Diabetes: ಯಾವುದೇ ಟೈಪ್ ಮಧುಮೇಹಕ್ಕೂ ಇಲ್ಲಿದೆ ನೋಡಿ ರಾಮಬಾಣ -ಇವುಗಳನ್ನು ಪಾಲಿಸಿ ಸಾಕು
* ಪ್ರತಿನಿತ್ಯ ನಿಂಬೆ ಹಣ್ಣಿನ ರಸ ಸೇವಿಸುವುದರಿಂದ ಮಧುಮೇಹದ ರೋಗಿಗಳು ಗುಣವಾಗುತ್ತಾರೆ. * ದಿನವು ನೇರಳೆ ಹಣ್ಣಿನ ಬೀಜವನ್ನು ಚೆನ್ನಾಗಿ ಅರೆದು, ನೀರಿನ ಜೊತೆಗೆ ನುಂಗಿದರೆ ಕೆಲವು ದಿನಗಳಲ್ಲೇ ಮಧುಮೇಹ ದೂರವಾಗುತ್ತದೆ. * ಆಂಜೂರದ ಸೇವನೆ ಮಧುಮೇಹಿ ರೋಗಿಗಳಿಗೆ ಒಳ್ಳೆಯದು.
ಮಧುಮೇಹಿಗಳು ಬೆಂಡೆಕಾಯಿ ತಿನ್ನುವುದರಿಂದ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು: ಕಡಿಮೆ GI ಪ್ರಮಾಣ: ಮಧುಮೇಹಿಗಳಿಗೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (GI) ಇರುವ ಆಹಾರಗಳನ್ನು ತಿನ್ನಲು ವೈದ್ಯರು ಸಲಹೆ ಮಾಡುತ್ತಾರೆ. ಬೆಂಡೆಕಾಯಿಯಲ್ಲಿ ಕಡಿಮೆ ಪ್ರಮಾಣದ GI ಇರುವುದರಿಂದ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.
* ಕಿಡ್ನಿಗೆ ಒಳ್ಳೆಯದು: ಬೆಂಡೆಕಾಯಿ ಮಧುಮೇಹ ಕಾಯಿಲೆಗೆ ಮಾತ್ರವಲ್ಲ, ಕಿಡ್ನಿ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.
* ನಾರಿನಾಂಶ: ಇದು ತಿನ್ನಬಹುದಾದ ನಾರಿನಂಶವಿರುವ ಪದಾರ್ಥವಾಗಿರುವುದರಿಂದ ಇದನ್ನು ತಿಂದಾಗ ಜೀರ್ಣಕ್ರಿಯೆ ಸ್ವಲ್ಪ ನಿಧಾನವಾಗಿ ಆಗುವುದರಿಂದ ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿಯಾಗಿದೆ.
* ಟೊಮೇಟೊ ಹಣ್ಣಿನ ರಸಕ್ಕೆ ಒಂದು ಚಿಟಿಕೆ ಉಪ್ಪು ಮತ್ತು ಮೆಣಸಿನ ಕಾಳನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
* ಮಧುಮೇಹ ಇರುವುವರು ದ್ರಾಕ್ಷಿಯನ್ನು ಸೇವಿಸಬಾರದು.
* ಪ್ರತಿನಿತ್ಯ ನಿಂಬೆ ಹಣ್ಣಿನ ರಸ ಸೇವಿಸುವುದರಿಂದ ಮಧುಮೇಹದ ರೋಗಿಗಳು ಗುಣವಾಗುತ್ತಾರೆ.
* ದಿನವು ನೇರಳೆ ಹಣ್ಣಿನ ಬೀಜವನ್ನು ಚೆನ್ನಾಗಿ ಅರೆದು, ನೀರಿನ ಜೊತೆಗೆ ನುಂಗಿದರೆ ಕೆಲವು ದಿನಗಳಲ್ಲೇ ಮಧುಮೇಹ ದೂರವಾಗುತ್ತದೆ.
* ಆಂಜೂರದ ಸೇವನೆ ಮಧುಮೇಹಿ ರೋಗಿಗಳಿಗೆ ಒಳ್ಳೆಯದು.
* ಬೇಲದ ಹಣ್ಣಿನ ಗಿಡದ ಎಲೆಯ ರಸವನ್ನು 1 ಔನ್ಸ್ ನಷ್ಟು ಪ್ರತಿದಿನ ಬೆಳಗ್ಗೆ ಕುಡಿಯುವುದರಿಂದ ಮಧುಮೇಹ ಗುಣವಾಗುವುದು.
ಮಧುಮೇಹ ಇರುವವರು ಬಾಳೆಹಣ್ಣನ್ನು ಸೇವಿಸಬಾರದು.
* ಬೆಳಿಗ್ಗೆ ಎದ್ದ ಬಳಿಕ ಖಾಲಿ ಹೊಟ್ಟೆಯಲ್ಲಿ ಮೂರರಿಂದ ನಾಲ್ಕು ಚೆನ್ನಾಗಿ ಬಲಿತ ಬೇಲದ ಹಣ್ಣಿನ (ಕಾಂಡದ ಕೆಳಭಾಗದ) ಎಲೆಗಳನ್ನು ಅಥವಾ ಐದರಿಂದ ಆರು ಮೇಲ್ಭಾಗದ ಎಲೆಗಳನ್ನು ನೀರು ನೀರಾಗುವವರೆಗೆ ಜಗಿದು ನುಂಗಬೇಕು. ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬಾರದು. ಬದಲಿಗೆ ಒಂದು ದೊಡ್ಡ ಚಮಚ ತುಳಸಿ ಎಲೆಗಳನ್ನು ಅರೆದು ಹಿಂಡಿ ತೆಗೆದ ರಸವನ್ನೂ ಕುಡಿಯಬಹುದು.
* ಅಗಸೆ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಕರಗದ ನಾರು ಮತ್ತು ಹಲವು ಪೋಷಕಾಂಶಗಳಿವೆ. ಈ ನಾರನ್ನು ಕರಗಿಸಲು ದೇಹಕ್ಕೆ ಹೆಚ್ಚಿನ ಸಕ್ಕರೆ ಮತ್ತು ಕೊಬ್ಬು ಅಗತ್ಯವಿದೆ. ಇದೇ ಕಾರಣದಿಂದ ದೇಹದಲ್ಲಿ ಸಂಗ್ರಹವಾಗಿದ್ದ ಸಕ್ಕರೆ ಮತ್ತು ಕೊಬ್ಬು ಕರಗಿ ದೇಹದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ.
* ಒಂದು ದೊಡ್ಡ ಚಮಚ ಅಗಸೆ ಬೀಜದ ಒಣ ಪುಡಿಯನ್ನು ಒಂದು ಲೋಟ ಉಗುರು ಬೆಚ್ಚನೆಯ ನೀರಿನಲ್ಲಿ ಕದಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು, ಬಳಿಕ ಮುಕ್ಕಾಲು ಘಂಟೆ ಏನನ್ನೂ ಸೇವಿಸಬಾರದು.
* ಸುಮಾರು ಒಂದು ಹಿಡಿಯಷ್ಟು ನೀಲಾಬದರಿ ಮರದ (Leaves of bilberry plant -neelabadari) ಹಸಿ ಎಲೆಗಳನ್ನು ಒನಕೆ ಅಥವಾ ಒರಳಿನಲ್ಲಿ ಚೆನ್ನಾಗಿ ಅರೆದು ಮಿಶ್ರಣ ತಯಾರಿಸಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 100 ಮಿಲಿಗ್ರಾಂನಷ್ಟು ಸೇವಿಸಿ. ಪರ್ಯಾಯವಾಗಿ ಆಯುರ್ವೇದ ಅಂಗಡಿಗಳಲ್ಲಿ ಸಿದ್ಧರೂಪದಲ್ಲಿ ಸಿಗುವ ಒಣಪುಡಿಯನ್ನೂ ನೀರಿನಲ್ಲಿ ಬೆರೆಸಿ ಕುಡಿಯಬಹುದು.
*ನಿಮ್ಮ ನಿತ್ಯದ ಊಟದಲ್ಲಿ ಒಂದು ಗ್ರಾಮ್ ದಾಲ್ಚಿನ್ನಿಯ ಪುಡಿಯನ್ನು ಸೇರಿಸಿ ಸೇವಿಸಿ. ಒಂದು ತಿಂಗಳ ಸತತ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಅಂಶ ಶೀಘ್ರ ಹತೋಟಿಗೆ ಬರುತ್ತದೆ.
* ಹಸಿರು ಟೀ ಪುಡಿ ಇರುವ ಪೊಟ್ಟಣವನ್ನು ಸುಮಾರು ಎರಡರಿಂದ ಮೂರು ನಿಮಿಷಗಳವರೆಗೆ ಬಿಸಿ ನೀರಿನಲ್ಲಿರಿಸಿ (ಕುದಿಸಬಾರದು). ಈ ನೀರನ್ನು ಬೆಚ್ಚಗಿರುವಂತೆಯೇ ಹಾಲು ಅಥವಾ ಸಕ್ಕರೆ ಬೆರೆಸದೇ ಹಾಗೇ ಕುಡಿಯಿರಿ. ಈ ಟೀ ಬೆಳಗ್ಗಿನ ಉಪಾಹಾರಕ್ಕೂ ಅರ್ಧ ಘಂಟೆ ಮೊದಲು ಕುಡಿಯಬೇಕು.
* ಸುಮಾರು ಒಂದು ಹಿಡಿಯಷ್ಟು ನುಗ್ಗೇ ಮರದ ಹಸಿ ಎಲೆಗಳನ್ನು ಚೆನ್ನಾಗಿ ಅರೆದು ಹಿಂಡಿ ರಸ ತೆಗೆಯಿರಿ. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸುಮಾರು ಕಾಲು ಕಪ್ ಪ್ರಮಾಣದಲ್ಲಿ ಈ ನೀರನ್ನು ಕುಡಿಯಿರಿ. ಇದು ಟೈಪ್ -1 ಮಧುಮೇಹಕ್ಕೆ ಹೆಚ್ಚು ಸೂಕ್ತವಾಗಿದೆ.
* ಕಹಿಬೇವಿನ ಎಲೆಗಳನ್ನು ಮತ್ತು ತುದಿಯ ಕಾಂಡವನ್ನು ನುಣ್ಣಗೆ ಅರೆದು ರಸ ಹಿಂಡಿಕೊಳ್ಳಿ. ಒಂದು ಲೋಟ ಬೆಚ್ಚನೆಯ ನೀರಿಗೆ ಒಂದು ದೊಡ್ಡ ಚಮಚ ಈ ರಸವನ್ನು ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಬಳಿಕ ಸುಮಾರು ಮುಕ್ಕಾಲು ಘಂಟೆ ಏನನ್ನೂ ಸೇವಿಸಬಾರದು.
ಮಧುಮೇಹಿಗಳು ಹೆದರಬೇಕಾಗಿಲ್ಲ, ವೈಯುಕ್ತಿಕ ಕಾಳಜಿ ಮುಖ್ಯ :
* ನಿತ್ಯವೂ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಬೇಕು * ದೇಹದ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು * ನಿತ್ಯವೂ ಸರಿಯಾದ ಸಮಯಕ್ಕೆ ನಿಯಮಿತವಾಗಿ ಆಹಾರ ಸೇವಿಸಬೇಕು
* ಚಳಿಗಾಲದಲ್ಲಿ ಸೋಂಕಿನ ಪ್ರಮಾಣ ಹೆಚ್ಚು. ಆ ಬಗ್ಗೆ ಎಚ್ಚರ ಇರಲಿ. * ಹೆಚ್ಚು ನೀರು, ಕ್ಯಾಲರಿ ಕಡಿಮೆ ಇರುವ ದ್ರವ ಕುಡಿಯಬೇಕು ಔಷಧಗಳನ್ನು ನಿರ್ಧಿಷ್ಟ ಸಮಯದಲ್ಲಿ, ಸರಿಯಾಗಿ ತೆಗೆದುಕೊಳ್ಳಬೇಕು. * ಪಾದಗಳಲ್ಲಿ ಗಾಯ, ಹುಣ್ಣು ಆಗಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು
* ಸುತ್ತಲಿನ ಭಾಗಗಳಿಗೆ ಹಾನಿಯಾಗದ ರೀತಿಯಲ್ಲಿ ಎಚ್ಚರಿಕೆಯಿಂದ ಉಗುರು ಕತ್ತರಿಸಿಕೊಳ್ಳಬೇಕು * ರಕ್ತದೊತ್ತಡ, ಕೊಲೆಸ್ಟರಾಲ್ ಮಟ್ಟ, ಕಣ್ಣು ಮತ್ತು ಮೂತ್ರಪಿಂಡದ ಕಾರ್ಯನಿರ್ವಹಣೆ ಕುರಿತು ನಿಯಮಿತವಾಗಿ ಪರೀಕ್ಷಿಸಿಕೊಳ್ಳಬೇಕು * ಕೊಬ್ಬು ಮತ್ತು ಕೊಬ್ಬಿನ ಆಹಾರಗಳ ಸೇವನೆ ನಿಯಂತ್ರಿಸಬೇಕು
* ನಾರಿನಂಶ ಹೆಚ್ಚಿರುವ ತರಕಾರಿಗಳನ್ನು ಜಾಸ್ತಿ ಸೇವಿಸಬೇಕು * ಒಳ್ಳೆಯದನ್ನು ಯೋಚಿಸಿ, ನಿಯಮಿತವಾದ ಆಹಾರವನ್ನು ಸೇವಿಸಿ ಖುಷಿಯಿಂದ ಇರಿ ಮಧುಮೇಹ ನಿಮ್ಮನ್ನು ಬಾಧಿಸದು.