ರಾತ್ರಿ ಮಲಗುವ 3 ಗಂಟೆ ಮುಂಚಿತವಾಗಿ ಊಟ ಮಾಡಿ; ಈ ರೋಗ ಬೇಕು ಅಂದ್ರು ಬರುವುದಿಲ್ಲ!

ನೀವು ರಾತ್ರಿ ಮಲಗುವ 3 ಗಂಟೆಗಳ ಮೊದಲು ಆಹಾರ ಸೇವನೆ ಮಾಡುತ್ತೀರಾ? ಹಾಗಿದ್ರೆ ನೀವು ಆರೋಗ್ಯಕರ ಜೀವನ ನಡೆಸುತ್ತಿದ್ದೀರಿ ಎಂದರ್ಥ. ಈ ಒಂದು ಅಭ್ಯಾಸ ದೇಹಕ್ಕೆ ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ. ಅಷ್ಟು ಮಾತ್ರವಲ್ಲ ಈ ಆರೋಗ್ಯಕರ ಅಭ್ಯಾಸ ಅನೇಕ ರೀತಿಯ ರೋಗಗಳನ್ನು ಸುಲಭವಾಗಿ ತಡೆಗಟ್ಟಲು ಸಹಾಯ ಮಾಡುತ್ತದೆ. ಇದು ಸಂಶೋಧನೆಯಿಂದಲೂ ಬಹಿರಂಗಗೊಂಡಿದೆ. ಹಾಗಾದರೆ ಈ ಅಧ್ಯಯನ ಹೇಗೆ ನಡೆದಿತ್ತು, ಮಲಗುವ 3 ಗಂಟೆಗಳ ಮೊದಲು ಆಹಾರ ಸೇವನೆ ಮಾಡುವುದರಿಂದ ಯಾವ ರೀತಿಯ ಕಾಯಿಲೆಗಳಿಂದ ದೂರವಿರಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ರಾತ್ರಿ ಮಲಗುವ 3 ಗಂಟೆ ಮುಂಚಿತವಾಗಿ ಊಟ ಮಾಡಿ; ಈ ರೋಗ ಬೇಕು ಅಂದ್ರು ಬರುವುದಿಲ್ಲ!
Improve Blood Pressure by Changing Your Dinner Timing
Image Credit source: Getty Images

Updated on: Mar 19, 2026 | 9:55 PM

ನೀವು ರಾತ್ರಿ ಮಲಗುವ ಮೊದಲು ಸೇವನೆ ಮಾಡುವ ಆಹಾರ ಆರೋಗ್ಯ ಕಾಪಾಡಿಕೊಳ್ಳಲು ತುಂಬಾ ಮುಖ್ಯವಾಗುತ್ತದೆ. ಅದರಲ್ಲಿಯೂ ಆಹಾರವನ್ನು 3 ಗಂಟೆಗಳ ಮೊದಲು ಸೇವನೆ ಮಾಡಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಒಂದು ಅಭ್ಯಾಸ ಅನೇಕ ರೀತಿಯ ರೋಗಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಅಷ್ಟು ಮಾತ್ರವಲ್ಲ, ಇದಕ್ಕೆ ಪೂರಕವಾಗಿ ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದು, ವ್ಯಕ್ತಿ ಮಲಗುವ 3 ಗಂಟೆಗಳ ಮೊದಲು ಆಹಾರ ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡದಿಂದ (Hypertension) ಹೃದಯ ಸಂಬಂಧಿ ಕಾಯಿಲೆಯ ವರೆಗೆ ಎಲ್ಲದರ ಅಪಾಯ ಕಡಿಮೆಯಾಗುತ್ತದೆ ಎಂದು ಹೇಳಿದೆ.

ಸಂಶೋಧನೆಯ ಪ್ರಕಾರ, ರಾತ್ರಿ ಮಲಗುವ ಮುನ್ನ ಹಲವಾರು ಗಂಟೆಗಳ ಮೊದಲು ಆಹಾರವನ್ನು ಸೇವಿಸುವುದರಿಂದ ಚಯಾಪಚಯ ಕ್ರಿಯೆ ಉತ್ತಮವಾಗುತ್ತದೆ ಮತ್ತು ನಿದ್ರೆ ಸರಿಯಾಗಿ ಆಗಲು ಸಹಾಯವಾಗುತ್ತದೆ. ಅಷ್ಟು ಮಾತ್ರವಲ್ಲ, ಇದು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ದೇಹವು ಸಿರ್ಕಾಡಿಯನ್ ಲಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಆದರೆ ತಡವಾಗಿ ಊಟ ಮಾಡಿದಲ್ಲಿ, ದೇಹದ ಸಿರ್ಕಾಡಿಯನ್ ಲಯ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಜೊತೆಗೆ ಸಮಯವಲ್ಲದ ಸಮಯಕ್ಕೆ ಊಟ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಯು ರಾತ್ರಿಯಿಡೀ ಸಕ್ರಿಯವಾಗಿದ್ದು ಕೆಲಸ ಮಾಡುತ್ತದೆ. ಆಗ ಚಯಾಪಚಯ ಕ್ರಿಯೆಗೆ ಅಡ್ಡಿಯಾಗುತ್ತದೆ. ಪರಿಣಾಮವಾಗಿ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದ್ರೋಗದಂತಹ ಅಪಾಯ ಕೂಡ ಹೆಚ್ಚಾಗುತ್ತದೆ.

ಇದನ್ನೂ ಓದಿ: ಒತ್ತಡ, ಸ್ಕ್ರೀನ್‌ ಸಮಯದ ಹೆಚ್ಚಳದಿಂದ ಉಂಟಾಗುತ್ತಿದೆ ನಿದ್ರೆ ಸಮಸ್ಯೆ: ನಗರದ ಜನರಿಗೆ ವೈದ್ಯರ ಎಚ್ಚರಿಕೆ

ಅಧ್ಯಯನ ಹೇಗೆ ನಡೆದಿದೆ?

ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು 36 ರಿಂದ 75 ವರ್ಷದ 139 ಓವರ್‌ವೆಟ್ ವ್ಯಕ್ತಿಗಳನ್ನು ಅಧ್ಯಯನದಲ್ಲಿ ಸೇರಿಸಿಕೊಂಡಿದ್ದು, ಅವರಲ್ಲಿ ಡಯಾಬಿಟಿಸ್ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿದ್ದು ಅವರನ್ನು ಎರಡು ಗುಂಪುಗಳಲ್ಲಿ ವಿಂಗಡನೆ ಮಾಡಿದ್ದಾರೆ. ಅದರಲ್ಲಿ ಒಂದು ಗುಂಪು 16 ಗಂಟೆಗಳ ಉಪವಾಸ, ಮತ್ತೊಂದು ಗುಂಪು 13 ಗಂಟೆಗಳ ಉಪವಾಸವಿದ್ದು, ಎರಡೂ ಗುಂಪುಗಳಿಗೂ ಮಲಗುವ 3 ಗಂಟೆಗಳ ಮೊದಲು ಊಟ ಕೊಟ್ಟು ಬೆಳಕು ಕಡಿಮೆ ಇರುವಂತಹ ಜಾಗದಲ್ಲಿರಲು ಸಲಹೆ ನೀಡಲಾಗಿತ್ತು. ಹೆಚ್ಚು ಉಪವಾಸ ಮಾಡಿದ ಗುಂಪಿನಲ್ಲಿ ರಕ್ತದ ಒತ್ತಡ ಕಡಿಮೆಯಾಯಿತು, ಶುಗರ್ ನಿಯಂತ್ರಣಕ್ಕೆ ಬಂದಿತು ಮತ್ತು ಇನ್ಸುಲಿನ್ ಸಂವೇದನಾಶೀಲತೆ ಹಾಗೂ ಗ್ಲೂಕೋಸ್ ಟಾಲರೆನ್ಸ್ ಕೂಡ ಉತ್ತಮವಾಯಿತು.

ಆರೋಗ್ಯ ಕಾಪಾಡಿಕೊಳ್ಳಲು ಸಲಹೆಗಳು:

ರಾತ್ರಿ ಊಟವನ್ನು ಸಂಜೆ 8 ಗಂಟೆಗೂ ಮುಂಚೆ ಮುಗಿಸಿಕೊಳ್ಳಿ, ರಾತ್ರಿ 11 ಗಂಟೆಗೂ ಮುಂಚೆ ಮಲಗಲು ಪ್ರಯತ್ನಿಸಿ, ಈ ನಿಯಮವನ್ನು ಪಾಲಿಸುವ ಮೊದಲು ಡಾಕ್ಟರ್ ಸಲಹೆ ಪಡೆಯುವುದು ಅತ್ಯಗತ್ಯ. ಈ ಸರಳ ಕ್ರಮದಿಂದ ಉತ್ತಮ ನಿದ್ರೆ, ಹೈ ಬ್ಲಡ್ ಪ್ರೆಶರ್ ನಿಯಂತ್ರಣ ಮತ್ತು ಪಚನ ವ್ಯವಸ್ಥೆಯನ್ನು ಸುಧಾರಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us