AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾನವನ ಜೀರ್ಣಾಂಗ ವ್ಯವಸ್ಥೆಯ ರಚನೆಯು ವ್ಯಕ್ತಿಯಿಂದ ವ್ಯಕಿಗೆ ಭಿನ್ನವಾಗಿರುತ್ತದೆ: ಸಂಶೋಧನೆ

ಪ್ರತಿ ವ್ಯಕ್ತಿಯ ಜೀರ್ಣಾಂಗ ವ್ಯವಸ್ಥೆಯು ಹೇಗೆ ಬದಲಾಗುತ್ತದೆ, ಅದು ಆರೋಗ್ಯವನ್ನು ಹೇಗೆ ನಿರ್ಧರಿಸುತ್ತದೆ ಮತ್ತು ಕರುಳಿನ ಸೂಕ್ಷ್ಮಜೀವಿಯ ಪರಿಸರ ವ್ಯವಸ್ಥೆಯನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದರ ಕುರಿತು ಈ ಅಧ್ಯಯನವು ಬೆಳಕು ಚೆಲ್ಲಿದೆ.

ಮಾನವನ ಜೀರ್ಣಾಂಗ ವ್ಯವಸ್ಥೆಯ ರಚನೆಯು ವ್ಯಕ್ತಿಯಿಂದ ವ್ಯಕಿಗೆ ಭಿನ್ನವಾಗಿರುತ್ತದೆ: ಸಂಶೋಧನೆ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: Apr 26, 2023 | 12:16 PM

Share

ಇತ್ತೀಚಿನ ಅಧ್ಯಯನವೊಂದು ಮಾನವನ ಜೀರ್ಣಾಂಗ ವ್ಯವಸ್ಥೆಯ ರಚನೆಯು ವ್ಯಕ್ತಿಯಿಂದ ವ್ಯಕ್ತಿಗೆ ಗಮನಾರ್ಹವಾಗಿ ಬದಲಾಗುತ್ತದೆ ಎಂದು ಹೇಳಿದೆ. ಈ ಆವಿಷ್ಕಾರವು ಜೀರ್ಣಾಂಗವ್ಯೂಹದ ರಚನೆಯು ಮಾನವನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸಲು ಸಹಾಯ ಮಾಡುತ್ತದೆ ಮತ್ತು ಕರುಳಿನ ಸೂಕ್ಷ್ಮಜೀವಿಯ ಪರಿಸರ ವ್ಯವಸ್ಥೆ ಮತ್ತು ವೈದ್ಯಕೀಯ ನಿರ್ಣಯವನ್ನು ಹೇಗೆ ಮಾಡಲಾಗುತ್ತದೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ. ಈ ಅಧ್ಯಯನವು ಪೀರ್ಜೇ ಜರ್ನಲ್ ನಲ್ಲಿ ಪ್ರಕಟವಾಗಿದೆ.

ಮನುಷ್ಯನ ಕರುಳಿನ ಉದ್ದದ ವ್ಯತ್ಯಾಸವನ್ನು ಕಂಡುಹಿಡಿದ ಒಂದು ಸಂಶೋಧನೆ ಇತ್ತು. ಆದರೆ ಅಂದಿನಿಂದ ಆ ಕರುಳಿನ ಪ್ರದೇಶವನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗಿದೆ ಎಂದು ಅಧ್ಯಯನದ ಸಹ ಲೇಖಕ ಹಾಗೂ ಉತ್ತರ ಕೆರೊಲಿನ ಆಸ್ಟೆಟ್ ಯೂನಿವರ್ಸಿಟಿಯ ಪಿ.ಎಚ್.ಡಿ ಅಭ್ಯರ್ಥಿ ಅಮಂಡಾ ಹೇಲ್ ಹೇಳುತ್ತಾರೆ. ನಾವು ಈ ಸಮಸ್ಯೆಯನ್ನು ಅನ್ವೇಷಿಸಲು ಪ್ರಾರಂಭಿಸಿದಾಗ, ನಾನು ಅದರಲ್ಲಿ ಕಂಡುಕೊಂಡ ವ್ಯತ್ಯಾಸದ ಪ್ರಮಾಣವನ್ನು ನೋಡಿ ಆಶ್ಚರ್ಯಚಕಿತರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

ಜನರಿಂದ ಜನರಿಗೆ ವಿಭಿನ್ನ ರೀತಿಯ ಕರುಳಿನ ಗಾತ್ರದ ರಚನೆ ಇರುತ್ತದೆ. ಉದಾಹರಣೆಗೆ, ಸೆಕೆಮ್ ದೊಡ್ಡ ಮತ್ತು ಸಣ್ಣ ಕರುಳಿನ ಜೋಡಣೆಯಲ್ಲಿ ಕಂಡುಬರುವ ಒಂದು ಅಂಗವಾಗಿದೆ. ಒಬ್ಬ ವ್ಯಕ್ತಿಯು ಕೆಲವೇ ಸೆಂ. ಮೀಗಳಷ್ಟು ಉದ್ದವಿರುವ ಸೆಕೆಮ್​​​ನ್ನು ಹೊಂದಿರಬಹದು, ಆದರೆ ಇನ್ನೊಬ್ಬ ವ್ಯಕ್ತಿ ನಾಣ್ಯದ ಗಾತ್ರದ ಸೆಕೆಮ್​​​ನ್ನು ಹೊಂದಿರಬಹುದು. ಅನೇಕ ಜೀರ್ಣಕಾರಿ ಅಂಗಗಳಲ್ಲಿ ಇದೇ ರೀತಿಯ ವ್ಯತ್ಯಾಸಗಳು ಕಂಡುಬಂದಿದೆ ಎಂದು ಈ ಅಧ್ಯಯನ ಅನ್ವಯಿಕ ಲೇಖಕ ಹಾಗೂ ಎನ್.ಸಿ ಸ್ಟೇಟ್​​ನ ಅಪ್ಲೇಯ್ಡ್ ಎಕೋಲಜಿಯ ಸಹಾಯಕ ಪ್ರಾಧ್ಯಪಕ ಎರಿನ್ ಮೆಕೆನ್ನೆ ಹೇಳುತ್ತಾರೆ.

ಇದನ್ನೂ ಓದಿ:Art Of Yoga: ಸಮಾನವಾಯು ಎಂದರೇನು? ಮಾನವನ ದೇಹದಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತದೆ? ಅದರ ಮಹತ್ವವೇನು?

ಮತ್ತೊಂದು ಅಂಶವೆಂದರೆ ಮಹಿಳೆಯರು ಪುರುಷರಿಗಿಂತ ಉದ್ದವಾದ ಸಣ್ಣಕರುಳನ್ನು ಹೊಂದಿರುತ್ತಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಉದ್ದವಾದ ಸಣ್ಣ ಕರುಳು ನಾವು ಸೇವಿಸುವ ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ಒತ್ತಡದ ಅವಧಿಯಯಲ್ಲಿ ಮಹಿಳೆಯರು ಹೆಚ್ಚುಕಾಲ ಬದುಕಬಲ್ಲರು ಎಂದು ಇದು ಪ್ರತಿಪಾದಿಸುತ್ತದೆ ಎಂದು ಅಮಂಡಾ ಹೇಲ್ ಹೇಳುತ್ತಾರೆ.

ಮಾನವನ ಕರುಳಿನ ಅಂಗರಚನಾಶಾಸ್ತ್ರದಲ್ಲಿ ನಾವು ಯೋಚಿಸಿದ್ದಕ್ಕಿಂತ ಹೆಚ್ಚಿನ ವ್ಯತ್ಯಾಸಗಳಿವೆ, ಇದು ಆರೋಗ್ಯ ಸಂಬಂದಿತ ಸಮಸ್ಯೆಗಳ ವ್ಯಾಪ್ತಿಯನ್ನು ಪ್ರೇರೇಪಿಸುತ್ತದೆ ಮತ್ತು ನಾವು ಅವುಗಳನ್ನು ಹೇಗೆ ಪರಿಗಣಿಸುತ್ತೇವೆ ಎಂಬುದರ ಕುರಿತು ನಮ್ಮ ತಿಳುವಳಿಕೆಯನ್ನು ತಿಳಿಸುತ್ತದೆ ಎಂದು ಮೆಕೆನ್ನೆ ಹೇಳುತ್ತಾರೆ.

ಈ ಅಧ್ಯಯನಕ್ಕಾಗಿ ಸಂಶೋಧಕರು ಡ್ಯೂಕ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ನಲ್ಲಿ ಅಂಗರಚನಾಶಾಸ್ತ್ರದ ಉಡುಗೊರೆಗಳ ಕಾರ್ಯಕ್ರಮಕ್ಕೆ ತಮ್ಮ ಅಂಗಗಳನ್ನು ದಾನ ಮಾಡಿದ 45 ಜನರ ಜೀರ್ಣಕಾರಿ ಅಂಗಗಳನ್ನು ಅಳೆಯುತ್ತಾರೆ. ಈ ಅಧ್ಯಯನವು ಅಂಗರಚನಾಶಾಸ್ತ್ರದಲ್ಲಿನ ಅನಿರೀಕ್ಷಿತ ವ್ಯತ್ಯಾಸದ ಮೇಲೆ ಬೆಳಕು ಚೆಲ್ಲುವುದುರ ಜೊತೆಗೆ, ಈ ಅಧ್ಯಯನವು ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಂಗರಚನಾ ಬದಲಾವಣೆಯನ್ನು ಕಲಿಸುವ ಪ್ರಾಮುಖ್ಯತೆಯನ್ನು ಮರುಶೋಧಿಸಲು ಕಾರಣವಾಯಿತು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ