Sprouts Benefits: ಮೊಳಕೆ ಕಾಳುಗಳಿಂದ ಆರೋಗ್ಯ, ಇಲ್ಲಿದೆ ಮೊಳಕೆ ಕಾಳುಗಳ ಸೇವನೆ ಕುರಿತ ಸಂಪೂರ್ಣ ಮಾಹಿತಿ
ನಮ್ಮ ಆರೋಗ್ಯವು ನಾವು ಏನು ತಿನ್ನುತ್ತೇವೆ , ಎಷ್ಟು ಆರೋಗ್ಯಕರ ಆಹಾರಗಳತ್ತ ಗಮನ ಹರಿಸುತ್ತೇವೆ ಎಂಬುದು ಅತ್ಯಂತ ಮುಖ್ಯವಾಗುತ್ತದೆ.
ನಮ್ಮ ಆರೋಗ್ಯವು ನಾವು ಏನು ತಿನ್ನುತ್ತೇವೆ , ಎಷ್ಟು ಆರೋಗ್ಯಕರ ಆಹಾರಗಳತ್ತ ಗಮನ ಹರಿಸುತ್ತೇವೆ ಎಂಬುದು ಅತ್ಯಂತ ಮುಖ್ಯವಾಗುತ್ತದೆ. ದೈನಂದಿನ ಜೀವನದಲ್ಲಿ, ಒಬ್ಬ ವ್ಯಕ್ತಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಡನಾಗಬೇಕಾದರೆ ಆತನ ದಿನ ನಿತ್ಯದ ಆಹಾರ ಕ್ರಮ ಪ್ರಮುಖ ಪಾತ್ರ ವಹಿಸುತ್ತದೆ. ಒಬ್ಬ ವ್ಯಕ್ತಿಯು ಜೀವಿತಾವಧಿಯಲ್ಲಿ ಗಳಿಸಬಹುದಾದ ಅತ್ಯಮೂಲ್ಯ ಆದಾಯವೆಂದರೆ ಉತ್ತಮ ಆರೋಗ್ಯ.
ಮೊಳಕೆ ಕಾಳುಗಳಲ್ಲಿ ಹಲವಾರು ವಿಧಗಳನ್ನು ಕಾಣಬಹುದು. ಉದಾಹರಣೆ ಹೆಸರು ಕಾಳು, ಅಲಸಂಡೆ, ಉರುಳಿ, ಕಡಲೆ ಕಾಳು ಮುಂತಾದವುಗಳು. ಇವುಗಳು ಆರೋಗ್ಯಕ್ಕೆ ಎಷ್ಟು ಲಾಭದಾಯಕ ಎಂಬುದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಯಾವುದೇ ಆಹಾರ ಪದಾರ್ಥಗಳನ್ನು ಸೇವನೆಗೆ ಮುಂಚಿತವಾಗಿ ಚೆನ್ನಾಗಿ ಶುಚಿಗೊಳಿಸುವುದು ಅಗತ್ಯ. ಚೆನ್ನಾಗಿ ತೊಳೆದು ಮೊಳಕೆ ಕಾಳುಗಳನ್ನು ಶುಭ್ರಬಟ್ಟೆಯಲ್ಲಿ ಮಡಚಿ ,ನೀರು ಸಿಂಪಡಿಸಿ ,ಎರಡು ದಿನಗಳ ವರೆಗೆ ಇಟ್ಟಾಗ ಮೊಳಕೆ ಬಂದಿರುತ್ತದೆ. ಈ ಮೊಳಕೆ ಕಾಳುಗಳನ್ನು ತಾವು ದಿನ ನಿತ್ಯ ತಿನ್ನುವ ಆಹಾರ ಪದಾರ್ಥಗಳ ಜೊತೆ ತಿನ್ನಬಹುದು. ಮಕ್ಕಳ ಆಹಾರದ ಜೊತೆಗೆ ತಿನ್ನಲು ಕೊಡಿ. ಇದ್ದರಿಂದ ದೇಹದಲ್ಲಿ ಪ್ರೊಟೀನ್ ಅಂಶ ಹೆಚ್ಚಾಗುತ್ತದೆ.
ಆರೋಗ್ಯ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರವು ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ. ಆಂಗನವಾಡಿಗಳಲ್ಲಿ ಮಕ್ಕಳಿಗೆ ಹಾಗು ಗರ್ಭಿಣಿಯರಿಗೆ ಕಾಳುಗಳನ್ನು ಉಚಿತವಾಗಿ ನೀಡಲಾಗುತ್ತದೆ.
ಆಹಾರ ತಜ್ಞರ ಪ್ರಕಾರ ದ್ವಿದಳ ಧಾನ್ಯಗಳು ಯಾವುದೇ ಇರಲಿ ಮೊಳಕೆ ಬರಿಸಿ ಸೇವಿಸುವುದು ಪ್ರಯೋಜನಕಾರಿ ಎನ್ನುತ್ತಾರೆ. ಮೊಳಕೆ ಬಂದ ಕಾಳುಗಳಲ್ಲಿ ಫೀನಾಲ್ ಗಳು ಮತ್ತು ಪ್ರೋಟೋನ್ಯೂಯೆಂಟ್ ಆಂಟಿ ಆಕ್ಯಿಂಡೆಟ್ ಚಟುವಟಿಕೆಗಳಲ್ಲಿ ಗಣನೀಯ ಪರಿಣಾಮ ಕಂಡುಬರುತ್ತದೆ.
ನಿಯಮಿತವಾದ ಸೇವನೆಯಿಂದ ಆರೋಗ್ಯದ ಸುಧಾರಣೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಗರ್ಭಿಣಿಯರಿಗೆ, ಬೆಳೆಯುವ ಮಕ್ಕಳಿಗೆ ವೃದ್ಧರಿಗೆ ಸೇರಿದಂತೆ ಎಲ್ಲಾ ವಯೋಮಾನದವರು ಸೇವಿಸಬಹುದು.ಮೊಳಕೆ ಬರಿಸಿದ ಕಾಳುಗಳಲ್ಲಿ ಸಮೃದ್ಧವಾಗಿ ನಾರಿನಂಶ ಹಾಗೂ ಒಮೆಗಾ-3 ಕೊಬ್ಬಿನಾಮ್ಲಗಳು ಇರುತ್ತವೆ. ಇದನ್ನು ನಿತ್ಯ ಸೇವಿಸುವುದರಿಂದ ಚಯಾಪಚಯ ಕ್ರಿಯೆ ಸುಧಾರಿಸುವುದು. ಮಲಬದ್ಧತೆ, ಅತಿಸಾರ ಹಾಗೂ ಕರುಳಿನ ಕ್ಯಾನ್ಸರ್ ಆಗುವುದನ್ನು ತಡೆಯುವುದು. ಇದು ಪೋಷಕಾಂಶಳನ್ನು ಹೀರಿಕೊಳ್ಳಲು ಸಹಾಯ ಮಾಡುವುದು. ಜೊತೆಗೆ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
ಮೊಳಕೆ ಬರಿಸಿದ ಕಾಳು ಮಿತಿ ಮೀರಿ ಸೇವಿಸಿದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಸಹ ಬೀರುವ ಸಾಧ್ಯತೆಗಳು ಇವೆ. ಹಾಗಾಗಿ ಮೊಳಕೆ ಬರಿಸಿದ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ಯಾವ ರೀತಿಯ ಪೂರಕ ಹಾಗೂ ಮಾರಕ ಪ್ರಭಾವ ಉಂಟಾಗುತ್ತದೆ ಎನ್ನುವುದನ್ನು ತಿಳಿದಿರಬೇಕು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ