Depression: ಖಿನ್ನತೆಗೆ ಒಳಗಾಗುವವರಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು
ಖಿನ್ನತೆಗೆ ಒಳಗಾಗುವವರಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಎಂಬುದು ಅಧ್ಯಯನವೊಂದರಿಂದ ತಿಳಿದುಬಂದಿದೆ. ಯಾವುದೇ ವಿಚಾರವನ್ನಾಗಲಿ ಮಹಿಳೆಯರು ಪುರುಷರಿಗಿಂತ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ,
ಖಿನ್ನತೆಗೆ ಒಳಗಾಗುವವರಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಎಂಬುದು ಅಧ್ಯಯನವೊಂದರಿಂದ ತಿಳಿದುಬಂದಿದೆ. ಯಾವುದೇ ವಿಚಾರವನ್ನಾಗಲಿ ಮಹಿಳೆಯರು ಪುರುಷರಿಗಿಂತ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ, ಸಣ್ಣ ಪುಟ್ಟ ವಿಚಾರಗಳನ್ನು ಕೂಡ ಮನಸ್ಸಿನಲ್ಲಿಟ್ಟುಕೊಂಡು ಕೊರಗುತ್ತಾರೆ. ಆದರೆ ಪುರುಷರು ಸಣ್ಣ ಪುಟ್ಟ ವಿಷಯಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ.
ಖಿನ್ನತೆಯನ್ನು ಹೋಗಲಾಡಿಸಲು ಚಿಕಿತ್ಸೆಗಳಿವೆ ಎಂಬ ವಾಸ್ತವದ ಹೊರತಾಗಿಯೂ ಕೆಲವೊಮ್ಮೆ ಈ ಚಿಕಿತ್ಸೆಗಳು ನಿಷ್ಪರಿಣಾಮಕಾರಿಯಾಗಿರುತ್ತದೆ. ಬಯೋಲಾಜಿಕಲ್ ಸೈಕ್ಯಾಟ್ರಿ ಎಂಬ ಜರ್ನಲ್ನಲ್ಲಿ ಈ ಕುರಿತು ವಿವರಿಸಲಾಗಿದೆ.
ಖಿನ್ನತೆಯ ಸಮಯದಲ್ಲಿ ಮೆದುಳಿನ ನಿರ್ದಿಷ್ಟ ಭಾಗವಾದ ನ್ಯೂಕ್ಲಿಯಸ್ ಅಕ್ಯೂಂಬೆನ್ಸ್ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನ್ಯೂಕ್ಲಿಯಸ್ ಅಕ್ಯೂಂಬೆನ್ಸ್ ಪ್ರೇರಣೆ, ಲಾಭದಾಯಕ ಅನುಭವಗಳಿಗೆ ಪ್ರತಿಕ್ರಿಯೆ ಮತ್ತು ಸಾಮಾಜಿಕ ಸಂವಹನಗಳಿಗೆ ಮುಖ್ಯವಾಗಿದೆ ಹಾಗೆಯೇ ಇವೆಲ್ಲವೂ ಖಿನ್ನತೆಯಿಂದ ಪ್ರಭಾವಿತವಾಗಿರುತ್ತದೆ.
ನ್ಯೂಕ್ಲಿಯಸ್ ಅಕ್ಯೂಂಬೆನ್ಸ್‌ನೊಳಗಿನ ಹಿಂದಿನ ವಿಶ್ಲೇಷಣೆಗಳು ಮಹಿಳೆಯರಲ್ಲಿ ವಿಭಿನ್ನ ಜೀನ್‌ಗಳನ್ನು ಆನ್ ಅಥವಾ ಆಫ್ ಮಾಡಲಾಗುತ್ತಿದೆ ಎಂದು ತೋರಿಸಿದೆ. ಆದರೆ ಖಿನ್ನತೆಯಿಂದ ಬಳಲುತ್ತಿರುವ ಪುರುಷರಲ್ಲಿ ಇದ್ಯಾವುದೂ ನಡೆದಿಲ್ಲ. ಈ ಬದಲಾವಣೆಗಳು ಖಿನ್ನತೆಯ ಲಕ್ಷಣಗಳನ್ನು ಉಂಟುಮಾಡಬಹುದು ಅಥವಾ ಪರ್ಯಾಯವಾಗಿ, ಖಿನ್ನತೆಯ ಅನುಭವವು ಮೆದುಳಿನ ನಿಯಮವನ್ನು ಬದಲಾಯಿಸಬಹುದು.
ಕೆಲವೊಮ್ಮೆ ಜೀವನದಲ್ಲಿ ಬೇಸರವಾಗುವ ಅಥವಾ ಕಹಿಘಟನೆಗಳು ನಡೆದಾಗ ನಮಗೆ ದುಃಖವಾಗುವುದು ಸಹಜ. ಆದರೆ ಈ ಭಾವನೆ ತುಂಬಾ ದಿನಗಳವರೆಗೆ ಇದ್ದು ಅಥವಾ ಮತ್ತೆ ಮತ್ತೆ ಕಾಣಿಸಿಕೊಂಡರೆ ನಮ್ಮ ಸಾಮಾನ್ಯ ಜೀವನದಲ್ಲಿ ಭಾವನಾತ್ಮಕ ಹಾಗೂ ಆತ್ಮವಿಶ್ವಾಸದಲ್ಲಿ ಕುಸಿತ ಉಂಟಾಗುವುದು.
ಹೀಗೆ ಭಾವನಾತ್ಮಕವಾಗಿ ಯಾವುದೇ ಆಶಯವೂ ಇಲ್ಲದೆ ಇರುವ ಮಾನಸಿಕ ಸ್ಥಿತಿಯನ್ನು ಖಿನ್ನತೆ ಎಂದು ಹೇಳಲಾಗುತ್ತದೆ. ಖಿನ್ನತೆ ಉಂಟಾದರೆ ದಿನನಿತ್ಯದ ಚಟುವಟಿಕೆಗಳಲ್ಲಿ ಆಲೋಚಿಸುವ, ಭಾವಿಸುವಂತಹ ರೀತಿಯು ಬದಲಾಗುತ್ತದೆ.
ನಿಜವಾಗಿ ಹೇಳಬೇಕೆಂದರೆ ಖಿನ್ನತೆ ಎಂದರೆ ದುರ್ಬಲತೆ ಅಥವಾ ಮಾನಸಿಕ ಅಸ್ಥಿರತೆ ಅಲ್ಲ. ಇದು ಡಯಾಬಿಟೀಸ್, ರಕ್ತದ ಒತ್ತಡ ಅಥವಾ ಹೃದಯ ಸಮಸ್ಯೆಯಂತೆಯೇ ಒಂದು ಖಾಯಿಲೆ. ಖಿನ್ನತೆ ಯಾರಿಗಾದರೂ, ಯಾವ ವಯಸ್ಸಿನಲ್ಲಾದರೂ ಕಾಣಿಸಿಕೊಳ್ಳಬಹುದು.
ಖಿನ್ನತೆಯು ವೃತ್ತಿ, ಶಿಕ್ಷಣ, ಊಟ, ನಿದ್ರೆ, ಭಾವನೆಗಳು, ವರ್ತನೆ, ಸಂಬಂಧಗಳು, ಕೆಲಸ ಮಾಡುವ ಸಾಮರ್ಥ್ಯ ಎಲ್ಲದರ ಮೇಲೆ ಪರಿಣಾಮ ಬೀರುತ್ತದೆ. ತೀವ್ರವಾದ ಖಿನ್ನತೆ ಇರುವ ವ್ಯಕ್ತಿ ಆತ್ಮಹತ್ಯೆಯ ಪ್ರಯತ್ನ ಕೂಡ ಮಾಡಬಹುದು.
ಇತರ ಆರೋಗ್ಯ ಸಮಸ್ಯೆಗಳಂತೆಯೇ ಖಿನ್ನತೆಯೂ ಒಂದು ಸಮಸ್ಯೆ. ಎಲ್ಲಾ ಸಮಸ್ಯೆಗಳಿಗೆ ಪರಿಹಾರದ ಮಾರ್ಗೋಪಾಯಗಳು ಇರುವಂತೆ ಇದಕ್ಕೂ ಪರಿಹಾರವಿದೆ.
Published On - 9:47 am, Wed, 20 July 22