ದೇಹದಲ್ಲಿ ವಿಟಮಿನ್ ಎ ಕೊರತೆಯಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ? ನಿರ್ಲಕ್ಷಿಸಿದರೆ ಏನಾಗುತ್ತೆ?

ವಿಟಮಿನ್ ಎ ದೇಹಕ್ಕೆ ಅತ್ಯಾವಶ್ಯಕವಾದ ಪೋಷಕಾಂಶವಾಗಿದೆ. ಇದರ ಕೊರತೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಇದರ ಲಕ್ಷಣಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸುವುದು ಬಹಳ ಮುಖ್ಯ. ಹಾಗಾಗಿ ಪ್ರತಿಯೊಬ್ಬರೂ ಕೂಡ ವಿಟಮಿನ್ ಎ ಕೊರತೆಯ ಲಕ್ಷಣಗಳ ಬಗ್ಗೆ ತಿಳಿದುಕೊಂಡು ಅದನ್ನು ನಿವಾರಿಸಿಕೊಳ್ಳಬೇಕು. ಇಲ್ಲವಾದಲ್ಲಿ ಇದು ನಾನಾ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.

ದೇಹದಲ್ಲಿ ವಿಟಮಿನ್ ಎ ಕೊರತೆಯಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ? ನಿರ್ಲಕ್ಷಿಸಿದರೆ ಏನಾಗುತ್ತೆ?
Vitamin A Deficiency: Don't Ignore The
Image Credit source: Getty Images

Updated on: Apr 01, 2026 | 4:41 PM

ವಿಟಮಿನ್ ಎ (Vitamin A) ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರಬಹುದು. ದೇಹವನ್ನು ಆರೋಗ್ಯಕರವಾಗಿಡಲು ಇದು ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕೂ ಮಿಗಿಲಾಗಿ ಕಣ್ಣಿನ ದೃಷ್ಟಿಯನ್ನು ಉತ್ತಮವಾಗಿರಿಸಲು, ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ವಿಟಮಿನ್ ಎ ಕೊರತೆಯಿಂದ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳು, ಪದೇಪದೇ ಸೋಂಕುಗಳು ಮತ್ತು ಚರ್ಮ ಒಣಗುವಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅದರಲ್ಲಿಯೂ ಚಿಕ್ಕ ಮಕ್ಕಳು, ಗರ್ಭಿಣಿಯರು ಮತ್ತು ದುರ್ಬಲ ರೋಗನಿರೋಧಕ ಶಕ್ತಿಯುಳ್ಳವರಲ್ಲಿ ವಿಟಮಿನ್ ಎ ಕೊರತೆಯ ಅಪಾಯ ಹೆಚ್ಚಾಗಿರುತ್ತದೆ. ಸಮತೋಲನಯುತ ಆಹಾರದ ಕೊರತೆ, ಪೋಷಕಾಂಶಗಳ ಅಭಾವ ಮತ್ತು ಅಸ್ವಸ್ಥ ಜೀವನಶೈಲಿ ಇದರ ಪ್ರಮುಖ ಕಾರಣಗಳಾಗಿವೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ವಿಟಮಿನ್ ಎ ಕೊರತೆಯ ಲಕ್ಷಣಗಳ ಬಗ್ಗೆ ತಿಳಿದುಕೊಂಡು ಅದನ್ನು ನಿವಾರಿಸಿಕೊಳ್ಳಬೇಕು. ಇಲ್ಲವಾದಲ್ಲಿ ಇದು ನಾನಾ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.

ವಿಟಮಿನ್ ಎ ಕೊರತೆಯ ಲಕ್ಷಣಗಳು:

  • ರಾತ್ರಿ ವೇಳೆ ಸ್ಪಷ್ಟವಾಗಿ ಕಾಣಿಸದಿರುವುದು ಅಥವಾ ದೃಷ್ಟಿ ದುರ್ಬಲವಾಗುವುದು
  • ಕಣ್ಣುಗಳು ಒಣಗುವುದು ಅಥವಾ ಉರಿಯೂತ
  • ಚರ್ಮ ಒಣಗುವುದು
  • ತುಟಿಗಳು ಬಿರುಕು ಬೀಡುವುದು
  • ಕೂದಲು ದುರ್ಬಲವಾಗುವುದು
  • ಪದೇಪದೇ ಜ್ವರ, ಶೀತ ಅಥವಾ ಸೋಂಕುಗಳು ಕಂಡುಬರುವುದು
  • ಗಾಯಗಳು ಗುಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದು

ಇದನ್ನೂ ಓದಿ: ಮಾವಿನಕಾಯಿ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ ಗೊತ್ತಾ?

ವಿಟಮಿನ್ ಎ ಕೊರತೆಯನ್ನು ತಡೆಗಟ್ಟಲು ಸಲಹೆಗಳು?

ಸಾಮಾನ್ಯವಾಗಿ ವಿಟಮಿನ್ ಎ ಕೊರತೆಯನ್ನು ನಿವಾರಿಸಲು ಆಹಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ. ಕ್ಯಾರೆಟ್, ಪಾಲಕ್ ಮತ್ತು ಹಸಿರು ತರಕಾರಿಗಳು ವಿಟಮಿನ್ ಎ ಯ ಉತ್ತಮ ಮೂಲಗಳಾಗಿವೆ. ಇದರ ಜೊತೆಗೆ ಹಾಲು, ಮೊಟ್ಟೆ ಮತ್ತು ಮೀನು ಕೂಡ ಉಪಯುಕ್ತವಾಗಿವೆ. ಪ್ರತಿದಿನ ಸಮತೋಲನಯುತ ಆಹಾರವನ್ನು ಸೇವಿಸುವುದು ಮತ್ತು ಪೋಷಕಾಂಶಗಳಿಂದ ಸಮೃದ್ಧವಾದ ಆಹಾರಗಳನ್ನು ಸೇರಿಸಿಕೊಳ್ಳುವುದರಿಂದ ಈ ಕೊರತೆಯನ್ನು ತಡೆಯಬಹುದು. ಅಗತ್ಯವಿದ್ದರೆ ವೈದ್ಯರ ಸಲಹೆಯೊಂದಿಗೆ ಪೂರಕಗಳನ್ನು (ಸಪ್ಲಿಮೆಂಟ್ಸ್) ಕೂಡ ಬಳಸಬಹುದು.

ಸರಿಯಾದ ಆಹಾರ ಮಾತ್ರವಲ್ಲ, ಆರೋಗ್ಯಕರ ಜೀವನಶೈಲಿಯೂ ಅತ್ಯಂತ ಮುಖ್ಯವಾಗುತ್ತದೆ. ಸಮಯಕ್ಕೆ ಸರಿಯಾಗಿ ಊಟ ಮಾಡುವುದು, ಜಂಕ್ ಫುಡ್‌ಗಳಿಂದ ದೂರವಿರುವುದು ಮತ್ತು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ವಿಶೇಷವಾಗಿ ಮಕ್ಕಳು ಮತ್ತು ಗರ್ಭಿಣಿಯರು ತಮ್ಮ ಆಹಾರ ಪದ್ಧತಿಯ ಬಗ್ಗೆ ಹೆಚ್ಚಿನ ಗಮನಕೊಡಬೇಕು. ಸರಿಯಾದ ಅಭ್ಯಾಸಗಳನ್ನು ಅಳವಡಿಸಿಕೊಂಡರೆ ದೀರ್ಘಕಾಲ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us