ರೋಗ ನಿರೋಧಕ ಶಕ್ತಿ ಕಡಿಮೆ ಆಗಿರುವುದು ಹೇಗೆ ತಿಳಿಯುತ್ತದೆ?

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 15, 2025 | 6:01 PM

ರೋಗನಿರೋಧಕ ಶಕ್ತಿ ಕಡಿಮೆಯಾದರೆ ನಾನಾ ರೀತಿಯ ರೋಗಗಳು ಬರುತ್ತದೆ. ಸಾಮಾನ್ಯವಾಗಿ ಇದು ಎಲ್ಲರಿಗೂ ತಿಳಿದಿರುವ ವಿಚಾರ ಆದರೆ ನಮ್ಮ ದೇಹವನ್ನು ಆರೋಗ್ಯವಾಗಿ ನೋಡಿಕೊಳ್ಳಲು ಅಥವಾ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ನಾವು ಸೇವನೆ ಮಾಡುವ ಆಹಾರಗಳು ನಮ್ಮನ್ನು ರೋಗಗಳಿಂದ ರಕ್ಷಿಸಬಹುದು. ಹಾಗಾದರೆ ರೋಗನಿರೋಧಕ ಶಕ್ತಿ ಕಡಿಮೆಯಾಗಿದೆ ಎಂಬುದು ಹೇಗೆ ತಿಳಿಯುತ್ತದೆ? ದೇಹ ನಮಗೆ ನೀಡುವ ಸೂಚನೆಗಳೇನು ತಿಳಿದುಕೊಳ್ಳಿ.

ರೋಗ ನಿರೋಧಕ ಶಕ್ತಿ ಕಡಿಮೆ ಆಗಿರುವುದು ಹೇಗೆ ತಿಳಿಯುತ್ತದೆ?
ಸಾಂದರ್ಭಿಕ ಚಿತ್ರ
Image Credit source: Getty Images
Follow us on

ರೋಗನಿರೋಧಕ ಶಕ್ತಿಯು ನಮ್ಮ ದೇಹವನ್ನು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸುತ್ತದೆ. ಇವು ಕಡಿಮೆ ಆದಲ್ಲಿ ನಾನಾ ರೀತಿಯ ರೋಗಗಳು ಬರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ದೇಹದಲ್ಲಿ ರೋಗನಿರೋಧಕ ಶಕ್ತಿ (Immunity) ಚೆನ್ನಾಗಿರುವಂತೆ ನೋಡಿಕೊಳ್ಳಬೇಕು. ಸಾಮಾನ್ಯವಾಗಿ ರೋಗನಿರೋಧಕ ಶಕ್ತಿ ನಾವು ಸೇವನೆ ಮಾಡುವ ಆಹಾರಗಳಿಂದ ಪಡೆದುಕೊಳ್ಳಬಹುದು. ಆದರೆ ಈಗಿನ ಆಹಾರಶೈಲಿಯಿಂದಾಗಿ ಆರೋಗ್ಯಕರ ಆಹಾರಗಳ ಸೇವನೆ ಕಡಿಮೆಯಾಗಿದೆ, ಜಂಕ್ ಫುಡ್ (Junk food) ಸೇವನೆ ಹೆಚ್ಚಾಗಿದೆ. ಈ ರೀತಿಯ ಆಹಾರ ಪದ್ಧತಿಯನ್ನು ಅನುಸರಿಸುವುದು ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಂಡಂತೆ. ಹಾಗಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ನಾವು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ಆದರೆ ರೋಗನಿರೋಧಕ ಶಕ್ತಿ ಕಡಿಮೆಯಾಗಿದೆ ಎಂಬುದು ಹೇಗೆ ತಿಳಿಯುತ್ತದೆ? ದೇಹ ನಮಗೆ ನೀಡುವ ಸೂಚನೆಗಳೇನು ತಿಳಿದುಕೊಳ್ಳಿ. ಅದರ ಜೊತೆಗೆ ರೋಗಗಳು ಬರದಂತೆ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ. ಇದಕ್ಕೆ ಪೂರಕವಾದಂತಹ ಮಾಹಿತಿಯನ್ನು ಡಾ. ಐಶ್ವರ್ಯಾ ಪ್ರಭಾಕರ್ ಎನ್ನುವವರು ತಮ್ಮ ಇನ್ಸ್ಟಾ ಖಾತೆ dr_aish1112kannada ಯಲ್ಲಿ ಹಂಚಿಕೊಂಡಿದ್ದು ಇದಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿದೆ.

ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದರೆ ಈ ರೀತಿಯಾಗುತ್ತೆ;

  • ಪದೇ ಪದೇ ಯೂರಿನ್ ಇನ್ಫೆಕ್ಷನ್ ಆಗುತ್ತದೆ
  • ತಿಂಗಳಿಗೆ ಎರಡು ಮೂರು ಬಾರಿ ಶೀತ, ಜ್ವರ ಬರುತ್ತದೆ.
  • ಗಾಯಗಳು ನಿಧಾನವಾಗಿ ವಾಸಿ ಆಗುತ್ತದೆ.
  • ತುಂಬಾ ಆಯಾಸ ಅಥವಾ ದಣಿದ ಅನುಭವ ಆಗುತ್ತದೆ.
  • ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಜಾಸ್ತಿ ಆಗುತ್ತದೆ
  • ಕಾಲು- ಕೈ ಗಳು ತಣ್ಣಗೆ ಆಗುವಂತಹ ಅನುಭವವಾಗುತ್ತದೆ.
  • ಕೂದಲು ಉದುರುವುದು ಅಥವಾ ತುಂಡು ತುಂಡಾಗಿ ಕೈಗೆ ಬರುವುದು.
  • ಒಂದೇಸಲ ಸಣ್ಣ ಆಗುವಂತದ್ದು.

ಇದನ್ನೂ ಓದಿ: ಮಗುವನ್ನು ಬಟ್ಟೆಯಲ್ಲಿ ಸುತ್ತಿ ಏಕೆ ಮಲಗಿಸುತ್ತಾರೆ ಎಂದು ತಿಳಿದಿದೆಯೇ?

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

  • ಬೆಟ್ಟದ ನೆಲ್ಲಿಕಾಯಿಯನ್ನು ಜೇನು ತುಪ್ಪದಲ್ಲಿ ನೆನೆಸಿ ಒಂದು ಚಮಚ ಪ್ರತಿದಿನ ಬೆಚ್ಚನೆ ನೀರಿನಲ್ಲಿ ಹಾಕಿ ಕುಡಿಯಿರಿ.
  • ವಿಟಮಿನ್ ಸಿ ಅಂಶ ಹೆಚ್ಚಾಗಿರುವಂತಹ ಹಣ್ಣುಗಳು ಅಂದರೆ ಕಿತ್ತಳೆ, ಮೂಸಂಬಿಯನ್ನು ಹೆಚ್ಚಾಗಿ ಸೇವನೆ ಮಾಡಿ. ಅದರ ಜೊತೆಗೆ ಪ್ರತಿನಿತ್ಯ ನಿಂಬೆಹಣ್ಣುಗಳನ್ನು ನಿಮ್ಮ ಆಹಾರದಲ್ಲಿ ಸೇವನೆ ಮಾಡುವುದನ್ನು ಮರೆಯಬೇಡಿ.
  • ವಿಟಮಿನ್ ಡಿ ಇರುವಂತಹ ಆಹಾರಗಳನ್ನು ತಿನ್ನಿ, ಜೊತೆಗೆ ಪ್ರತಿನಿತ್ಯ ಹತ್ತರಿಂದ ಹದಿನೈದು ನಿಮಿಷವಾದರೂ ಸೂರ್ಯನ ಎಳೆ ಬಿಸಿಲಿನಲ್ಲಿ ಸಮಯ ಕಳೆಯಿರಿ.
  • ಪ್ರೊ ಬಯೋಟಿಕ್ಸ್ ಅಂಶ ಹೆಚ್ಚಾಗಿರುವ ಮೊಸರು, ಮಜ್ಜಿಗೆಯನ್ನು ಹೆಚ್ಚು ಹೆಚ್ಚು ಸೇವನೆ ಮಾಡಿ.
  • ಪ್ರತಿದಿನ ಅರಿಶಿನ ಹಾಕಿದ ಹಾಲನ್ನು ಕುಡಿಯಿರಿ.
  • ಪ್ರತಿನಿತ್ಯ ಎರಡರಿಂದ ಮೂರು ಲೀಟರ್ ನೀರು ಕುಡಿಯಿರಿ.
  • ಪ್ರತಿದಿನ ೮ ಗಂಟೆ ನಿದ್ದೆ ಮಾಡಿ.
  • ಒತ್ತಡವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಇದನ್ನೂ ಓದಿ
ಬೇಸಿಗೆಯಲ್ಲಿ ಈಜಾಡಲು ಇಷ್ಟಪಡುವವರು ಈ ವಿಷಯ ಮರೆಯಬೇಡಿ
ಗರ್ಭದಲ್ಲಿರುವ ಮಗು ಸ್ಮಾರ್ಟ್ ಆಗಲು ಈ ರೀತಿ ಮಾಡಿ
ಈ ಮೂರು ಪದಾರ್ಥಗಳನ್ನು ಅಡುಗೆಯಲ್ಲಿ ಬಳಸಿ, ಗ್ಯಾಸ್ಟ್ರಿಕ್ ಸಮಸ್ಯೆ ಬರಲ್ಲ
ಐವಿಎಫ್ ನಲ್ಲಿ ಎಐ ಕೈಚಳಕ! ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ