಿಯನ್ನೇ ಮೊದಲ ಪರಿಹಾರ ಎಂದು ಭಾವಿಸಬೇಡಿ. ಸಮಸ್ಯೆ ತೀವ್ರವಾಗಿದ್ದರೆ, ಪದೇಪದೇ ಮರುಕಳಿಸುತ್ತಿದ್ದರೆ ಅಥವಾ ಕಡಿಮೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸಿ. ಸರಿಯಾದ ರೋಗನಿರ್ಣಯ ಮತ್ತು ಸೂಕ್ತ ಚಿಕಿತ್ಸೆಯೇ ಆರೋಗ್ಯದ ಗುಟ್ಟು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us