
ಹುರುಳಿ ಸೇವನೆ ಆರೋಗ್ಯಕ್ಕೆ (health Tips) ಬಹಳ ಒಳ್ಳೆಯದು. ಆದರೆ ಇವುಗಳ ಬಳಕೆ ಅಷ್ಟಾಗಿ ಇಲ್ಲದ ಕಾರಣ ಇದರ ಸೇವನೆ ಕೂಡ ಕಡಿಮೆ ಆಗಿದೆ. ದ್ವಿದಳ ಧಾನ್ಯಗಳಲ್ಲಿಯೇ ಇದು ಅತ್ಯಂತ ಪೌಷ್ಟಿಕಾಂಶ ಇರುವ ಕಾಳಾಗಿರುವುದರಿಂದ ಆದಷ್ಟು ಇದರ ಸೇವನೆ ಮಾಡುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಇದು ದೇಹಕ್ಕೆ ಶಕ್ತಿ ನೀಡುವುದಲ್ಲದೆ ನಾನಾ ರೀತಿಯ ಕಾಯಿಲೆಗಳು ಬರದಂತೆ ತಡೆಯುತ್ತದೆ. ಹಾಗಾಗಿ ಇವುಗಳನ್ನು ಆಹಾರಗಳಲ್ಲಿ ವಿವಿಧ ರೀತಿಯಲ್ಲಿ ಬಳಕೆ ಮಾಡಬಹುದು. ಇದು ರುಚಿಯ ಜೊತೆಗೆ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ನೀಡುತ್ತದೆ. ಅದರಲ್ಲಿಯೂ ಹುರುಳಿ ಸೂಪ್ (Horse gram soup) ಆರೋಗ್ಯಕ್ಕೂ ಒಳ್ಳೆಯದು ಜೊತೆಗೆ ನಾಲಿಗೆಗೆ ರುಚಿಯನ್ನು ನೀಡುತ್ತದೆ. ಹಾಗಾದರೆ ಇದನ್ನು ಸುಲಭವಾಗಿ ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
ಹುರುಳಿಯನ್ನು ನಾನಾ ರೀತಿಯಲ್ಲಿ ಸೇವನೆ ಮಾಡಬಹುದು ಎಂದರೆ ಕೆಲವರಿಗೆ ಆಶ್ಚರ್ಯವಾಗಬಹುದು. ಹುರುಳಿಯನ್ನು ಸಾರು, ಪಲ್ಯಗಳಲ್ಲಿ ಬಳಕೆ ಮಾಡಬಹುದು ಅಥವಾ ಮೊಳಕೆ ಬರಿಸಿ ಸೇವಿಸಬಹುದು ಇದರ ಹೊರತಾಗಿ ಬಿಸಿ ಸೂಪ್ ಮಾಡಿಯೂ ಸೇವನೆ ಮಾಡಬಹುದು. ಅದರಲ್ಲಿಯೂ ಹುರುಳಿಯನ್ನು ಬೇಗ ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದವರು ಅದನ್ನು ಮೊಳಕೆಯೊಡಿಸಿ ಸೇವನೆ ಮಾಡಬಹುದು. ಇದು ಸುಲಭವಾಗಿ ಜೀರ್ಣವಾಗುತ್ತದೆ. ಒಂದು ಬಿಳಿ ಬಟ್ಟೆಯಲ್ಲಿ ಹುರುಳಿಯನ್ನು ಹಾಕಿ ಅದನ್ನು ನೀರಿನಲ್ಲಿ 6 ರಿಂದ 8 ಗಂಟೆಯ ವರೆಗೆ ನೆನೆಸಿಟ್ಟು, ಅನಂತರ ಆ ಹುರುಳಿಯನ್ನು ಬಟ್ಟೆಯಲ್ಲಿ ಕಟ್ಟಿ ಮುಚ್ಚಿಡಿ, ಸುಮಾರು ಮೂರು ದಿವಸಗಳಲ್ಲಿ ಅದು ಮೊಳಕೆಯೊಡೆಯುತ್ತದೆ, ಆ ಮೊಳಕೆಯು ಬೀಜದಿಂದ ಸುಮಾರು ಅರ್ಧ ಅಂಗುಲ ಮೇಲೆ ಬಂದಾಗ, ಅದನ್ನು ಹಾಗೆಯೇ ಸೇವಿಸಬಹುದು. ಆದರೆ ಇದನ್ನು ಚೆನ್ನಾಗಿ ಜಗಿದು ತಿನ್ನಬೇಕು, ಅದು ದೇಹಕ್ಕೆ ಬಹಳ ಒಳ್ಳೆಯದು.
ಇದನ್ನೂ ಓದಿ: ಕುದುರೆ, ಹಸುಗಳಿಗೆ ಆಹಾರವಾಗಿರುವ ಈ ದ್ವಿದಳ ಧಾನ್ಯ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ
ಹುರುಳಿ 1/2 ಕಪ್
ಹುಣಸೇ ಹಣ್ಣಿನ ಪೇಸ್ಟ್ 2 ಟೀ ಸ್ಪೂನ್
ಕಾಳು ಮೆಣಸು 1 ಚಮಚ,
ಸಾಸಿವೆ 1/2 ಚಮಚ
ಕರಿಬೇವು 1 ಎಸಳು
ಕೊತ್ತಂಬರಿ ಸೊಪ್ಪು 1 ಅಥವಾ 2 ಎಸಳು
ರುಚಿಗೆ ತಕ್ಕಂತೆ ಉಪ್ಪು,
ಎಣ್ಣೆ 3 ಚಮಚ
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ