
ಋತುಬಂಧವು (Menopause) ಒಂದು ಜೈವಿಕ ಪ್ರಕ್ರಿಯೆ ಎಂಬುದು ತಿಳಿದ ವಿಚಾರ. ಇದು ಸಾಮಾನ್ಯವಾಗಿ 45 ರಿಂದ 55 ವರ್ಷ ವಯಸ್ಸಿನ ನಡುವೆ ಸಂಭವಿಸುತ್ತದೆ, ಈ ಸಮಯದಲ್ಲಿ ಮಹಿಳೆಯರಲ್ಲಿ ಅನೇಕ ರೀತಿಯ ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗುತ್ತದೆ. ಮಾತ್ರವಲ್ಲ ಹಾರ್ಮೋನುಗಳಲ್ಲಾಗುವ ಬದಲಾವಣೆಗಳು ಆಯಾಸ, ಮನಸ್ಥಿತಿ ಬದಲಾವಣೆ, ತೂಕ ಹೆಚ್ಚಾಗುವುದು, ತಲೆನೋವು, ಕೂದಲು ಉದುರುವುದು ಮತ್ತು ಚರ್ಮಕ್ಕೆ ಸಂಬಂಧಿಸಿದ ಅನೇಕ ರೀತಿಯ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರ ಜೊತೆಗೆ ಕೆಲವರಲ್ಲಿ ಉಬ್ಬಿರುವ ರಕ್ತನಾಳಗಳು ಅಂದರೆ ಮಹಿಳೆಯರ ಕಾಲುಗಳಲ್ಲಿ ಹಸಿರು ಬಣ್ಣದ ರಕ್ತನಾಳ (Varicose Veins) ಕಂಡುಬರುತ್ತದೆ. ಹಾಗಾದರೆ ಮಹಿಳೆಯರಲ್ಲಿ ಕಂಡುಬರುವ ಈ ವೆರಿಕೋಸ್ ವೇನ್ಸ್‌ಗೆ ಋತುಬಂಧ ಕಾರಣವೇ, ಯಾಕೆ ಈ ರೀತಿ ಆಗುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸ್ತ್ರೀರೋಗ ತಜ್ಞರು ಹೇಳುವ ಪ್ರಕಾರ, ಋತುಬಂಧ ಅಂದರೆ ಮಹಿಳೆಯರಲ್ಲಿ ಮುಟ್ಟು ನಿಲ್ಲುವಂತಹ ಸಮಯದಲ್ಲಿ, ಅವರ ದೇಹದಲ್ಲಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್‌ನಂತಹ ಹಾರ್ಮೋನುಗಳ ಬದಲಾವಣೆಗಳು ಸಂಭವಿಸುತ್ತವೆ. ಈ ಕಾರಣದಿಂದಾಗಿ, ಮಹಿಳೆಯರು ವೆರಿಕೋಸ್ ವೇನ್ಸ್‌ಗಳ ಸಮಸ್ಯೆಗಳನ್ನು ಅನುಭವಿಸಬಹುದು. ಇದರಲ್ಲಿ ಹಸಿರು ಬಣ್ಣದ ರಕ್ತನಾಳಗಳು ಕಾಲುಗಳಲ್ಲಿ ಕಂಡುಬರುತ್ತವೆ. ರಕ್ತನಾಳಗಳ ಕವಾಟಗಳು ದುರ್ಬಲವಾದಾಗ ಅಥವಾ ಹಾನಿಗೊಳಗಾದಾಗ ಈ ಸಮಸ್ಯೆ ಉಂಟಾಗುತ್ತದೆ. ನಂತರ ದೇಹದ ಮೇಲ್ಮೈಯಲ್ಲಿ ಹಸಿರು ರಕ್ತನಾಳಗಳು ಗೋಚರಿಸುತ್ತವೆ. ದೇಹದಲ್ಲಿ ಸರಿಯಾಗಿ ಪರಿಚಲನೆಗೊಳ್ಳುವ ಬದಲು, ರಕ್ತವು ಹೃದಯದಲ್ಲಿ ಸಂಗ್ರಹವಾಗುವುದರಿಂದ ಉಬ್ಬಿರುವ ರಕ್ತನಾಳಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
ಋತುಬಂಧದ ಸಮಯದಲ್ಲಿ, ಮಹಿಳೆಯ ದೇಹವು ಅನೇಕ ರೀತಿಯ ಬದಲಾವಣೆಗಳಿಗೆ ಒಳಗಾಗುತ್ತದೆ ಎಂಬುದು ತಿಳಿದಿರುವ ವಿಚಾರ. ಈ ಬದಲಾವಣೆ ಮಹಿಳೆಯರಲ್ಲಿ ಉಬ್ಬಿರುವ ರಕ್ತನಾಳ ಅಥವಾ ವೆರಿಕೋಸ್ ವೇನ್ಸ್ ಆರಂಭವಾಗಲು ಕಾರಣವಾಗಬಹುದು. ಋತುಬಂಧದ ಸಮಯದಲ್ಲಿ, ಮಹಿಳೆಯರ ದೇಹದಲ್ಲಿನ ಹಾರ್ಮೋನುಗಳಲ್ಲಿನ ಬದಲಾವಣೆಗಳು, ವಿಶೇಷವಾಗಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ನಂತಹ ಹಾರ್ಮೋನುಗಳಲ್ಲಿನ ಬದಲಾವಣೆಗಳು ರಕ್ತನಾಳಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ, ಇದು ರಕ್ತನಾಳಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಉಬ್ಬಿರುವ ರಕ್ತನಾಳಗಳಿಗೆ ಕಾರಣವಾಗಬಹುದು.
ಇದನ್ನೂ ಓದಿ: ಮುಟ್ಟು ಸರಿಯಾಗಿ ಆಗದಿದ್ದರೆ ಚಿಂತಿಸಬೇಡಿ, ಈ ರೀತಿಯಾಗುವುದಕ್ಕೆ ಕಾರಣ ತಿಳಿದು ಪರಿಹಾರ ಕಂಡುಕೊಳ್ಳಿ
ಕೆಲವೊಮ್ಮೆ ಋತುಬಂಧದ ಸಮಯದಲ್ಲಿ ದೇಹದಲ್ಲಿನ ಬದಲಾವಣೆಗಳಿಂದಾಗಿ, ಅನೇಕ ಮಹಿಳೆಯರು ತಮ್ಮ ತೂಕವನ್ನು ಹೆಚ್ಚಿಸಿಕೊಳ್ಳುತ್ತಾರೆ. ಇದು ಕೂಡ ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಉಬ್ಬಿರುವ ರಕ್ತನಾಳಗಳ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಮುಂದೆ ಮಹಿಳೆಯರು ಅನೇಕ ರೀತಿಯ ತೊಂದರೆಗಳನ್ನು ಎದುರಿಸುವುದಕ್ಕೆ ಕಾರಣವಾಗಬಹುದು. ಕೆಲವರಲ್ಲಿ ಕಾಲುಗಳಲ್ಲಿ ನೋವು, ಊತ, ರಕ್ತನಾಳಗಳ ಸುತ್ತಲೂ ತುರಿಕೆ, ಮೊಣಕಾಲುಗಳ ಸುತ್ತಲಿನ ಚರ್ಮದ ಬಣ್ಣ ಮಾಸುವುದು ಹೀಗೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುತ್ತದೆ.
ಋತುಬಂಧದ ಸಮಯದಲ್ಲಿ, ಮಹಿಳೆಯರ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳಾಗುತ್ತವೆ. ಈ ಅವಧಿಯಲ್ಲಿ ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಗಳು, ತೂಕ ಹೆಚ್ಚಾಗುವುದು ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ವೆರಿಕೋಸ್ ವೇನ್ಸ್ ನಂತಹ ಸಮಸ್ಯೆ ಉದ್ಭವಿಸಬಹುದು. ಈ ರೀತಿಯ ಸಂದರ್ಭಗಳಲ್ಲಿ ಯಾವುದೇ ರೀತಿಯ ಸಮಸ್ಯೆ ಕಂಡು ಬಂದರೂ ಕೂಡ ವೈದ್ಯರನ್ನು ಸಂಪರ್ಕಿಸಬೇಕು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ