ನೀವು ವರ್ಕ್ ಫ್ರಮ್ ಹೋಮ್ ಮಾಡುವವರಾ? ಹಾಗಿದ್ರೆ ನಿಮಗೂ ಕಾಡಬಹುದು ಒಂಟಿತನ!

ಮನೆಯಿಂದ ಕೆಲಸ ಮಾಡುವ ವ್ಯವಸ್ಥೆ ಕೆಲವೊಂದು ರೀತಿಯಲ್ಲಿ ಅನುಕೂಲಕರವಾಗಿದ್ದರೂ ಇದು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಹಾಗಾದರೆ ವರ್ಕ್ ಫ್ರಮ್ ಹೋಮ್ ಮಾಡುವವರು ಯಾವ ರೀತಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ? ವರ್ಕ್ ಫ್ರಮ್ ಹೋಮ್ ನಿಜವಾಗಿಯೂ ಒಂಟಿತನ, ಆತಂಕ ಮತ್ತು ಖಿನ್ನತೆಗೆ ಕಾರಣವಾಗುತ್ತದೆಯೇ? ಈ ಬಗ್ಗೆ ವೈದ್ಯರ ಅಭಿಪ್ರಾಯವೇನು? ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನೀವು ವರ್ಕ್ ಫ್ರಮ್ ಹೋಮ್ ಮಾಡುವವರಾ? ಹಾಗಿದ್ರೆ ನಿಮಗೂ ಕಾಡಬಹುದು ಒಂಟಿತನ!
Health Impact Of Working From Home
Image Credit source: Getty Images

Updated on: Jun 18, 2026 | 6:46 PM

ಮನೆಯಿಂದಲೇ ಕೆಲಸ ಮಾಡುವುದು (Work From Home) ಅನೇಕರಿಗೆ ಅನುಕೂಲಕರವಾಗಿದ್ದರೂ ಕೂಡ ಇದು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಹೌದು, ಅಮೆರಿಕದ ಸಂಶೋಧಕರು ನಡೆಸಿದ ವಿಶ್ಲೇಷಣೆಯಲ್ಲಿ, ನಿರಂತರವಾಗಿ ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳಲ್ಲಿ ಒಂಟಿತನ, ಆತಂಕ (Anxiety) ಮತ್ತು ಖಿನ್ನತೆ (Depression) ಸಮಸ್ಯೆಗಳು ಹೆಚ್ಚಾಗಿ ಕಂಡುಬಂದಿವೆ. ಹಾಗಾದರೆ ವರ್ಕ್ ಫ್ರಮ್ ಹೋಮ್ ಒಂಟಿತನವನ್ನು ಹೆಚ್ಚಿಸುತ್ತದೆಯೇ, ಇದಕ್ಕೆ ಪರಿಹಾರವೇನು, ವೈದ್ಯರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಒಂಟಿತನ ಹೆಚ್ಚಿಸುವ ವರ್ಕ್ ಫ್ರಮ್ ಹೋಮ್

ಅಧ್ಯಯನದ ಪ್ರಕಾರ, ಮನೆಯಿಂದ ಕೆಲಸ ಮಾಡುವವರು ಕಚೇರಿಗೆ ತೆರಳಿ ಕೆಲಸ ಮಾಡುವವರಿಗಿಂತ ಸುಮಾರು 58% ಹೆಚ್ಚು ಸಮಯವನ್ನು ಒಂಟಿಯಾಗಿ ಕಳೆಯುತ್ತಿದ್ದಾರೆ. ಅಲ್ಲದೆ, ಅನೇಕರು ದಿನವಿಡೀ ಹೊಸ ವ್ಯಕ್ತಿಗಳನ್ನು ಭೇಟಿಯಾಗದೆ ಅಥವಾ ನೇರವಾಗಿ ಮಾತನಾಡದೆ ಸಮಯ ಕಳೆಯುತ್ತಿರುವುದು ಕಂಡುಬಂದಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಮಾತನಾಡುವುದು, ಕಾಫಿ ಬ್ರೇಕ್‌ಗಳಲ್ಲಿ ಸಮಯ ಕಳೆಯುವುದು ಮತ್ತು ಸಾಮಾನ್ಯ ಸಾಮಾಜಿಕ ಸಂಪರ್ಕಗಳು ಮಾನಸಿಕ ನೆಮ್ಮದಿಗೆ ಸಹಾಯ ಮಾಡುತ್ತವೆ. ಆದರೆ, ವರ್ಕ್ ಫ್ರಮ್ ಹೋಮ್ ಉದ್ಯೋಗಿಗಳು ಈ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ.

ಆತಂಕ ಮತ್ತು ಖಿನ್ನತೆ ಹೆಚ್ಚುವ ಅಪಾಯ

ದಿನವಿಡೀ ನಾಲ್ಕು ಗೋಡೆಗಳ ನಡುವೆ ಕೆಲಸ ಮಾಡುವುದು ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು. ವಿಶೇಷವಾಗಿ ಮನೆಯಲ್ಲಿ ಒಬ್ಬರೇ ವಾಸಿಸುವ ಐಟಿ ಉದ್ಯೋಗಿಗಳು ಮತ್ತು ವಿದ್ಯಾರ್ಥಿ ವಸತಿಗೃಹಗಳಲ್ಲಿ ಇರುವವರಲ್ಲಿ ಒಂಟಿತನ ಕಾಡುವ ಅಪಾಯ ಹೆಚ್ಚಾಗಿ ಕಂಡುಬಂದಿದೆ. ಇದರ ಪರಿಣಾಮವಾಗಿ ಮಾನಸಿಕ ಆರೋಗ್ಯ ತಜ್ಞರ ನೆರವು ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಡಲ್ ಥೆರಪಿ ಟ್ರೆಂಡ್: ಇಲ್ಲಿ ಅಪ್ಪಿಕೊಳ್ಳುತ್ತಾರೆ, ಕೈ ಹಿಡಿಯುತ್ತಾರೆ, ಗಂಟೆಗೆ 5,000 ರೂ.

ದೇಹದ ಆರೋಗ್ಯದ ಮೇಲೂ ಪರಿಣಾಮ

ಮಾನಸಿಕ ಒಂಟಿತನವು ಕೇವಲ ಮನಸ್ಸಿನ ಸಮಸ್ಯೆಯಲ್ಲ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸಬಹುದು. ನಿದ್ರಾಹೀನತೆ, ದೀರ್ಘಕಾಲದ ಒತ್ತಡ ಹಾಗೂ ಹೃದಯ ಸಂಬಂಧಿತ ಆರೋಗ್ಯ ಸಮಸ್ಯೆಗಳ ಅಪಾಯವೂ ಹೆಚ್ಚಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಪರಿಹಾರವೇನು?

ತಜ್ಞರ ಪ್ರಕಾರ, ‘ಹೈಬ್ರಿಡ್ ವರ್ಕ್ ಮಾದರಿ’ ಉತ್ತಮ ಆಯ್ಕೆಯಾಗಬಹುದು. ವಾರದಲ್ಲಿ ಕೆಲವು ದಿನ ಕಚೇರಿಯಲ್ಲಿ ಮತ್ತು ಉಳಿದ ದಿನ ಮನೆಯಿಂದ ಕೆಲಸ ಮಾಡುವುದು ಒಳ್ಳೆಯದು. ಇದರ ಜೊತೆಗೆ, ವರ್ಕ್ ಫ್ರಮ್ ಹೋಮ್ ಉದ್ಯೋಗಿಗಳು ವಾರಾಂತ್ಯಗಳಲ್ಲಿ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಮಯ ಕಳೆಯಬೇಕು. ಕ್ರೀಡೆ, ಹವ್ಯಾಸಗಳು ಅಥವಾ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮಾನಸಿಕ ಆರೋಗ್ಯವನ್ನು ಉತ್ತಮವಾಗಿಡಲು ಸಹಕಾರಿಯಾಗುತ್ತದೆ. ವರ್ಕ್ ಫ್ರಮ್ ಹೋಮ್ ಸೌಲಭ್ಯಕರವಾದರೂ, ಸಾಮಾಜಿಕ ಸಂಪರ್ಕ ಕಡಿಮೆಯಾದರೆ ಒಂಟಿತನ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಕೆಲಸದ ಜೊತೆಗೆ ಸಾಮಾಜಿಕ ಜೀವನಕ್ಕೂ ಸಮಾನ ಮಹತ್ವ ನೀಡುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us