ಹೆಚ್ಚು ಪ್ಯಾರಸಿಟಮಾಲ್ ಮಾತ್ರೆ ಸೇವನೆ ಮಾಡಿದ್ರೆ ಲಿವರ್ ಡ್ಯಾಮೇಜ್ ಆಗುತ್ತೆ ಎಚ್ಚರ! ಡಾ. ಸರಿನ್ ಹೇಳೋದೇನು

ಸಣ್ಣ ಜ್ವರ ಬಂದರೆ ಸಾಕು ವೈದ್ಯರ ಬಳಿಗೆ ಹೋಗುವ ಮೊದಲು ಮೆಡಿಕಲ್‌ಗೆ ಹೋಗಿ ಪ್ಯಾರಸಿಟಮಾಲ್ ಮಾತ್ರೆ ತೆಗೆದುಕೊಂಡು ತಿನ್ನುತ್ತಾರೆ. ಪ್ರಿಸ್ಕ್ರಿಪ್ಷನ್ ಇಲ್ಲದೆ ದೊರೆಯುವ ಈ ಮಾತ್ರೆಯನ್ನು, ಹೆಚ್ಚು ಹೆಚ್ಚು ಸೇವನೆ ಮಾಡುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದು ಜ್ವರ ಮತ್ತು ನೋವು ನಿವಾರಕ ಮಾತ್ರೆಯಾದರೂ ಶಿಫಾರಸು ಮಾಡಲಾದ ಡೋಸೇಜ್‌ಗಿಂತ ಅಧಿಕ ಸೇವಿಸಿದರೆ ಹಲವಾರು ಹಾನಿಕಾರಕ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಈ ಬಗ್ಗೆ ಡಾ. ಶಿವಕುಮಾರ್ ಸರಿನ್ ಅವರ ಅಭಿಪ್ರಾಯವೇನು? ಇಲ್ಲಿದೆ ಮಾಹಿತಿ.

ಹೆಚ್ಚು ಪ್ಯಾರಸಿಟಮಾಲ್ ಮಾತ್ರೆ ಸೇವನೆ ಮಾಡಿದ್ರೆ ಲಿವರ್ ಡ್ಯಾಮೇಜ್ ಆಗುತ್ತೆ ಎಚ್ಚರ! ಡಾ. ಸರಿನ್ ಹೇಳೋದೇನು
ಡಾ. ಶಿವಕುಮಾರ್ ಸರಿನ್
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 09, 2024 | 5:30 PM

ಪ್ಯಾರಸಿಟಮಾಲ್ ಬಗ್ಗೆ ಯಾರಿಗೆ ಗೊತ್ತಿಲ್ಲಾ ಹೇಳಿ? ಸಣ್ಣ ಜ್ವರ ಬಂದರೆ ಸಾಕು ವೈದ್ಯರ ಬಳಿಗೆ ಹೋಗುವ ಮೊದಲು ಮೆಡಿಕಲ್‌ಗೆ ಹೋಗಿ ಮಾತ್ರೆ ತೆಗೆದುಕೊಂಡು ತಿನ್ನುತ್ತಾರೆ. ಪ್ರಿಸ್ಕ್ರಿಪ್ಷನ್ ಇಲ್ಲದೆ ದೊರೆಯುವ ಈ ಮಾತ್ರೆಯನ್ನು, ಹೆಚ್ಚು ಹೆಚ್ಚು ಸೇವನೆ ಮಾಡುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದು ಜ್ವರ ಮತ್ತು ನೋವು ನಿವಾರಕ ಮಾತ್ರೆಯಾದರೂ ಶಿಫಾರಸು ಮಾಡಲಾದ ಡೋಸೇಜ್‌ಗಿಂತ ಅಧಿಕ ಸೇವಿಸಿದರೆ ಹಲವಾರು ಹಾನಿಕಾರಕ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು.

ಇತ್ತೀಚಿಗೆ ಎಎನ್ಐ ನಡೆಸಿದ ಸಂದರ್ಶನದಲ್ಲಿ ಡಾ. ಶಿವಕುಮಾರ್ ಸರಿನ್ ಅವರು ಪ್ಯಾರಸಿಟಮಾಲ್ ಲಿವರ್ ಡ್ಯಾಮೇಜ್ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ್ದು, ಅವರು ಹೇಳುವ ಪ್ರಕಾರ “ಹೆಚ್ಚು ಪ್ಯಾರಸಿಟಮಾಲ್ ಮಾತ್ರೆಯನ್ನು ಸೇವನೆ ಮಾಡುವುದರಿಂದ ಗ್ಲುಟಾ ಥಯೋನ್ ಕಡಿಮೆಯಾಗುತ್ತದೆ. ಇದು ನಮ್ಮ ಲಿವರ್ ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆಲ್ಕೋಹಾಲ್ ಸೇವನೆ ಮಾಡುವವರಲ್ಲಿ ಮತ್ತು ದಪ್ಪಗಿರುವವರಲ್ಲಿ ಸಾಮಾನ್ಯವಾಗಿ ಇದು ಕಡಿಮೆ ಇರುತ್ತದೆ. ಹಾಗಾಗಿ ಪ್ಯಾರಸಿಟಮಾಲ್‌ನ ಮಿತಿ ಮೀರಿದ ಸೇವನೆಯು ಯಕೃತ್ತಿನ (ಲಿವರ್) ವೈಫಲ್ಯಕ್ಕೆ ಕಾರಣವಾಗಬಹುದು” ಎಂದಿದ್ದಾರೆ.

ಇದನ್ನೂ ಓದಿ: ಮುಖದ ಬಣ್ಣ ಹಠಾತ್ ಬದಲಾವಣೆ ಹೃದಯಾಘಾತದ ಲಕ್ಷಣವಾಗಿರಬಹುದು!

ಡಾ. ಸರಿನ್ ಅವರು ಹೇಳುವ ಪ್ರಕಾರ “ಪ್ಯಾರಸಿಟಮಾಲ್ ಎಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು ಎಂಬುದು ತಿಳಿದಿರಬೇಕು. ಏಕೆಂದರೆ ಎಲ್ಲರ ದೇಹ ಪ್ರಕೃತಿ ಒಂದೇ ರೀತಿ ಇರುವುದಿಲ್ಲ. ಹಾಗಾಗಿ ನೀವು ಎಷ್ಟು ಸೇವನೆ ಮಾಡುತ್ತೀರಿ ಎಂಬುದು ನಿಮಗೆ ತಿಳಿದಿರಬೇಕು. ಇಲ್ಲವಾದಲ್ಲಿ ಅಮೆರಿಕ, ಇಂಗ್ಲೆಂಡ್ ಗಳಲ್ಲಿ ಆಗಿರುವಂತೆ ಪ್ಯಾರಸಿಟಮಾಲ್ ಮಾತ್ರೆ ಲಿವರ್ ಹಾಳಾಗುವುದಕ್ಕೆ ಮುಖ್ಯ ಕಾರಣವಾಗುತ್ತದೆ. ಇದು ನೋವು ನಿವಾರಕಗಳಾಗಿರುವುದರಿಂದ ಅಗತ್ಯಕ್ಕಿಂತ ಹೆಚ್ಚು ಯಾರ ದೇಹಕ್ಕೂ ಒಳ್ಳೆಯದಲ್ಲ. ನಿಮಗೆ ತೆಗೆದುಕೊಳ್ಳುವ ಸಂದರ್ಭ ಬಂದರೆ ಅರ್ಧ ಮಾತ್ರೆಗಳನ್ನು ಮೂರು ಅಥವಾ ನಾಲ್ಕು ಬಾರಿ ತೆಗೆದುಕೊಳ್ಳಿ. ಒಂದು ದಿನಕ್ಕೆ ಇದಕ್ಕಿಂತ ಹೆಚ್ಚು ಮಾತ್ರೆಯನ್ನು ತೆಗೆದುಕೊಳ್ಳಬೇಡಿ. ನೀವು ಮಿತಿಮೀರಿ ಪ್ಯಾರಸಿಟಮಾಲ್‌ ಸೇವನೆ ಮಾಡುತ್ತಿದ್ದೀರಿ ಎಂದು ನಿಮಗೆ ಅನಿಸಿದರೆ ತಕ್ಷಣವೇ ನಿಮ್ಮ ವೈದ್ಯರ ಗಮನಕ್ಕೆ ತರುವುದು ಒಳ್ಳೆಯದು” ಎಂದಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ